Connect with us

DAKSHINA KANNADA

ಪ್ರಿಯತಮೆಯನ್ನು ಹತ್ಯೆಗೈದು ತಾನು ಆತ್ಮಹತ್ಯೆಗೆ ಶರಣಾದ ಹೂವಿನ ವ್ಯಾಪಾರಿ..!

Published

on

ಪ್ರಿಯತಮೆಯನ್ನು ಹತ್ಯೆಗೈದು ತಾನು ಆತ್ಮಹತ್ಯೆಗೆ ಶರಣಾದ ಹೂವಿನ ವ್ಯಾಪಾರಿ 

ಸುರತ್ಕಲ್ : ಹೂವಿನ  ವ್ಯಾಪಾರಿಯೋರ್ವ ಪ್ರಿಯತಮೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸುರತ್ಕಲ್ ನಲ್ಲಿ ನಡೆದಿದೆ.

ಕಳೆದ ಏಳೆಂಟು ವರ್ಷಗಳಿಂದ ಹೂವಿನ ವ್ಯಾಪಾರ ನಡೆಸುತ್ತಿದ್ದ 44ವರ್ಷ ವಯಸ್ಸಿನ ವಸಂತ ಎನ್ನುವವರ ಅಂಗಡಿಗೆ ಹೂವು ಕೊಳ್ಳಲು ಬರುತ್ತಿದ್ದ ವಿವಾಹಿತ ಮಹಿಳೆಯ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು ಎನ್ನಲಾಗಿದೆ.

ಬುಧವಾರ ಇಬ್ಬರಲ್ಲೂ ಮಾತಿನ ಚಕಮಕಿ ನಡೆದಿದ್ದು, ಆಕ್ರೋಶಗೊಂಡ ಹೂವಿನ ವ್ಯಾಪಾರಿ ಆಕೆಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ  ಪರಿಶೀಲನೆ ನಡೆಸುತ್ತಿದ್ದಾರೆ.

ಅಪ್ ಡೇಟ್ಸ್ :

ಯುವಕನೋರ್ವ ತನ್ನ ಪರಿಚಯದ ವಿವಾಹಿತ ಮಹಿಳೆಯೊಬ್ಬರನ್ನು ಮುಕ್ಕದ ತನ್ನ ಬಾಡಿಗೆ ಮನೆಯಲ್ಲಿ ಕೊಂದು ತಾನು ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ..

ಮಂಗಳವಾರ ಸಂಜೆ ೩ಗಂಟೆ ಸುಮಾರಿನ ಬಳಿಕ ಈ ಘಟನೆ ನಡೆದಿರಬೇಕು ಎಂದು ಶಂಕಿಸಲಾಗಿದೆ

ಸುರತ್ಕಲ್ ಮುಖ್ಯ ಬಸ್ ನಿಲ್ದಾಣದಲ್ಲಿ ಹೂವಿನ ವ್ಯಾಪಾರಿಯಾಗಿದ್ದ ಕುಳಾಯಿ ರೈಲ್ವೆ ಬ್ರಿಡ್ಜ್  ನಿವಾಸಿ (36)ವಸಂತ್ ಕುಮಾರ್ ಕೊಲೆಗೈದ ಯುವಕನಾಗಿದ್ದು  ಈತ ತನಗೆ ಪರಿಚಯಸ್ಥೆ ರೇಖಾ (42) ಎಂಬ ವಿವಾಹಿತ ಮಹಿಳೆಯನ್ನು ತನ್ನ ಬಾಡಿಗೆ ಮನೆಗೆ ಮಂಗಳವಾರ ಸಂಜೆ 3 ಗಂಟೆ ಬಳಿಕ ಕರೆದೊಯ್ದಿದ್ದ ಎನ್ನಲಾಗಿದೆ.   

ಕೊಲೆಯಾದ ರೇಖಾ  ಸುರತ್ಕಲ್ ಬಳಿಯ ಟೌನ್ ಶಿಪ್ ನಿವಾಸಿ, ಬೃಹತ್ ಉದ್ಯಮವೊಂದರ ಉದ್ಯೋಗಿಯ ಪತ್ನಿ ಎಂದು ತಿಳಿದು ಬಂದಿದೆ.

ಕೊಲೆಯಾದ  ಮನೆಯಲ್ಲಿ ಬಲಿ ನೀಡಿದ ಕೋಳಿ, ಲಿಂಬೆ ಹುಳಿ, ಕುಂಬಳಕಾಯಿ ಇತ್ಯಾದಿ ಪತ್ತೆಯಾಗಿದ್ದು, ಯುವಕ   ಮಹಿಳೆಯನ್ನು ವಶೀಕರಣಕ್ಕೆ ಯತ್ನಿಸಿದ್ದು, ಇದಕ್ಕೆ ಆಕೆ ಸಹಕರಿಸದಿದ್ದಾಗ. ಆಕೆಯನ್ನು ಕೊಲೆಗೈದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ,ಮಂಗಳೂರು ಡಿಸಿಪಿ, ಪಣಂಬೂರು ಎಸಿಪಿ.ಕೆ ಯು ಬೆಳ್ಳಿಯಪ್ಪ, ಸುರತ್ಕಲ್ ಪಿಐ ಚಂದ್ರಪ್ಪ ,ಎಸ್.ಐ ಸುಂದರಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ತನಿಖೆ ಮುಂದುವರಿದಿದೆ.

DAKSHINA KANNADA

ಪಚ್ಚನಾಡಿ ಎಸ್.ಟಿ.ಪಿ. ಗೆ ಅನುದಾನ ಒದಗಿಸಿದ್ದು ಕೇಂದ್ರ ಸರಕಾರ: ಸಚಿವ ದಿನೇಶ್ ಗುಂಡೂ ರಾವ್ ವಿರುದ್ಧ ಶಾಸಕ ಕಾಮತ್ ಗರಂ

Published

on

ಮಂಗಳೂರು: ನಗರದ ಪಚ್ಚನಾಡಿ ಎಸ್.ಟಿ.ಪಿ. ಗೆ ಅನುದಾನ ಒದಗಿಸಿದ್ದು ಕೇಂದ್ರ ಸರಕಾರ. ರಾಜ್ಯ ಸರಕಾರ ಈ ಯೋಜನೆಗೆ ಚಿಕ್ಕಾಸು ನೀಡದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ದಿನೇಶ್ ಗುಂಡೂ ರಾವ್ ಅವರು ಶಿಲಾನ್ಯಾಸ ನೆರವೇರಿಸಿದ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಗರಂ ಆಗಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಪಚ್ಚನಾಡಿ ಎಸ್.ಟಿ.ಪಿ ಆವರಣದಲ್ಲಿ ಮಂಗಳೂರು ನಗರದ ಒಳಚರಂಡಿ ವ್ಯವಸ್ಥೆಯ ನಿರ್ಮಾಣ ಮತ್ತು ಉನ್ನತೀಕರಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಗುದ್ದಲಿ ಪೂಜೆ ನಡೆಸಿ, ಮಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ವಾಸ್ತವದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರವು ಕ್ಷೇತ್ರದ ಅಭಿವೃದ್ಧಿಗೆ ಕಳೆದ ಎರಡೂ ವರ್ಷಗಳಿಂದ ನಯಾ ಪೈಸೆ ನೀಡಿಲ್ಲ. ಮೊದಲು ಆ ಅನುದಾನ ಬಿಡುಗಡೆಗೊಳಿಸಿ ತನ್ನ ಬದ್ಧತೆಯನ್ನು ಪ್ರದರ್ಶಿಸಲಿ. ಸ್ವಚ್ಛ ಭಾರತ ಮಿಷನ್ 2.0 ಮತ್ತು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಪರಿಸರ ಪರಿಹಾರ ನಿಧಿಯಡಿ, ಸುಮಾರು 40 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಎಸ್.ಟಿ.ಪಿ. ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು ಇದು ಸಂಪೂರ್ಣ ಕೇಂದ್ರ ಸರಕಾರದ ಅನುದಾನವಾಗಿದೆ.

ಇದನ್ನೂ ಓದಿ: ಸಿದ್ಧರಾಮಯ್ಯ ದಾಖಲೆ ಬಜೆಟ್ ಬಿಟ್ಟರೆ ನ್ಯಾಯ ಸಿಕ್ಕಿಲ್ಲ: ಸಂಸದ ಕೋಟ

ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಾದ ಮಂಗಳೂರು ಉತ್ತರ ಹಾಗೂ ದಕ್ಷಿಣದ ಶಾಸಕರ ಸಹಿತ ಇಲ್ಲಿನ ಸಂಸದರಿಗೆ ಸರಿಯಾಗಿ ಮಾಹಿತಿ ನೀಡದಿರುವುದು ಮಂಗಳೂರಿಗೆ ಹಾಗೂ ಇಲ್ಲಿನ ಜನತೆಗೆ ಮಾಡುವ ಅವಮಾನವಾಗಿದೆ ಎಂದರು.

Continue Reading

DAKSHINA KANNADA

ಮಾ.7 ರಿಂದ 10: ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

Published

on

ಮಂಗಳೂರು: ಮಂಗಳೂರಿನ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಭಗವಾನ್ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ ಮಾರ್ಚ್ 7ರಿಂದ ಮಾ.10ರವರೆಗೆ ನಡೆಯಲಿದೆ.

ಆ ಪ್ರಯುಕ್ತ ಇಂದು ಧರ್ಮದರ್ಶಿ ಭಾಸ್ಕರ ಐತಾಳ್ ಕೊಲ್ಯ ಇವರ ಪೌರೋಹಿತ್ಯದಲ್ಲಿ ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ, ಆಶ್ಲೇಷ ಬಲಿಪೂಜೆ, ಪ್ರಸನ್ನ ಪೂಜೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ನಡೆದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.

ಈ ಸಂದರ್ಭ ಕ್ಷೇತ್ರ ಸಮಿತಿಯ ಅಧ್ಯಕ್ಷ ಎಸ್. ರಾಘವೇಂದ್ರ ಮಾತನಾಡಿ ಭಂಡಾರವೇರಿದ ಬಳಿಕ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ. ಮಾ.10ರವರೆಗೆ ದಿನಂಪ್ರತಿ ರಾಹು ಗುಳಿಗ, ಗುಳಿಗ ಪಂಜುರ್ಲಿ, ಕೊರಗಜ್ಜ, ತನ್ನಿಮಾನಿಗ ದೈವದ ನೇಮ ನಡೆಯಲಿದೆ. ನೇಮೋತ್ಸವದ ನಾಲ್ಕು ದಿನವೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇವಾಲಯಗಳಿಗೆ ಹೋಗುವ ಭಕ್ತರಿಗೆ ಬಜೆಟ್‌ನಲ್ಲಿ ಭರ್ಜರಿ ಗಿಫ್ಟ್!

ಇನ್ನು ಪ್ರಧಾನ ಕಾರ್ಯದರ್ಶಿ ಎಸ್. ಜಗದೀಶ್ಚಂದ್ರ ಮಾತನಾಡಿ, ಈ ಕ್ಷೇತ್ರಕ್ಕೆ 160 ವರ್ಷಗಳ ಇತಿಹಾಸವಿದೆ. ವಿಶೇಷ ಅಂದ್ರೆ ಇದು ಪಂಚ ಗುಳಿಗನ ಸಾನಿಧ್ಯವಾಗಿದೆ. ವಾರ್ಷಿಕ ನೇಮೋತ್ಸವಕ್ಕೆ ಭಕ್ತರು ಸರ್ವ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ಪ್ರದಾನ ಪಾತ್ರಿ ಎಸ್. ಗಣೇಶ್, ಖಜಾಂಚಿ ಎಸ್. ನವೀನ್ ಮತ್ತು ಸಮಿತಿಯ ಸರ್ವ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

ಇಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾ.10ರವರೆಗೆ ನಿರಂತರವಾಗಿ ದೈವಗಳ ನೇಮ, ಕುಣಿತ ಭಜನೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

Continue Reading

DAKSHINA KANNADA

ಮಾ. 8: ಪುತ್ತೂರಿನಲ್ಲಿ ‘ಮಹಿಳಾ ಸಂಭ್ರಮ’ ಕಾರ್ಯಕ್ರಮ

Published

on

ಪುತ್ತೂರು: ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆ ಯಶಸ್ವಿ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವಾದ ಮಾರ್ಚ್ 8 ರಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ವತಿಯಿಂದ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ‘ಮಹಿಳಾ ಸಂಭ್ರಮ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್ ಮತ್ತು ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಸ್ತುವಾರಿ ಅನಿತಾ ಹೇಮನಾಥ ಶೆಟ್ಟಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯ 9 ಬ್ಲಾಕ್‍ಗಳ ವ್ಯಾಪ್ತಿ ಹೊಂದಿರುವ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಇದನ್ನು ಏರ್ಪಡಿಸಿದೆ.

ಕಾರ್ಯಕ್ರಮವನ್ನು ಬೆಳಿಗ್ಗೆ 9.30ಕ್ಕೆ ಕಾಂಗ್ರೆಸ್ ಮುಖಂಡರಾದ ಕಾವು ಹೇಮನಾಥ ಶೆಟ್ಟಿ ಮತ್ತು ಅನಿತಾ ಹೇಮನಾಥ ಶೆಟ್ಟಿ ದಂಪತಿಯ ಉಪಸ್ಥಿತಿಯಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಉದ್ಘಾಟಿಸಲಿದ್ದಾರೆ. ಬಳಿಕ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ. 11.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವೆ ಮೋಟಮ್ಮ ಉದ್ಘಾಟಿಸಲಿದ್ದು, ಸಾಧಕರಿಗೆ ಸನ್ಮಾನವನ್ನು ಶಾಸಕ ಅಶೋಕ್ ರೈ ನೆರವೇರಿಸಲಿದ್ದಾರೆ.

ಇದನ್ನೂ ಓದಿ: ಹತ್ತುಹಲವು ವಿಶೇಷತೆಗಳೊಂದಿಗೆ ನಡೆಯಲಿದೆ ನಾವೂರು ಕಂಬಳ; ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಜಿ ಸಚಿವ ರಮಾನಾಥ ರೈ

ಇದೇ ಮೊದಲ ಬಾರಿಗೆ ಮಹಿಳಾ ಕಾಂಗ್ರೆಸ್ ವತಿಯಿಂದ 8 ಮಂದಿ ಮಾಜಿ ಮಹಿಳಾ ಸೈನಿಕರಿಗೆ ‘ಪ್ರಿಯದರ್ಶಿನಿ ವೀರನಾರಿ’ ಪ್ರಶಸ್ತಿ ನೀಡಲಾಗುವುದು. ಸೈನ್ಯದಲ್ಲಿ ಕೆಲಸ ಮಾಡಿ ನಿವೃತ್ತರಾದ ಅಲ್ಫೋನ್ಸಾ ನೆಲ್ಯಾಡಿ, ಸ್ಯಾಂಡಿ ಸೆಬಾಸ್ಟಿಯನ್, ಮಿನಿ ಸಂತೋಷ್, ಲಿಸ್ಸಿ ಡೊಮಿನಿಕ್, ಸವಿತಾ ವಿಕ್ರಂ ಶೆಟ್ಟಿ, ಕಮಲಾಕ್ಷಿ, ಯಶೋಧಾ ಮತ್ತುಶಕುಂತಳಾ ನಾಯ್ಕ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದರ ಜತೆಗೆ ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರನ್ನು ಕೂಡಾ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಮುಖರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page