Connect with us

LATEST NEWS

ಅಪ್ರಾಪ್ತರ ಪ್ರೀತಿಯ ಸಂಕೇತವಾಗಿ ಜನಿಸಿದ ಮಗು ಕಸದ ರಾಶಿ ಪಾಲು

Published

on

ಅವರಿಬ್ಬರು ಇನ್ನೂ ಹರೆದವರು ಅಷ್ಟೇ… ಪ್ರೀತಿ ಎಂದರೆ ಏನು ಎಂದು ಇನ್ನೂ ಅರಿತಿಲ್ಲ.. ಆದರೆ ಅಷ್ಟರಲ್ಲಿಯೇ ಯಾರೂ ಊಹಿಸಲಾಗದ ಘಟನೆಗೆ ಕಾರಣೀಭೂತರಾಗಿದ್ದಾರೆ. ಹರೆಯದಲ್ಲಿ ಉಂಟಾಗುವ ಆಕರ್ಷಣೆಯೇ ಪ್ರೀತಿ ಎಂದು ಭಾವಿಸಿದ್ದ ಅಪ್ರಾಪ್ತ ಮಕ್ಕಳಿಬ್ಬರು ತಾವು ಪರಿಶುದ್ಧವಾದ ಪ್ರೀತಿಯಲ್ಲಿ ಮುಳುಗಿದ್ದೇವೆ ಎಂದು ಭಾವಿಸಿ.. ಮೈ ಮರೆತು.. ಮಗು ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಆದರೆ ದುರಾದೃಷ್ಟವಶಾತ್ ಬಾಳಿ ಬದುಕಬೇಕಾಗಿದ್ದ ಆ ಪುಟ್ಟ ಕಂದಮ್ಮ ಇದೀಗ ಅನಾಥ ಶವವಾಗಿ ತಿಪ್ಪೆಯಲ್ಲಿ ಪತ್ತೆಯಾಗಿದೆ.

ಇಡೀ ರಾಜ್ಯವೇ ನಾಚಿಕೆ ಪಡುವಂತಹ ಘಟನೆ ಇದಾಗಿದೆ. ಅಪ್ರಾಪ್ತ ಮಕ್ಕಳ ಈ ಪ್ರೀತಿಯ ಹುಚ್ಚಾಟಕ್ಕೆ ಫುಲ್ ಸಾಥ್ ಕೊಟ್ಟವರೇ ಜೊತೆಗಿದ್ದ ಫ್ರಂಡ್ಸ್. ಅದರಲ್ಲೂ ಅಚ್ಚರಿಯೇನೆಂದರೆ ಸ್ನೇಹಿತರೇ ಸೇರಿಕೊಂಡು ಬಾಲಕಿಗೆ ಡೆಲಿವರಿ ಮಾಡಿದ್ದಾರೆ. ಈ ವಿಚಿತ್ರ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.

ಮಗು ಪತ್ತೆಯಾಗಿದ್ದು ಹೇಗೆ ?

ಯಲಹಂಕದ ಗಾಂಧಿನಗರ ಏರಿಯಾದಲ್ಲಿ ಸೈಕಲ್ ನಲ್ಲಿ ಬಂದಿದ್ದ ವ್ಯಕ್ತಿ ಕಸದ ರಾಶಿಯಲ್ಲಿ ಕವರ್ ಬಿಸಾಕಿ ಹೋಗಿದ್ದ. ಕಸ ಬಿಸಾಡಿ ಎಂದು ಮಗುವಿದ್ದ ಕವರನ್ನು ಅರಿವಿಲ್ಲದ ಯುವತಿ ಮನೆ ಹತ್ತಿರದಲ್ಲೇ ವಾಸವಿರುವ ವೃದ್ಧನ ಕೈಗೆ ಕೊಟ್ಟಿದ್ದಾಳೆ. ಆಗ ವೃದ್ಧ ನೇರವಾಗಿ ಕವರನ್ನು ಎತ್ತಿ ಕಸದ ಬುಟ್ಟಿಗೆ ಹಾಕಿ ಹೋಗಿದ್ದಾರೆ. ಮರುದಿನ ಬೆಳಿಗ್ಗೆ ಪೌರಕಾರ್ಮಿಕರು ಕಸ ಸ್ವಚ್ಛ ಮಾಡುವಾಗ ಶಿಶುವಿನ ಶವ ಕಂಡು ಶಾಕ್ ಆಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆ ಕೂಡಲೇ ಪೊಲೀಸರಿಂದ ತನಿಖೆ ಶುರು ಮಾಡಿ ಸುತ್ತಮುತ್ತಲ ಸಿಸಿಟಿವಿ ಸರ್ಚ್ ಮಾಡಿಸಿದ್ದಾರೆ. ಆಗ ಪೊಲೀಸರಿಗೆ CCTVಯಲ್ಲಿ ಸೈಕಲ್​ನಲ್ಲಿ ವೃದ್ಧನ ಗುರುತು ಪತ್ತೆಯಾಗಿದೆ. ಆಗ ಕವರ್​ನಲ್ಲಿದ್ದ ಶಿಶುವಿನ ಶವ ಎಸೆದ ವೃದ್ಧನನ್ನು ಪೊಲೀಸರು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ. ಅಪ್ರಾಪ್ತರ ಲವ್​ ಸ್ಟೋರಿ ಪ್ರಕರಣ, ಶಿಶು ಸಾವಿನ ಸತ್ಯ ಬೆಳಕಿಗೆ ಬಂದಿದೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

DAKSHINA KANNADA

ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ

Published

on

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತದ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.

ಹವಾಮಾನ ಇಲಾಖೆಯು ಇಂದು ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ನಿನ್ನೆ ರಾತ್ರಿ ವೇಳೆಯೇ ಕೆಲವು ಕಡೆ ಮಳೆಯಾಗಿದ್ದು, ಇಂದು ಮುಜಾನೆಯಿಂದ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ.

ಗಾಳಿ ಮಳೆಯಿಂದಾಗಿ ಕೆಲವು ಕಡೆ ಆಸ್ತಿ ಪಾಸ್ತಿಗೆ ಹಾನಿಯಾಗಿದೆ. ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು ಬಳಿಯ ಪಲ್ಲಿಕಂಡದಲ್ಲಿ ಸಿಸಿಲಿಯಾ ಪಿಂಟೊ ಎಂಬುವವರ ಮನೆ ಕುಸಿದು ಬಿದ್ದ ಘಟನೆ ಸಂಭವಿಸಿದ್ದು, ಯಾವುದೇ ಜಿವ ಹಾನಿಯಾಗಿಲ್ಲ.

ಕೆಲವು ಕಡೆ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಸಮಸ್ಯೆ ಉಂಟಾದ ಘಟನೆಯೂ ಸಂಭವಿಸಿದೆ. ಉಡುಪಿ, ಕಾರ್ಕಳ, ಕುಂದಾಪುರ, ಕಾಪು,ಪಡುಬಿದ್ರಿ ಸಹಿತ ಕರಾವಳಿಯ ಎಲ್ಲಾ ತಾಲೂಕುಗಳಲ್ಲಿ ಧಾರಾಕಾರ ಮಳೆ ಬಂದಿದೆ.

ಇದನ್ನೂ ಓದಿ: ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೂವರು ಯುವತಿಯರ ಸಾ*ವು

ಕಾರ್ಮೋಡ ಮುಸುಕಿದ ವಾತಾವರಣವಿದ್ದು ದಿನಪೂರ್ತಿ ಮಳೆ ಬರುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

 

Continue Reading

LATEST NEWS

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹ*ತ್ಯೆ

Published

on

ಮಡಿಕೇರಿ: ಜೀವನದಲ್ಲಿ ಜಿಗುಪ್ಸೆಗೊಂಡು ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದೆ.

ನಾರೂರು ಮನೆ ಮಧು (ಅಶೋಕ್) ಮೃತ ವ್ಯಕ್ತಿ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮದ್ಯ ಸೇವಿಸಿ ತಲೆಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ.

ಮೂರು ವರ್ಷದ ಪುತ್ರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ಪತ್ನಿ ಮತ್ತು ಪುತ್ರಿ ಬೆಂಗಳೂರಿಗೆ ತೆರಳಿದ್ದರು. ಭಾನುವಾರ ಬೆಳಗ್ಗೆ ಮೃತನ ತಾಯಿ ಕೂಡ ಬೆಂಗಳೂರಿಗೆ ತೆರಳಿದ್ದರು. ಈ ಸಂದರ್ಭ ತನ್ನ ಮನೆಯಲ್ಲಿ ಇದ್ದ ಡಬಲ್ ಬ್ಯಾರೆಲ್ ಕೋವಿಯಿಂದ ಶೂಟ್ ಮಾಡಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೂವರು ಯುವತಿಯರ ಸಾ*ವು

ಘಟನೆಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

Continue Reading

DAKSHINA KANNADA

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ

Published

on

ಮಂಗಳೂರು: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಮುಂಬಯಿ ನಿವಾಸಿ ಮಸೀವುಲ್ಲಾ ಅತಿವುಲ್ಲಾ ಖಾನ್‌ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 1,65,000 ರೂಪಾಯಿ ಹಣವನ್ನು ಪಡೆದು ಯುವಕರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 1 ಕೋಟಿ 82 ಲಕ್ಷ ರೂಪಾಯಿ ಹಣವನ್ನು ಪಡೆದು ನಂಬಿಕೆ ದ್ರೋಹ ಎಸಗಿರುವುದಾಗಿ ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ: ಬೆಳ್ತಂಗಡಿಯ ಆಕಾಂಕ್ಷ ನಿಗೂಢ ಸಾ*ವು ಪ್ರಕರಣ; ಸೂಕ್ತ ತನಿಖೆಗೆ ಪಂಜಾಬ್‌ ಸರ್ಕಾರಕ್ಕೆ ದಿನೇಶ್‌ ಗುಂಡೂರಾವ್‌ ಒತ್ತಾಯ

ಆರೋಪಿಯ ವಿರುದ್ದ ಈಗಾಗಲೇ ಅನಧಿಕೃತ ಕಂಪೆನಿ ತೆರೆದು ವಿದೇಶದಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ಇಮಿಗ್ರೇಷನ್ ಅಧಿಕಾರಿಗಳಿಂದ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ 2024 ನೇ ಡಿಸೆಂಬರ್ ನಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಬಿ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page