Connect with us

ಎಲ್ಲಿದೆ ಮಾನವೀಯತೆ..? ಕೆಲವೊಂದು ವಿಕೃತ ಮನಸ್ಸುಗಳಲ್ಲಿ ನಶಿಸಿ ಹೋಗುತ್ತಿದೆಯಾ..??

Published

on

ಎಲ್ಲಿದೆ ಮಾನವೀಯತೆ..? ಕೆಲವೊಂದು ವಿಕೃತ ಮನಸ್ಸುಗಳಲ್ಲಿ ನಶಿಸಿ ಹೋಗುತ್ತಿದೆಯಾ..??

ಮಂಗಳೂರು: ಕರಾವಳಿಯ ಹೆಮ್ಮೆಯ ಚಾನೆಲ್ ನಮ್ಮ ಕುಡ್ಲ 24×7 ವಾಹಿನಿಯಲ್ಲಿ ಪ್ರಸಾರವಾದ ‘ಪ್ರೈಮ್ ಡಿಬೆಟ್’ನಲ್ಲಿ ‘ದುಬೈ ಟ್ರ್ಯಾಜಿಡಿ’ ಎಂಬ ವಿಚಾರದ ಬಗ್ಗೆ ಸಿರಾಜುದ್ದಿನ್ ಪರ್ಲಡ್ಕ ಎಂಬ ವೀಕ್ಷಕರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಆ ಕಾರ್ಯಕ್ರಮಕ್ಕೆ ಬಂದಂತಹ ಕರೆಗಳಲ್ಲಿ ಹಲವರು ಮಾನವೀಯತೆ ದೃಷ್ಟಿಯಿಂದ ಮಾತನಾಡಲಿಲ್ಲ ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು ದುಬೈನಿಂದ ಮಂಗಳೂರಿಗೆ ಆಗಮಿಸಿದ 179 ಪ್ರಯಾಣಿಕರಲ್ಲಿ 16 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ.

ಈ ಹಿನ್ನಲೆಯಲ್ಲಿ ಜನತೆ ಕೂಡ ವಿದೇಶದಲ್ಲಿದ್ದವರು ಇಲ್ಲಿ ಬಂದಿದ್ದು ತಪ್ಪು ಎಂಬುದಾಗಿ ಬಿಂಬಿಸಿದ್ದಾರೆ.

ಈ ನಿಟ್ಟಿನಲ್ಲಿ ಸಿರಾಜುದ್ದಿನ್ ಅವರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಸಿರಾಜುದ್ದಿನ್ ಪರ್ಲಡ್ಕ ಬರೆದ ಪತ್ರ ಇಲ್ಲಿದೆ ನೋಡಿ….

“’ನಮ್ಮ ಕುಡ್ಲ 24X7′ ಚಾನೆಲಿನಲ್ಲಿ ಮೇ 15 ರಂದು ನಡೆದ ಪ್ರೈಮ್ ಡಿಬೇಟಿನಲ್ಲಿ ಕೆಲವೊಂದು ಕಾಲರ್ ಗಳ ಅಮಾನವೀಯ ಮನಸ್ಥಿತಿಯನ್ನು ನೋಡಿ ತುಂಬಾ ಬೇಸರವಾಯಿತು.

ಅನಿವಾಸಿ ಪ್ರವಾಸಿಗರು ಕೆಲಸವಿಲ್ಲದೇ ರೂಮು ಬಾಡಿಗೆ ಕೊಡಲು ಹಾಗೂ ಎರಡೊತ್ತಿನ ಊಟಕ್ಕೂ ಪರದಾಡುತ್ತಿರುವಾಗ ಈ ರೀತಿಯ ವಿಷಕಾರಿ ಚಿಂತನೆ ನಿಜಕ್ಕೂ ಖೇದಕರ.

ವಿದೇಶದಿಂದ ಊರಿಗೆ ಇವಾಗ ಬರಬೇಡಿ ಎನ್ನುವವರೇ ಕೇಳಿ, ‘ಇಲ್ಲಿ (ವಿದೇಶದಲ್ಲಿ) ವಿಸಿಟ್ ವೀಸಾದಲ್ಲಿ ಎರಡು ಮೂರು ತಿಂಗಳಿಗಾಗಿ ತಮ್ಮ ಮಕ್ಕಳನ್ನು ನೋಡಲು ಬಂದು ಸಿಲುಕಿರುವ ಅದೆಷ್ಟೋ,

ಹಿರಿಯ ತಂದೆ-ತಾಯಂದಿರು, ಎರಡು ಮೂರು ತಿಂಗಳಿಗೆ ಆಗುವಷ್ಟು ದೈನಂದಿನ ಔಷಧಿಗಳನ್ನು ತಂದಿರುವ ವಯಸ್ಸಾದ ಹಿರಿಯ ಜನರು, ಗರ್ಭಿಣಿ ಮಹಿಳೆಯರು,

ಕೆಲಸವೂ ಇಲ್ಲದೇ ಹಣವೂ ಇಲ್ಲದೇ ಕಂಗಾಲಾಗಿರುವ ಕಾರ್ಮಿಕರು, ಸೇಲ್ಸ್ ಮೆನ್ ಗಳು, ಮುಂತಾದ ನೌಕರಿಯಲ್ಲಿರುವವರು ಮಾತ್ರ ತಾಯ್ನಾಡಿಗೆ ಮರಳುತ್ತಿದ್ದಾರೇ ವಿನಃ, ರಜಾ ದಿನಗಳನ್ನು ಕಳೆಯಲು ಬರುವ ವಿಲಾಸಿಗಳಲ್ಲ.

ಈ ಮೇಲೆ ತಿಳಿಸಿದವರೆಲ್ಲರೂ ಇಲ್ಲಿ ಸಂಕಷ್ಟದಲ್ಲಿರುವಾಗ ತಮ್ಮ ತಾಯ್ನಾಡು ಹಾಗೂ ತಮ್ಮ ಮನೆಯವರನ್ನು ಸೇರಬೇಕಾದ ಅನಿವಾರ್ಯತೆ ಇದೆ”.

“ಅಲ್ಲದೇ ವಿಸಿಟ್ ವೀಸಾದಲ್ಲಿರುವವರು ಈ ಪರಿಸ್ಥಿತಿಯಲ್ಲಿ ಯಾವುದೇ ವೈದ್ಯಕೀಯ ಚಿಕಿತ್ಸೆ ಪಡೆಯುವ ಸ್ಥಿತಿಯಲ್ಲಿಲ್ಲ.

ಯಾಕೆಂದರೆ ವಿಸಿಟ್ ವೀಸಾದವರಿಗೆ ಇಲ್ಲಿನ ಇನ್ಶೂರೆನ್ಸ್ ಸೌಲಭ್ಯ ಲಭ್ಯವಿಲ್ಲ. ಹಾಗಾಗಿ ಸಂಪೂರ್ಣ ವೆಚ್ಚವನ್ನು ಭರಿಸಬೇಕಾಗುತ್ತದೆ.

ವೈದ್ಯರ ಶುಲ್ಕವೇ 300 ದಿರ್ಹಮ್ಸ್ (ಸರಿಸುಮಾರು 6000 ರೂಪಾಯಿ) ಮತ್ತು ಔಷಧಿಗೆ ಬೇರೆಯೇ ಪಾವತಿ ಮಾಡಬೇಕಾಗುತ್ತದೆ.

ಏನಿದ್ದರೂ ಕಡಿಮೆಯೆಂದರೆ ಒಮ್ಮೆಗೆ ಸರಿ ಸುಮಾರು 10000 ರೂಪಾಯಿ ಬೇಕಾಗುತ್ತದೆ. ಇದೆಲ್ಲವನ್ನೂ ಹೇಗೆ ನಿಭಾಯಿಸಬಹುದೆಂದು ನೀವೇ ಆಲೋಚಿಸಿ”.

“ವಿದೇಶಗಳಿಂದ ಬಂದಿಳಿದವರೆಲ್ಲರನ್ನೂ ಕೊರೊನಾ ಮಹಾಮಾರಿಯಂತೆ ಕಾಣುವ ಜನರೇ, ಇಲ್ಲಿ ಕೇಳಿ, ಅವರು ಯಾವುದೇ ತಪ್ಪು ಮಾಡಿಲ್ಲ.

ಎಲ್ಲವೂ ಸೃಷ್ಟಿಕರ್ತನ ಲೀಲೆ. ಮಾನವ ನೆಪ ಮಾತ್ರ. ಅವರ್ಯಾರೂ ತಮ್ಮಿಷ್ಟದಂತೆ ತಿರುಗಾಡಲಿಲ್ಲ. ಜಿಲ್ಲಾಡಳಿತ ನಿರ್ದೇಶಿಸಿದಂತೆ ಕ್ವಾರಂಟೈನ್ ಮಾಡುತ್ತಿದ್ದಾರೆ.

ಪರೀಕ್ಷೆಗೆ ಒಳಪಡಿಸಿ ವೈರಸ್ ಪತ್ತೆಯಾದರೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾರೆ. ಹಾಗಂತ ಅವರು ಅದನ್ನು ಊರಿಡೀ ಪಸರಿಸುತ್ತಾರೆಯೇ.?.

‘ಇಲ್ಲಿ (ವಿದೇಶದಲ್ಲಿ) ಅದೆಷ್ಟೋ ಸಲ ನಾನು ಕೂಡಾ ಊರಿನ ಕೆಲವರು ಪಾಸಿಟಿವ್ ಬಂದವರಿಗೆ ಆವಶ್ಯಕ ವಸ್ತುಗಳನ್ನು ವಿನಂತಿ ಮಾಡಿದಾಗ ಅವರ ರೂಮಿನ ಬಳಿ, ಆಸ್ಪತ್ರೆಯ ಬಳಿ ತೆರಳಿ ನೀಡಿದ್ದೇನೆ.

ನಾವು ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರಾಯಿತು. ನಮ್ಮಲ್ಲಿ ಮಾನವೀಯತೆ ಎಂಬುವುದು ಇರಲಿ.

ವಿನಾಕಾರಣ ಭಯದ ವಾತಾವರಣ ಸೃಷ್ಟಿಸದೇ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಈ ಮಹಾಮಾರಿಯ ನಿರ್ಮೂಲನೆಯಲ್ಲಿ ಕೈ ಜೋಡಿಸೋಣ.

ಎಲ್ಲರೂ ನಮ್ಮವರೇ. ಪರಸ್ಪರ ಅನ್ಯೋನ್ಯತೆ ಹಾಗೂ ಸೌಹಾರ್ದತೆಯಿಂದ ಸಹೋದರತ್ವದಿಂದ ಬಾಳೋಣ”.

Advertisement
Click to comment

Leave a Reply

Your email address will not be published. Required fields are marked *

kerala

ಮದ್ವೆಗೆ ಬಲವಂತ ಆರೋಪ-ಠಾಣೆ ಮೆಟ್ಟಿಲೇರಿದ ನೀಲಿ ಕಂಗಳ ಚೆಲುವೆ ಮೊನಾಲಿಸಾ

Published

on

ತಿರುವನಂತಪುರ: 2024ರಲ್ಲಿ ನಡೆದಿದ್ದ ಮಹಾಕುಂಭಮೇಳದಲ್ಲಿ  ರುದ್ರಾಕ್ಷಿ ಮಾರುತ್ತ ತನ್ನ ಸುಂದರ ಕಣ್ಣುಗಳ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಹವಾ ಸೃಷ್ಟಿಸಿದ್ದ ಮೊನಾಲಿಸಾ ಬೋಂಸ್ಲೆ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ತನ್ನ ತಂದೆ ತೋರಿಸಿದ ಹುಡುಗನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಮೊನಾಲಿಸಾ ತನ್ನ ಗೆಳೆಯನ ಜೊತೆ ಬಂದು ತಂದೆ ವಿಜಯ್ ಸಿಂಗ್ ಭೋಸ್ಲೆ ವಿರುದ್ಧ ದೂರು ನೀಡಿದ್ದಾರೆ. ಯಾವುದೇ ದೈಹಿಕ ಕಿರುಕುಳ ನಡೆದಿಲ್ಲ. ಪ್ರಾಥಮಿಕವಾಗಿ ಬಲವಂತದ ವಿವಾಹ ಪ್ರಸ್ತಾಪವಾಗಿದೆ. ಮೊನಾಲಿಸಾ ತಂದೆ ತನ್ನ ಮೇಲೆ ಒತ್ತಡ ಹೇರುತ್ತಲೇ ಇದ್ದುದರಿಂದ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ನಾವು ಇನ್ನೂ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವೈರಲ್ ಆದ ಬಳಿಕ ಮೊನಾಲಿಸಾ ಅವರ ಬದುಕೇ ಬದಲಾಗಿದೆ. ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಿದೆ. ಪ್ರಸ್ತುತ ಶೂಟಿಂಗ್ ಗಾಗಿ ತಿರುವನಂತಪುರಕ್ಕೆ ಬಂದಿದ್ದ ಮೊನಾಲಿಸಾ ಇದೀಗ ಗೆಳೆಯನ ಜೊತೆ ಬಮದು ದೂರನ್ನು ನೀಡಿದ್ದಾರೆ.

Continue Reading

bangalore

6 ತಿಂಗಳಿನಿಂದ ಒಂದೇ ಮನೆಗೆ ಸ್ಕೆಚ್, 3.5 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಯುವಕ ಅರೆಸ್ಟ್

Published

on

ಬೆಂಗಳೂರು: ಮನೆಯವರು ಅಮೇರಿಕಾದಲ್ಲಿ ಇರುವುದನ್ನು ಖಚಿತಪಡಿಸಿಕೊಂಡ  ಕಳ್ಳನೋರ್ವ ಸುಮಾರು 3.5 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಿನಿಮೀಯ ಶೈಲಿಯಲ್ಲಿಕಳ್ಳತನಗೈದ ರಾಜಸ್ಥಾನ ಮೂಲದ ವೇಲಾರಾಮ್ (19) ಬಂಧಿತ ಆರೋಪಿ. ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್ ಕಟ್ ಮಾಡುತ್ತಿದ್ದ ವೇಲಾರಾಮ್ ಪಕ್ಕದ ಮನೆಯಲ್ಲಿ ಯಾರೂ ಇಲ್ಲದನ್ನ ಗಮನಿಸಿದ್ದ. ದಂಪತಿ ಅಮೇರಿಕಾದಲ್ಲಿ ಸೆಟಲ್ ಆಗಿರೋದನ್ನು ಖಚಿತಪಡಿಸಿಕೊಂಡು  ಬರೋಬ್ಬರಿ ಆರು ತಿಂಗಳು ಸ್ಕೆಚ್ ಹಾಕಿ ಒಮ್ಮೆಗೆ 3 ಕೋಟಿ ಬೆಲೆಬಾಳುವ ಚಿನ್ನಾಭರಣ ಕಳ್ಳತನ ಮಾಡಿದ್ದ.

ಲಾಕರ್ ಓಪನ್ ಮಾಡಿ 1.8 ಕೆಜಿಯ ಚಿನ್ನಾಭರಣ, ಡೈಮಂಡ್ ಹಾಗೂ ನಗದು ಎಲ್ಲವನ್ನು ದೋಚಿಕೊಂಡು ಹೋಗಿದ್ದ. ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಚಿನ್ನಾಭರಣ ಸಿಕ್ಕ ಖುಷಿಗೆ ಯಾರಿಗೂ ಹೇಳದೆ ಕೇಳದೆ ನೇರವಾಗಿ ರಾಜಸ್ಥಾನಕ್ಕೆ ಚಿನ್ನಾಭರಣ ಕೊಂಡೊಯ್ದು, ಮನೆಯಲ್ಲಿ ಬಚ್ಚಿಟ್ಟಿದ್ದ.

ಮನೆಯ ಸಿಸಿಟಿವಿಯನ್ನ ಅಮೆರಿಕದಲ್ಲಿದ್ದ ದಂಪತಿ ಮೊಬೈಲ್ ನಲ್ಲಿ ಪರಿಶೀಲಿಸಿದ ಸಂದರ್ಭ ಕೃತ್ಯ ಬೆಳಕಿಗೆ ಬಂದಿದ್ದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಸಿಸಿಟಿವಿ ಆಧರಿಸಿ ಆರೋಪಿ ವೇಲಾರಾಮ್‌ ನನ್ನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

Continue Reading

LATEST NEWS

ಸೆಕೆ ತಾಳಲಾರದೆ ತಂಪಾಗಲು ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!

Published

on

ಹುಬ್ಬಳ್ಳಿ: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಈಜಲು ಹೋಗಿ ನೀರಿನ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ.


ಮೃತಪಟ್ಟ ವಿದ್ಯಾರ್ಥಿಗಳನ್ನು ಸಮರ್ಥ್ ಮತ್ತು ಹರೀಶ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಗೋಪನಕೊಪ್ಪದ ಸರ್ಕಾರಿ ಪದವಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ಪರೀಕ್ಷೆ ಮುಗಿದಿರುವ ಕಾರಣ ಮನೆಯಲ್ಲಿದ್ದರು ಎನ್ನಲಾಗಿದೆ.

ಬೇಸಿಗೆಯ ಸೆಕೆ ತಾಳಲಾರದೆ ತಂಪಾಗಲು ಇಬ್ಬರು ಸ್ನೇಹಿತರು ಮನೆ ಸಮೀಪ ಇರುವ ನಿರ್ಮಾಣ ಹಂತದ RNS ಗಾಲ್ಫ್​​ ಮೈದಾನದಲ್ಲಿರೋ ಹೊಂಡಕ್ಕೆ ಈಜಲು ತೆರಳಿದ್ದರು. ಮಧ್ಯಾಹ್ನ ಮನೆಯಿಂದ ಹೋದವರು, ಸಂಜೆಯಾದರೂ ಮನೆಗೆ ಮರುಳಲಿಲ್ಲ. ಆ ವೇಳೆ ಇಬ್ಬರು ಹೊಂಡದಲ್ಲಿ ಬಿದ್ದಿರೋದನ್ನು ಗಮನಿಸಿದ ಅಲ್ಲಿನ ಕೆಲಸಗಾರರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆ ಹಾಲ್​​ನಲ್ಲಿ ಬುರ್ಖಾಧಾರಿ ಕಳ್ಳಿಯ ಕರಾಮತ್ತು..! ವಿಚಾರಣೆ ವೇಳೆ ಆಘಾತಕಾರಿ ವಿಚಾರ ಬೆಳಕಿಗೆ..!?

ಅಷ್ಟರಲ್ಲಾಗಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದರು ಎನ್ನಲಾಗಿದೆ. ಘಟನನಾ ಸ್ಥಳಕ್ಕೆ ಭೇಟಿ ನೀಡಿದ ನವನಗರ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನೊಂದಿಗೆ ಮೃತದೇಹಗಳನ್ನು ಹೊರತೆಗೆಯಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page