Connect with us

LATEST NEWS

ಸೌದಿ ಅರೇಬಿಯಾದಲ್ಲಿ ಒಂಟೆಗಳಿಗೆ ಕಾರು ಡಿಕ್ಕಿ : ಇಬ್ಬರು ಮಕ್ಕಳು- ಮಹಿಳೆ ಸೇರಿ 8 ಮಂದಿ ದಾರುಣ ಮೃತ್ಯು..!!

Published

on

ಸೌದಿ ಅರೇಬಿಯಾ(saudi arabia) ದಲ್ಲಿ 2 ಪ್ರತೇಕ ಅಪಘಾತದಲ್ಲಿ ಕಾರು ಒಂಟೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು, ಒರ್ವ ಮಹಿಳೆ ಸೇರಿ 8 ಮಂದಿ ದಾರುಣವಾಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ರಿಯಾದ್: ಸೌದಿ ಅರೇಬಿಯಾ(saudi arabia) ದಲ್ಲಿ 2 ಪ್ರತೇಕ ಅಪಘಾತದಲ್ಲಿ ಕಾರು ಒಂಟೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು, ಒರ್ವ ಮಹಿಳೆ ಸೇರಿ 8 ಮಂದಿ ದಾರುಣವಾಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೊದಲ ಪ್ರಕರಣ ರಿಯಾದ್ ಪ್ರಾಂತ್ಯದ ಅಫ್ಲಾಜ್ ನಲ್ಲಿ ಸಂಭವಿಸಿದ್ದು ಅಪಘಾತದಲ್ಲಿ ಐದು ಯುವಕರು ಸಾವನ್ನಪ್ಪಿದ್ದಾರೆ.

ಅಲ್ ಅಹ್ಮರ್-ಲೈಲಾ ರಸ್ತೆಯ ಅಫ್ಲಾಜ್ನಿಂದ 30 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ.

ಅಪಘಾತಕ್ಕೀಡಾದ ಕಾರಿನಲ್ಲಿದ್ದ ಯಾವುದೇ ಪ್ರಯಾಣಿಕರು ಬದುಕುಳಿಯಲಿಲ್ಲ.ಅಲ್-ಅಹ್ಮರ್ ಪುರಸಭೆಯು ರಸ್ತೆಯ ಹೆಚ್ಚಿನ ಪ್ರದೇಶಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಿದೆ.

ಆದಾಗ್ಯೂ, ಒಂಟೆ ಸಾಕಾಣಿಕೆ ಕೇಂದ್ರಗಳ ಬಳಿ ಹಾದುಹೋಗುವ ಅಲ್ ಅಹ್ಮರ್-ಲೈಲಾ ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯವಾಗಿದೆ.

ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪದೇ ಪದೇ ಸಂಭವಿಸುವ ಅಪಘಾತಗಳನ್ನು ತಡೆಗಟ್ಟಲು ಅಲ್ ಅಹ್ಮರ್-ಲೈಲಾ ರಸ್ತೆಯ ಉಳಿದ ಭಾಗಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕೆಂದು ನಿವಾಸಿಗಳು ಒತ್ತಾಯಿಸುತ್ತಿದ್ದಾರೆ.

ಮತ್ತೊಂದು ಪ್ರಕರಣ ಮದೀನಾ ರಸ್ತೆಯಲ್ಲಿ ಸಂಭವಿಸಿದೆ, ಹೆದ್ದಾರಿಯಲ್ಲಿದ್ದ ಒಂಟೆಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿರುವಾಗ ಕುಟುಂವೊಂದು ಪ್ರಯಾಣಿಸುತ್ತಿದ್ದ ವಾಹನ ಪಲ್ಟಿಯಾದ ಕಾರಣ ಕಾರಲ್ಲಿದ್ದ ಯೆಮೆನ್ ಮೂಲದ ಗರ್ಭಿಣಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಯೆಮೆನ್ ಮೂಲದ ಕುಟುಂಬವು ಬಿಶಾದಲ್ಲಿ ಮದುವೆಯಲ್ಲಿ ಭಾಗವಹಿಸಿದ ನಂತರ ಮದೀನಾಕ್ಕೆ ಪ್ರಯಾಣಿಸುತ್ತಿತ್ತು.

ಇದ್ದಕ್ಕಿದ್ದಂತೆ, ದಾರಿತಪ್ಪಿ ಒಂಟೆಗಳು ರಸ್ತೆಗಳನ್ನು ದಾಟುತ್ತಿರುವುದು ಕಂಡುಬಂದಿತು. ಆಗ ಒಂಟೆಗಳನ್ನು ತಪ್ಪಿಸಲು ನೋಡಿದಾಗ ಕಾರು ಪಲ್ಟಿಯಾಗಿದೆ.  ಕಾರಿನಲ್ಲಿದ್ದ ಇಬ್ಬರು ಮಕ್ಕಳು ಮತ್ತು ಗರ್ಭಿಣಿ ದಾರುಣವಾಗಿ ಅಂತ್ಯ ಕಂಡಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

BANTWAL

ಕಸ ತಂದು ಹಾಕುವ ದಿವ್ಯ ಆತ್ಮಗಳಿಗೆ ಶ್ರದ್ಧಾಂಜಲಿ ಅರ್ಪಣೆ-ಕಲ್ಲಡ್ಕದಲ್ಲಿ ಬ್ಯಾನರ್ ಕಂಡು ಶಾಕ್ ಆದ ಜನತೆ

Published

on

ಬಂಟ್ವಾಳ: ಇಲ್ಲಿ ಕಸ ತಂದು ಹಾಕುವ ದಿವ್ಯ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ, ಈ ಕಸದಂತೆಯೇ ನಿಮ್ಮ ಜೀವನವೂ ಆದಷ್ಟು ಬೇಗನೇ ಕೊಳೆತು ಹೋಗಲಿ…..ಹೀಗೊಂದು ಬ್ಯಾನರ್ ರಾರಾಜಿಸುತ್ತಿರುವುದು ಕಲ್ಲಡ್ಕ ಪೇಟೆಯಲ್ಲಿ. ಕಲ್ಲಡ್ಕ ಜಂಕ್ಷನ್ ನ ಕಮಲಾ ಕಾಂಪ್ಲೆಕ್ಸ್ ನ ಮುಂಭಾಗದಲ್ಲಿ ಇರುವ ವಿದ್ಯುತ್ ಕಂಬಕ್ಕೆ ಇಂಥದ್ದೊಂದು ಬ್ಯಾನರನ್ನು ಕಟ್ಟಿ ಹಾಕಲಾಗಿದೆ.

ಜನನಿಬಿಡ ಪ್ರದೇಶವಾಗಿರುವ ಕಲ್ಲಡ್ಕ ಕಮಲಾ ಕಾಂಪ್ಲೆಕ್ಸ್ ನಲ್ಲಿರುವ ಕೆ.ಟಿ.ಹೋಟೆಲ್ ನ ಮುಂಭಾಗದಲ್ಲಿ ಕಸವನ್ನು ತಂದು ಹಾಕಿ ಹೋಗುತ್ತಿದ್ದರು. ಕಮಲಾ ಕಾಂಪ್ಲೆಕ್ಸ್ ‌ನಲ್ಲಿ ಚಿಕಿತ್ಸಾಲಯ, ಹೋಟೆಲ್, ಬ್ಯಾಂಕ್ ಹಾಗೂ ಹತ್ತಿರದಲ್ಲಿ ಶ್ರೀರಾಮಮಂದಿರ ಇದ್ದು  ನಿತ್ಯ ಬೆಳಿಗ್ಗೆ ಇಲ್ಲಿ ಕಸದ ರಾಶಿ ಕೊಳೆತು ವಾಸನೆ ಬರುತ್ತಿತ್ತು.

ಜನರು ನಿತ್ಯ ಓಡಾಡುವ ಜಾಗದಲ್ಲಿ ಕಸವನ್ನು ಹಾಕಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದನ್ನು ಕಂಡು ಸಾರ್ವಜನಿಕರೇ ಬ್ಯಾನರ್ ಅಳವಡಿಸಿದ್ದಾರೆ. ಕಸ ತಂದು ಹಾಕುವವರನ್ನು ತಡೆಯಲು ಸಾಧ್ಯವಾಗದೆ ಅತ್ಯಂತ ನೋವಿನಿಂದ ಇಲ್ಲಿ‌ನ‌ ಸಾರ್ವಜನಿಕರು ನೋವು ತರುವ ಬರಹವನ್ನು ಬ್ಯಾನರ್ ನಲ್ಲಿ ಮುದ್ರಿಸಿ ಹಾಕಿದ್ದಾರೆ. ಬ್ಯಾನರ್ ಬರಹ ನೋಡಿದ ಜನರು  ಒಂದು ಕ್ಷಣ ನಿಬ್ಬೆಗೆರಗಾಗುವುದು ಮಾತ್ರ ಅಷ್ಟೇ ಸತ್ಯ.

Continue Reading

LATEST NEWS

ಪರ್ಯಾಯ ಮೆರವಣಿಗೆಗೆ ಭಗವಾಧ್ವಜ ಮೂಲಕ ಚಾಲನೆ ಕೊಟ್ಟಿದ್ದು, ಪಾಕಿಸ್ತಾನ ಧ್ವಜ ಹಿಡಿದಲ್ಲ-ಶಾಸಕ ಯಶ್ಪಾಲ್

Published

on

ಉಡುಪಿ: ಉಡುಪಿ ಪರ್ಯಾಯ ಮಹೋತ್ಸವಕ್ಕೆ ಜಿಲ್ಲಾಧಿಕಾರಿಗಳು ಕೇಸರಿ ಧ್ವಜ ತೋರಿಸಿ ಚಾಲನೆ ನೀಡಿರುವ ವಿಚಾರ ವಿವಾದವಾಗಿ ಮಾರ್ಪಟ್ಟಿದೆ. ಇದಕ್ಕೆ ಈಗಾಗಲೇ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ನಗರಸಭೆಯ ಆಡಳಿತ ಅಧಿಕಾರಿಯಾಗಿದ್ದ ಹಿನ್ನೆಲೆಯಲ್ಲಿ ತಾನು ಭಾಗಿಯಾಗಿದ್ದೇನೆ ವಿನಃ ಯಾವುದೇ ರಾಜಕೀಯ ಕಾರಣಗಳಿಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ಜಿಲ್ಲಾಧಿಕಾರಿ ಕೈಗೆ ಕೇಸರಿ ಧ್ವಜ ಕೊಟ್ಟಿರುವ ಉಡುಪಿ ಶಾಸಕ ಯಶಪಾಲ್  ಸುವರ್ಣ ಅವರು ಜಿಲ್ಲಾಧಿಕಾರಿ ಸ್ವರೂಪ ಪರ ಮಾತನಾಡಿದ್ದಾರೆ.

ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಆಕ್ಷೇಪಕ್ಕೆ ಅರ್ಥ ಇಲ್ಲ, ಪರ್ಯಾಯ ಮೆರವಣಿಗೆ ಭಗವಾಧ್ವಜ ಮೂಲಕ ಚಾಲನೆ ಕೊಟ್ಟಿದ್ದಾರೆ. ಹಿಂದೆಯೂ ಕೂಡ ಇದೇ ರೀತಿ ಚಾಲನೆ ನೀಡಲಾಗುತ್ತಿತ್ತು. ಒಂದು ವೇಳೆ ಅವರು ಪಾಕಿಸ್ತಾನ ಧ್ವಜ ಕೊಟ್ಟಿದ್ದರೆ ಟೀಕೆ ಮಾಡಬೇಕಿತ್ತು. ಡಿಸಿ ಅವರ ಸ್ಥಾನದಲ್ಲಿ ಅಂದು ನಮಗೆ ಉಸ್ತುವಾರಿ ಸಚಿವರು ಲಭಣ್ಯವಿರುತ್ತಿದ್ದರೆ ಅವರಿಮದಲೇ ಭಗವಾಧ್ವ ಹಜ ಮೂಲಕ ಚಾಲನೆ ನೀಡುತ್ತಿದ್ದೆವು. ಆವಾ್ಗಲೂ ಇವರು ಇದೇ ರೀತಿ ಅವರನ್ನು ರಾಜೀನಾಮೆಗೆ ಒಒತ್ತಾಯಿಸುತ್ತಿದ್ರಾ ಎಂಬುವುದು ಪ್ರಶ್ನೆಯಾಗಿದೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದವರ ಮೇಲೆ ಕ್ರಮ ಕೈಗೊಂಡಿಲ್ಲ. ಬೇರೆ ಬೇರೆ ಸಂದರ್ಭದಲ್ಲಿ ಪಾಕಿಸ್ತಾನ ಧ್ವಜ ಹರಿದಾಗ ಕಣ್ಣು ಮುಚ್ಚಿ ಕೂರುತ್ತಾರೆ.   ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆಯನ್ನು ಕೊಡಲಿ. ಇಲ್ಲವಾದರೆ ಅದೆಷ್ಟೇ ದೊಡ್ಡ ರಾಜಕೀಯ ನಾಯಕ ಬಂದ್ರೂ ಕೂಡಾ ಇನ್ಮುಂದೆ ನಾವು ಭಗವಾಧ್ವಜ ಮೂಲಕವೇ ಸ್ವಾಗತ ಕೊಡುತ್ತೇವೆ ಇದು ಅವರಿಗೆ ನನ್ನ ಓಪನ್ ಚಾಲೆಂಜ್.  ಪರ್ಯಾಯದ  ಯಶಸ್ಸನ್ನು ಇವರಿಗೆ ಸಹಿಸಲು ಆಗಲ್ಲ ಎಂದು ಟೀಕಿಸಿದ್ದಾರೆ. ಇನ್ನು ಉಡುಪಿ ಪರ್ಯಾಯಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂಧೂ ಅವರು ಪ್ರಶ್ನಿಸಿ ವಾಗ್ದಾಳಿ ಮಾಡಿದ್ದಾರೆ.

 

Continue Reading

LATEST NEWS

ಉಡುಪಿ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ, ಕಾರಣ ನಿಗೂಢ

Published

on

ಉಡುಪಿ: ಪ್ರೌಢ ಶಾಲೆಯ ವಿದ್ಯಾರ್ಥಿನಿಯೊಬ್ಬಳು ವಾಸವಾಗಿದ್ದ ಬಿಡಾರದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಉಡುಪಿಯ ಬೀಡಿನಗುಡ್ಡೆಯಲ್ಲಿ ನಡೆದಿದೆ.

ಬೋರ್ಡ್ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಬರ್ಮವ್ವ ಮೃತ ಬಾಲಕಿ. ಖಾಸಗಿ ನಿವೇಶನದಲ್ಲಿದ್ದ ಜೋಪಡಿಯನ್ನು ಬಾಡಿಗೆ ಪಡೆದುಕೊಂಡು ಮೃತ ಬಾಲಕಿಯ ಹೆತ್ತವರು‌ ವಾಸವಾಗಿದ್ದರು. ಮನೆ ಮಂದಿ ಬೆಳಿಗ್ಗೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಬಾಲಕಿಯಿಂದ ಈ ಕೃತ್ಯ ನಡೆದಿದೆ.

ನಗರ ಪೋಲಿಸ್  ಠಾಣೆಯ ಎಸ್ ಐ ಗಂಗಪ್ಪ, ಮುಖ್ಯ ಆರಕ್ಷಕಿಯರಾದ ಆಶಾ ಲತಾ, ಜಾಸ್ವ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದ್ದಾರೆ. ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ಮೃತ ದೇಹವನ್ನು ನೇಣು ಕುಣಿಕೆಯಿಂದ ತೆರವುಗೊಳಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಇಲಾಖೆಗೆ ನೆರವಾದರು.

Continue Reading
Advertisement

Trending

Copyright © 2025 Namma Kudla News

You cannot copy content of this page