Connect with us

ಒಂದ್ಕಾಲದ ಯಶಸ್ವಿ ಉದ್ಯಮಿ: ಈಗ ಚಹ ಅಂಗಡಿಯಲ್ಲಿ ಅಡುಗೆ ಕೆಲಸಗಾರ

Published

on

ಉದ್ಯಮಿಯನ್ನು ಚಹಾ ಮಾರುವಂತೆ ಮಾಡಿದ ನೋಟು ಅಮ್ಯಾನೀಕರಣ

ದುಬೈ: ಒಂದು ಕಾಲದಲ್ಲಿ ಆತ ಯಶಸ್ವಿ ಉದ್ಯಮಿ. ತಮ್ಮ 24ನೇ ವರ್ಷದಲ್ಲೇ ಉತ್ತುಂಗಕ್ಕೇರಿದ್ದರು.

ಕೇರಳದ ತ್ರಿಶೂರ್‌ನಲ್ಲಿ ಎಸ್‌ವಿಆರ್ ಆಗ್ರೋ ಪ್ರಾಡೆಕ್ಟ್ಸ್ ಎಂಬ ನೈಸರ್ಗಿಕ ಗೊಬ್ಬರ ಉತ್ಪಾದಿಸುತ್ತಿದ್ದ ಕಂಪೆನಿ, ಸುಮಾರು 462 ಉದ್ಯೋಗಿಗಳೊಂದಿಗೆ ಲಾಭದಲ್ಲಿ ಮುನ್ನಡೆದಿತ್ತು.

ಆತ ಬೇರಾರು ಅಲ್ಲ ನಿತೇಶ್ ಸಹದೇವನ್ ಎಂಬ ಬಿಸಿ ರಕ್ತದ ಯಶಸ್ವಿ ಉದ್ಯಮಿ.

ಆದರೆ ಇದೀಗ ಕಾಲ ಬದಲಾಗಿದೆ. ಬರೋಬ್ಬರಿ ಎಂಟು ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ.

ಒಂದು ಸಮಯದಲ್ಲಿ ಯಶಸ್ವಿ ಉದ್ಯಮಿ ಇದೀಗ ದುಬೈನ ಕರಾಮ ಪ್ರದೇಶದಲ್ಲಿರುವ ಮೂಸಾಕಾಂತ್ ಚಾಯಕ್ಕಡ ಎಂಬ ಚಹಾ ಅಂಗಡಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ.

2016ರ,ನ. 8ರಂದು ರಾತ್ರೋರಾತ್ರಿ ಭಾರತ ಸರ್ಕಾರ ಘೋಷಿಸಿದ ನೋಟು ಅಮಾನ್ಯ ನಿರ್ಧಾರ ಇವರ ಈ ದುರವಸ್ಥೆಗೆ ಕಾರಣ.

“ಪರೋಟಾ, ಚಹಾ ಮಾಡುವ ಜೊತೆಗೆ ರೆಸ್ಟೋರೆಂಟ್‌ನಲ್ಲಿ ಸಪ್ಲೈ ಮಾಡುತ್ತೇನೆ” ಎಂದವರು ಬೇಸರಪಟ್ಟುಕೊಳ್ಳುತ್ತಾರೆ.

ಖಲೀಜ್ ಟೈಮ್ಸ್ ಜೊತೆ ತಮ್ಮ ಕಥೆ-ವ್ಯಥೆಯನ್ನು ಬಿಚ್ಚಿಟ್ಟಿರುವ ಇವರು, ಸದ್ಯ ಈ ಉದ್ಯೋಗ ಸಿಕ್ಕಿದ್ದಕ್ಕಾಗಿ ತಮ್ಮ ಬಾಲ್ಯ ಸ್ನೇಹಿತನಿಗೆ ಥ್ಯಾಂಕ್ಸ್ ಹೇಳುವುದನ್ನು ಮರೆಯಲಿಲ್ಲ.

ತಾನು ಹೂಡಿಕೆ ಮಾಡಿದ ಗಲ್ಫ್ ಮೂಲದ ಹಲವು ಗ್ರಾಹಕರನ್ನು ಕಳೆದುಕೊಂಡ ಬಳಿಕ ಕೆಲವೇ ತಿಂಗಳಲ್ಲಿ ತಮಿಳುನಾಡಿನ ಪೊಲ್ಲಾಚಿಯಲ್ಲಿ ಹೊಂದಿದ್ದ ಉತ್ಪಾದನಾ ಘಟಕ ಮಾರಾಟ ಮಾಡಿ ಎಲ್ಲ ಉದ್ಯೋಗಿಗಳನ್ನು ಮನೆಗೆ ಕಳುಹಿಸಬೇಕಾಯಿತು.

ಜೊತೆಗೆ ಪಿತ್ರಾರ್ಜಿತ ಮನೆಯನ್ನೂ ಮಾರಾಟ ಮಾಡಿ, ತಂದೆಯನ್ನು ಸಮಾಧಿ ಮಾಡಿದ ಸ್ಥಳವನ್ನೂ ಮಾರಾಟ ಮಾಡಿ ವ್ಯವಹಾರಕ್ಕೆ ಪಡೆದ ಬ್ಯಾಂಕ್ ಸಾಲ ತೀರಿಸಬೇಕಾಯಿತು ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ತಮ್ಮ 18ನೇ ವರ್ಷಕ್ಕೇ ವ್ಯವಹಾರ ಆರಂಭಿಸಿದ ಇವರು, ತಾವು ಉತ್ಪಾದಿಸುತ್ತಿದ್ದ ಹಸಿರು ಗೊಬ್ಬರ ಎಲ್ಲೆಡೆ ಜನಪ್ರಿಯವಾಗಿತ್ತು.

ಇದರ ಲಾಭಗಳನ್ನು ಅರಿತ ಬಿಟೆಕ್ ಪದವೀಧರ, ಉದ್ಯಮಿಯಾಗಲು ಬಯಸಿದರು.

ಹ್ಯೂಮಿಕ್ ಆ್ಯಸಿಡ್, ಸಸ್ಯಶಾಸ್ತ್ರೀಯ ಪೋಷಕಾಂಶಗಳು, ಸಾಗರ ಪ್ರೊಟೀಲ್ ಮತ್ತು ಪ್ರಾಣಿಗಳ ಪ್ರೊಟೀನ್ ಹೊಂದಿದ್ದ ಈ ಗೊಬ್ಬರ ಗರಿಷ್ಠ ಇಳುವರಿಗೆ ಕಾರಣವಾಗಿತ್ತು.

500 ರೂಪಾಯಿಯ ಒಂದು ಬಾಟಲಿ 2000 ಗಿಡಗಳಿಗೆ ಸಾಕಾಗುತ್ತಿತ್ತು ಎಂದು ಹೇಳುತ್ತಾರೆ.

ಗ್ರಾಹಕರಿಂದ ಉತ್ತಮ ರೆಸ್ಪಾನ್ಸ್ ಬಂದ ಕಾರಣ 2016ರಲ್ಲಿ ಇಂತಹ ಐದು ಘಟಕ ಆರಂಭಿಸಲು 3 ಕೋಟಿ ರೂ. ಸಾಲ ಪಡೆದರು.

ಹಲವು ಟನ್‌ಗಳನ್ನು ಖರೀದಿಸಲು ಗಲ್ಫ್ ಮೂಲದ ಗ್ರಾಹಕರು ಮುಂದೆ ಬಂದರು.

ಮುಂದಿನ 10 ವರ್ಷಗಳಲ್ಲಿ ದೊಡ್ಡ ಲಾಭ ಗಳಿಸುವ ಲೆಕ್ಕಾಚಾರದಲ್ಲಿ ಸಹದೇವನ್ ವ್ಯವಹಾರ ವಿಸ್ತರಣೆಗೆ ಮುಂದಾದರು.

2016ರ ನವೆಂಬರ್‌ನಲ್ಲಿ ಗ್ರಾಹಕರು ಏಕಾಏಕಿ ಹಿಂದೆ ಸರಿದರು.

ಉತ್ಪನ್ನ, ಘಟಕ ಎಲ್ಲವೂ ವ್ಯರ್ಥವಾಯಿತು. ಬ್ಯಾಂಕ್ ಸಾಲದ ಹೊರೆ ಹೆಚ್ಚಲಾರಂಭಿಸಿದಾಗ ಎಲ್ಲವನ್ನೂ ಮಾರಾಟ ಮಾಡಲು ಮುಂದಾದರು

ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲಿ ನೆರವಿಗೆ ಬಂದಿದ್ದು ಬಾಲ್ಯದ ಸ್ನೇಹಿತ, ಉದ್ಯಮಿ ಅಬ್ದುಲ್ ರಶೀದ್. ದುಬೈಗೆ ಬರುವಂತೆ ಆಹ್ವಾನ ನೀಡಿದರು.

ಆಹಾರ ಮತ್ತು ಪಾನೀಯ ಕ್ಷೇತ್ರದ ವಹಿವಾಟು ವಿಸ್ತರಣೆಗೆ ರಶೀದ್ ಮುಂದಾದರು.

“ನನ್ನ ಸ್ಥಿತಿ ನೋಡಿ ಚಹಾ ಅಂಗಡಿ ಹಾಕಿಕೊಟ್ಟರು. ರಶೀದ್ ನನ್ನ ಪಾಲಿನ ದೇವರು. ಅವರು ಇಲ್ಲದಿದ್ದರೆ ನಾನು ಇಲ್ಲಿ ಇರುತ್ತಿರಲಿಲ್ಲ.

ನಾನು ತೀರಾ ದಯನೀಯ ಸ್ಥಿತಿಯಲ್ಲಿದ್ದಾಗ ಇಲ್ಲಿಗೆ ಕರೆತಂದರು.

ಇದೀಗ ಎಲ್ಲ ಸಾಲ ತೀರಿಸಿ, ವೃದ್ಧ ತಾಯಿಗಾಗಿ ಮನೆಯನ್ನೂ ಮಾಡಿ ಕೊಟ್ಟಿದ್ದೇನೆ”. ಎಂದು ಅವರು ವಿವರಿಸುತ್ತಾರೆ.

ಸಹದೇವನ್ ತಮ್ಮ ಮೊಬೈಲ್ ಫೋನ್‌ನಲ್ಲಿ ರಶೀದ್ ಹೆಸರನ್ನು ದೇವರು ಎಂದು ಸೇವ್ ಮಾಡಿದ್ದಾರೆ.

ಆರು ತಿಂಗಳಲ್ಲೇ ಈ ರೆಸ್ಟೋರೆಂಟ್ ಜನಪ್ರಿಯವಾಗಿದ್ದು, ಬಿಸಿ ಚಹಾ, ತಿಂಡಿ ಮತ್ತು ಕೇರಳದ ಮಲಬಾರ್ ಖಾದ್ಯಗಳಿಗೆ ಹೆಸರುವಾಸಿಯಾಗಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಉದ್ಯಮಿಯನ್ನು ‘ಹನಿಟ್ರ್ಯಾಪ್’ ಮಾಡಲು ಹೋಗಿ ತಗಲಾಕ್ಕೊಂಡ ನರ್ಸ್ & ಗ್ಯಾಂಗ್

Published

on

ಮಂಗಳೂರು/ದಾವಣಗೆರೆ : ಖಾಸಗಿ ಆಸ್ಪತ್ರೆ ನರ್ಸ್​​ ಒಬ್ಬಳು ಕಷ್ಟ ಎಂದು ಹೇಳಿಕೊಂಡು ಬಂದು ಉದ್ಯಮಿಗೆ ಗಾಳ ಹಾಕಿದ್ದಳು. ಆದರೆ, ಹಾಳು ಬುದ್ದಿ  ತೋರಿಸಿ ಇದೀಗ ಜೈಲು ಪಾಲಾಗಿದ್ದಾಳೆ. ಈ ಘಟನೆ ನಡೆದಿರೋದು ದಾವಣಗೆರೆಯಲ್ಲಿ.

ಸುಶ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಪರಿಚಯ…ಸಲುಗೆ…ಹನಿಟ್ರ್ಯಾಪ್ :

ಉದ್ಯಮಿ ಪ್ರಭು ಎನ್ನುವರನ್ನು ಪರಿಚಯ ಮಾಡಿಕೊಂಡ ನರ್ಸ್ ಸುಶ್ಮಿತಾ, ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು, ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಬಳಿಕ ಈ ಪರಿಚಯ ಸ್ನೇಹವಾಗಿ ಬದಲಾಗಿತ್ತು. ಸುಶ್ಮಿತಾ ಒಂದು ತಿಂಗಳ ಹಿಂದೆ ಮೊದಲ ಬಾರಿಗೆ ಪ್ರಭುರನ್ನು ಅಪಾರ್ಟ್ಮೆಂಟ್‌ಗೆ ಕರೆಯಿಸಿಕೊಂಡಿದ್ದಳು. ಹೀಗೆ ಹಲವು ಬಾರಿ ಸರ್ವಿಸ್ ಅಪಾರ್ಟ್ಮೆಂಟ್‌ನಲ್ಲಿ ಇಬ್ಬರ ಭೇಟಿ ನಡೆಯುತ್ತಿತ್ತು.

ಇದನ್ನೂ ಓದಿ : ಆದಿಲಕ್ಷ್ಮೀ ಪುರಾಣ ಸೀರಿಯಲ್‌ನಿಂದ ಹೊರನಡೆದ ನಟಿ!

ಸುಶ್ಮಿತಾ ಹಾಗೂ ಪ್ರಭು ಒಟ್ಟಿಗೆ ಇದ್ದ ವೀಡಿಯೋವನ್ನು ಇತರ ಆರೋಪಿಗಳು ಮಾಡಿಕೊಂಡಿದ್ದರು. ಬಳಿಕ ಇದನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ರೂಮಿಗೆ ನುಗ್ಗಿ, ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಹಾಕುತ್ತೇವೆ ಎಂದು ಹೆದರಿಸಿ  25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಪ್ರಭು, 12 ಲಕ್ಷಕ್ಕೆ ಒಪ್ಪಿಕೊಂಡಿದ್ದು, ಎರಡು ದಿನದಲ್ಲಿ ಹಣ ಕೊಡುವುದಾಗಿ ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಆರೋಪಿಗಳ ಬೆ*ದರಿಕೆಗೆ ಬೇಸತ್ತು ಠಾಣೆಗೆ ಪ್ರಭು ದೂರು ನೀಡಿದ್ದು,  ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Continue Reading

LATEST NEWS

ರಿಪ್ಪನ್‌ ಪೇಟೆ ಬಳಿ ಬೀಕರ ಅಗ್ನಿ ಅವಘಡ, ರಸ್ತೆ ಮಧ್ಯೆಯೇ ಬೆಂಕಿಗಾಹುತಿಯಾದ ಕಾರು

Published

on

ಶಿವಮೊಗ್ಗ: ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಬಳಿ ಶನಿವಾರ ತಡರಾತ್ರಿ ನಡೆದಿದೆ.


ಶಿವಮೊಗ್ಗದಿಂದ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ದೆಮ್ಲಾಪುರಕ್ಕೆ ಮದುವೆ ಕಾರ್ಯದ ನಿಮಿತ್ತವಾಗಿ ಕಾರಿನಲ್ಲಿ ದಿನಸಿ ಸಾಮಗ್ರಿಗಳನ್ನು ತುಂಬಿಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಕಾರಿನ ಎಂಜಿನ್ ಭಾಗದಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಮಲಗಿದ್ದಲ್ಲೇ ಆರೋಗ್ಯ ಇಲಾಖೆ ನೌಕರ ಹೃದಯಾ*ಘಾತಕ್ಕೆ ಬ*ಲಿ

ಚಾಲಕ ಶ್ರೀಕಾಂತ್ ಮತ್ತು ಮತ್ತೊಬ್ಬ ಪ್ರಯಾಣಿಕ ಗಂಗಾಧರ ಗೌಡ ಅವರು ಹೊಗೆ ಕಾಣಿಸಿಕೊಂಡ ತಕ್ಷಣ ಕಾರಿನಿಂದ ಕೆಳಗಿಳಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಾರು ರಸ್ತೆ ಮಧ್ಯೆಯೇ ಧಗಧಗನೆ ಉರಿದು ಸಂಪೂರ್ಣವಾಗಿ ಭಸ್ಮವಾಗಿದೆ.

Continue Reading

FILM

‘ನಮ್ಮನ್ನ ಯಾಕೆ ಮದುವೆಗೆ ಕರೆದಿಲ್ಲ?’: ವಿಜಯ್-ರಶ್ಮಿಕಾ ವಿರುದ್ಧ ಮುನಿಸಿಕೊಂಡ ಪುಟ್ಟ ಅಭಿಮಾನಿ!

Published

on

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗೆ ಉದಯಪುರದಲ್ಲಿ ವಿವಾಹವಾದರು. ಈ ಮದುವೆಗೆ ತನ್ನನ್ನು ಕರೆದಿಲ್ಲ ಎಂದು ಪುಟ್ಟ ಅಭಿಮಾನಿಯೊಬ್ಬರು ಕೋಪದಿಂದ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಆ ಪುಟ್ಟ ಬಾಲಕಿ ವಿಡಿಯೋದಲ್ಲಿ, “ನಾನು ಕೂಡ ನಿಮ್ಮ ಅಭಿಮಾನಿಯಲ್ಲವೇ? ನಮ್ಮನ್ನು ಯಾಕೆ ಮದುವೆಗೆ ಕರೆಯಲಿಲ್ಲ?” ಎಂದು ಮುಗ್ಧವಾಗಿ ಪ್ರಶ್ನಿಸಿದ್ದಾಳೆ.
ಈ ವಿಡಿಯೋಗೆ ವಿಜಯ್ ಅವರು ತುಂಬಾ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. “ಬುಜ್ಜಿ ತಲ್ಲಿ.. ನಿನ್ನನ್ನು ಮನೆಗೆ ಊಟಕ್ಕೆ ಕರೆಯುತ್ತೇನೆ. ನಿನಗೆ ಇಷ್ಟವಾದ ಅಡುಗೆ ಮತ್ತು ಸಿಹಿತಿಂಡಿಗಳನ್ನು ಹೇಳು, ಮನೆಯಲ್ಲಿ ಎಲ್ಲವನ್ನೂ ಮಾಡಿಸಿ ಒಟ್ಟಿಗೆ ತಿನ್ನೋಣ” ಎಂದು ಕಮೆಂಟ್ ಮಾಡಿದ್ದಾರೆ.

ನಟಿ ರಶ್ಮಿಕಾ ಕೂಡ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಆ ಬಾಲಕಿಗೆ ವಿಶೇಷ ಉಡುಗೊರೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್!

ಈ ದಂಪತಿಗಳು ತಮ್ಮ ಮದುವೆಯ ನಂತರ ದೇವಸ್ಥಾನಗಳಲ್ಲಿ ಸಿಹಿತಿಂಡಿ ಹಂಚುವ ಮೂಲಕ ಮತ್ತು ಅಭಿಮಾನಿಗಳೊಂದಿಗೆ ವಿಶೇಷ ಊಟ ಮಾಡುವ ಮೂಲಕ ಸಂಭ್ರಮವನ್ನು ಆಚರಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page