Connect with us

LATEST NEWS

ಬೋಟ್‌ನಲ್ಲಿ ಬೆಂಕಿ ಅವಘಡ ; ತಪ್ಪಿದ ಭಾರೀ ಅನಾಹುತ

Published

on

ಮಲ್ಪೆ: ನಿಲ್ಲಿಸಲಾಗಿದ್ದ ಮೀನುಗಾರಿಕಾ ಬೋಟಿನಲ್ಲಿ ಬೆಂಕಿ ಕಾಣಿಸಿಕೊಂಡು, ಬೋಟು ಸಂಪೂರ್ಣಸುಟ್ಟು ಹೋದ ಘಟನೆ ಬುಧವಾರ ತಡರಾತ್ರಿ ಉಡುಪಿಯ ಬಾಪುತೋಟ ಬಳಿಯ ಮೀನುಗಾರಿಕಾ ಬಂದರಿನ ಸೇತುವೆ ಪಕ್ಕದ ದಕ್ಕೆಯಲ್ಲಿ ನಡೆದಿದೆ.

ಮಲ್ಪೆಯ ಜನಾರ್ದನ ಟಿ. ಕಾಂಚನ್ ಎಂಬವರಿಗೆ ಸೇರಿದ ‘ರವಿಪ್ರಕಾಶ್’ ಎಂಬ ಸಣ್ಣಟ್ರಾಲ್ (ಫಿಶಿಂಗ್) ಬೋಟಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯ ದೋಣಿಯವರು ಗಮನಿಸಿ ಸಕಾಲದಲ್ಲಿ ಮಾಹಿತಿ ನೀಡಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಆ ಬೋಟಿನ ಮೀನುಗಾರರು ಮೀನುಗಾರಿಕೆ ಮುಗಿಸಿಬಂದು ಬೋಟನ್ನು ಬಾಪುತೋಟದ ಬಳಿಯ ದಕ್ಕೆಯಲ್ಲಿ ನಿಲ್ಲಿಸಿದ್ದರು.

ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ಸಕಾಲದಲ್ಲಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಬೋಟಿನ ಸುತ್ತ ಸುಮಾರು 25ರಿಂದ 30 ಬೋಟುಗಳು ನಿಂತಿದ್ದರೂ, ಸಮುದ್ರದ ನೀರಿನ ಉಬ್ಬರ ಇತರ ಯಾವುದೇ ಬೋಟಿಗೆ ಬೆಂಕಿ ತಗಲದಿರಲು ಕಾರಣವಾಯಿತೆನ್ನಲಾಗಿದೆ. ಬೆಂಕಿಗಾಹುತಿಯಾದ ಬೋಟಿನಲ್ಲಿ ಬಲೆ, 200 ಲೀ. ಡಿಸೇಲ್, ಜಿಪಿಎಸ್, ಫಿಶ್ ಫೈಂಡರ್, ಲೈಫ್ ಜಾಕೆಟ್, ವಾಟರ್ ಟ್ಯಾಂಕರ್, ಬಾಕ್ಸ್ ಇದ್ದು, ಸುಮಾರು 15 ಲಕ್ಷ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

DAKSHINA KANNADA

ಮಂಗಳೂರು: ವಿಚ್ಛೇದನಕ್ಕೆ ಬಂದ ಎರಡು ಜೋಡಿಗಳು-ಸಂಧಾನ ಮಾಡಿ ಒಂದಾಗಿಸಿದ ಲೋಕ್ ಅದಾಲತ್

Published

on

ಮಂಗಳೂರು: ವಿಚ್ಛೇದನಕ್ಕೆ ಮುಂದಾಗಿದ್ದ ಎರಡು ಜೋಡಿಗಳು ಮತ್ತೆ ಒಂದಾದ ವಿಶೇಷ ಹಾಗೂ ಹೃದಯಸ್ಪರ್ಶಿ ವಿದ್ಯಮಾನಕ್ಕೆ ಶನಿವಾರ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಬೈಠಕ್‌ ಸಾಕ್ಷಿಯಾಯಿತು.

ಈ ಎರಡು ಜೋಡಿಗಳ ದಾಂಪತ್ಯ ಜೀವನದಲ್ಲಿ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾಗಿದ್ದ ಕಾರಣ ದಂಪತಿಗಳು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ವಿಚಾರಣೆ ವೇಳೆ ಈ ಪ್ರಕರಣವನ್ನು ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದ ಮೂಲಕ ಸರಿಪಡಿಸಲು ಪ್ರಯತ್ನ ನಡೆಯಿತು. ಪತಿ ಮತ್ತು ಪತ್ನಿಯ ಮಧ್ಯೆ ಸಂಧಾನ ಏರ್ಪಡಿಸಿ ಮತ್ತೆ ಒಂದುಗೂಡಿ ದಾಂಪತ್ಯ ಜೀವನ ಮುಂದುವರಿಸುವ ಬಗ್ಗೆ ಉಭಯೇತರರಿಗೂ ಮನವರಿಕೆ ಮಾಡಲಾಗಿತ್ತು.

ಸಂಧಾನದ ವೇಳೆ ದಂಪತಿಗಳು ಮತ್ತೆ ಒಂದುಗೂಡಿ ಜೀವನ ಮುಂದುವರಿಸಲು ಒಪ್ಪಿದ್ದರು. ಅದರಂತೆ ಶನಿವಾರ ಲೋಕ ಅದಾಲತ್ ಗೆ ಆಗಮಿಸಿದ್ದ ಎರಡೂ ಜೋಡಿಗಳು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಲಕ್ಷ್ಮೀ ನಾರಾಯಣ ಭಟ್‌ ಕೆ.  ಅವರ ಸಮಕ್ಷಮದಲ್ಲಿ ಪರಸ್ಪರ ಹಾರ ಬದಲಾಯಿಸುವ ಮುಖೇನ  ಒಂದಾಗುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿತು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ, ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ವಕೀಲರು ಉಪಸ್ಥಿತರಿದ್ದು, ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.  ಲೋಕ ಅದಾಲತ್ ಅಧಿವೇಶನದಲ್ಲಿ ಭಾಗವಹಿಸಿದ್ದ ಎರಡೂ ಜೋಡಿಗಳು ಮತ್ತೆ ಒಂದಾಗುವ ಮೂಲಕ ತಮ್ಮ ವಿಚ್ಛೇದನದ ಹೋರಾಟವನ್ನು ಕೊನೆಗೊಳಿಸಿದ ಈ ವಿದ್ಯಮಾನ ಮಾದರಿಯಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ ಅವರು ತಿಳಿಸಿದ್ದಾರೆ.

Continue Reading

bangalore

ಬರಹದ ಮೂಲಕ ಮಹಿಳೆಯರಿಗೆ ಧೈರ್ಯ ತುಂಬಿದ ಆಟೋ ಡ್ರೈವರ್; ಅಂತದ್ದೇನಿದೆ?

Published

on

ಬೆಂಗಳೂರು: ಇತ್ತೀಚೆಗೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಹಾಗೂ ವಿವಿಧ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವ ಹಲವು ಉದಾಹರಣೆಗಳು ಇದೆ. ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ಬರುವ ಮಹಿಳೆಯರಲ್ಲಿ ಅಸುರಕ್ಷತೆಯ ಭಾವನೆ ಹೆಚ್ಚಾಗಿದೆ.


ಇಂತಹ ವಾತಾವರಣದ ನಡುವೆ ಬೆಂಗಳೂರಿನಲ್ಲಿ ಓರ್ವ ಆಟೋ ಚಾಲಕನ ವ್ಯಕ್ತಿತ್ವ ಎಲ್ಲರ ಗಮನ ಸೆಳೆದಿದೆ. ಚಾಲಕನ ಹಿಂದಿನ ಭಾಗದಲ್ಲಿ, ನಾನೂ ಒಬ್ಬ ಅಣ್ಣ/ತಂದೆ. ನಿಮ್ಮ ಸುರಕ್ಷತೆಯೇ ಮುಖ್ಯ. ಆರಾಮವಾಗಿ ಕುಳಿತುಕೊಳ್ಳಿ ಎಂದು ಬರೆದು ಆಟೋ ಚಾಲಕರೊಬ್ಬರು ಪ್ರಯಾಣಿಕರಿಗೆ ಧೈರ್ಯ ತುಂಬಿದ್ದಾರೆ.

ಈ ರೀತಿಯ ಬರಹವನ್ನು ಗಮನಿಸಿದ ಯುವತಿಯೊಬ್ಬರು, ರಾತ್ರಿ 12 ಗಂಟೆಗೆ ರ್ಯಾಪಿಡೊ ಆಟೋದಲ್ಲಿ ಪ್ರಯಾಣಿಸುತ್ತಿದ್ದೆ. ಆಟೋದಲ್ಲಿ ಕುಳಿತ ತಕ್ಷಣ ಈ ಬರಹ ಓದಿದೆ. ಆಗ ನನಗೆ ನಿಜವಾಗಿಯೂ ಸುರಕ್ಷಿತ ಭಾವನೆ ಮೂಡಿತು ಎಂದು ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಿಳಾಸ ಕೇಳುವ ನೆಪದಲ್ಲಿ ವೃದ್ಧೆ ಕುತ್ತಿಗೆಯಿಂದ ಚಿನ್ನದ ಸರ ದೋಚಿದ ಕಳ್ಳರು

ಆದರೆ, ಆಟೋ ಚಾಲಕನ ಹೆಸರು, ವಿವರಗಳನ್ನು ಅವರು ಹಂಚಿಕೊಂಡಿಲ್ಲ. ಆತನ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

DAKSHINA KANNADA

ಕರಾವಳಿಯಲ್ಲಿ ‘ಸಿಲ್ವರ್ ವುಡ್’ ಮರಗಳ ಹೊಸ ಪ್ರಯೋಗ!

Published

on

ಪುತ್ತೂರು: ಕೊಡಗು ಮತ್ತು ಚಿಕ್ಕಮಗಳೂರಿನಂತಹ ತಂಪಾದ ಹವಾಗುಣದಲ್ಲಿ ಬೆಳೆಯುವ ಸಿಲ್ವರ್ ವುಡ್ ಮರಗಳನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೆಳೆಸಲು ನಡೆಸಿದ ಮೊದಲ ಪ್ರಯತ್ನ ಯಶಸ್ವಿಯಾಗಿದೆ.


ಫ್ಲೈವುಡ್ ಮತ್ತು ಇತರ ಪೀಠೋಪಕರಣಗಳ ತಯಾರಿಕೆಗಾಗಿ ಬಳಸುವ ಈ ಮರಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಸಲು ಪುತ್ತೂರಿನ ಕೃಷಿಕರೊಬ್ಬರು ಮುಂದಾಗಿದ್ದು, ದಾರಂದಕುಕ್ಕ ಕಾಯರ್ತಡಿ ನಿವಾಸಿ ಅಜಿತಪ್ರಸಾದ್ ರೈ ತಮ್ಮ ಬಳಿ ಇರುವ ಸುಮರು 20 ಎಕರೆ ಕೃಷಿಭೂಮಿಯಲ್ಲಿ ಈ ಸಿಲ್ವರ್ ವುಡ್ ಬೆಳೆಯಲು ನಿರ್ಧರಿಸಿದ್ದರು.

ಉಷ್ಣಾಂಶ ಹೆಚ್ಚಾಗಿರುವ ದಕ್ಷಿಣಕನ್ನಡ ಜಿಲ್ಲೆಯ ವಾತಾವರಣದಲ್ಲಿ ಈ ಮರಗಳು ಉಳಿಯುತ್ತದೋ ಎನ್ನುವ ಪ್ರಶ್ನೆಗಳ ಮಧ್ಯೆ ಸುಮಾರು 3 ಸಾವಿರದಷ್ಟು ಸಿಲ್ವರ್ ವುಡ್ ಸಸಿಗಳನ್ನು ನಾಟಿ ಮಾಡಿದ್ದಾರೆ. ಗಿಡಗಳನ್ನು ನಾಟಿ ಮಾಡಿ ಎರಡು ವರ್ಷಗಳಾಗುತ್ತಿದ್ದಂತೆ ಉತ್ತಮ ರೀತಿಯಲ್ಲಿ ಬೆಳೆದು ನಿಂತಿವೆ.

ಇದನ್ನೂ ಓದಿ: ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕಾಗಮಿಸಿದ ಆದಿ ಯೋಗಿ ರಥದ ಶಿವ ಯಾತ್ರೆ

ಜಿಲ್ಲೆಯ ಹವಾಗುಣದಲ್ಲೂ ಸಿಲ್ವರ್ ವುಡ್ ಮರಗಳನ್ನು ಬೆಳೆಸಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಸಿಲ್ವರ್ ವುಡ್ ಮರದಿಂದ ಎರಡು ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ. ಗಿಡ ಬೆಳೆಯುತ್ತಿದ್ದಂತೆ ಈ ಗಿಡಗಳಿಗೆ ಕಾಳುಮೆಣಸಿನ ಬಳ್ಳಿಯನ್ನು ಬಿಡುತ್ತಿದ್ದು, ಈ ಬಳ್ಳಿಗಳಿಗೆ ಈ ಗಿಡಗಳು ಉತ್ತಮ ರೀತಿಯ ಆಸರೆಯನ್ನು ನೀಡುವ ಹಿನ್ನಲೆಯಲ್ಲಿ ಕಾಳುಮೆಣಸಿನ‌ ಗಿಡಗಳಲ್ಲೂ ಉತ್ತಮ‌ ಬೆಳೆ ಪಡೆಯುತ್ತಿದ್ದಾರೆ.

ನೇರವಾಗಿ, ಎತ್ತರವಾಗಿ‌ ಬೆಳೆಯವ ಈ ಮರಕ್ಕೆ ಭಾರೀ ಬೇಡಿಕೆಯೂ ಇದೆ. ಹೆಚ್ಚಾಗಿ ಪ್ಲೈವುಡ್ ತಯಾರಿಕೆಗೆ, ಪೀಠೋಪಕರಣಗಳ ತಯಾರಿಕೆಯಲ್ಲೂ ಈ ಮರವನ್ಮು ಬಳಸುತ್ತಾರೆ. ಎಲ್ಲಾ ಸಿಲ್ವರ್ ವುಡ್ ಮರಗಳು ಹುಲುಸಾಗಿ ಬೆಳೆಯುತ್ತಿದ್ದು, ಮುಂದಿನ ಎರಡು-ಮೂರು ವರ್ಷದ ಒಳಗೆ ಕಟಾವು ಮಾಡಿದಲ್ಲಿ, ಮರದಿಂದ ಉತ್ತಮ ಆದಾಯ ಬರುವ ನಿರೀಕ್ಷೆಯಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page