Connect with us

LATEST NEWS

ಇತಿಹಾಸ ಬರೆದ ಭಾರತೀಯ ಕ್ರಿಕೆಟ್‌ ತಾರೆಯರು..!

Published

on

ಮಂಗಳೂರು : ಭಾರತದ ಕ್ರಿಕೆಟ್ ತಾರೆಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಸ್ಮೃತಿ ಮಂದಾನ ದೇಶದ ಇತಿಹಾಸದಲ್ಲೇ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಇಬ್ಬರೂ ಕಳೆದ ತಿಂಗಳು ನೀಡಿದ ಅದ್ಭುತ ಪ್ರದರ್ಶನಕ್ಕಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಐಸಿಸಿ ತಿಂಗಳ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ.


ಈ ಮೂಲಕ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಐಸಿಸಿ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದ ದೇಶದ ಮೊದಲ ಜೋಡಿ ಎನಿಸಿದ್ದಾರೆ. ಈ ಹಿಂದೆ ಯಾವುದೇ ದೇಶದ ಆಟಗಾರರು ಒಂದೇ ತಿಂಗಳಿನಲ್ಲಿ ಈ ಸಾಧನೆ ಮಾಡಿಲ್ಲ. ಭುವನೇಶ್ವರ್ ಕುಮಾರ್ ಬಳಿಕ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಪಡೆದ ಎರಡನೇ ಭಾರತೀಯ ಬೌಲರ್ ಜಸ್ಪ್ರೀತ್ ಬುಮ್ರಾ ಆಗಿದ್ದಾರೆ. ಇದು ಅವರ ಟಿ20 ವಿಶ್ವಕಪ್‌ನ ಸಾಧನೆಯಿಂದಾಗಿ ಕಳೆದ ತಿಂಗಳು ಮಾಡಿದ ಸಾಧನೆಗೆ ಸಿಕ್ಕ ಗೌರವಾಗಿದೆ. ಇನ್ನು ಸ್ಮೃತಿ ಮಂದಾನಗೂ ಇದು ಮೊದಲ ತಿಂಗಳ ಪ್ರಶಸ್ತಿಯಾಗಿದ್ದು, ಹಮ್ರಾನ್‌ ಪ್ರೀತ್ ಕೌರ್ ಮತ್ತು ದೀಪ್ತಿ ಶರ್ಮಾ ನಂತರ ಪ್ರಶಸ್ತಿ ಪಡೆದ ಮೂರನೆಯವರಾಗಿದ್ದಾರೆ.


ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 8.26 ರ ಸರಾರಿಯಲ್ಲಿ 15 ವಿಕೇಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿ ಕೂಡಾ ಬೂಮ್ರಾ ಪಾಲಾಗಿತ್ತು. ಮಂಧಾನ ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮತ್ತು ಏಕೈಕ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ನಾಲ್ಕು ಪಂದ್ಯದಲ್ಲಿ ಮೂರು ಶತಕ ಸಿಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.

DAKSHINA KANNADA

ಹಾವು ಕಡಿದು ಮಹಿಳೆ ಸಾ*ವು

Published

on

ಬೆಳ್ತಂಗಡಿ: ಹಾವು ಕಚ್ಚಿ ವೃದ್ಧ ಮಹಿಳೆ ಮೃ*ತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ನಾರ್ಯ ಗ್ರಾಮ ಎಂಬಲ್ಲಿ ನಡೆದಿದೆ.

ನಾರ್ಯ ನಿವಾಸಿ ಶಾಂತಾ (68) ಮೃ*ತಪಟ್ಟ ಮಹಿಳೆ. ಮನೆಯ ಹಿಂಬದಿಗೆ ಬಟ್ಟೆಯನ್ನು ಒಗೆಯಲು ಸಾಬೂನು ತೆಗೆಯುವ ಸಂದರ್ಭದಲ್ಲಿ ಕಿಟಕಿಯಲ್ಲಿ ಇದ್ದ ಯಾವುದೋ ವಿಷದ ಹಾವು ಎಡಗೈ ಕಿರು ಬೆರಳಿಗೆ ಕಡಿದಿತ್ತು. ಮನೆ ಮದ್ದು ಮಾಡಿ ಬಳಿಕ ಉಜಿರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಅವರೂ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃ*ತಪಟ್ಟಿದ್ದಾರೆ.

ಇದನ್ನೂ ಓದಿ: ವಿದ್ಯುತ್ ತಂತಿ ಬಿದ್ದು ಸೂರಾಲು ಮೇಳದ ಯುವ ಯಕ್ಷಗಾನ ಕಲಾವಿದ ಜೀವಾಂತ್ಯ

ಪ್ರಸ್ತುತ ಬಿಸಿಲಿನ ಬೇಗೆಯನ್ನು ಸಹಿಸಲಾಗದೆ ತಂಪು ವಾತಾವರಣವನ್ನು ಹುಡುಕಿಕೊಂಡು ಹಾವುಗಳು ಮನೆಯೊಳಗೆ, ಹೂವಿನ ಕುಂಡಗಳಿಗೆ, ಕಿಟಿಕಿ, ಬಾಗಿಲುಗಳ ಸಂದು ಮತ್ತಿತರ ತಾಣಗಳಿಗೆ ಬರುತ್ತಿರುವುದು ಸಾಮಾನ್ಯ. ಹಾಗಾಗಿ ಜನರು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

Continue Reading

LATEST NEWS

ಎಸ್‌. ಜೈಶಂಕರ್‌ಗೆ ಬುಲೆಟ್ ಪ್ರೂಫ್‌ ಕಾರು; ಹೇಗಿರಲಿದೆ ವಿದೇಶಾಂಗ ಸಚಿವರ ನೂತನ ಭದ್ರತಾ ವ್ಯವಸ್ಥೆ

Published

on

ಮಂಗಳೂರು/ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಮುಂದುವರೆದಿದ್ದು, ಭಾರತದ ವಿದೇಶಾಂಗ ಸಚಿವ ಎಸ್‌ ಜೈಶಂಕರ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಹೌದು, ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರ ಭದ್ರತೆಯನ್ನು ಗೃಹ ಸಚಿವಾಲಯ ಹೆಚ್ಚಿಸಲಾಗಿದೆ. ಈಗಾಗಲೇ ಇರುವ ಝಡ್ ಭದ್ರತೆ ಜತೆಗೆ ಬುಲೆಟ್​ ಪ್ರೂಫ್​ ಕಾರು ಕೂಡ ಸರ್ಕಾರ ಒದಗಿಸಲಿದೆ. ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ.

ಎಸ್ ಜೈಶಂಕರ್ ಅವರಿಗೆ ಈಗಾಗಲೇ ಗೃಹ ಸಚಿವಾಲಯವು Z- ವರ್ಗದ ಭದ್ರತೆಯನ್ನು ಹೊಂದಿದ್ದು, ಇದನ್ನು ಇದನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕಮಾಂಡೋಗಳು ಒದಗಿಸುತ್ತಿದ್ದು, ರಕ್ಷಣೆಗಾಗಿ 33 ಕಮಾಂಡೋಗಳ ತಂಡವನ್ನು 24/7 ನಿಯೋಜಿಸಲಾಗಿದೆ.

ಪಹಲ್ಲಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂದೂ‌ರ್ ನಂತರ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚಿದ ಮಿಲಿಟರಿ ಉದ್ವಿಗ್ನತೆಯ ನಡುವೆ ಭದ್ರತೆ ಬಿಗಿ ಗೊಳಿಸಲಾಗಿದೆ.

ಇದನ್ನೂ ಓದಿ: ‘ಆಪರೇಷನ್‌ ಸಿಂದೂರ್’ ನಂತರದ ಮುಂದಿನ ಕ್ರಮದ ಕುರಿತು ಇಂದು ಮಹತ್ವದ ಸಭೆ

ಹೇಗಿರಲಿದೆ ವಿದೇಶಾಂಗ ಸಚಿವರ ನೂತನ ಭದ್ರತಾ ವ್ಯವಸ್ಥೆ?
Z- ವರ್ಗದ ಭದ್ರತೆಯು ಭಾರತದಲ್ಲಿ ಮೂರನೇ ಅತ್ಯುನ್ನತ ಭದ್ರತೆಯಾಗಿದೆ. ಅದರಲ್ಲಿ 22 ಸೈನಿಕರಿರುತ್ತಾರೆ. ಇವರಲ್ಲಿ 4 ರಿಂದ 6 ಎನ್‌ಎಸ್‌ಜಿ ಕಮಾಂಡೋಗಳು ಮತ್ತು ಸ್ಥಳೀಯ ಪೊಲೀಸರು ಸೇರಿದ್ದಾರೆ. ಇದು ಬುಲೆಟ್​ ಪ್ರೂಫ್​ ಕಾರನ್ನು ಸಹ ಹೊಂದಿದೆ. ಹೆಚ್ಚುವರಿಯಾಗಿ, ಬೆಂಗಾವಲು ಪಡೆಗಳನ್ನು ಸಹ ಒದಗಿಸಲಾಗುತ್ತದೆ. ಈ ಭದ್ರತೆಯನ್ನು ಹೆಚ್ಚಿನ ಭದ್ರತೆಯ ಅಗತ್ಯವಿರುವ ದೊಡ್ಡ ನಾಯಕರು ಮತ್ತು ಸೆಲೆಬ್ರಿಟಿಗಳಿಗೆ ನೀಡಲಾಗುತ್ತದೆ.

ವಿದೇಶಾಂಗ ಸಚಿವರಿಗೆ ಇರುವ ಬೆದರಿಕೆಯನ್ನು ಗುಪ್ತಚರ ಬ್ಯೂರೋ (ಐಬಿ) ನಿರ್ಣಯಿಸಿದ ನಂತರ ಅಕ್ಟೋಬರ್ 2023ರಲ್ಲಿ ಅವರ ಭದ್ರತೆಯನ್ನು Y- ವರ್ಗದಿಂದ Z- ವರ್ಗಕ್ಕೆ ಹೆಚ್ಚಿಸಲಾಗಿತ್ತು.

Continue Reading

LATEST NEWS

6 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್

Published

on

ನವದೆಹಲಿ: ಟೆಕ್ ದಿಗ್ಗಜ ಮೈಕ್ರೋಸಾಫ್ಟ್ 6,000 ಉದ್ಯೋಗಿಗಳನ್ನು ವಜಾಗೊಳಿಸಿದೆ.

ವಜಾಗೊಳಿಸುವಿಕೆಯು ಎಲ್ಲಾ ಹಂತಗಳು ಮತ್ತು ಭೌಗೋಳಿಕ ಪ್ರದೇಶಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಆದರೆ ನಿರ್ವಹಣಾ ಮಟ್ಟವನ್ನು ಕಡಿಮೆ ಮಾಡುವತ್ತ ಗಮನಹರಿಸುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಮಂಗಳವಾರ ಸೂಚನೆಗಳನ್ನು ಹೊರಡಿಸಲಾಗಿದೆ.

ಮೈಕ್ರೋಸಾಫ್ಟ್ ಎರಡು ವಾರಗಳ ಹಿಂದೆ ಜನವರಿಯಿಂದ ಮಾರ್ಚ್ ಅವಧಿಯ ದೃಢವಾದ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿತು. ಇದು ತನ್ನ ಕೌಡ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ ವ್ಯವಹಾರಗಳಲ್ಲಿ ಬಲವಾದ ಕಾರ್ಯಕ್ಷಮತೆಯಿಂದ ಪ್ರೇರಿತವಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page