Connect with us

LATEST NEWS

ವೃದ್ಧನಿಗೆ ಒಲಿದ 2ವರೆ ಕೋಟಿ ಬಂಪರ್ ಲಾಟರಿ..!

Published

on

ಪಂಜಾಬ್: ಹೋಶಿಯಾಪುರ ಮೂಲದ ಶೀತಲ್ ಸಿಂಗ್ ಎಂಬ ವೃದ್ಧರೊಬ್ಬರು ಕುಟುಂಬದ ಸದಸ್ಯರೊಬ್ಬರಿಗೆ ಔಷಧಿ ತರಲು ಊರ ಸಮೀಪವಿರುವ ಮೆಡಿಕಲ್ ಗೆ ಹೋಗಿದ್ದರು.

ಅದೇ ಪೇಟೆಯಲ್ಲಿ  ದೀಪಾವಳಿ  ಬಂಪರ್ ಲಾಟರಿ ಟಿಕೇಟ್ ಅನ್ನು ಮಾರಟ ಮಾಡುತಿದ್ದರು. ಅದನ್ನು ಕಂಡ ವೃದ್ಧ ಲಾಟರಿ ಖರೀದಿ ಮಾಡಲು ಅಂಗಡಿಗೆ ತೆರಳಿದ್ದಾರೆ.ಲಾಟರಿ  ಖರೀದಿ ಮಾಡಿ ಮನೆಗೆ ಬಂದ ತಕ್ಷಣವೇ ಕೇವಲ ನಾಲ್ಕು ಗಂಟೆಗಳ ಬಳಿಕ ಲಾಟರಿ ಕರಿತು ಫೋನ್ ಕರೆ ಬಂದಿದ್ದು, 2.50 ಕೋಟಿ ರೂಪಾಯಿ ಮೊತ್ತದ ಬಂಪರ್ ಲಾಟರಿ ಗೆದ್ದಿದ್ದಾರೆ ಎಂಬುದು ತಿಳಿದು ಬಂದಿತ್ತು. ಲಾಟರಿಯಲ್ಲಿ 2.50 ಕೋಟಿ ಗೆದ್ದಿರುವ ಮೊತ್ತವನ್ನು ಹೇಗೆ ಉಪಯೊಗಿಸಬೇಕು ಎಂಬುದನ್ನು ಶೀತಲ್ ಸಿಂಗ್ ಹಾಗೂ ಅವರ ಕುಟುಂಬ ನಿರ್ಧಾರ ಮಾಡುತ್ತೇವೆ ಎಂಬುದಾಗಿ ಹೇಳಿದ್ದಾರೆ.

ಈ ವೃದ್ಧ ವ್ಯಕ್ತಿ ಒಬ್ಬ ರೈತನಾಗಿದ್ದು,ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಿಬ್ಬರಿಗೂ ಮದುವೆ ಆಗಿದೆ. ಪಂಜಾಬ್ ನ ಲಾಟರಿ ಸ್ಟಾಲ್ ನ ಮಾಲೀಕರು ಕಳೆದ 15 ವರ್ಷಗಳಿಂದ ಇದೇ ಉದ್ಯೋಗ ನಡೆಸುತ್ತಿದ್ದಾರೆ. ಹಾಗೂ ಮೂರನೇ ಬಾರಿಗೆ ಗ್ರಾಹಕರೊಬ್ಬರು ಕೋಟಿಗಟ್ಟಲೆ ಹಣದ ಲಾಟರಿ ಗೆದ್ದಿದ್ದಾರೆ ಎಂದು ಹೇಳಿದ್ದಾರೆ.

DAKSHINA KANNADA

ಮಂಗಳೂರು : ಇಂದಿನಿಂದ 3 ದಿನ ಪಾಂಡೇಶ್ವರದಲ್ಲಿ ಬೃಹತ್ ಐಸ್‌ಕ್ರೀಂ ಪರ್ಬ

Published

on

ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಫಿಝಾ ಬೈ ನೆಕ್ಸಸ್ ಮಾಲ್ ಮತ್ತು ಮಂಗಳೂರಿನ ಪ್ರಸಿದ್ಧ ಟ್ರೈ ತಿಂಡಿ ಇನ್ಸ್ಟಾ ಗ್ರಾಮ್ ಪೇಜ್ ಸಹಭಾಗಿತ್ವದಲ್ಲಿ ಫೆ.7, 8 ಮತ್ತು 9ರಂದು 3 ದಿನ 2ನೇ ಆವ್ರತ್ತಿಯ ಐಸ್ ಕ್ರೀಮ್ ಪರ್ಬವನ್ನು ಅಯೋಜಿಸಲಾಗಿದೆ.

ಈ ತಣ್ಣನೆಯ ಚಳಿಗೂ ಐಸ್‌ಕ್ರೀಂ ಎಂದಾಕ್ಷನ ಬಾಯಲ್ಲಿ ನೀರು ಬರುವವರೇ ಹೆಚ್ಚು. ಹಾಗಾಗಿ ಅಂತಹ ಐದ್‌ಕ್ರೀಂ ಪ್ರಿಯರಿಗೆ ಬಿಗ್ ಗುಡ್‌ನ್ಯೂಸ್ ಸಿಕ್ಕಿದ್ದು,  ಭರ್ಜರಿ ಐಸ್ ಕ್ರೀಮ್ ಪರ್ಬ ಇಂದಿನಿಂದ ಮೂರು ದಿನ ಬೆಳಗ್ಗೆ 11ರಿಂದ ರಾತ್ರಿ 9 ರವರೆಗೆ ನಡೆಯಲಿದೆ.

ಯಾವೆಲ್ಲಾ ಐಸ್‌ಕ್ರೀಂ ಸಂಸ್ಥೆಗಳು ಭಾಗಿಯಾಗಲಿದೆ ?

ಮಂಗಳೂರನ್ನು ‘ಐಸ್ ಕ್ರೀಮ್ ಕ್ಯಾಪಿಟಲ್ ಆಫ್ ಇಂಡಿಯಾ’ ಎಂದು ಕರೆಯುತ್ತಾರೆ. ಎಲ್ಲಾ ಐಸ್ ಕ್ರೀಮ್ ಸಂಸ್ಥೆಗಳನ್ನ ಒಂದೇ ಸೂರಿನಡಿ ಸೇರಿಸಬೇಕು ಅನ್ನುವ ಆಲೋಚನೆಯಲ್ಲಿ ಈ ಕಾರ್ಯಕ್ರಮ ಆಯೋಜಕರದ್ದು, ಈ ಬಾರಿ 14ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ. ಐಡಿಯಲ್ – ಪಬ್ಬಾಸ್ , ಹ್ಯಾಂಗ್ಯೋ, ಮ್ಯಾಂಗೋ ಬೆರ್ರಿಸ್ , ಎಂಚಿ ಕ್ರಂಚಿ – ದಿ ಮಿಲೆಟ್ ಹೌಸ್ , ಸ್ಕೂಪ್ಸೊ , ಕೈಲಾರ್ಸ್ , ಸ್ವಿರ್ಲಿಯೊ , ಎಫ್ 5, ಐಸ್ ಕ್ರೀಮ್ ಆಂಡ್ ಮೋರ್ , ಫ್ರೂಟ್ ಪೊಪ್ಜ್ , ಫ್ಲೇವರ್ಸ್ , ಹೈವ್ ಸ್ಕ್ಯೂಬ್ , ಬೊನ್ ಬೊನ್ಸ್, ಕ್ಯಾಮೆರಿ ಭಾಗವಹಿಸುವ ಐಸ್ ಕ್ರೀಮ್ ಸಂಸ್ಥೆಗಳು ಪಾಲ್ಗೊಳ್ಳಲಿದೆ.

 

Continue Reading

DAKSHINA KANNADA

ಸುರತ್ಕಲ್ : ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಾರು ಹೊಂಡಕ್ಕೆ ; ದಂಪತಿಗೆ ಗಾಯ

Published

on

ಸುರತ್ಕಲ್: ಕಾರೊಂದು ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ 5 ಅಡಿ ಆಳದ ಹೊಂಡಕ್ಕೆ ಬಿದ್ದು ದಂಪತಿ ಗಾಯಗೊಂಡಿರುವ ಘಟನೆ ಜೋಕಟ್ಟೆಯ ಕಳವಾರು ಎಂಬಲ್ಲಿ ನಿನ್ನೆ (ಫೆ.6) ಮಧ್ಯಾಹ್ನ ನಡೆದಿದೆ.

ಸುರತ್ಕಲ್ ಕಾನ ಕಾಪ್ರಿಗುಡ್ಡ ನಿವಾಸಿ ರವಿ ಹಾಗೂ ಅವರ ಪತ್ನಿ ಗಾಯಳುಗಳು ಎಂದು ಗುರುತಿಸಲಾಗಿದೆ. ಅಪಘಾತದಿಂದ ದಂಪತಿಗೆ ಗಾಯಗಳಾಗಿದ್ದು, ಅವರನ್ನು ಕಾನದ ಆಸ್ಪತ್ರೆಗೆ ರವಾನಿಸಲಾಗಿದೆ.

ತಮ್ಮ ಪತ್ನಿಯೊಂದಿಗೆ ರವಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಜೋಕಟ್ಟೆ ಕಳವಾರು ಬಳಿ ಕಾರಿನ ಬ್ರೇಕ್ ಫೇಲ್ ಆಗಿದೆ.‌ ಕಾರನ್ನು ನಿಯಂತ್ರಣಕ್ಕೆ ತರಲೆಂದು ಯತ್ನಿಸಿದಾಗ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದರ ಪರಿಣಾಮ ಒಂದು ವಿದ್ಯುತ್ ಕಂಬ ನೆಲಕ್ಕೆ ಉರುಳಿದ್ದು, ಹೈಟೆನ್ಷನ್ ವಯರ್ ರಸ್ತೆಯಲ್ಲಿ ಬಿದ್ದಿದೆ.

 

ಇದನ್ನೂ ಓದಿ : ಮಂಗಳೂರು : ಸ್ನ್ಯಾಪ್‌ನಲ್ಲಿ ಅಶ್ಲೀಲ ವಿಡಿಯೋ ಸೆಂಡ್ ಮಾಡಿ ಬೆದರಿಕೆ ಹಾಕಿದವನ ವಿರುದ್ಧ ದೂರು ದಾಖಲು

 

ಅಪಘಾತದ ರಭಸಕ್ಕೆ ಕಾರು ಜೋಕಟ್ಟೆ ಬಜ್ಪೆ ರಸ್ತೆಯಿಂದ ಎಸ್‌.ಇ.ಆರ್‌.ಝೆಡ್ ರಸ್ತೆಗೆ ಉರುಳಿದೆ ಎನ್ನಲಾಗಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ.

 

Continue Reading

LATEST NEWS

ಮಂಗಳೂರು : ಸ್ನ್ಯಾಪ್‌ನಲ್ಲಿ ಅಶ್ಲೀಲ ವಿಡಿಯೋ ಸೆಂಡ್ ಮಾಡಿ ಬೆದರಿಕೆ ಹಾಕಿದವನ ವಿರುದ್ಧ ದೂರು ದಾಖಲು

Published

on

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಸ್ನ್ಯಾಪ್‌ ಚಾಟ್‌ನಲ್ಲಿ ಅಶ್ಲೀಲ ವೀಡಿಯೋ ಕಳುಹಿಸಿ ಬೆದರಿಕೆ ಹಾಕಿದವನ ವಿರುದ್ಧ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್ ಇರುವುದು ತಪ್ಪಲ್ಲ. ಆದರೆ ಮಿತಿಯಲ್ಲಿರಬೇಕು. ಇದೀಗ ದಾಖಲಾಗಿರುವ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯ ಕೈಗೆ ಮೊಬೈಲ್ ಕೊಟ್ಟದ್ದು ಹೆತ್ತವರ ತಪ್ಪೂ ಹೌದು. ಜೊತೆಗೆ ಮೊಬೈಲ್‌ನಲ್ಲಿ ಆಕೆ ಏನು ಮಾಡುತ್ತಿದ್ದಾಳೆ ಎನ್ನುವುದನ್ನೂ ಗಮನಿಸುತ್ತಿರಬೇಕು. ವಿಶೇಷವಾಗಿ ಬಾಲಕಿಯರನ್ನು ಸೋಶಿಯಲ್ ಮೀಡಿಯಾದಿಂದ ಆದಷ್ಟು ದೂರ ಇರುವಂತೆ ಎಚ್ಚರಿಕೆ ನೀಡಬೇಕು. ಏಕೆಂದರೆ ಮುಂದಿನ ಸವಾಲಿನ ಬಗ್ಗೆ ಅವರಿಗೆ ಅರಿವಿರುವುದಿಲ್ಲ. ಇದೀಗ ನಡೆದಿರುವ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿ ವಿಡಿಯೋ ನೋಡಿ ಹೆದರಿ ಬಳಿಕ ಹೆತ್ತವರ ಸಹಾಯದೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

“ವ್ಯಕ್ತಿಯೋರ್ವ ತನ್ನ ಸ್ನ್ಯಾಪ್‌ಚಾಟ್ ಖಾತೆಗೆ ಆತನ ಸ್ನ್ಯಾಪ್‌ಚಾಟ್ ಖಾತೆಯಿಂದ ಅಶ್ಲೀಲತೆಯ ವೀಡಿಯೋ ಕಾಲ್‌ನ ಸ್ಟ್ರೀನ್ ರೆಕಾರ್ಡ್ ಮಾಡಿರುವ ವೀಡಿಯೋ ಫೈಲ್ ಸೆಂಡ್ ಮಾಡಿ ಬೆದರಿಕೆ ಹಾಕಿದ್ದಾನೆ” ಎಂದು ನ್ಯಾಷನಲ್ ಸೈಬ‌ರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್‌ಗೆ (ಎನ್‌ಸಿಸಿಆರ್‌ಪಿ) ದೂರು ನೀಡಲಾಗಿದೆ. ದೂರಿನ ಆಧಾರದ ಮೇಲೆ ಪೊಲೀಸರು ಮಂಗಳೂರಿನ ಓರ್ವ ಶಂಕಿತ ಸ್ನ್ಯಾಪ್‌ಚಾಟ್ ಖಾತೆದಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page