Connect with us

LATEST NEWS

ಮದುವೆಗೆ ಒಂದು ತಿಂಗಳಿರುವಾಗಲೇ ತನ್ನ ತಂದೆಯ ತಂಗಿಯೊಂದಿಗೆ ಪರಾರಿಯಾದ ಯುವಕ!

Published

on

ಉತ್ತರ ಪ್ರದೇಶ : ಮದುವೆಯ ಸಂದರ್ಭ ವಧು ತನ್ನ ಪ್ರಿಯಕರನೊಂದಿಗೋ, ಅಥವಾ ವರ ತನ್ನ ಪ್ರೇಯಸಿಯೊಂದಿಗೋ ಓಡಿ ಹೋಗೋ ಸುದ್ದಿ ಸಾಮಾನ್ಯವಾಗಿ ನಾವು ಕೇಳಿರುತ್ತೇವೆ. ಮದುವೆಗೆ ಪೋಷಕರು ಒಪ್ಪದೇ ಇದ್ದಾಗ ಹೀಗೆಲ್ಲ ಮಾಡೋದು ಮಾಮೂಲಿ. ಆದ್ರೆ, ಇಲ್ಲೊಬ್ಬ ತನ್ನ ತಂದೆಯ ತಂಗಿ ಅಂದ್ರೆ ತನ್ನ ಸೋದರ ಅತ್ತೆಯೊಂದಿಗೆ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.

ಏನಿದು ಪ್ರಕರಣ?

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಹಮೀರ್​ಪುರದಲ್ಲಿ. ಅಜಯ್ ಎಂಬಾತನಿಗೆ ಏಪ್ರಿಲ್ 21 ರಂದು ಮದುವೆ ನಿಶ್ಚಯವಾಗಿತ್ತು. ಆದರೆ, ಆತ ತನ್ನ ತಂದೆಯ 16 ವರ್ಷದ ತಂಗಿ ಅಂದರೆ ಸೋದರ ಅತ್ತೆಯೊಂದಿಗೆ ಓಡಿ ಹೋಗಿದ್ದಾನೆ. ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ವರದಿಯ ಪ್ರಕಾರ ಯುವಕ ತನ್ನ ಅಪ್ರಾಪ್ತ ವಯಸ್ಸಿನ ಸೋದರ ಅತ್ತೆಯನ್ನು ಅಪಹರಿಸಿದ್ದಾನೆ. ಯುವಕನ ಮನೆಯವರನ್ನು ಸಂಪರ್ಕಿಸಿದಾಗ ಬಾಲಕಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿಯ ತಂದೆ ಹೇಳಿರುವ ಬಗ್ಗೆ ವರದಿಯಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬೆದರಿಸಿ ಅಪಹರಣ:

ಪ್ರಕರಣದಲ್ಲಿ ಹೊರ ಬಿದ್ದಿರುವ ಮತ್ತೊಂದು ವಿಷಯವೆಂದರೆ ಆರೋಪಿ ಅಂದರೆ ಬಾಲಕಿಯನ್ನು ಅಪಹರಿಸಿದ ಯುವಕ ಅಜಯ್​​​ ಏಪ್ರಿಲ್​​​ 21ರಂದು ವಿವಾಹವಾಗಬೇಕಿತ್ತು. ಆದರೆ ಅದಕ್ಕೂ ಮೊದಲೇ ತನ್ನ 16 ವರ್ಷದ ಸೋದರ ಅತ್ತೆಯೊಂದಿಗೆ ಪರಾರಿಯಾಗಿದ್ದಾನೆ. ಅಜಯ್​​​ ತನ್ನ ಮೂವರು ಸ್ನೇಹಿತರೊಂದಿಗೆ ತಮ್ಮ ಮನೆಗೆ ಬಂದು ಬೆದರಿಸಿ ಮಗಳನ್ನು ಕರೆದೊಯ್ದಿದ್ದಾನೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ.

LATEST NEWS

ಇನ್ನು ಮುಂದೆ ಕೆ.ಪಿ.ಎಸ್.ಸಿ ಪರೀಕ್ಷೆ ಬರೆಯಲು ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ ಕಡ್ಡಾಯ

Published

on

ಬೆಂಗಳೂರು: ಫೆ.16ರಿಂದ ಕರ್ನಾಟಕ ಲೋಕ ಸೇವಾ ಆಯೋಗವು(ಕೆಪಿಎಸ್‍ಸಿ) ನಡೆಸುವ ಮುಂದಿನ ಎಲ್ಲಾ ಪರೀಕ್ಷೆಗಳನ್ನು ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್‍ಗಳನ್ನು ಮಾತ್ರ ಬಳಸಬೇಕು ಎಂದು ಆಯೋಗದ ಸಹಾಯಕ ಕಾರ್ಯದರ್ಶಿ ಟಿ. ಪ್ರಕಾಶ್ ಆದೇಶಿಸಿದ್ದಾರೆ.

ಈ ಮೊದಲು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅಭ್ಯರ್ಥಿಗಳಿಗೆ ಕಪ್ಪು ಬಾಲ್ ಪೆನ್ ಅನ್ನು ಬಳಸಲಾಗುತ್ತಿತ್ತು. ಇದೀಗ ಈ ಸೂಚನೆಯನ್ನು ಮಾರ್ಪಡಿಸಲಾಗಿದೆ. ಕಪ್ಪು ಬಾಲ್ ಪಾಯಿಂಟ್ ಪೆನ್ ಬದಲು ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್‍ಗಳನ್ನು ಮಾತ್ರ ಬಳಸಬೇಕು ಎಂದು ಅವರು ಶುಕ್ರವಾರ ಪ್ರಕಟನೆ ಹೊರಡಿಸಿದ್ದಾರೆ.

Continue Reading

LATEST NEWS

ಬೀದರ್ ನಲ್ಲಿ ಮರ್ಯಾದಾ ಹತ್ಯೆ..! ಮಗಳನ್ನೇ ಕೊಂದ ತಂದೆ

Published

on

ಬೀದರ್: ಪ್ರೀತಿ ಮಧುರ ತ್ಯಾಗ ಅಮರ ಎನ್ನುವ ಮಾತಿದೆ. ಅಲ್ಲದೇ ಪ್ರೇಮಿಗಳ ದಿನ ಬರಲು ಇನ್ನೇನು ಸಮೀಪದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಪ್ರೀತಿ ಮಾಡಿ ಮದುವೆ ಆಗುವವರ ಸಂಖ್ಯೆಯೇ ಹೆಚ್ಚಾಗಿದೆ. ಮಕ್ಕಳು ಪ್ರೀತಿ ಮಾಡುತ್ತಿದ್ದಾರೆ ಎಂದರೆ ಪೋಷಕರಿಗೆ ಸ್ವಲ್ಪ ಭಯ ಇದ್ದೇ ಇರುತ್ತದೆ. ಯಾಕೆಂದರೆ ಹೊತ್ತು, ಹೆತ್ತು ಸಾಕಿ ಸಲಹಿದ ಮಗಳ ಕಾಳಜಿ ಬೆಟ್ಟದಷ್ಟಿರುತ್ತದೆ. ಪ್ರೀತಿಯಿಂದ ಸಾಕಿದ ಮಕ್ಕಳನ್ನು ಒಂದು ಒಳ್ಳೆಯ ಮನೆಗೆ ಕೊಡಬೇಕು ಎಂದು ಹೆತ್ತವರು ಆಸೆ ಪಡುತ್ತಾರೆ. ಕೆಲವರು ಮನೆಯವರ ಒಪ್ಪಿಗೆಯ ಮೇಲೆ ಪ್ರೀತಿ ಮಾಡಿ ಮದುವೆ ಆಗುತ್ತಾರೆ. ಆದರೆ ಇಲ್ಲೊಬ್ಬ ತಂದೆ ತನ್ನ ಮಗಳನ್ನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.

ಹೌದು ಇಂತಹದೊಂದು ಘಟನೆ ನಡೆದಿರುವುದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬರಗೇನ್ ತಾಂಡಾ ಎನ್ನುವ ಗ್ರಾಮದಲ್ಲಿ. ಮಗಳು ತಂದೆಯ ಬಳಿ ನಾನು ಒಬ್ಬನನ್ನು ಇಷ್ಟ ಪಡುತ್ತಿದ್ದೇನೆ. ಅವನೊಂದಿಗೆ ನನ್ನ ವಿವಾಹ ಮಾಡಿಕೊಡಿ ಎಂದು ಹೇಳಿದ್ದಕ್ಕೆ ತಂದೆ ಮಗಳನ್ನೇ ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದಾನೆ.

ಮಗಳ ಪ್ರೀತಿಯನ್ನು ನಿರಾಕರಿಸಿದ ತಂದೆ

ಮೋನಿಕಾ ಮೋತಿರಾಮ ಜಾಧವ್ (18) ಕೊಲೆಯಾದ ಯುವತಿ. ಮೋನಿಕಾ ಒಬ್ಬ ಯುವಕನನ್ನು ತುಂಬಾ ಸಮಯದಿಂದ ಪ್ರೀತಿಸುತ್ತಿದ್ದಳು. ಇದನ್ನು ತಂದೆಯ ಬಳಿ ಹೇಳಿದಾಗ ತಂದೆ ಅದನ್ನು ನಿರಾಕರಿಸಿ, ಈ ಪ್ರೀತಿ ಪ್ರೇಮದಿಂದ ನೀನು ದೂರವಿರಬೇಕು. ಅವನನ್ನು ಮರೆತು ಬಿಡು. ನಾನು ನಿನಗೆ ಒಳ್ಳೆಯ ಹುಡುಗನನ್ನು ನೋಡುತ್ತೇನೆ ಎಂದು ಮಗಳಿಗೆ ತಿಳುವಳಿಕೆ ಹೇಳಿದ್ದರು.

ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ

ಆದರೂ ಮೋನಿಕಾ ತನ್ನ ಹುಡುಗನನ್ನು ಬಿಡಲು ಒಪ್ಪಿರಲಿಲ್ಲವಂತೆ. ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುತ್ತೇನೆ ಎಂದು ಹಠ ಮಾಡಿದ್ದಾಳೆ. ಮಗಳ ಮೇಲೆ ಕೋಪಗೊಂಡಿದ್ದ ತಂದೆ, ಮನೆಯಲ್ಲಿ ಯಾರು ಇಲ್ಲದ ವೇಳೆ ಅಡುಗೆ ಮಾಡುತ್ತಿದ್ದ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಅವಳ ಕಥೆಯನ್ನು ಮುಗಿಸಿ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಮೋನಿಕಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಕುರಿತು ಸಂತಪೂರ ಪೊಲೀಸ್ ಠಾಣೆಯಲ್ಲಿ ಮೃತ ಯುವತಿಯ ತಾಯಿ ಭಾಗುಬಾಯಿ ದೂರು ನೀಡಿದ್ದಾಳೆ.

Continue Reading

FILM

ಅಭಿಮಾನಿಗಳಿಗೆ ನಿರಾಸೆ…ಗೆಳತಿಯ ಆಸೆ ಈಡೇರಿಸುತ್ತೇನೆ ಎಂದ ಡಿಬಾಸ್

Published

on

ಮಂಗಳೂರು/ಬೆಂಗಳೂರು : ಇನ್ನೇನು ಕೆಲವೇ ದಿನಗಳಲ್ಲಿ ನಟ ದರ್ಶನ್ ಹುಟ್ಟುಹಬ್ಬ. ಡಿಬಾಸ್ ಅಭಿಮಾನಿಗಳು ದಿನಗಣನೆ ಮಾಡುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ದರ್ಶನ್ ಭೇಟಿಯಾಗುವ ಆಸೆಯಲ್ಲಿದ್ದಾರೆ. ಆದರೆ, ಅಭಿಮಾನಿಗಳಿಗೆ ದರ್ಶನ್ ನಿರಾಸೆಯುಂಟು ಮಾಡಿದ್ದಾರೆ.

ಜೈಲಿನಿಂದ ಬಿಡುಗಡೆಗೊಂಡ ಬಳಿಕ ಇದೇ ಮೊದಲ ಬಾರಿ ದರ್ಶನ್ ವೀಡಿಯೋವೊಂದನ್ನು ಹರಿಬಿಟ್ಟಿದ್ದಾರೆ.  ಈ ಬಾರಿ ಹುಟ್ಟುಹಬ್ಬಕ್ಕೆ  ಅಭಿಮಾನಿಗಳನ್ನು ಭೇಟಿಯಾಗಲು ಆಗುವುದಿಲ್ಲ ಎಂದಿದ್ದಾರೆ.  ಬೆನ್ನುನೋವಿನಿಂದ ಬಳಲುತ್ತಿರುವುದರಿಂದ ಬಹಳ ಹೊತ್ತು ನಿಲ್ಲಲಾಗುವುದಿಲ್ಲ. ಎಲ್ಲರಿಗೂ ವಿಶ್ ಮಾಡಲು ಆಗುವುದಿಲ್ಲ. ಇಂಜೆಕ್ಷನ್ ತೆಗೆದುಕೊಂಡು 10 – 20 ದಿನ ನೋವು ಕಡಿಮೆ ಇರುತ್ತದೆ. ಪವರ್ ಕಮ್ಮಿಯಾಗುತ್ತಿದ್ದಂತೆ ನೋವು ಹೆಚ್ಚಾಗುತ್ತದೆ. ಆಪರೇಷನ್ ಕಟ್ಟಿಟ್ಟ ಬುತ್ತಿ. ಅದನ್ನು ಮಾಡಿಸಬೇಕು. ಕೆಲವೇ ದಿನಗಳಲ್ಲಿ ಭೇಟಿಯಾಗುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಸೂರಪ್ಪ ಬಾಬು ಸಿನಿಮಾ ಬಗ್ಗೆ…

ಈ ನಡುವೆ ಯಾರ್ಯಾರ ಸಿನಿಮಾ ಒಪ್ಪಿಕೊಂಡಿದ್ದೇನೆ ಅವರೆಲ್ಲಾ ಕಾದಿದ್ದಾರೆ. ಅವರಿಗೆ ತೊಂದರೆಯಾಗೋದು ಇಷ್ಟ ಇಲ್ಲ. ಸೆಲೆಬ್ರಿಟಿಗಳು ಯಾವ ಊಹಾಪೋಹಗಳಿಗೂ ಕಿವಿ ಕೊಡಬೇಡಿ. ಸೂರಪ್ಪ ಬಾಬು ಅವರು ನನ್ನ ಬಳಿಗೆ ಸಿನಿಮಾ ಮಾಡಬೇಕೆಂದು ಬಂದಿದ್ದಾಗ ಅವರಿಗೆ ಸಹ ತುಂಬಾ ಕಮಿಟ್ ಮೆಂಟ್ ಗಳಿದ್ದವು. ಹಾಗಾಗಿ ಅವರ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡೆ. ಈ ನಡುವೆ ತುಂಬಾ ವಿಷಯಗಳು ನಡೆದು ವಿಳಂಬವಾಯಿತು, ಸೂರಪ್ಪ ಬಾಬು ಅವರಿಗೆ ಮತ್ತಷ್ಟು ತೊಂದರೆ ಆಗಬಾರದು ಎಂದು ಅವರು ಕೊಟ್ಟ ಮುಂಗಡ ಹಣವನ್ನು ವಾಪಾಸ್ ಕೊಟ್ಟಿದ್ದೇನೆ ಮುಂದೊಂದು ದಿನ ಉತ್ತಮ ಸಬ್ಜೆಕ್ಟ್ ಸಿಕ್ಕಿದರೆ ಸೂರಪ್ಪ ಬಾಬು ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದರು.

 ಗೆಳತಿ ಆಸೆ ಈಡೇರಿಸುವೆ :

ನಿರ್ದೇಶಕ ಜೋಗಿ ಪ್ರೇಮ್ ಅವರ ಜೊತೆ ಖಂಡಿತ ಸಿನಿಮಾ ಮಾಡೇ ಮಾಡುತ್ತೇನೆ. ಅವರು ನನ್ನ ಗುರುಗಳು, ನನ್ನ ಪ್ರೀತಿಯ ಸ್ನೇಹಿತೆ ರಕ್ಷಿತಾ ಆಸೆ ಕೂಡ ನಾನು ಸಿನಿಮಾ ಮಾಡಬೇಕು ಅಂತ. ಕೆವಿಎನ್ ಪ್ರೊಡಕ್ಷನ್‌ನಲ್ಲಿ ಈಗಾಗಲೇ ಸಿನಿಮಾ ತಯಾರಾಗುತ್ತಿದೆ. ಅದರ ಮಧ್ಯೆ ಇನ್ನೊಂದು ಸಿನಿಮಾ ಸದ್ಯಕ್ಕೆ ಬೇಡ ಎಂದು ಮುಂದೆ ಹಾಕಿದ್ದೇವೆ. ಮುಂದೆ ಖಂಡಿತ ಮಾಡುತ್ತೇನೆ ಎಂದರು.

ವಿಶೇಷ ಥ್ಯಾಂಕ್ಸ್ ಹೇಳಿದ ಡಿಬಾಸ್ :

ವೀಡಿಯೋದ ಆರಂಭದಲ್ಲಿ ದರ್ಶನ್ ಸೆಲೆಬ್ರಿಟಿಗಳಿಗೆ(ಅಭಿಮಾನಿಗಳು) ನಮಸ್ಕಾರ ಹೇಳಬೇಕೋ, ಥ್ಯಾಂಕ್ಸ್ ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದಿದ್ದಾರೆ. ಕೊನೆಯಲ್ಲಿ ಮತ್ತೆ ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳ ಪ್ರೀತಿ, ಬೆಂಬಲಕ್ಕೆ ಯಾವಾಗಲೂ ಚಿರಋಣಿ ಎಂದಿದ್ದಾರೆ.

ಈ ವೇಳೆ ತನ್ನ ಕಷ್ಟ ಕಾಲದಲ್ಲಿ ಸಾಥ್ ಕೊಟ್ಟ ಮೂವರ ಹೆಸರು ಉಲ್ಲೇಖಿಸಿದ್ದಾರೆ. ನಟ ಧನ್ವೀರ್, ಬುಲ್ ಬುಲ್ ರಚಿತಾ ರಾಮ್, ಪ್ರಾಣ ಸ್ನೇಹಿತೆ ರಕ್ಷಿತಾಗೆ ತುಂಬಾ ಥ್ಯಾಂಕ್ಸ್ ಎಂದಿದ್ದಾರೆ.

ಇದನ್ನೂ ಓದಿ : ನವಗ್ರಹ ಸಿನಿಮಾ ಖ್ಯಾತಿಯ ನಟ ಗಿರಿ ದಿನೇಶ್​ ಇ*ನ್ನಿಲ್ಲ

ಇದೇ ಸಂದರ್ಭ ದರ್ಶನ್ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಗಾಸಿಪ್ ಬಗ್ಗೆ ಮಾತಾಡಿದ ಅವರು, ಈ ವಿಷಯ ಆಗಾಗ ಸುದ್ದಿಯಾಗುತ್ತಿರುತ್ತದೆ. ನನ್ನ ಕೊನೆಯ ಉಸಿರು ಇರುವವರೆಗೂ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದಿಲ್ಲ, ಕನ್ನಡದ ಜನತೆ ನನಗೆ ಪ್ರೀತಿ, ಆಶೀರ್ವಾದ ನೀಡಿದ್ದಾರೆ. ಇಲ್ಲಿ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ ಎಂದು  ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page