Connect with us

FILM

ಬರ್ಬರ ಹತ್ಯೆಯಾದ ಬ್ಯೂಟಿ ಕ್ವೀನ್.!! ಮುಳುವಾಯಿತಾ ಇನ್ಸ್ಟಾಗ್ರಾಮ್ ಪೋಸ್ಟ್‌..! ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ

Published

on

ಬ್ಯೂಟಿ ಕ್ವೀನ್ ಎಂದು ಕಿರೀಟ ಮುಡಿಗೇರಿಸಿಕೊಂಡವಳು ಎರಡೇ ವರ್ಷಕ್ಕೆ ಹಂತಕರ ಗುಂಡೇಟಿಕೆ ಬಲಿಯಾಗಿದ್ದಾಳೆ. ರೆಸ್ಟೋರೆಂಟ್‌ನಲ್ಲಿ ಆರಾಮವಾಗಿ ವಿರಾಮಿಸಿ ಬಗೆ ಬಗೆಯ ಸೀಫುಡ್ ಆರ್ಡರ್ ಮಾಡಿದ್ರು.  ಇನ್ನೇನು ಫುಡ್‌ಅನ್ನು ಆಹ್ಲಾದಿಸಬೇಕು ಅನ್ನೋವಷ್ಟರಲ್ಲಿ ದುರಂತ ಅಂದ್ರೆ ಹಂತಕರ ಗುಂಡೇಟಿಗೆ ಈ ಸುಂದರಿ ಬಲಿಯಾಗಿದ್ದಾರೆ.

23ವರ್ಷಕ್ಕೆ ಬ್ಯೂಟಿ ಕ್ವೀನ್ ಆದ ಲ್ಯಾಂಡಿ

ಲ್ಯಾಂಡಿ ಪರ್ರಾಗಾ ಗೊಯ್ಬುರೊ ತನ್ನ 23 ವರ್ಷಕ್ಕೆ ಬ್ಯೂಟಿ ಕ್ವೀನ್ ಕಿರೀಟವನ್ನು ಮುಡಿಗೇರಿಸಿಕೊಂಡವಳು. 2022ರ ಮಿಸ್‌ ಈಕ್ವೆಡಾರ್ ಸ್ಪರ್ಧೆಯಲ್ಲಿ ಬ್ಯೂಟಿ ಕ್ವೀನ್ ಆಗಿ ಲಕ್ಷಾಂತರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾಳೆ.  ಬಿಕಿನಿ ಕ್ವೀನ್ ಎಂದೆನಿಸಿಕೊಂಡ ಈಕೆ ಇನ್ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದಾಳೆ. ಹಲವು ಉದ್ಯಮಗಳನ್ನು ಕೂಡ ಈಕೆ ನಡೆಸುತ್ತಿದ್ದಳು.  ಲ್ಯಾಂಡಿ ಪರ್ರಾಗಾ ಸಾವಿನ ಸುದ್ದಿ ಕೇಳಿ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.

ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್‌ಗೆ ಏನಾಗಿದೆ? ಎಂದು ಹೇಳಿದ್ಯಾಕೆ?

ಸಾವಿಗೆ ಕಾರಣವಾದ ಇನ್ಸ್ಟಾಗ್ರಾಮ್ ಪೋಸ್ಟ್:

ಎ.28ರಂದು ಕ್ವೆವೆಡೊ ನಗರದ ರೆಸ್ಟೋರೆಂಟ್‌ವೊಂದಕ್ಕೆ ಲ್ಯಾಂಡಿ ತೆರಳಿದ್ದರು. ಈ ವೇಳೆ ವೆರೈಟಿ ಸೀ ಫುಡ್‌ಗಳನ್ನು ಆರ್ಡರ್ ಮಾಡಿದ್ದಾರೆ. ಫುಡ್‌ಗಳು ಟೇಬಲ್ ಮೇಲೆ ಬಂದ ಕೂಡಲೇ ಫೊಟೋ ಕ್ಲಿಕ್ಕಿಸಿ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೊಟೋ ಲ್ಯಾಂಡಿಯ ಪ್ರಾಣಕ್ಕೆ ಕುತ್ತು ತಂದಿತ್ತು. ಹಂತಕರು ಪೋಸ್ಟ್ ಮಾಡಿದ್ದ ಫೊಟೋದ ಜಾಲವನ್ನು ಹಿಡಿದು ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು ಲ್ಯಾಂಡಿ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾರೆ. ರೆಸ್ಟೋರೆಂಟ್‌ಗೆ ಬಂದ ದುಷ್ಕರ್ಮಿಗಳು ಲ್ಯಾಂಡಿ ಮೇಲೆ ಗನ್‌ನಿಂದ ಶೂಟ್ ಮಾಡಿ ಪರಾರಿಯಾಗಿದ್ದಾರೆ. ಈಕ್ವೆಡಾರ್‌ನ ಸುಂದರಿ ದುಷ್ಕರ್ಮಿಗಳ ಗುಂಡೇಟಿಗೆ ರಕ್ತದ ಮಡುವಿನಲ್ಲಿ ಬರ್ಬರವಾಗಿ  ಹತ್ಯೆಯಾಗಿದ್ದಾರೆ. ಹಂತಕರು ಈಕೆಯ ಇನ್ಸ್ಟಾಗ್ರಾಮ್‌ನ್ನು ಫಾಲೋ ಮಾಡಿ ಹತ್ಯೆ ಮಾಡಿದ್ದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ವೀಡಿಯೋ ರೆಸ್ಟೋರೆಂಟ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹತ್ಯೆಗೆ ಕಾರಣವೇನು ಎಂಬುದನ್ನು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು ವಿಶೇಷ ತಂಡ ರಚನೆ ಮಾಡಿದ್ದಾರೆ. 2023ರಲ್ಲಿ ಅಟಾರ್ನಿ ಜನರಲ್ ಕಚೇರಿಯಲ್ಲಿ ನಡೆದ ಸಂಘಟಿತ ಅಪರಾಧ ಪ್ರಕರಣದಲ್ಲಿ, ಡ್ರಗ್ ಕಳ್ಳ ಸಾಗಾಣಿಕೆಯಲ್ಲಿ ಲ್ಯಾಂಡಿ ಹೆಸರು ಕೇಳಿಬಂದಿತ್ತು. ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದ ತನ್ನ ಬಾಯ್‌ಫ್ರೆಂಡ್‌ನಿಂದ ದೂರಾಗಿದ್ದ ಲ್ಯಾಂಡ್ರಿಯ ಈ ನಿಗೂಢ ಬರ್ಬರ ಹತ್ಯೆಗೆ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ.

 

 

 

FILM

ನಟ ಸೋನು ಸೂದ್ ವಿರುದ್ದ ಬಂಧನ ವಾರೆಂಟ್ ಜಾರಿ

Published

on

ಮಂಗಳೂರು/ಪಂಜಾಬ್ : ಖ್ಯಾತ ಬಾಲಿವುಡ್ ನಟ ಸೋನು ಸೂದ್ ವಿರುದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ.

ಲೂಧಿಯಾನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಮಣಪ್ರೀತ್ ಕೌರ್ ಅವರು ವಾರೆಂಟ್ ಹೊರಡಿಸಿದ್ದಾರೆ. ಲುಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ವಿರುದ್ಧ 10 ಲಕ್ಷ ರೂ. ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಕಲಿ ರಿಜಿಕಾ ನಾಣ್ಯದಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ದೇಶದ್ರೋಹದ ಆರೋಪ; ಖ್ಯಾತ ನಟಿ ಅರೆಸ್ಟ್

ಸಾಕ್ಷ್ಯ ಹೇಳಲು ಸೋನು ಸೂದ್ ಅವರಿಗೆ ನ್ಯಾಯಾಲಯಕ್ಕೆ ಬರುವಂತೆ ಸೂಚಿಸಲಾಗಿತ್ತು. ಆದರೆ ಅವರು ಹಾಜರಾಗಲು ವಿಫಲರಾದ ಕಾರಣ ಬಂಧನ ವಾರೆಂಟ್ ಹೊರಡಿಸಲಾಗಿದೆ. ಸೋನು ಸೂದ್ ಅವರನ್ನು ಬಂಧಿಸುವಂತೆ ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಓಶಿವಾರಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಲುಧಿಯಾನ ನ್ಯಾಯಾಲಯವು ನಿರ್ದೇಶಿಸಿದೆ.ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು ಫೆ.10 ಕ್ಕೆ ಕೋರ್ಟ್ ನಿಗದಿಪಡಿಸಿದೆ.

ಸೋನು ಸೂದ್ ಪ್ರತಿಕ್ರಿಯೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದರ ಜೊತೆ ಮಾತನಾಡಿದ ಸೋನು ಸೂದ್, “ನಾನು ಯಾವುದಕ್ಕೂ ಬ್ರಾಂಡ್ ಅಂಬಾಸಿಡರ್ ಅಲ್ಲ, ನಾನು ಈಗಾಗಲೇ ನನ್ನ ವಕೀಲರ ಮೂಲಕ ಉತ್ತರಿಸಿದ್ದೇನೆ ಮತ್ತು ಫೆಬ್ರವರಿ 10 ರಂದು ಮತ್ತೆ ಉತ್ತರ ನೀಡುತ್ತೇನೆ. ಈ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದೆಲ್ಲ ಏನೆಂದು ನನಗೂ ತಿಳಿದಿಲ್ಲ. ಕೆಲವರು ಬೇಕೆಂದೇ ಮಾನ ಹರಾಜು ಹಾಕಲು ಈ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಆದರೆ ಇದಕ್ಕೆಲ್ಲ ನಾನು ಹೆದರುವುದಿಲ್ಲ” ಎಂದು ಹೇಳಿದ್ದಾರೆ.

Continue Reading

FILM

ದೇಶದ್ರೋಹದ ಆರೋಪ; ಖ್ಯಾತ ನಟಿ ಅರೆಸ್ಟ್

Published

on

ಮಂಗಳೂರು/ಬಾಂಗ್ಲಾ : ಮಾಜಿ ಅಧ್ಯಕ್ಷ ಶೇಕ್ ಮುಜಿಬುರ್ ರೆಹಮಾನ್ ಮನೆಗೆ ಬಾಂಗ್ಲಾದೇಶದಲ್ಲಿ ಗಲಭೆ ಮತ್ತೆ ಭುಗಿಲೆದ್ದ ಹಿನ್ನಲೆ ಬೆಂಕಿ ಹಚ್ಚಲಾಗಿತ್ತು. ಇದರಿಂದ ಇಡೀ ಬಾಂಗ್ಲಾದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಆಗಿದ್ದು, ಇದೀಗ ದೇಶದ್ರೋಹದ ಆರೋಪದ ಮೇಲೆ ಬಾಂಗ್ಲಾ ನಟಿ ಮೆಹರ್ ಅಫ್ರೋಜ್ ಶಾನ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ದೇಶದ್ರೋಹದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದ ಕಾರಣ ಭಾನುವಾರ (ಫೆ. 2) ರಾತ್ರಿ ಮೆಹರ್‌ನನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರೆಜಾಲ್ ಕರೀಂ ಮಲ್ಲಿಕ್ ಹೇಳಿದ್ದಾರೆ. ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವನ್ನು ಅವರು ಟೀಕಿಸಿದ್ದರು ಎನ್ನಲಾಗಿದ್ದು, ಈ ವಿಷಯದ ಕುರಿತು ಪ್ರಶ್ನೆ ಮಾಡಲಾಗುತ್ತಿದೆ.

 

ಇದನ್ನೂ ಓದಿ : ಮಂಗಳೂರು : ಹೆಂಡತಿಯನ್ನು ಕೊಲೆಗೈದ ಪ್ರಕರಣ; ಗಂಡನಿಗೆ ಜೀವಾವಧಿ ಶಿಕ್ಷೆ..

 

ಮನೆ ದಾಳಿ :

ಮೆಹರ್ ಬಂಧನಕ್ಕೂ ಮೊದಲು ಬಾಂಗ್ಲಾದ ಜಮಲ್​ಪುರದ ಮನೆಯ ಮೇಲೆ ದಾಳಿ ನಡೆಸಿ ಎಲ್ಲಾ ವಸ್ತುಗಳನ್ನು ಹಾಳು ಮಾಡಿದ್ದಾರೆ. ಮೆಹರ್ ಅವರ ಕುಟುಂಬ ಆ ಮನೆಯಲ್ಲಿ ವಾಸವಾಗಿದ್ದು, ಮೆಹರ್ ತಂದೆ ಇಂಜಿನಿಯರ್ ಮೊಹಮದ್ ಅಲಿಗೆ ಸೇರಿದೆ. ಸದ್ಯ ಪೊಲೀಸರು ಈ ವಿಷಯವನ್ನು ಸೂಕ್ಷ್ಮ ರೀತಿಯಲ್ಲಿ ತನಿಖೆ ನಡೆದುತ್ತಿದ್ದಾರೆ.

Continue Reading

FILM

ವೈರಲ್ ಪೋಸ್ಟ್ ನೋಡಿ ಅಭಿಮಾನಿಗಳಿಗೆ ಆಘಾತ; ಎರಡೇ ತಿಂಗಳಲ್ಲಿ ಪತಿಗೆ ಶಾಕ್ ಕೊಟ್ರಾ ಕೀರ್ತಿ ಸುರೇಶ್ ?

Published

on

ಮಂಗಳೂರು : ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನ ಸುಂದರ ಕ್ಷಣ. ತಮ್ಮ ಬ್ಯೂಟಿ ಹಾಗೂ ನಟನೆಯ ಕೌಶಲ್ಯದಿಂದ ಪ್ರಖ್ಯಾತಿ ಪಡೆದಿರುವ ನಟಿ ಎಂದರೆ ಅದವೇ ಕೀರ್ತಿ ಸುರೇಶ್.  ತಮ್ಮ ಪ್ರೀತಿಯ ವಿಷಯವನ್ನು ಖಾಸಗಿಯಾಗಿಟ್ಟಿದ ಕೀರ್ತಿ ಸುರೇಶ್ ಸಂದರ್ಶನವೊಂದರಲ್ಲಿ ಮದುವೆಯ ನಂತರ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು.

ಕೀರ್ತಿ ಸುರೇಶ್ ಡಿಸೆಂಬರ್ 12 ರಂದು ಗೋವಾದಲ್ಲಿ ತನ್ನ ಗೆಳೆಯನನ್ನು ವಿವಾಹವಾದರು. ಅವರ ಡೆಸ್ಟಿನೇಷನ್ ವೆಡ್ಡಿಂಗ್ ಡಿಸೆಂಬರ್ 11-12 ರಂದು ಗೋವಾದಲ್ಲಿ ನಡೆಯಿತು. ಕೀರ್ತಿ ಸುರೇಶ್ ಮೊದಲು ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹವಾದರು, ಮತ್ತು ನಂತರ ಅವರ ಪತಿ ಆಂಟನಿ ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ಈ ಸಂದರ್ಭದಲ್ಲಿ ಕೀರ್ತಿ ಸುರೇಶ್ ತಮ್ಮ ಪತಿಗೆ ಲಿಪ್ ಲಾಕ್ ನೀಡಿದ್ದ ಪೋಟೋ ಭಾರೀ ವೈರಲ್‌ ಆಗಿತ್ತು.

ಮದುವೆಯ ಸಂಭ್ರಮ ಮುಗಿದ ನಂತರ, ಕೀರ್ತಿ ಸುರೇಶ್ ತಮ್ಮ ಸಿನಿಮಾ ಚಿತ್ರೀಕರಣಕ್ಕೆ ಮರಳಿದ್ದಾರೆ. ಕೀರ್ತಿ ಈ ವರ್ಷ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು ಗೊತ್ತೇ ಇದೆ. ಅವರು ಬಾಲಿವುಡ್‌ನ ಯುವ ನಾಯಕ ವರುಣ್ ಧವನ್ ಜೊತೆಗೆ ಬೇಬಿ ಜಾನ್ ಚಿತ್ರದಲ್ಲಿ ನಟಿಸಿದ್ದರು. ಆದರೆ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತಿತ್ತು. ಇದರಿಂದ ಕೀರ್ತಿ ಸುರೇಶ್ ನಿರಾಶೆಗೊಂಡಿದ್ದರು.

ಇದನ್ನೂ ಓದಿ: ಹನುಮಂತನಿಗೆ SSLC ಅಲ್ಲಿ ಸಿಕ್ಕಿರೋ ಅಂಕ ಎಷ್ಟು ಗೊತ್ತಾ..?

ಸತತವಾಗಿ ಈ ಸಿನಿಮಾ ಪ್ರಮೋಷನ್‌ಗೆ ಹೋದಾಗ ಎಂತಹ ಮಾಡರ್ನ್‌ ಡ್ರೆಸ್‌ ಇದ್ದರೂ ಕೀರ್ತಿ ತಾಳಿ ಧರಿಸಿದ್ದರು. ಇದನ್ನು ನೋಡಿದ ನೆಟ್ಟಿಗರು ಅವರನ್ನು ಹೊಗಳಿದ್ದರು. ಆದರೆ, ಈಗ ಅವರು ಕುತ್ತಿಗೆಯಲ್ಲಿ ತಾಳಿ ಇಲ್ಲದೆ ಕಾಣಿಸಿಕೊಂಡಿದ್ದಾರೆ.

ಹೌದು ಕೀರ್ತಿ ಸುರೇಶ್ ಇತ್ತೀಚೆಗೆ ತಮ್ಮ ಪತಿ ಜೊತೆಗಿನ ಫೋಟೋಶೂಟ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ, ಕೀರ್ತಿ ಕುತ್ತಿಗೆಯಲ್ಲಿ ಮಂಗಳಸೂತ್ರವಿಲ್ಲದೇ ಕಾಣಿಸಿಕೊಂಡರು. ಇದರಿಂದಾಗಿ ನೆಟ್ಟಿಗರು ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ತಾಳಿಗೆ ಎಕ್ಸಪೈರ್ ಡೇಟ್ ಆಗಿದೆ.  ಕೀರ್ತಿ ಸುರೇಶ್ ಅವರ ಕುತ್ತಿಗೆಯಲ್ಲಿ ಕೇವಲ ಎರಡು ತಿಂಗಳಲ್ಲೇ ತಾಳಿ ಮಾಯವಾಗಿದೆಯೇ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page