Connect with us

LATEST NEWS

ಬೈಂದೂರಿನಲ್ಲಿ ವಾಹನ ಢಿಕ್ಕಿಗೆ ಎರಡು ದನ ಸಾವು-ಮೃತದೇಹವಿಟ್ಟು ಪ್ರತಿಭಟನೆ

Published

on

ಬೈಂದೂರು: ಎರಡು ಪ್ರತ್ಯೇಕ ಅಪಘಾತದಲ್ಲಿ ಎರಡು ದನಗಳು ಸಾವನ್ನಪ್ಪಿದ ಘಟನೆ ನಿನ್ನೆ ರಾತ್ರಿ ತಾಲೂಕಿನ ಯಡ್ತರೆ ಸಮೀಪದ ರಾಹುತನಕಟ್ಟೆ ಹಾಗೂ ನಾಕಟ್ಟೆ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ರಸ್ತೆಯಲ್ಲೇ ಮೃತ ದನವನ್ನಿಟ್ಟು ಪ್ರತಿಭಟಿಸಿದ್ದಾರೆ.


ಶನಿವಾರ ರಾತ್ರಿ ರಾಹುತನಕಟ್ಟೆ ಬಳಿ ಎರಡು ಅಪರಿಚಿತ ವಾಹನಗಳು ಎರಡು ದನಕ್ಕೆ ಢಿಕ್ಕಿ ಹೊಡೆದು ದನಗಳು ಮೃತಪಟ್ಟಿದ್ದವು.
ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ದನ ಅಡ್ಡವಿರಿಸಿ ಪ್ರತಿಭಟನೆ
ನಿನ್ನೆ ರಾತ್ರಿ ಅಪಘಾತ ನಡೆದಿದ್ದರೂ ಇಂದು ಮಧ್ಯಾಹ್ನದ ತನಕ ದನಗಳನ್ನು ಹಾಗೆ ರಸ್ತೆಯಲ್ಲಿಯೇ ಬಿಟ್ಟಿದ್ದರಿಂದ ಐಆರ್‌ಬಿ ಕಂಪೆನಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಲಕಾಲ ಹೆದ್ದಾರಿ ತಡೆದು ಪ್ರತಿಭಟಿಸಿದರು.

ಬೈಂದೂರು ಪೊಲೀಸರು ಸ್ಥಳಕ್ಕಾಗಮಿಸಿ ಐಆರ್‌ಬಿ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿದ್ದಾರೆ. ಈ ವೇಳೆ ಎರಡೂ ದನಗಳನ್ನು ಬದಿಗೆ ಸರಿಸಿ ರಸ್ತೆ ಪಕ್ಕದಲ್ಲಿಯೇ ಹೂತು ಹಾಕಿದ್ದಾರೆ.

LATEST NEWS

ಉಡುಪಿ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ, ಕಾರಣ ನಿಗೂಢ

Published

on

ಉಡುಪಿ: ಪ್ರೌಢ ಶಾಲೆಯ ವಿದ್ಯಾರ್ಥಿನಿಯೊಬ್ಬಳು ವಾಸವಾಗಿದ್ದ ಬಿಡಾರದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಉಡುಪಿಯ ಬೀಡಿನಗುಡ್ಡೆಯಲ್ಲಿ ನಡೆದಿದೆ.

ಬೋರ್ಡ್ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಬರ್ಮವ್ವ ಮೃತ ಬಾಲಕಿ. ಖಾಸಗಿ ನಿವೇಶನದಲ್ಲಿದ್ದ ಜೋಪಡಿಯನ್ನು ಬಾಡಿಗೆ ಪಡೆದುಕೊಂಡು ಮೃತ ಬಾಲಕಿಯ ಹೆತ್ತವರು‌ ವಾಸವಾಗಿದ್ದರು. ಮನೆ ಮಂದಿ ಬೆಳಿಗ್ಗೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಬಾಲಕಿಯಿಂದ ಈ ಕೃತ್ಯ ನಡೆದಿದೆ.

ನಗರ ಪೋಲಿಸ್  ಠಾಣೆಯ ಎಸ್ ಐ ಗಂಗಪ್ಪ, ಮುಖ್ಯ ಆರಕ್ಷಕಿಯರಾದ ಆಶಾ ಲತಾ, ಜಾಸ್ವ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದ್ದಾರೆ. ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ಮೃತ ದೇಹವನ್ನು ನೇಣು ಕುಣಿಕೆಯಿಂದ ತೆರವುಗೊಳಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಇಲಾಖೆಗೆ ನೆರವಾದರು.

Continue Reading

DAKSHINA KANNADA

ನಾಳೆ(ಜ.21) ಕದ್ರಿ ಮ್ಯೂಸಿಕಲ್ ನೈಟ್ಸ್ 2026 : ರಿಷಬ್ ಶೆಟ್ಟಿ ಭಾಗಿ

Published

on

ಮಂಗಳೂರು : ಕದ್ರಿ ಶ್ರೀಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ  ಪ್ರಯುಕ್ತ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದಲ್ಲಿ ಕದ್ರಿ ಈವೆಂಟ್ಸ್ ಅರ್ಪಿಸುವ  ‘ಕದ್ರಿ ಮ್ಯೂಸಿಕಲ್ ನೈಟ್ಸ್ 2026’ ನಾಳೆ(ಜ.21) ಸಂಜೆ 7 ಗಂಟೆಯಿಂದ ಕದ್ರಿ ಮೈದಾನದಲ್ಲಿ ಅದ್ದೂರಿಯಾಗಿ ಜರುಗಲಿದೆ.

ಎಂದಿನಂತೆ ಈ ಬಾರಿಯೂ ತಾರಾ ಮೆರುಗು ಇರಲಿದ್ದು, ಕಾರ್ಯಕ್ರಮಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ಆಗಮಿಸಲಿದ್ದಾರೆ.

ಆಯೋಜಕ ಜಗದೀಶ್ ಕದ್ರಿ ಈ ಬಗ್ಗೆ ಮಾತನಾಡಿ, ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ಕದ್ರಿ ಮ್ಯೂಸಿಕಲ್ ನೈಟ್ ಆಯೋಜನೆ ಮಾಡಿದ್ದೇವೆ. ಸಿನಿಮಾ ಸೆಲೆಬ್ರಿಟಿಗಳು, ಗಣ್ಯರು ಸೇರಿದಂತೆ ಹೆಸರಾಂತ ಗಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

ಇದನ್ನೂ ಓದಿ : BBK12: ಟಾಪ್‌ 6ನಲ್ಲಿ ಕಾವ್ಯಾ ಇರಬಾರದಿತ್ತು: ಹೀಗ್ಯಾಕಂದ್ರು ರಕ್ಷಿತಾ..?

ಕನ್ನಡ, ತುಳು ಚಿತ್ರರಂಗದ ಕಲಾವಿದರಾದ ರೂಪೇಶ್ ಶೆಟ್ಟಿ, ದೇವದಾಸ್ ಕಾಪಿಕಾಡ್, ಭೋಜರಾಜ ವಾಮಂಜೂರು, ಅರ್ಜುನ್ ಕಾಪಿಕಾಡ್, ಶನಿಲ್ ಗುರು, ಪ್ರಕಾಶ್ ತೂಮಿನಾಡು, ಸ್ವರಾಜ್ ಶೆಟ್ಟಿ, ದೀಪಕ್ ರೈ ಪಾಣಾಜೆ, ವಿಜೆ ವಿನೀತ್, ಸಮತಾ ಅಮೀನ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Continue Reading

DAKSHINA KANNADA

ಮಂಗಳೂರು: ಡ್ರಗ್ಸ್‌ ನಿರ್ಮೂಲನೆಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ ಬಸ್ಸು ಮಾಲಕರ ಸಂಘ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 110 ವರ್ಷಗಳ ಇತಿಹಾಸವನ್ನು ಹೊಂದಿರುವ ಅತ್ಯುತ್ತಮ ಸಾರಿಗೆ ಸೇವೆಯನ್ನು ನೀಡಿಕೊಂಡು ಬಂದಿರುವ ದಕ್ಷಿಣ ಕನ್ನಡ ಜಿಲ್ಲಾ ಬಸ್ಸು ಮಾಲಕರ ಸಂಘದ ವತಿಯಿಂದ ಹತ್ತು ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರಲಾಗಿದೆ. ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಇದುವರೆಗೆ ಕೋಟಿಗಟ್ಟಲೆ ರೂಪಾಯಿಗಳ ರಿಯಾಯಿತಿ ದರದ ಬಸ್ಸು ಪಾಸುಗಳನ್ನು ನೀಡುವ ಮೂಲಕ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದೇವೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ಮುಂದಾಗಿರುವ ನಗರ ಪೊಲೀಸ್‌ ಕಮಿಷನರ್‌ ಅವರ ಜೊತೆಗೆ ಜಿಲ್ಲಾ ಬಸ್ಸು ಮಾಲಕರ ಸಂಘವೂ ಕೈಜೋಡಿಸಿ ಡ್ರಗ್ ನಿರ್ಮೂಲನೆ ಮಾಡಲು ಬೀದಿ ನಾಟಕ ಪ್ರದರ್ಶನ ಮಾಡಲಿದ್ದೇವೆ ಎಂದು ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡ್ರಗ್ ಜಾಲಕ್ಕೆ ಕಡಿವಾಣ, ನಶೆಗೆ ಒಳಗಾಗುವ ವಿದ್ಯಾರ್ಥಿಗಳನ್ನು ಅದರಿಂದ ಹೊರತರುವ ಕೆಲಸ ಮಾಡುತ್ತಿರುವ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ನುಡಿದರು. ಅಲ್ಲದೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜೊತೆಗೆ ನಾವು ಕೈಜೋಡಿಸಿದ್ದೇವೆ. ಜನವರಿ 27ರ ಮಂಗಳವಾರ ರೋಶನಿ ನಿಲಯ ಕಾಲೇಜಿನ ಸಹಭಾಗಿತ್ವದೊಂದಿಗೆ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಹಲವು ಕಡೆ ಡ್ರಗ್‌ ವಿರೋಧಿ ಬೀದಿನಾಟಕ ಆಯೋಜನೆ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಮಂಗಳೂರು: ಹಂಚಿನ ಫ್ಯಾಕ್ಟರಿಯಲ್ಲಿ ಅ*ಗ್ನಿ ಅ*ವಘ*ಡ

ನಗರದ ಸೆಂಟ್ರಲ್‌ ಬಸ್ಸು ನಿಲ್ದಾಣ, ತೊಕ್ಕೊಟ್ಟು ಬಸ್ಸು ನಿಲ್ದಾಣ, ತಲಪಾಡಿ, ಉಳ್ಳಾಲ, ಲಾಲ್‌ಭಾಗ್‌ ಸೇರಿದಂತೆ ಹಲವು ಕಡೆಗಳ ಬಸ್ಸು ನಿಲ್ದಾಣಗಳಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಎಲ್ಲಾ ಬಸ್ಸುಗಳಲ್ಲಿ ಸ್ಟಿಕ್ಕರ್‌ ಹಚ್ಚಿ ಜಾಗೃತಿ ಮೂಡಿಸಲಿದ್ದೇವೆ. ಇದಕ್ಕೆ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಆಗಮಿಸಲಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ ರಾಮಚಂದ್ರ ನಾಯ್ಕ , ರಾಮಚಂದ್ರ ಪಿಲಾರ್ ಹಾಗೂ ಜೊತೆ ಕಾರ್ಯದರ್ಶಿ ರಾಜೇಶ್ ಟಿ ಯವರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page