Connect with us

LATEST NEWS

ಅಹ್ಮದಾಬಾದ್​ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿಅವಘಡ; 8 ರೋಗಿಗಳು ಸಜಿವ ದಹನ..!

Published

on

ಅಹ್ಮದಾಬಾದ್​ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿಅವಘಡ; 8 ರೋಗಿಗಳು ಸಜಿವ ದಹನ..!

ಅಹ್ಮದಾಬಾದ್ : ಗುಜರಾತ್ ಅಹ್ಮದಾಬಾದ್​ನ ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿ ನಿನ್ನೆ ತಡ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ದುರ್ಘಟನೆಯಲ್ಲಿ 8 ಮಂದಿ ರೋಗಿಗಳು ಸಜೀವ ದಹನವಾಗಿದ್ದಾರೆ.

ಅಹ್ಮದಾಬಾದ್​ನ ನವರಂಗ್​ಪುರ ಪ್ರದೇಶದಲ್ಲಿರುವ ಶ್ರೇಯ್ ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿದೆ.

ತಡರಾತ್ರಿ ಸುಮಾರು 2:30 ಕ್ಕೆ ಇ ದುರ್ಘಟನೆ ಸಂಭವಿಸಿದೆ. ದುರ್ಘಟನೆಗೆ ಶಾರ್ಟ್ ಸರ್ಕ್ಯೂಟ್​ ಕಅರಣ ಎಂದು ಶಂಕಿಸಲಾಗಿದೆ.

ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ, ಈ ದುರಂತ ಸಂಭವಿಸಿದಾಗ ಈ ಆಸ್ಪತ್ರೆಯಲ್ಲಿ 35 ರೋಗಿಗಳಿದ್ದರೆನ್ನಲಾಗಿದೆ.

ಉಳಿದ ರೋಗಿಗಳು, ವೈದ್ಯರು ಮತ್ತು ಸಿಬ್ಬಂದಿಗೆ ಹಾನಿಯಾಗಿಲ್ಲ. ಉಳಿದ ರೋಗಿಗಳನ್ನು ನಗರದ ಬೇರೊಂದು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಇದೇ ವೇಳೆ, ಆಸ್ಪತ್ರೆಯಲ್ಲಿ ವ್ಯಾಪಿಸಿದ್ದ ಬೆಂಕಿಯನ್ನು ಅಗ್ನಿಶಾಮಕ ದಳ ಸಿಬ್ಬಂದಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ್ದು, ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಗಾಯಾಳುಗಳು ಆದಷ್ಟೂ ಬೇಗ ಚೇತರಿಕೆ ಕಾಣಲಿ ಎಂದು ಹಾರೈಸಿರುವ ಅವರು ಅಹ್ಮದಾಬಾದ್ ಜಿಲ್ಲಾಡಳಿತವು ಎಲ್ಲಾ ನೆರವು ಒದಗಿಸುತ್ತಿದೆ ಎಂದಿದ್ದಾರೆ.

BELTHANGADY

ಬೆಳ್ತಂಗಡಿ : ಕಾರುಗಳು ಮುಖಾಮುಖಿ; ಮೂವರು ಗಂಭೀರ

Published

on

ಬೆಳ್ತಂಗಡಿ : ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದು ಮೂವರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ಸಮಿಪದ ಗುರುವಾಯನಕೆರೆ-ಕಾರ್ಕಳ ರಸ್ತೆಯ ಅಳದಂಗಡಿಯ ಕೆದ್ದುವಿನಲ್ಲಿ ನಿನ್ನೆ (ಏ.21) ಸಂಜೆ ನಡೆದಿದೆ.

ಅಳದಂಗಡಿಯಿಂದ ಗುರುವಾಯನಕೆರೆ ಕಡೆ ಹೋಗುತ್ತಿದ್ದ ಕಾರು ಹಾಗೂ ಗುರುವಾಯನಕೆರೆಯಿಂದ ಕಾರ್ಕಳದತ್ತ ಪ್ರಯಾಣ ಮಾಡುತ್ತಿದ್ದ ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದೆ.

ಈ ಘಟನೆಯಲ್ಲಿ ಗೇರುಕಟ್ಟೆಯ ಕುಸುಮಾವತಿ (75), ಭಾಗ್ಯವತಿ (50), ವೈಭವ್‌ (23) ಎಂಬುವವರು ಗಂಭೀರ ಗಾಯಗೊಂಡಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Continue Reading

LATEST NEWS

ಕಾಣಿಕೆ ಡಬ್ಬಿ ಒಡೆದು ಕಳ್ಳತನ; ಕಿಡಿಗೇಡಿಗಳು ಪರಾರಿ

Published

on

ಮಲ್ಪೆ : ಕರಾವಳಿ ದೈವ, ದೇವರ ಆರಾಧನೆಗೆ ಹೆಸರಾದ ನಾಡು. ಆದರೆ ಇಂತಹ ಪುಣ್ಯ ಭೂಮಿಯಲ್ಲೂ ದುಷ್ಕೃತ್ಯಗಳು ಹೆಚ್ಚಾಗುತ್ತಿದೆ. ಇದೀಗ ದೈಸ್ಥಾನದ ಡಬ್ಬಿಯನ್ನೇ ಹೊಡೆದು , ಕಳ್ಳತ ಮಾಡಿ, ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.

ಮಲ್ಪೆಯ ಕೊಡವೂರು ಪಾಳೆಕಟ್ಟೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ದೇವರಬೆಟ್ಟು ಆವರಣ ಗೋಡೆಯ ಹೊರಭಾಗದಲ್ಲಿ ಇಟ್ಟಿದಂತಹ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿರುವ ಹಣವನ್ನು ಕಳವು ಮಾಡಿ ಖದೀಮರು ಪರಾರಿಯಾಗಿದ್ದಾರೆ.

ಎ.19 ರಂದು ಸಂಜೆ 6 ರಿಂದ 8.45 ರ ಸುಮಾರಿಗೆ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಕಾಣಿಕೆ ಡಬ್ಬಿಯಲ್ಲಿದ್ದ 15ಸಾವಿರ ಹಣ ಕಳವು ಮಾಡಲಾಗಿರುವ ಕುರಿತು ಮಲ್ಪೆ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಲಾಗಿದೆ.

Continue Reading

bangalore

ಜನಿವಾರಕ್ಕೆ ಕತ್ತರಿ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು : ಸಿಎಂ ಸಿದ್ಧರಾಮಯ್ಯ

Published

on

ಬೆಂಗಳೂರು : ಈಗಾಗಲೇ ರಾಜ್ಯದಾದ್ಯಂತ ಸದ್ದು ಮಾಡುತ್ತಿರುವ ಜನಿವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಡೆದ ಪ್ರೆಸ್‌ಮೀಟ್‌ನಲ್ಲಿ ಸಿ.ಎಂ.ಸಿದ್ಧರಾಮಯ್ಯ ಮಾತನಾಡಿದ್ದಾರೆ. “ಸಿಇಟಿ ಪರೀಕ್ಷೆ ವೇಳೆ ಬೀದರ್, ಶಿವಮೊಗ್ಗ, ಸಾಗರ, ಧಾರವಾಡಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರಕ್ಕೆ ಕತ್ತರಿ ಹಾಕಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಮುಖ್ಯಮಂತ್ರಿ ತಿಳಿಸಿದರು.

ಜನಿವಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು :

“ವಿದ್ಯಾರ್ಥಿಗಳ ಜನಿವಾರ ಕತ್ತರಿಸಿರುವ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಳ್ಳಬೇಕು. ಜನಿವಾರವನ್ನು ಕೇವಲ ಬ್ರಾಹ್ಮಣ ಸಮಾಜದವರಷ್ಟೇ ಹಾಕುವುದಿಲ್ಲ. ಬೇರೆ ಬೇರೆ ಸಮುದಾಯಗಳು ಪವಿತ್ರ ದಾರವನ್ನು ಧರಿಸುತ್ತಿದ್ದಾರೆ. ಆ ಎಲ್ಲ ಸಮುದಾಯಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ಜನಿವಾರ ಪ್ರಕರಣಕ್ಕೆ ಶಾಶ್ವತ ಪರಿಹಾರ :

ಸಿಇಟಿಯಲ್ಲಿ ನಡೆದ ಜನಿವಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಸರಕಾರ, ಈ ಸಂಬಂಧ ಪ್ರತ್ಯೇಕ ತಜ್ಞರ ಸಮಿತಿ ರಚಿಸಲು ನಿರ್ಧರಿಸಿದೆ. ಇಂಥ ಘಟನೆ ಪುನರಾವರ್ತನೆ ಆಗದಿರಲು ಶಾಶ್ವತ ಪರಿಹಾರ ಕಂಡು ಕೊಳ್ಳಲು ಈಗ ಸರಕಾರ ಪ್ರತ್ಯೇಕ ತಜ್ಞರ ಸಮಿತಿ ರಚಿಸಲು ಉದ್ದೇಶಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page