Connect with us

ಹಸುಗಳ ಕೆಚ್ಚಲು ಕೊ*ಯ್ದ ಪ್ರಕರಣ; ಆರೋಪಿಯೋರ್ವನ ಬಂಧನ

Published

on

ಮಂಗಳುರು/ಬೆಂಗಳೂರು : ಹಸುಗಳ ಕೆಚ್ಚಲು ಕೊ*ಯ್ದ ಅಮಾನವೀಯ ಘಟನೆಯು ಚಾಮರಾಜಪೇಟೆಯ ಓಲ್ಡ್‌ ಪೆನ್ಷನ್‌ ಮೊಹಲ್ಲಾದ ವಿನಾಯಕನಗರದಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಓರ್ವ ಆರೋಪಿಯನ್ನು ಕಾಟನ್‌ ಪೇಟೆ ಪೊಲೀಸರು ಬಂಧಿಸಿ, ಸ್ಥಳ ಮಹಜರು ಮಾಡಿದ್ದಾರೆ.

ಆರೋಪಿಯ ಹೆಸರನ್ನು ಪೊಲೀಸರು ಇನ್ನೂ ತಿಳಿಸಲಿಲ್ಲ.

ಇದನ್ನೂ ಓದಿ : ಛೇ! ಇದೆಂಥ ಅಮಾನವೀಯ ಕೃ*ತ್ಯ; ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಕಿ*ಡಿಗೇಡಿಗಳು

ನಿನ್ನೆ (ಜ.12) ರಾತ್ರಿ ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಚಿಕ್ಕಪೇಟೆ ಉಪವಿಭಾಗದ ಎಸಿಪಿ ರಮೇಶ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಗಾಯ ಮಾಸಲು ಇನ್ನೂ ಎರಡು ವಾರ ಬೇಕು ಎಂದು ವೈದ್ಯರು ಹೇಳಲಾಗಿದೆ. ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಕ್ಷೇಮವಾಗಿದೆ.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಆಸ್ಪತ್ರೆಯಿಂದ ಜೈಲಿಗೆ ಶಿಫ್ಟ್‌ ಆದ ಕೋಟೆಕಾರ್ ಬ್ಯಾಂಕ್ ದರೋಡೆ ಆರೋಪಿ

Published

on

ಉಳ್ಳಾಲದ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿ ಮುರುಗನ್ ಡಿ ಇದೀಗ ಆಸ್ಪತ್ರೆಯಿಂದ ಜೈಲು ಸೇರಿದ್ದಾನೆ.

ಪೊಲೀಸರ ವಶದಲ್ಲಿದ್ದ ವೇಳೆ ಸ್ಥಳ ಮಹಜರು ವೇಳೆ ಬಾಲ ಬಿಚ್ಚಲು ಹೋಗಿ ಪೊಲೀಸರ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದ. ಕರ್ನಾಟಕ ಕೇರಳ ಗಡಿ ಭಾಗದ ಗ್ರಾಮವಾಗಿರುವ ಅಜ್ಜಿನಡ್ಕ ಎಂಬಲ್ಲಿ ಸ್ಥಳ ಮಹಜರು ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಉಳ್ಳಾಲ ಠಾಣಾಧಿಕಾರಿ ತಪ್ಪಿಸಿಕೊಳ್ಳುತ್ತಿದ್ದ ಆರೋಪಿ ಮುರುಗನ್ ಡಿ ಕಾಲಿಗೆ ಗುಂಡು ಹಾರಿಸಿದ್ದರು.

ಇದೀಗ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಆರೋಪಿ ಮುರುಗನ್ ಡಿ ಯನ್ನು ಜಿಲ್ಲಾ ಕಾರಾಗ್ರಹಕ್ಕೆ ಕಳುಹಿಸಲಾಗಿದೆ. ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಇನ್ನೂ ಆರೋಪಿಗಳ ಬಂಧನವಾಗಬೇಕಾಗಿದ್ದು, ಆರೋಪಿಗಳಿಗೆ ಸಹಕರಿಸಿದ ಸ್ಥಳೀಯ ವ್ಯಕ್ತಿ ಯಾರು ಎಂಬುವುದು ಕೂಡಾ ಬಯಲಾಗಬೇಕಾಗಿದೆ.

Continue Reading

LATEST NEWS

ಉ*ಗ್ರರ ಟಾರ್ಗೆಟ್ ಆದ ಪ್ರಧಾನಿ ಮೋದಿ..! ವಿಮಾನದ ಮೇಲೆ ದಾ*ಳಿಯ ಬೆದರಿಕೆ..!

Published

on

ಮಂಗಳೂರು/ಪ್ಯಾರೀಸ್ :  ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಫ್ರಾನ್ಸ್ ಪ್ರವಾಸದಲ್ಲಿದ್ದು, ಅಲ್ಲಿ ಎ.ಐ.ಆ್ಯಕ್ಷನ್ ಶೃಂಗ ಸಭೆಯಲ್ಲಿ ಭಾಗಿಯಾಗಿದ್ದಾರೆ. ಮತ್ತೊಂದೆಡೆ ಅವರು ಪ್ರಯಾಣಿಸುತ್ತಿದ್ದ ವಿಮಾನದ ಮೇಲೆ ಉ*ಗ್ರರ ಕರಿನೆರಳು ಬಿದ್ದಿದೆ ಅನ್ನೋ ವಿಚಾರ ಬಹಿರಂಗವಾಗಿದೆ.

ಪ್ರಧಾನಿ ಮೋದಿ ಇರುವ ವಿಮಾನದ ಮೇಲೆ ದಾ*ಳಿ  ನಡೆಸುವುದಾಗಿ ಉ*ಗ್ರರು ಬೆ*ದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ಮೋದಿ ಪ್ರಾನ್ಸ್, ಅಮೆರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಈ ಬೆ*ದರಿಕೆ ಕರೆ ಬಂದಿದೆ ಎಂದು ತಿಳಿದು ಬಂದಿದೆ. ಪ್ರಧಾನಿ ಮೋದಿ ಪ್ರಯಾಣಿಸುವ ವಿಮಾನದ ಮೇಲೆ ಭ*ಯೋತ್ಪಾಕರು ದಾ*ಳಿ ನಡೆ ನಡೆಸಲಾಗುವುದು ಎಂದು ಮುಂಬೈಗೆ ಪೊಲೀಸರಿಗೆ ಬೆ*ದರಿಕೆ ಕರೆ ಬಂದಿದೆ.

ಫೆಬ್ರವರಿ 11 ರಂದು ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ಪ್ರಧಾನಿ ಮೋದಿ ವಿದೇಶಕ್ಕೆ ಅಧಿಕೃತ ಭೇಟಿಗೆ  ತೆರಳುತ್ತಿರುವಾಗ ಅವರ ವಿಮಾನದ ಮೇಲೆ ಭ*ಯೋತ್ಪಾದಕರು ದಾ*ಳಿ ನಡೆಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇತರ ಸಂಸ್ಥೆಗಳಿಗೆ ಮಾಹಿತಿ ನೀಡಿ ತನಿಖೆ ಆರಂಭಿಸಿದ್ದರು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಸದ್ಯ ಭದ್ರತಾ ಪಡೆಗಳು ತನಿಖೆ ಆರಂಭಿಸಿದ್ದು, ಕರೆ ಮಾಡಿದವರ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಉಡುಪಿಯಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ

ಪ್ರಧಾನಿ ಮೋದಿ ಮೂರು ದಿನಗಳ ಫ್ರಾನ್ಸ್‌ ಪ್ರವಾಸದಲ್ಲಿದ್ದಾರೆ. ಅಲ್ಲಿಂದ ಅವರು ಎರಡು ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಲಿದ್ದಾರೆ. ಅಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ಭಾರತ – ಅಮೆರಿಕಾ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದಾರೆ.

Continue Reading

LATEST NEWS

ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ ಸಂಬಂಧಿಕರು

Published

on

ಮಧ್ಯಪ್ರದೇಶ: 19 ವರ್ಷದ ಯುವತಿಯ ಮೇಲೆ ಸಂಬಂಧಿಕರೇ ಆಕೆಯ ಮೇಲೆ ಆತ್ಯಾಚಾರ ಎಸಗಿ ದೌರ್ಜನ್ಯ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಈ ಅಪರಾಧದಲ್ಲಿ ಆರು ಜನರು ಭಾಗಿಯಾಗಿದ್ದರು. ಅವರಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 6 ಜನರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ 15 ಅಡಿ ಎತ್ತರದ ಟೆರೇಸ್‌ನಿಂದ ತಳ್ಳಿದ್ದಾರೆ.

ಸಂತ್ರಸ್ತೆಯು ಕಿರುಚಾಟವನ್ನು ಕೇಳಿ ಆಕೆಯ ಪೋಷಕರು ತಕ್ಷಣ ಹೊರಗೆ ಓಡಿ ಬಂದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣ 100 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸಂತ್ರಸ್ತೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಇದೀಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page