Connect with us

LATEST NEWS

ವಸತಿ ಶಾಲೆಯಲ್ಲಿ ವಿ*ಷಪೂರಿತ ಆಹಾರ ಸೇವಿಸಿ 80 ಮಕ್ಕಳು ಅಸ್ವ*ಸ್ಥ

Published

on

ಉತ್ತರಪ್ರದೇಶ: ವಸತಿ ಶಾಲೆಯಲ್ಲಿ ವಿ*ಷಪೂರಿತ ಆಹಾರ ಸೇವಿಸಿದ 80 ಮಂದಿ ಮಕ್ಕಳು ಅಸ್ವ*ಸ್ಥಗೊಂಡಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ.

ಜಿಲ್ಲೆಯ ಮೆಹರೂನಾ ಗ್ರಾಮದ ಪಂಡಿತ್ ದೀನದಯಾಳ್ ಉಪಾಧ್ಯಾಯ ಆಶ್ರಮದಲ್ಲಿ 80 ಮಕ್ಕಳು ಹೊಟ್ಟೆನೋವಿನ ದೂರು ನೀಡಿದ್ದಾರೆ. ರಾತ್ರಿ ಮಕ್ಕಳು ಊಟ ಮಾಡಿದ ನಂತರ ವಾಂತಿ, ಭೇದಿ, ಹೊಟ್ಟೆ ನೋವು, ತಲೆಸುತ್ತು, ನೆಗಡಿ ಕಾಣಿಸಿಕೊಂಡಿತು ಎಂದು ಅವರು ತಿಳಿಸಿದ್ದಾರೆ.

ಘಟನೆಯ ಕುರಿತು ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸ್ಥಿತಿ ಸ್ಥಿರವಾಗಿದೆ. ಆಕಾಶ್ ಮತ್ತು ನಿತೇಶ್ ಎಂಬ ಇಬ್ಬರು ವಿದ್ಯಾರ್ಥಿಗಳು ಮಹರ್ಷಿ ದೇವ್ರಹಾ ಬಾಬಾ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಮುಖ್ಯ ವೈದ್ಯಕೀಯ ಅಧಿಕಾರಿ (CMO) ನೇತೃತ್ವದ ವೈದ್ಯರ ತಂಡದಿಂದ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದು, ಮುನ್ನೆಚ್ಚರಿಕೆಯಾಗಿ ವೈದ್ಯಕೀಯ ತಂಡ ಶಾಲೆಯಲ್ಲಿ ಉಳಿದಿದೆ ಎಂದು ಹೇಳಿಕೆ ತಿಳಿಸಿದೆ. ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ ಬ್ರೆಡ್, ಮಸೂರ, ತರಕಾರಿಗಳು, ಮೆಣಸಿನ ಪುಡಿ, ಕಡಲೆ, ಸಾಸಿವೆ ಎಣ್ಣೆ ಮತ್ತು ಮಿಶ್ರ ಉಪ್ಪಿನಕಾಯಿ ಸೇರಿದಂತೆ ಏಳು ಮಾದರಿಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸಿದ್ದಾರೆ. ಮಾದರಿಗಳನ್ನು ಪರೀಕ್ಷೆಗಾಗಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಮತ್ತು ಫಲಿತಾಂಶಗಳ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಹಾಯ್ ಹೇಳಿದರು.

FILM

ಟ್ರೆಂಡ್ ಬದಿಗಿಟ್ಟು ಮಗಳಿಗೆ ಅರ್ಥಗರ್ಭಿತ ಹೆಸರಿಟ್ಟ ನಟಿ ನೇಹಾ ಗೌಡ; ವ್ಹಾವ್ ಅಂದ್ರು ಫ್ಯಾನ್ಸ್!

Published

on

ಮಂಗಳೂರು/ಬೆಂಗಳೂರು : ಲಕ್ಷ್ಮೀ ಬಾರಮ್ಮ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ನಟಿ ನೇಹಾ ಗೌಡ. ಗೊಂಬೆ ಎಂದೇ ಖ್ಯಾತರಾಗಿದ್ದರು ನೇಹಾ. ಅದಾದ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 9 ರ ಶೋ ಮೂಲಕನೂ ಗಮನ ಸೆಳೆದಿದ್ದರು. ಅವರ ಪತಿ ಚಂದನ್ ಕೂಡ ‘ಅಂತರಪಟ’ ಧಾರಾವಾಹಿಯಲ್ಲಿ ನಟಿಸಿ ಮನೆ ಮಾತಾಗಿದ್ದರು. ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ನಾಮಕರಣ ಶಾಸ್ತ್ರ ಅದ್ದೂರಿಯಾಗಿ ನಡೆದಿದೆ.

ಬೆಂಗಳೂರಿನಲ್ಲಿ ಅದ್ದೂರಿ ಸಮಾರಂಭ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಕಿರುತೆರೆ, ಹಿರಿತೆರೆ ಕಲಾವಿದರು ಆಗಮಿಸಿ ಶುಭ ಹಾರೈಸಿದರು.

ವಿಶೇಷ ಅಂದ್ರೆ ಟ್ರೆಂಡ್ಸ್‌ ಬದಿಗಿಟ್ಟು ನೇಹಾ ದಂಪತಿ ಚಂದದ ಹೆಸರೊಂದನ್ನು ಮಗಳಿಗಿಟ್ಟಿದ್ದಾರೆ. ಇತ್ತೀಚೆಗೆ ವಿಭಿನ್ನ ಹೆಸರುಗಳದೇ ರಾಯಭಾರವಾಗಿರುವಾಗ ನೇಹಾ – ಚಂದನ್ ಮಾತ್ರ ಅರ್ಥಪೂರ್ಣವಾಗಿರುವ ಹೆಸರಿಟ್ಟಿದ್ದಾರೆ.

ಹೌದು, ಈ ದಂಪತಿ ಮಗುವಿಗೆ ಇಟ್ಟಿರುವ ಹೆಸರು ‘ಶಾರದಾ’. ದಂಪತಿ ನಿಲುವಿಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಶುಭ ಹಾರೈಸುತ್ತಿದ್ದಾರೆ.

ಇದನ್ನೂ ಓದಿ : ಸಿಕಂದರ್ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಒಬ್ಬರೇ ಅಲ್ಲ..! ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಕನ್ನಡಿಗ..?

ಬಾಲ್ಯದಲ್ಲೇ ಪ್ರೀತಿಯಲ್ಲಿ ಬಿದ್ದಿದ್ದ ನೇಹಾ – ಚಂದನ್ 2018ರಲ್ಲಿ ವಿವಾಹವಾಗಿದ್ದರು. ಕಳೆದ ವರ್ಷ ಅಕ್ಟೋಬರ್‌ 29ರಂದು ನೇಹಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

Continue Reading

LATEST NEWS

ಬಾಂಗ್ಲಾ ಕ್ರಿಕೆಟ್‌ ಆಟಗಾರನಿಗೆ ಹೃದಯಾಘಾತ!

Published

on

ಮಂಗಳೂರು/ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ಆಟಗಾರ, ಮಾಜಿ ನಾಯಕ ತಮೀಮ್ ಇಕ್ಬಾಲ್ ಅವರಿಗೆ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.


ಢಾಕಾ ಪ್ರೀಮಿಯರ್ ಲೀಗ್ ಪಂದ್ಯವಾಡುತ್ತಿರುವ ವೇಳೆ ಇಕ್ಬಾಲ್ ಅವರಿಗೆ ಎದೆ ನೋವು ಕಾಣಸಿಕೊಂಡಿದೆ. ಮೊಹಮ್ಮದನ್ ಸ್ಪೋರ್ಟ್ಸ್ ಕ್ಲಬ್ ಮತ್ತು ಶಿನೆಪುಕರ್ ಕ್ರಿಕೆಟ್ ಕ್ಲಬ್ ನಡುವೆ ಪಂದ್ಯ ನಡೆಯುತ್ತಿತ್ತು. ಈ ಪಂದ್ಯದಲ್ಲಿ ಪಾಲ್ಗೊಂಡಿದ್ದ ತಮೀಮ್ ಇಕ್ಬಾಲ್‌ಗೆ ಇದ್ದಕ್ಕಿದ್ದಂತೆಯೇ ಎದೆನೋವು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಆರಂಭದಲ್ಲಿ ಅವರನ್ನು ಹೆಲಿಕಾಪ್ಟರ್ ಮೂಲಕ ಢಾಕಾಗೆ ಏರ್‌ಲಿಫ್ಟ್ ಮಾಡಲು ವ್ಯವಸ್ಥೆ ಮಾಡಲಾಗಿತ್ತು, ಆದರೆ ಅವರನ್ನು ಬಿಕೆಎಸ್‌ಪಿ ಮೈದಾನದಿಂದ ವಿಮಾನದಲ್ಲಿ ಕರೆದೊಯ್ಯಲು ಸಾಧ್ಯವಾಗಲಿಲ್ಲ. ನಂತರ ಅವರನ್ನು ಚಿಕಿತ್ಸೆಗಾಗಿ ಫಜಿಲತುನ್ನೆಸ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ: ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಸಿಎಸ್‌ಕೆ ಆಟಗಾರರು; ವೈರಲ್ ಆಯ್ತು ವೀಡಿಯೋ

‘ಆಸ್ಪತ್ರೆಯಲ್ಲಿ ಆರಂಭಿಕ ತಪಾಸಣೆ ನಡೆಸಿದ ವೇಳೆ ತಮೀಮ್ ಅವರಿಗೆ ಸಣ್ಣ ಪ್ರಮಾಣದಲ್ಲಿ ಹೃದಯಾಘಾತವಾಗಿರುವುದು ಕಂಡುಬಂದಿತ್ತು. ಹೀಗಾಗಿ ಢಾಕಾಗೆ ಏರ್‌ಲಿಫ್ಟ್ ಮಾಡಲು ಯೋಜಿಸಲಾಗಿತ್ತು. ಆದರೆ ಹೆಲಿಪ್ಯಾಡ್‌ಗೆ ಕರೆದೊಯ್ಯುವ ವೇಳೆ ಮತ್ತೆ ತೀವ್ರವಾಗಿ ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ವಾಪಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ತಮೀಮ್ ಅವರಿಗೆ ತೀವ್ರವಾದ ಹೃದಾಯಾಘಾತವಾಗಿದೆ. ವೈದ್ಯಕೀಯ ತಂಡ ಸಾಧ್ಯವಿರುವ ಎಲ್ಲಾ ರೀತಿಯ ಚಿಕಿತ್ಸೆ ನೀಡುತ್ತಿದೆ’ ಎಂದು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್‌ ಮುಖ್ಯ ವೈದ್ಯ ಡಾ.ದೆಬಾಶಿಶ್ ಚೌಧರಿ ಹೇಳಿದ್ದಾರೆ.

ತಮಿಮ್ ಇಕ್ಬಾಲ್ ಇದೇ ಜನವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದರು. ಬಾಂಗ್ಲಾದೇಶ ಪರ 243 ಏಕದಿನ, 70 ಟೆಸ್ಟ್ ಹಾಗೂ 78 ಟಿ20 ಪಂದ್ಯಗಳನ್ನಾಡಿ ಒಟ್ಟಾರೆ 15 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಮೂರು ಮಾದರಿಯ ಕ್ರಿಕೆಟ್‌ನಿಂದ ತಮೀಮ್ ಇಕ್ಬಾಲ್ ಬರೋಬ್ಬರಿ 25 ಶತಕ ಸಿಡಿಸಿದ್ದಾರೆ. ಈ ಮೂಲಕ ಬಾಂಗ್ಲಾದೇಶ ಪರ ಗರಿಷ್ಠ ಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ತಮಿಮ್ ಇಕ್ಬಾಲ್ ಹೆಸರಿನಲ್ಲಿದೆ.

Continue Reading

LATEST NEWS

ಕೇರಳ ಬಿಜೆಪಿ ಅಧ್ಯಕ್ಷರಾಗಿ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ನೇಮಕ

Published

on

ಮಂಗಳೂರು/ತಿರುವನಂತಪುರಂ : ಕೇರಳ ರಾಜ್ಯದ ಬಿಜೆಪಿ ಅಧ್ಯಕ್ಷರು ಯಾರಾಗ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಬಿಜೆಪಿ ಕೇರಳ ರಾಜ್ಯದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೋಮವಾರ (ಮಾ. 24) ತಿರುವನಂತಪುರದಲ್ಲಿ ನಡೆದ ಬಿಜೆಪಿ ರಾಜ್ಯ ಪರಿಷತ್ ಸಭೆಯಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷ ಕೆ.ಸುರೇಂದ್ರನ್ ಮತ್ತು ರಾಜ್ಯ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಸೇರಿದಂತೆ ಬಿಜೆಪಿಯ ಅನೇಕ ರಾಜ್ಯ ನಾಯಕರು ಉಪಸ್ಥಿತರಿದ್ದರು. ಸುರೇಂದ್ರನ್ ಅವರು ಪಕ್ಷದ ಧ್ವಜವನ್ನು ಚಂದ್ರಶೇಖರ್ ಅವರಿಗೆ ವೇದಿಕೆಯಲ್ಲಿ ಹಸ್ತಾಂತರಿಸಿದರು.

ಚಂದ್ರಶೇಖರ್ ಅವರು ಈ ಹುದ್ದೆಗೆ ಏಕೈಕ ನಾಮನಿರ್ದೇಶಿತರಾಗಿದ್ದರು. ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಭಾನುವಾರ(ಮಾ.23)  ನಾಮಪತ್ರ ಸಲ್ಲಿಸಿದ್ದರು.

ರಾಜೀವ್ ಚಂದ್ರಶೇಖರ್ ಬಗ್ಗೆ :

ಕೇರಳ ಸ್ಥಳೀಯ ಚುನಾವಣೆಗೂ ಮುನ್ನ ರಾಜೀವ್ ಚಂದ್ರಶೇಖರ್ ಹೆಗಲಿಗೆ ಹೊಸ ಜವಾಬ್ದಾರಿ ಕೊಡಲಾಗಿದೆ. ರಾಜೀವ್ ಚಂದ್ರಶೇಖರ್ ಗುಜರಾತ್‌ನ ಅಹಮದಾಬಾದ್‌ನವರು. ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ, ಕೇರಳ ಎನ್‌ಡಿಎ ಘಟಕದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅವರು ಮೋದಿ ಸಂಪುಟದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ , ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಮತ್ತು ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವರಾಗಿದ್ದರು.

ಚಂದ್ರಶೇಖರ್ ಏಪ್ರಿಲ್ 2006 ರಿಂದ ಏಪ್ರಿಲ್ 2018 ರ ವರೆಗೆ ಕರ್ನಾಟಕವನ್ನು ಪ್ರತಿನಿಧಿಸುವ ರಾಜ್ಯಸಭೆಯ ಸ್ವತಂತ್ರ ಸದಸ್ಯರಾಗಿದ್ದರು. ಏಪ್ರಿಲ್ 2018 ರಲ್ಲಿ ಬಿಜೆಪಿ ಸದಸ್ಯರಾಗಿ ಮೂರನೇ ಆರು ವರ್ಷಗಳ ಅವಧಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಮರು ಆಯ್ಕೆಯಾದರು.

ಇದನ್ನೂ ಓದಿ : ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಸಿಎಸ್‌ಕೆ ಆಟಗಾರರು; ವೈರಲ್ ಆಯ್ತು ವೀಡಿಯೋ

ಅಂದ್ಹಾಗೆ ರಾಜೀವ್ ಚಂದ್ರಶೇಖರ್ 2024ರ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂನಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿರುದ್ಧ 16,077 ಮತಗಳಿಂದ ಸೋತಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page