Connect with us

LATEST NEWS

ಸೇತುವೆಯ ಕಬ್ಬಿಣದ ಪೈಪ್‌ಗೆ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

Published

on

ಬಾಗಲಕೋಟೆ: ಸಾಲಗಾರರ ಕಿರುಕುಳ, ಮಾನಸಿಕ ಹಿಂಸೆಗೆ ಬೇಸತ್ತು ದಂಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ನಡೆದಿದೆ.

ಮಲ್ಲಪ್ಪ ಲಾಳಿ (55) ಹಾಗೂ ಪತ್ನಿ ಮಾದೇವಿ ಲಾಳಿ (50) ಮೃತರು ಡೆತ್ ನೋಟ್ ಬರೆದಿಟ್ಟಿರುವ ದಂಪತಿ, ಯಾದವಾಡ ರಸ್ತೆ ಬಳಿ ಘಟಪ್ರಭಾ ನದಿ ಸೇತುವೆಯ ಕಬ್ಬಿಣದ ಪೈಪ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ದಂಪತಿ ಸೊರಗಾವಿ ಗ್ರಾಮದ ನಿವಾಸಿಗಳು ಇತ್ತೀಚೆಗೆ ಮುಧೋಳ ತಾಲೂಕಿನ ಮೆಟಗುಡ್ಡದಲ್ಲಿ ನೆಲೆಸಿದ್ದರು. ಮೆಟಗುಡ್ಯದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು.ಹಲವರ ಬಳಿ ಸಾಲ ಮಾಡಿದ್ದರು. ಕಿರಾಣಿ ಅಂಗಡಿಯೂ ಚನ್ನಾಗಿಯೇ ನಡೆಯುತ್ತಿತ್ತು. ಆದರೆ ಸಾಲಗಾರರು ಹಣಕ್ಕಾಗಿ ಪೀಡಿಸುತ್ತಿದ್ದರು. ಮನೆ ಬಳಿ ಬಂದು ಹಣ ವಾಪಾಸ್ ಕೊಡುವಂತೆ ಕೇಳುತ್ತಿದ್ದರು. ಸಾಲಗಾರರ ಕಿರುಕುಳಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

LATEST NEWS

ನಿಮಗೆ ಕೂದಲು ಉದುರುತ್ತಿದೆಯೇ ? ಹಾಗಾದ್ರೆ ಇಂದೇ ಆಲೋವೆರಾ ತೆಗೊಳ್ಳಿ, ಹೀಗೆ ಮಾಡಿ..ಅಷ್ಟೇ..!!

Published

on

ಕೂದಲು ಉದುರುವಿಕೆ ಎಂಬುವುದು ಇಂದಿನ ದಿನದಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಕೂದಲು ಒಡೆಯುವುದು, ತೆಳುವಾಗುವುದು ಮತ್ತು ಬಿಳಿಯಾಗುವ ಸಮಸ್ಯೆಗಳಿಂದ ಬಹುತೇಕ ಎಲ್ಲರೂ ತೊಂದರೆಗೀಡಾಗಿದ್ದಾರೆ. ಕೆಲವರು ಚಿಕ್ಕ ವಯಸ್ಸಿನಲ್ಲಿಯೇ ಬೋಳುತಲೆ ಸಮಸ್ಯೆ ಅನುಭವಿಸುತ್ತಾರೆ. ಕೆಲವೊಮ್ಮೆ, ಹವಾಮಾನ ಅಥವಾ ಜೀವನಶೈಲಿ ಬದಲಾದಾಗ ಕೂದಲು ಉದುರುವಿಕೆಯ ಸಮಸ್ಯೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ಕೆಲವು ದಿನಗಳವರೆಗೆ ಸಂಭವಿಸುವುದು ಸಾಮಾನ್ಯ, ಆದರೆ ದೀರ್ಘಕಾಲದವರೆಗೆ ನಿರಂತರವಾಗಿ ಕೂದಲು ಉದುರುತ್ತಿದ್ದರೆ ಬೋಳುತನಕ್ಕೆ ಕಾರಣವಾಗಬಹುದು.

ಕೂದಲು ಉದುರುವ ಸಮಸ್ಯೆಯ ಕಡಿಮೆ ಮಾಡಲು ಕೆಲವು ಮನೆಮದ್ದುಗಳನ್ನು ಟ್ರೈ ಮಾಡಬಹುದು. ಅದರಲ್ಲಿ ಅಲೋವೆರಾ ಅತ್ಯುತ್ತಮ ಪರಿಹಾರವಾಗಿದೆ. ಕೂದಲಿನ ಅನೇಕ ಸಮಸ್ಯೆಗಳನ್ನುಇದು ಪರಿಹರಿಸುತ್ತದೆ.  ಅಲೋವೆರಾ ಚರ್ಮ ಮತ್ತು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತೆ. ಅಲೋವೆರಾ ಜೆಲ್ ನಲ್ಲಿ ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ ಬಿ 12, ಕೊಬ್ಬಿನಾಮ್ಲಗಳು ಮತ್ತು ಅಮೈನೋ ಆಮ್ಲಗಳಿವೆ. ಅಲೋವೆರಾ ಜೆಲ್ ಅನ್ನು ನೆತ್ತಿಗೆ ಹಚ್ಚುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ತುರಿಕೆ, ಸೋಂಕು ಮತ್ತು ಕೂದಲಿನ ಶುಷ್ಕತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಲೋವೆರಾದಲ್ಲಿ ಅಲೋಯಿನ್ ಎಂಬ ರಾಸಾಯನಿಕ ಸಂಯುಕ್ತವಿದೆ. ಇದು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.

ಅಲೋವೆರಾ ಜೆಲ್ ಮತ್ತು ಈರುಳ್ಳಿ ರಸ :

ಅಲೋವೆರಾ ಜೆಲ್ ಮತ್ತು ಈರುಳ್ಳಿ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಈ ಮಿಶ್ರಣವನ್ನು ಕೆಲವು ತಿಂಗಳುಗಳ ಕಾಲ ನಿರಂತರವಾಗಿ ಬಳಸಿ. ಈರುಳ್ಳಿ ರಸದೊಂದಿಗೆ ಬೆರೆಸಿದ ಅಲೋವೆರಾ ಜೆಲ್ ಅನ್ನು ನಿಯಮಿತವಾಗಿ ಅನ್ವಯಿಸಿ 1 ಗಂಟೆ ಕಾಲ ಬಿಟ್ಟು ಸ್ನಾನ ಮಾಡಬೇಕು.

ಅಲೋವೆರಾ ಜೆಲ್ ಮತ್ತು ಆಮ್ಲಾ ಪುಡಿ ಮಿ :

ಅಲೋವೆರಾದ ಜೊತೆ ಆಮ್ಲವನ್ನು ಸೇರಿಸಿ ಕೂದಲಿಗೆ ಹಚ್ಚುವುದರಿಂದ  ಕೂದಲಿಗೆ ತುಂಬಾನೆ ಪ್ರಯೋಜನ ನೀಡುತ್ತೆ. ಒಂದು ಬಟ್ಟಲಿನಲ್ಲಿ ಅಲೋವೆರಾ ಜೆಲ್ ಮತ್ತು ಸ್ವಲ್ಪ ಆಮ್ಲಾ ಅಥವಾ ನೆಲ್ಲಿಕಾಯಿ ಪುಡಿಯನ್ನು ಬೆರೆಸಬೇಕು ಅಥವಾ ಆಮ್ಲಾ ರಸವನ್ನು ಸಹ ಸೇರಿಸಬಹುದು. ಬಳಿಕ ಅದನ್ನು ಪೇಸ್ಟ್ ನಂತೆ ತಲೆಬುರುಡೆಗೆ ಹಚ್ಚಿ ಅರಿಶಿನದಿಂದ ಮಸಾಜ್ ಮಾಡಿ. 1-2 ಗಂಟೆಗಳ ಕಾಲ ಹಾಗೆ ಬಿಟ್ಟು ಕೂದಲನ್ನು ತೊಳೆಯಬೇಕು. ಇದನ್ನು ವಾರಕ್ಕೆ ಕನಿಷ್ಠ 2 ಬಾರಿ ಮಾಡಿದರೆ ಕೂದಲು ಉದುರುವಿಕೆ ಕಡಿಮೆಯಾಗಿ, ಹೊಸ ಕೂದಲು ಬೆಳೆಯುತ್ತದೆ.

Continue Reading

DAKSHINA KANNADA

ಕೋಳಿ ಸಾಗಾಟದ ಟೆಂಪೋ ಪ*ಲ್ಟಿ; ಸ*ತ್ತ ಕೋಳಿಗಳಿಗಾಗಿ ಮುಗಿಬಿದ್ದ ಸಾರ್ವಜನಿಕರು

Published

on

ಬಂಟ್ವಾಳ: ಕೋಳಿ ಸಾಗಾಟದ ಟೆಂಪೋ ಪ*ಲ್ಟಿಯಾಗಿ ನೂರಾರು ಕೋಳಿಗಳು ಸಾ*ವನ್ನಪ್ಪಿರುವ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕನ್ಯಾನದ ಕುಳಾಲು ಎಂಬಲ್ಲಿ ಘಟನೆ ನಡೆದಿದೆ.

ಕಡಿದಾದ ರಸ್ತೆಯಲ್ಲಿ ಇನ್ನೊಂದು‌ ವಾಹನಕ್ಕೆ ಸೈಡ್ ಕೊಡುವ ಸಂದರ್ಭದಲ್ಲಿ ಪಿಕಪ್ ಪ*ಲ್ಟಿಯಾಗಿದೆ.  ಪಿಕಪ್ ಟೆಂಪೋ ಚಾಲಕ‌ ಅದೃಷ್ಟವಶಾತ್ ಅ*ಪಾಯದಿಂದ ಪಾರಾಗಿದ್ದಾನೆ.

ಈ ವೇಳೆ ಸ*ತ್ತ ಕೋಳಿಗಳನ್ನು ಮನೆಗೆ ಕೊಂಡೊಯ್ಯಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ.  ಈ ಘಟನೆಯಿಂದ ಕೋಳಿ‌ಪ್ರಿಯರಿಗೆ ಪುಕ್ಕಟೆಯಾಗಿ ಕೋಳಿಗಳು ದೊರೆದಂತಾಗಿದೆ.

Continue Reading

LATEST NEWS

ತರಬೇತಿ ವೇಳೆ ಪ್ಯಾರಾಚೂಟ್ ತೆರೆದುಕೊಳ್ಳದೆ ಕೆಳಗೆ ಬಿದ್ದು ವಾಯುಪಡೆ ಅಧಿಕಾರಿ ಸಾವು

Published

on

ಶಿವಮೊಗ್ಗ: ತರಬೇತಿ ವೇಳೆ ಪ್ಯಾರಾಚೂಟ್ ತೆರೆದುಕೊಳ್ಳದೆ ಕೆಳಗೆ ಬಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದ ವಾಯುಪಡೆಯ ವಾರೆಂಟ್ ಅಧಿಕಾರಿ ಮಂಜುನಾಥ್ ಜಿ.ಎಸ್ (36) ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದ್ದು, ವಿಮಾನದಿಂದ ಹಾರಿದ ನಂತರ ಪ್ಯಾರಾಚೂಟ್ ತೆರೆದುಕೊಳ್ಳದೆ ಮಂಜುನಾಥ್ ಅವರು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಆಗ್ರಾದಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ ಮಾಲ್ಪುರ ಪ್ಯಾರಾಚೂಟ್ ಡ್ರಾಪ್ ಜೋನ್‌ನಲ್ಲಿ ತರಬೇತಿ ನಡೆಯುತ್ತಿತ್ತು.ವಾಯುಸೇನೆಯ 12 ಅಧಿಕಾರಿಗಳು ಪ್ಯಾರಾಚೂಟ್ ತರಬೇತಿಗೆ ವಿಮಾನದಿಂದ ಜಿಗಿದಿದ್ದರು. 11 ಮಂದಿ ಮಾತ್ರ ಪ್ಯಾರಾಚೂಟ್ ಬಳಸಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದರು. ಆದರೆ ವಾರಂಟ್ ಆಫೀಸರ್ ಮಂಜುನಾಥ್ ಜಿ.ಎಸ್ ನಾಪತ್ತೆಯಾಗಿದ್ದರು ಎಂದು ವರದಿಯಾಗಿತ್ತು.

ಮಂಜುನಾಥ್ ಅವರಿಗಾಗಿ ಶೋಧ ಕಾರ್ಯ ನಡೆಸಿದಾಗ ಸಮೀಪದ ಜಮೀನಿನಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.ಪರೀಕ್ಷಿಸಿದ ವೈದ್ಯರು ಮಂಜುನಾಥ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಹಿಂದೆಯು ಇಂತಹ ಘಟನೆಗಳು ಸಂಭವಿಸಿ ವಾಯುಪಡೆಯ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page