Connect with us

DAKSHINA KANNADA

ಸಿಟಿ ಸೆಂಟರ್ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂ*ಕಿ !!

Published

on

ಮಂಗಳೂರು: ನಿಲ್ಲಿಸಿದ್ದ ಕಾರೊಂದು ಬೆಂ*ಕಿಗಾಹುತಿಯಾಗಿರುವ ಘಟನೆ ಮಂಗಳೂರಿನ ಸಿಟಿ ಸೆಂಟರ್ ಮಾಲ್‌ ಸಮೀಪ ಇಂದು(ಡಿ.16) ಬೆಳಿಗ್ಗೆ ಸಂಭವಿಸಿದೆ.

ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರನ್ನು ಸಿಟಿ ಸೆಂಟರ್ ಬಳಿ ಇರುವ ಫ್ಲಾಟ್ ಬಳಿ ನಿಲ್ಲಿಸಿದ ವೇಳೆ ಕಾರಿನಲ್ಲಿ ಹೊ*ಗೆ ಕಾಣಿಸಿಕೊಂಡಿದೆ. ಇದಾದ ಕೆಲವೇ ಹೊತ್ತಿನಲ್ಲಿ ಕಾರು ಬೆಂ*ಕಿಗಾಹುತಿಯಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಮಂಗಳೂರು : ಪೆಟ್ರೋಲ್ ಪಂಪ್ ಎದುರೇ ಹೊತ್ತಿ ಉರಿದ ಮಾರುತಿ 800

 

ಸ್ಥಳೀಯರು ಅ*ಗ್ನಿಶಾಮಕಕ್ಕೆ ಕರೆ ಮಾಡಿದ್ದು ಘಟನಾ ಸ್ಥಳಕ್ಕೆ ಬಂದ ಅ*ಗ್ನಿಶಾಮಕ ತಂಡ ಬೆಂ*ಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾ*ವು ನೋ*ವು ಸಂಭವಿಸಿಲ್ಲ. ಇತ್ತೀಚೆಗೆ ಲೇಡಿಹಿಲ್, ಕದ್ರಿ, ಅಡ್ಯಾರ್ ಮತ್ತು ಸುರತ್ಕಲ್ ಗಳಲ್ಲಿ ಕಾರುಗಳು ಬೆಂಕಿಗಾಹುತಿಯಾದ ಘಟನೆಗಳು ಸಂಭವಿಸಿತ್ತು.

DAKSHINA KANNADA

ಖಾಸಗಿ ಬಸ್‌ಗಳಿಗೆ ಎಚ್ಚರಿಕೆ ನೀಡಿದ ಪೊಲೀಸ್ ಇಲಾಖೆ; ನಿಯಮ ಮೀರಿದ್ರೆ ಬೀಳುತ್ತೆ FIR

Published

on

ಮಂಗಳೂರು : ಮಂಗಳೂರು ನಗರದಲ್ಲಿ ಸಂಚರಿಸುತ್ತಿರುವ ಬಸ್‌ಗಳ ಅಟಾಟೋಪಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಈ ಹಿಂದೆ ಸಾಕಷ್ಟು ಎಚ್ಚರಿಕೆಯನ್ನು ನೀಡಿದೆ. ಆದರೆ, ಪೊಲೀಸರು ನೀಡಿದ ಎಚ್ಚರಿಕೆಗೆ ಕ್ಯಾರೇ ಅನ್ನದ ಖಾಸಗಿ ಬಸ್ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಈ ಹಿಂದೆ ಹಲವಾರು ಬಾರಿ ಎಚ್ಚರಿಕೆ ನೀಡಿದ ಹೊರತಾಗಿಯೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡ ಹಿನ್ನಲೆಯಲ್ಲಿ ಸುಮಾರು 1,527 ಕೇಸ್‌ಗಳನ್ನು ಹಾಕಲಾಗಿತ್ತು. ಆದಾಗ್ಯೂ ಖಾಸಗಿ ಬಸ್ ತನ್ನ ಎಂದಿನ ಚಾಳಿ ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಕಳೆದ ವಾರ ಪೊಲೀಸರು ಮತ್ತೊಂದು ಸುತ್ತಿನ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಕಾನೂನು ಉಲ್ಲಂಘಿಸಿ ಸಂಚರಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 489 ಕೇಸ್ ದಾಖಲು ಮಾಡಿದ್ದಾರೆ.

ವಿಶೇಷವಾಗಿ ಬಸ್‌ಗಳಲ್ಲಿ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ತುಂಬಿಸಿರುವುದಕ್ಕೆ 234 ಕೇಸ್‌ಗಳನ್ನು ಹಾಕಲಾಗಿದೆ. ಫುಟ್ ಬೊರ್ಡ್ ನಲ್ಲಿ ಪ್ರಯಾಣಿಸಿದ್ದಕ್ಕೆ 71 ಹಾಗೂ ಕರ್ಕಶ ಹಾರ್ನ್ ಬಳಕೆ ಮಾಡಿರುವ 62 ಪ್ರಕರಣಗಳು ಮತ್ತು ಟ್ರಾಫಿಕ್ ರೂಲ್ಸ್ ಉಲ್ಲಂಘನೆಯ 59 ಕೇಸ್ ಗಳು ದಾಖಲು ಮಾಡಲಾಗಿದೆ.

ಇದನ್ನೂ ಓದಿ : ಮುಂಬರುವ ಅಮವಾಸ್ಯೆಯಂದು ಹೀಗೆ ಮಾಡಿ ..! ಶನಿ ದೋಷದಿಂದ ಮುಕ್ತಿ ಪಡೆಯಿರಿ ..!

2025 ರಲ್ಲಿ ದಾಖಲಾದ ಒಟ್ಟು 1,527 ಪ್ರಕರಣಗಳಲ್ಲಿ ಅಧಿಕ ಕೇಸ್ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಸಿದಕ್ಕೆ 643 ಕೇಸ್ ಹಾಗೂ ಟ್ರಾಫಿಕ್ ರೂಲ್ಸ್ ಉಲ್ಲಂಘನೆಗೆ 316 ಕೇಸ್ ಫುಟ್ ಬೋರ್ಡ್ ಪ್ರಯಾಣಕ್ಕೆ 138 ಕೇಸ್ ಗಳನ್ನು ದಾಖಲಿಸಿಕೊಳ್ಳಲಾಗಿದೆ. ಬಸ್ ಮಾಲಕರ ಸಭೆ ಕರೆದು ಎಚ್ಚರಿಕೆ ನೀಡಿದ ಬಳಿಕವೂ ನಿಯಮ ಉಲ್ಲಂಘನೆ ಮಾಡುವುದು ನಿಲ್ಲದ ಕಾರಣ ಮುಂದಿನ ದಿನಗಳಲ್ಲಿ ಬಸ್‌ಗಳ ಮೇಲೆ ಬಿಎನ್‌ಎಸ್ ಕಾಯ್ದೆ ಕಲಂ 281 ರ ಜೊತೆಗೆ ಸಂಚಾರ ನಿಯಮ ಉಲ್ಲಂಘನೆಯ ಕುರಿತು ಎಫ್ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ನಿವೇದಿಸುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Continue Reading

DAKSHINA KANNADA

ಊಟ ಮಾಡಿ ಮಲಗಿದ್ದ ಕಂದಮ್ಮ ಎದ್ದೇಳಲೇ ಇಲ್ಲ ..! ಅಷ್ಟಕ್ಕೂ ನಡೆದಿದ್ದೇನು ..?

Published

on

ಕಡಬ : ಮಕ್ಕಳ ಲಾಲನೆ ಪಾಲನೆ ಬಹಳ ಮುಖ್ಯ. ಅದರಲ್ಲೂ 3 ವರ್ಷದ ತನಕ ಅಂತೂ ಕಣ್ಣಲ್ಲಿ ಕಣ್ಣಿಟ್ಟು ಕಾಪಾಬೇಕಾಗುತ್ತದೆ. ಮಗುವಿಗೆ ನೀಡುವ ಆಹಾರ, ಬಟ್ಟೆ ಎಲ್ಲದರ ಮೇಲೂ ನಿಗಾ ಇರಬೇಕು. ಅಂತೆಯೇ ಮಕ್ಕಳ ಆರೋಗ್ಯದಲ್ಲಿ ಕಿಂಚಿತ್ತೂ ಏರುಪಾರಾದರೂ ಶೀಘ್ರವೇ ವೈದ್ಯರ ಭೇಟಿಯಾಗಿ ಮದ್ದು ಮಾಡಬೇಕು. ಇಲ್ಲವಾದಲ್ಲಿ ಮಗುವನ್ನು ಕಳೆದುಕೊಳ್ಳಲೂ ಬಹುದು. ಇದೀಗ ಅಂತಹದ್ದೇ ಘಟನೆಯೊಂದು ದಕ್ಷಿಣ ಕನ್ನಡದ ಕಡಬದಲ್ಲಿ ನಡೆದಿದೆ.

ಊಟ ಮಾಡಿ ಮಲಗಿದ್ದ ಎರಡೂವರೆ ವರ್ಷದ ಮಗುವೊಂದು ಮೃತಪಟ್ಟಿರುವ ದಾರುಣ ಘಟನೆ ನಿನ್ನೆ (ಮಾ.25) ನಡೆದಿದೆ. ಮೃತ ಶಿಶುವನ್ನು ಕೊಣಾಜೆ ಮೂಲ ನಿವಾಸಿ ಲಿಂಡೋರಾಜ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿರುವ ಉತ್ತರ ಪ್ರದೇಶ ಮೂಲದ ರಾಜಾ ಸಿಂಗ್ ಮತ್ತು ದಿವ್ಯಾಂಶಿ ಸಿಂಗ್ ದಂಪತಿಯ ಎರಡೂವರೆ ವರ್ಷದ ಪುತ್ರ ರುದ್ರ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ.

ನಿನ್ನೆ ಮಧ್ಯಾಹ್ನ ಊಟ‌ ಮಾಡಿ ಮಲಗಿದ್ದ ಮಗುವನ್ನು ಎಬ್ಬಿಸಲೆಂದು ನೋಡುವಾಗ ಏಳಲೇ ಇಲ್ಲ. ಗಾಬರಿಗೊಂಡ ಪೋಷಕರು ತಕ್ಷಣವೇ ಕಡಬದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ಮಗು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮಗು ಆಹಾರ ಸಿಲುಕಿಕೊಂಡು ಅಥವಾ ಯಾವುದೋ ಖಾಯಿಲೆ ಉಲ್ಬಣಗೊಂಡು ಸಾವನ್ನಪ್ಪಿದೆ ಎನ್ನಲಾಗಿದೆ.

‘ಮಗುವಿನ ಮರಣದಲ್ಲಿ ಯಾವುದೇ ಸಂಶಯವಿಲ್ಲ’ ಎಂದು ತಾಯಿ‌ ದಿವ್ಯಾಂಶಿ ಸಿಂಗ್ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ; ಬಿಜೆಪಿ ಮುಖಂಡ ಪರಾರಿ ..! ಏನಿದು ಘಟನೆ ?

Published

on

ವಿಟ್ಲ : 16 ವರ್ಷದ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ಎಸೆಗಿದ ಬಗ್ಗೆ ವ್ಯಕ್ತಿಯೊಬ್ಬನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಹರೆಯದ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದು ಮಾತ್ರವಲ್ಲದೆ, ಆಕೆಗೆ ಕೀಳು ಮಟ್ಟದ ಶಬ್ದಗಳನ್ನು ಬಳಸಿದ ಆರೋಪದಡಿಯಲ್ಲಿ ಮಾಣಿಲ ಬಿಜೆಪಿ ಮುಖಂಡನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಹಾಗೂ ಪೋಕ್ಸೋ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಾದ ಮಾಹಿತಿ ಹೊರ ಬರುತ್ತಿದ್ದಂತೆ ಕೃತ್ಯ ಎಸಗಿದ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ವಿಟ್ಲ ಪೊಲೀಸರು ಆರೋಪಿಯನ್ನು ಹಿಡಿಯಲು ತೀವ್ರ ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page