Connect with us

DAKSHINA KANNADA

ಚಲಿಸುತ್ತಿದ್ದ ಲಾರಿ ಸಡನ್ ಬ್ರೇಕ್; ಬೈಕ್ ಸವಾರ ಗಂ*ಭೀರ

Published

on

ಸುರತ್ಕಲ್: ಲಾರಿಯಡಿಗೆ ಬಿದ್ದು ಬೈಕ್ ಸವಾರ ಗಂ*ಭೀರವಾಗಿ ಗಾ*ಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಮುಕ್ಕ ಸಮೀಪ ನಡೆದಿದೆ.

ಅತಿ ವೇಗದಿಂದ ಚಲಿಸುತ್ತಿದ್ದ ಲಾರಿ ಸಡನ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಲಾರಿಯಡಿ ತೂರಿದೆ. ಪರಿಣಾಮ ಸವಾರ ಗಂ*ಭೀರವಾಗಿ ಗಾ*ಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆಸ್ಕಾಂಗೆ ಸೇರಿದ ಲಾರಿ ಇದಾಗಿದ್ದು, ವಿದ್ಯುತ್ ಕಂಬಗಳನ್ನು ಸಾಗಿಸುತ್ತಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

 

ಇದನ್ನೂ ಓದಿ : ಅತ್ಯಾ*ಚಾರ ಪ್ರಕರಣ: ಕಾಂಗ್ರೆಸ್ ಸಂಸದ ಅರೆಸ್ಟ್

 

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇತ್ತೀಚೆಗೆ ಅ*ಪಘಾತ ಹೆಚ್ಚುತ್ತಿವೆ. ಸಾ*ವು ನೋ*ವುಗಳೂ ಅಧಿಕವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಅಸಮರ್ಪಕ ಕಾಮಗಾರಿ ಒಂದೆಡೆ ಕಾರಣವಾದರೆ, ವಾಹನ ಚಾಲಕರ ಅತಿವೇಗದ ಚಾಲನೆಯೂ ಇದಕ್ಕೆ ಕಾರಣವಾಗಿದೆ. ಈ ಅ*ಪಘಾತದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

DAKSHINA KANNADA

ಹಿರಿಯ ವಿದ್ವಾಂಸ ಡಾ.ವಾಮನ ನಂದಾವರ ಇನ್ನಿಲ್ಲ

Published

on

ಮಂಗಳೂರು : ಹಿರಿಯ ವಿದ್ವಾಂಸ ಡಾ.ವಾಮನ ನಂದಾವರ(81) ಇಂದು(ಮಾ.15) ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದವರಾದ ವಾಮನ ಅವರು ಕನ್ನಡ ಹಾಗೂ ತುಳು ಭಾಷಾ ವಿದ್ವಾಂಸರಾಗಿ ಸಾಧನೆ ಮೆರೆದಿದ್ದಾರೆ.

ನವೆಂಬರ್ 15, 1944 ರಲ್ಲಿ ವಾಮನ ನಂದಾವರ ಜನಿಸಿದರು. ಅವರ ತಂದೆ ಬಾಬು ಬಾಳೆಪುಣಿ, ತಾಯಿ ಪೂವಮ್ಮ.  ಪ್ರಾಥಮಿಕ ಶಿಕ್ಷಣವ್ನನು ಬಂಟ್ವಾಳ ತಾಲೂಕಿನ ಮುದುಂಗಾರು ಕಟ್ಟೆ ಸರಿಕಾರಿ ಎಲಿಮೆಂಟರಿ ಶಾಲೆ, ಪಾಣೆಮಂಗಳೂರಿನ ಎಸ್‌ವಿಎಸ್ ಹೈಯರ್ ಎಲಿಮೆಂಟರಿ ಶಾಲೆ, ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಬೋರ್ಡ್ ಹೈಸ್ಕೂಲ್ ಕುರ್ನಾಡ್, ಆನಂದಾಶ್ರಮ ಪ್ರರೌಏಧಾಲೆ ಕೋಟೆಕಾರ್‌ನಲ್ಲಿ ಪಡೆದರು.

ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ ಎಸ್‌ಸಿ ಪದವಿ ಪಡೆದ ಅವರು ಮಂಗಳೂರು ಸರಕಾರಿ ಮಹಾವಿದ್ಯಾನಿಯದಲ್ಲಿ ಬಿ.ಇಡಿ ಪದವಿ ಪಡೆದರು.  ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಎಂ.ಎಡ್ ಪದವಿ ಪಡೆದರು. ಮಂಗಳೂರು ವಿಶ್ವವಿದ್ಯಾನಿಯದ ಬಿ.ಎ ವಿವೇಕ ರೈ ಅವರ ಮಾರ್ಗದರ್ಶನದಲ್ಲಿ ‘ ಕೋಟಿ ಚೆನ್ನಯ ಜಾನಪದೀಯ ಅಧ್ಯಯನ’ ಮಹಾಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ಗಳಿಸಿದರು.

ಬೆಂಗಳೂರು ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಸಹಾಯಕ ಅಧ್ಯಾಪಕರಾಗಿ ಶಿಕ್ಷಣ ವೃತ್ತಿ ಜೀವನ ಆರಂಭಿಸಿದರು. ಬಳಿಕ ಸೇಂಟ್ ಆನ್ಸ್ ಪ್ರೌಢಶಾಲೆಯ ಸಹಾಯಕ ಅಧ್ಯಾಪಕರಾಗಿ, ಸೇಂಟ್ ಆನ್ಸ್ ಮಹಿಳಾ ಶಿಕ್ಷಕ-ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರಾಗಿ, ಸಹ್ಯಾದ್ರಿ ಶಿಕ್ಣಣ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.

ಇಂದಿರಾ ಗಾಂಧಿ ರಾಷ್ತ್ರೀಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಮಾರ್ಗದರ್ಶಕರಾಗಿದ್ದ ಅವರು ಪಿಲಿಕುಳ ನಿಸರ್ಗಧಾಮದ ಯೋಜನಾಧಿಕಾರಿ ಹಾಗೂ ಮಂಗಳೂರು ದರ್ಶನ ಯೋಜನೆಯಲ್ಲಿ ಸಹಾಯಕ ಸಂಪಾದಕರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ : ಕೊನೆಗೂ ಭೂಮಿಗೆ ಮರಳಲಿದ್ದಾರೆ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್

ಕೃತಿ ವಿವರ :

ತಾಳಮೇಳ (ಕನ್ನಡ ಕವನ ಸಂಕಲನ) ೧೯೭೫, ಓಲೆಪಟಾಕಿ (ಸ್ವತಂತ್ರ ತುಳು ಕನ್ನಡ ಒಗಟುಗಳ ಸಂಕಲನ)೧೯೮೦, ತುಳುವೆರೆ ಕುಸಾಲ್ ಕುಸೆಲ್ (ತುಳು ಜಾನಪದ ಪ್ರಬಂಧ) ೧೯೮೭/೧೯೮೮, ಸಿಂಗದನ (ತುಳು ಜಾನಪದ ಅಧ್ಯಯನ ಪ್ರಬಂಧ) ೧೯೮೭/೧೯೮೮, ತುಳುಟು ಪನಿಕತೆ (ತುಳುತ್ತ ದಂತ ಕತೆಕುಲು) ೧೯೮೮, ಅವಳಿ ವೀರರೆ ಕುರಿತ ಜಾನಪದ ಮಹಾಕಾವ್ಯ ‘ಕೋಟಿ ಚೆನ್ನಯ’, ‘ಜಾನಪದ ಸುತ್ತಮುತ್ತ’, ಡಿ.ವಿ.ಜಿ.ಯವರ ಸಾಹಿತ್ಯ ವಿಮರ್ಶೆ ‘ನಂಬಿಕೆ’, ಅಭಿನಂದನ ಗ್ರಂಥ ‘ಕಾಕಾನ ಅಭಿನಂದನೆ’, ಸ್ಮರಣ ಸಂಚಿಕೆ ‘ಪೆಂಗದೂಮ’, ಬರಹಗಾರರ ಕೈಪಿಡಿ ‘ತುಳು ಸಾಹಿತಿ ಕಲಾವಿದರ ಮಾಹಿತಿ’, ಕನ್ನಡ ಸಾಹಿತ್ಯ ಸಮ್ಮೇಳನದ ‘ಪೊನ್ನ ಕಂಠಿ’, ‘ಅಜ್ಜಿ ತಾಂಕಿನ ಪುಳ್ಳಿ’, ‘ನೆತ್ತರಾ ನೀರಾ’, ಇಂಚಿತ್ತಿ ತುಳು ನಾಟಕೊಲು, ತುಳು ಸಾಹಿತ್ಯ ಚರಿತ್ರೆ, ತುಳು ಜಾನಪದದ ಆಚರಣೆ, ತುಳು ಭಾಷಾ ಸಾಹಿತ್ಯ ಡಿ.ಕೆ. ಚೌಟ ಇಂಚಿತಿ ವ್ಯಕ್ತಿ ಚಿತ್ರ, ಮನಶಾಸ್ತ್ರ ವಿಜ್ಞಾನಿಯ ಜೀವನ – ಸಾಧನೆ ಕುರಿತ ‘ಸರ್ ಜೀಮ್ಸ್ ಜಾರ್ಜ್ ಫ್ರೆಜರ್‌’, ‘ಬೀರ’(ತುಳು ಕವನ ಸಂಕಲನ), ತುಳು ದಂತಕತೆ ‘ತುಳುಟು ಪನಿಕತೆ’ ಮತ್ತು ‘ಒಂಜಿ ಕೋಪೆ ಕತೆಕುಲು’, ‘ಕಿಡಿಗೇಡಿಯ ಕೀಟಲೆ’(ತುಳು ಜಾನಪದ ಕತೆ), ‘ಕೋಟಿ ಚೆನ್ನಯ’ (ಮಕ್ಕಳ ಕಥೆ).

ಪ್ರಶಸ್ತಿ ವಿವರ :

ಡಾ.ವಾಮನ ನಂದಾವರ ತುಳು ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ಬಂಟ್ವಾಳ ತಾಲ್ಲೂಕು 12ನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅವರ ಸಾಧನೆಗೆ  ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ಪುರಸ್ಕಾರ ದೊರೆತಿವೆ.

Continue Reading

DAKSHINA KANNADA

ಮಂಗಳೂರಿನಲ್ಲಿ ಹೆಚ್ಚುತ್ತಿರುವ ನಾಪತ್ತೆ ಪ್ರಕರಣ; ಮತ್ತೋರ್ವ ವಿದ್ಯಾರ್ಥಿ ಕಾಣೆ

Published

on

ಮಂಗಳೂರು : ಕೆಲ ದಿನಗಳ ಹಿಂದೆ ಕಾಲೇಜು ವಿದ್ಯಾರ್ಥಿಗಳಾದ ಫರಂಗಿಪೇಟೆ ನಿವಾಸಿ ದಿಗಂತ್ ಹಾಗೂ ಮೂಡುಪೆರಾರ ನಿವಾಸಿ ನಿತೇಶ್ ಕಾಣೆಯಾಗಿದ್ದು, ಹಲವು ಹೋರಟ ಹಾಗೂ ತೀವ್ರ ತನಿಖೆಯ ಬಳಿಕ ಪತ್ತೆಯಾಗಿದ್ದರು. ಈ ಮೂಲಕ ಎರಡೂ ಪ್ರಕರಣಗಳು ಸುಖಾಂತ್ಯ ಕಂಡಿತ್ತು. ಆದರೆ ಇದೀಗ ಮತ್ತೋರ್ವ ವಿದ್ಯಾರ್ಥಿ ಕಾಣೆಯಾಗಿದ್ದಾನೆ. ಯಾಕಾಗಿ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ ಎನ್ನುವುದೇ ಗೊಂದಲ ಸೃಷ್ಠಿಸುತ್ತಿದೆ.

ಪಣಂಬೂರು ಕೋಸ್ಟ್‌ಗಾರ್ಡ್ ಅಧಿಕಾರಿ ಜೀವನ್ ಕುಮಾರ್ ಎಂಬವರ ಪುತ್ರ ಹಿತೇನ್ ಬದ್ರ (17) ಮಾ.12ರಂದು ಕುಂಜತ್‌ಬೈಲ್‌ನಲ್ಲಿರುವ ಮನೆಯಿಂದ ಕಾಣೆಯಾಗಿದ್ದಾನೆ.

ತಿಳಿ ಹಸಿರು ಬಣ್ಣದ ರೌಂಡ್ ಟಿ ಶರ್ಟ್, ನೀಲಿ ಬಣ್ಣದ ಟ್ರ್ಯಾಕ್ ಸೂಟ್ ಧರಿಸಿದ್ದ ಈತ ಬಿಳಿ ಬಣ್ಣದ ಕನ್ನಡಕ ಧರಿಸಿದ್ದಾನೆ. ಇಂಗ್ಲಿಷ್, ಹಿಂದಿ, ಓಡಿಯಾ ಭಾಷೆ ಬಲ್ಲವನಾಗಿದ್ದಾನೆ. ಈತನನ್ನು ಕಂಡವರು ಕಾವೂರು ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Continue Reading

DAKSHINA KANNADA

ಅಪಘಾತದ ನೆಪದಲ್ಲಿ ಕೊಲೆ ಯತ್ನ ಪ್ರಕರಣ; ಆರೋಪಿಗೆ ನ್ಯಾಯಾಂಗ ಬಂಧನ

Published

on

ಮಂಗಳೂರು: ಹಳೆ ದ್ವೇಷಕ್ಕೆ ಸಂಬಂಧಿಸಿ ಮಂಗಳೂರಿನ ಬಿಜೈ ಕಾಪಿಕಾಡ್ ನ ಆರನೇ ಅಡ್ಡರಸ್ತೆಯಲ್ಲಿ ಗುರುವಾರ (ಮಾ.13) ಸಂಭವಿಸಿದ ಭೀಕರ ಅಪಘಾತಕ್ಕೆ ನಿನ್ನೆ (ಮಾ.14) ಟ್ವಿಸ್ಟ್‌ ಸಿಕ್ಕಿದ್ದು, ಅದು ಕೊಲೆ ಯತ್ನ ಪ್ರಕರಣ ಎಂಬುದಾಗಿ ಪೊಲೀಸರು ಪ್ರಕರಣ  ದಾಖಲಾಗಿತ್ತು.

ಮಾ. 13 ರಂದು ಬೆಳಗ್ಗೆ 8.15 ರ ವೇಳೆಗೆ  ಅಗಲ ಕಿರಿದಾದ ರಸ್ತೆಯಲ್ಲಿ ವೇಗವಾಗಿ ಬಂದ ಬೈಕ್ ಹಾಗೂ ಕಾರು ಎರಡೂ ಏಕಕಾಲದಲ್ಲಿ ಪಾದಚಾರಿ ಮಹಿಳೆಗೆ ಢಿಕ್ಕಿ ಹೊಡೆದಿದ್ದು, ಬೈಕ್‌ ಗುದ್ದಿದ ಸಂದರ್ಭ ಬೈಕ್ ಮೇಲೆ ಬಿದ್ದ ಮಹಿಳೆ ಬಳಿಕ ಹಿಂಬದಿಯಿಂದ ಬರುತ್ತಿದ್ದ ಕಾರಿನ ಬಾನೆಟ್ ಮೇಲೆ ಬಿದ್ದು ಗಾಳಿಯಲ್ಲಿ ಎತ್ತರಕ್ಕೆ ಎಸೆಯಲ್ಪಟ್ಟು ಪಕ್ಕದ ಮನೆಯ ಆವರಣಗೋಡೆಯ ಭದ್ರತಾ ಕಂಬಿಗಳಲ್ಲಿ ಸಿಲುಕಿಕೊಂಡಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿ ಸತೀಶ್ ಕುಮಾರ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಪಾದಚಾರಿ ಮಹಿಳೆ ಯಲ್ಲವ್ವ ಉಪ್ನಾಳ ಮತ್ತು ಬೈಕ್ ಸವಾರ ಮುರಳಿ ಪ್ರಸಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯು ಗುರುವಾರ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page