Connect with us

LATEST NEWS

ಉಡುಪಿ : ಲಾಡ್ಜ್‌ನಲ್ಲಿ ವೇ*ಶ್ಯವಾಟಿಕೆ ನಡೆಸುತ್ತಿದ್ದ ಓರ್ವ ಅರೆಸ್ಟ್

Published

on

ಉಡುಪಿ: ಲಾಡ್ಜ್ವೊಂದರಲ್ಲಿ ವೇ*ಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ ಘಟನೆ ನಡೆದಿದೆ.

ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಹೆರ್ಗ ಗ್ರಾಮದ ಪರ್ಕಳ ಬಸ್ ನಿಲ್ದಾಣದ ಹಿಂಭಾಗದಲ್ಲಿ ಇರುವ ಶ್ರೀ ಸಾಯಿ ಲಾಡ್ಜ್ ನಲ್ಲಿ ಅಕ್ರಮ ಲಾಭಕ್ಕಾಗಿ ಬಲವಂತವಾಗಿ ಮಹಿಳೆಯರನ್ನು ಇರಿಸಿ ಅಕ್ರಮ ವೇ*ಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಗೋವುಗಳ ಮೇಲಿನ ಪೈಶಾಚಿಕ ಕೃ*ತ್ಯ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

ಜ.19ರ ಭಾನುವಾರ ಈ ದಾಳಿ ನಡೆಸಲಾಗಿದೆ. ಈ ವೇಳೆ ಆರೋಪಿತ ಶರಣಪ್ಪನನ್ನು ವಶಕ್ಕೆ ಪಡೆದು, ಮಹಿಳೆಯನ್ನು ರಕ್ಷಿಸಲಾಗಿದೆ. 143 ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಾಗಿದೆ.

FILM

ನಗುಮೊಗದೊಡೆಯನ 50ನೇ ವರ್ಷದ ಜನ್ಮದಿನ; ಅಪ್ಪು ಸಮಾಧಿಗೆ ಭೇಟಿ ನೀಡುತ್ತಿರುವ ಕುಟುಂಬಸ್ಥರು, ಅಭಿಮಾನಿಗಳು

Published

on

ರಾಜ್ಯದಾದ್ಯಂತ ಲಕ್ಷಾಂತರ ಅಭಿಮಾನಿಗಳು ನಟ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ 50ನೇ ವರ್ಷದ ಬರ್ತ್​ಡೇ ಆಗಿದ್ದರಿಂದ ಸ್ಪೆಷಲ್ ಆಗಿ ಆಚರಿಸುತ್ತಿದ್ದಾರೆ. ಪುನೀತ್‌ ಅವರ ಸಮಾಧಿ ಸ್ಥಳಕ್ಕೆ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ. ಇದೇ ಸಂದರ್ಭ ಮರುಬಿಡುಗಡೆಯಾಗಿರುವ ‘ಅಪ್ಪು’ ಸಿನಿಮಾ ಚಿತ್ರಮಂದಿರಗಳಲ್ಲಿ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿಯೂ ಸಹ ಪುನೀತ್ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಮೂಲಕ ಸರ್ವರೂ ಅಪ್ಪುವನ್ನು ಸ್ಮರಿಸುತ್ತಿದ್ದಾರೆ.

ಕರುನಾಡ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ ಇಂದು ನಮ್ಮೊಂದಿಗೆ ಇದ್ದಿದ್ದರೆ ಅದ್ದೂರಿಯಾಗಿ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಅವರಿಲ್ಲದೇ ಅಭಿಮಾನಿಗಳು ಜನ್ಮದಿನ ಆಚರಿಸುವಂತಾಗಿದೆ. ಪ್ರತಿವರ್ಷ ಮಾರ್ಚ್​ 17 ಬಂತೆಂದರೆ ʼಅಪ್ಪುʼ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಪುನೀತ್ ಅವರ ಬರ್ತ್​ಡೇ ಪ್ರಯುಕ್ತ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾರೆ. ಈ ಬಾರಿಯೂ ಅದು ಮುಂದುವರಿದಿದೆ. ಅನ್ನದಾನ, ರಕ್ತದಾನ, ನೇತ್ರದಾನ ಸೇರಿದಂತೆ ಅನೇಕ ಕಾರ್ಯಗಳನ್ನು ರಾಜ್ಯಾದ್ಯಂತ ಕೈಕೊಳ್ಳುತ್ತಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ʼಅಪ್ಪುʼ ನೀಡಿದ ಕೊಡುಗೆಯನ್ನ ಮರೆಯುವಂತಿಲ್ಲ. ಬಾಲನಟನಾಗಿಯೇ ಅಭಿಮಾನಿಗಳ ಮನಗೆದ್ದಿದ್ದ ಪುನೀತ್ ಹೀರೋ ಆಗಿಯೂ ಮೊದಲ ಚಿತ್ರದಿಂದಲೇ ಯಶಸ್ಸು ಕಂಡರು. ಅಭಿನಯ, ಡ್ಯಾನ್ಸ್, ಫೈಟಿಂಗ್​ನಲ್ಲಿ ಪುನೀತ್‌ಗೆ ಸರಿಸಾಟಿ ಯಾರೂ ಇರಲಿಲ್ಲ. ಅದೇ ರೀತಿ ಜನಪರ ಕಾರ್ಯಗಳ ಮೂಲಕವೂ ಅವರು ‘ರಿಯಲ್ ಹೀರೋ’ ಎನಿಸಿಕೊಂಡಿದ್ದರು. ಪುನೀತ್‌ ಅವರ ಗುಣಗಳೇ ಕೋಟ್ಯಂತರ ಅಭಿಮಾನಿಗಳಿಗೆ ಮಾದರಿ ಆಗಿವೆ. ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಪುನೀತ್ ಅವರು ಸಕ್ರಿಯರಾಗಿದ್ದರು. ತಮ್ಮ ‘PRK ಪ್ರೊಡಕ್ಷನ್ಸ್’ ಮೂಲಕ ಅವರು ಹಲವಾರು ಸಿನಿಮಾಗಳನ್ನು ನಿರ್ಮಿಸುವ ಗುರಿ ಹೊಂದಿದ್ದರು. ಈ ಒಂದು ಕಾಯಕವನ್ನು ಇದೀಗ ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮುಂದುವರಿಸುತ್ತಿದ್ದಾರೆ. ಜನ್ಮದಿನದ ಪ್ರಯುಕ್ತ ಅನೇಕರು ʼಅಪ್ಪುʼ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ.

Continue Reading

LATEST NEWS

ಉಡುಪಿ : ಪಿಕಾಪ್ ವಾಹನ ಡಿಕ್ಕಿಯಾಗಿ ಪಾದಚಾರಿ ಮಹಿಳೆ ಸಾವು

Published

on

ಉಡುಪಿ : ಸಾವು ಎಂಬುವುದು ಹೇಗೆ ಬರುತ್ತದೆ ಎಂದು ಹೇಳುವುದು ಅಸಾಧ್ಯ. ಸಾಮಾನ್ಯವಾಗಿ ವಾಹನದಲ್ಲಿ ಹೋಗುವಾಗ ಅಪಘಾತ ಸಂಬವಿಸಿ ಸಾವನ್ನಪ್ಪಿದ್ದಾರೆ ಎನ್ನುವ ಸುದ್ಧಿಯನ್ನು ನಾವು ಹೆಚ್ಚಾಗಿ ಕೇಳುತ್ತಿರುತ್ತೇವೆ. ಆದರೆ, ರಸ್ತೆ ಬದಿಯೇ ನಡೆದುಕೊಂಡು ಹೋಗುತ್ತಿರುವ ವ್ಯಕ್ತಿಗೆ ವಾಹನ ಡಿಕ್ಕಿಯಾಗಿ ಅವರು ಸಾವನ್ನಪ್ಪುತ್ತಾರೆಯೆಂದರೆ ಅದು ಹಣೆಬರಹವೇ ಸರಿ. ಇದೀಗ ಅಂತಹದ್ದೇ ಘಟನೆಯೊಂದು ಉಡುಪಿಯಲ್ಲಿ ನಡೆದಿದ್ದು, ಪಿಕಾಪ್ ವಾಹನ ಡಿಕ್ಕಿಯಾದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೃತಪಟ್ಟಿದ್ದಾರೆ.

ಈ ದಾರುಳ ಘಟನೆ ಘಟನೆ ಮರವಂತೆ ಗ್ರಾಮದ ಸೀ ಲ್ಯಾಂಡ್ ಬಾರ್ ಆಂಡ್ ರೆಸ್ಟೋರೆಂಟ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿನ್ನೆ (ಮಾ.16) ಮಧ್ಯಾಹ್ನ ವೇಳೆ ಸಂಭವಿಸಿದೆ. ಮೃತರನ್ನು ಯಳಜಿತ್ ಗ್ರಾಮದ ಬಾಬು ಎಂಬವರ ಪತ್ನಿ ಲಕ್ಷ್ಮೀ(45) ಎಂದು ಗುರುತಿಸಲಾಗಿದೆ.

ಕುಂದಾಪುರ-ಬೈಂದೂರು ಕಡೆಯ ಏಕಮುಖ ರಸ್ತೆಯಲ್ಲಿ ಪಿಕಾಪ್ ವಾಹನ ಅತೀ ವೇಗದಿಂದ ಬಂದು ಲಕ್ಷ್ಮೀ ಅವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಲಕ್ಷ್ಮೀ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಘಟನೆ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ನಿಲ್ಲಿಸಿದ್ದ ಕಾರು ಹಿಮ್ಮುಖ ಚಾಲನೆ; ನಿವೃತ್ತ ರೇಂಜರ್ ಸಾವು

Published

on

ಸುಳ್ಯ: ಮನೆ ಎದುರು ನಿಲ್ಲಿಸಿದ್ದ ಕಾರು ಹಿಂದಕ್ಕೆ ಚಲಿಸಿದ್ದ ವೇಳೆ ಅಂಗಳದಲ್ಲಿ ನಿಂತಿದ್ದ ನಿವೃತ್ತ ರೇಂಜರ್‌ಗೆ ಡಿಕ್ಕಿಯಾಗಿದ್ದು, ಸ್ಥಲದಲ್ಲೇ ಅವರು ಮೃತಪಟ್ಟ ಘಟನೆ ಶನಿವಾರ (ಮಾ.15) ನಡೆದಿದೆ.

ಜೋಸೆಫ್ (74) ಮೃತ ವ್ಯಕ್ತಿಯಾಗಿದ್ದು, ಸುಳ್ಯ ಕರಿಕ್ಕಳದ ಮುಚ್ಚಿಲದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿ ನಿಂತಿದ್ದಾಗ ಕಾರು ಹಿಮ್ಮುಖ ಚಲಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮನೆಯಲ್ಲಿ ಮೃತರ ಪತ್ನಿ ಮಾತ್ರ ಇದ್ದು ಕೂಡಲೇ ಜೋಸೆಫ್‌ರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಈ ವೇಳೆ ದಾರಿ ಮಧ್ಯೆಯೇ ಮೃತಪಟ್ಟಟ್ಟಿದ್ದಾರೆ. ಅರಣ್ಯ ಇಲಾಖೆಯಲ್ಲಿ ಪಂಜ, ಮಂಗಳೂರು ಹಾಗೂ ಸಂಪಾಜೆ ಕಡೆಗಳಲ್ಲಿ ಸೇವೆ ಸಲ್ಲಿಸಿ ಸಂಪಾಜೆಯಲ್ಲಿ ರೇಂಜರ್ ಆಗಿ ನಿವೃತ್ತರಾಗಿದ್ದರು. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page