Connect with us

DAKSHINA KANNADA

ನಮ್ಮ ಕುಡ್ಲ ವಾಹಿನಿಯಲ್ಲಿ 6 ನೇ ದಿನದ ದಸರಾ ಸಂಭ್ರಮ :ಪ್ರಾಮಾಣಿಕತೆ ಇದ್ದರೆ ಅಭಿವೃದ್ದಿ ಸಾಧ್ಯ… 

Published

on

ನಮ್ಮ ಕುಡ್ಲ ವಾಹಿನಿಯಲ್ಲಿ 6 ನೇ ದಿನದ ದಸರಾ ಸಂಭ್ರಮ :ಪ್ರಾಮಾಣಿಕತೆ ಇದ್ದರೆ ಅಭಿವೃದ್ದಿ ಸಾಧ್ಯ… 

ಮಂಗಳೂರು : ಯಾವುದೇ ಒಂದು ಸಂಸ್ಥೆ ಬೆಳೆಯಬೇಕಾದರೆ ಅಲ್ಲಿ ಪ್ರಾಮಾಣಿಕತೆ ಅಗತ್ಯ. ಗುಡಿಸುವ ಕೆಲಸ ಮಾಡುವುದಿದ್ದರೂ ಅದನ್ನು ಪ್ರಾಮಾಣಿಕತೆಯಿಂದ ಮಾಡು ಎನ್ನುವುದೇ ನಮ್ಮ ಗುಣ.. ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಇರುವ ಪ್ರಾಮಾಣಿಕತೆಯಿಂದಲೇ ಇಂದು ನಾವು ಇಷ್ಟೊಂದು ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದು ಶಾರದಾ ವಿದ್ಯಾಸಮೂಹ ಸಂಸ್ಥೆಗಳ ಮುಖ್ಯಸ್ಥ ಪ್ರೊ. ಎಂ ಬಿ ಪುರಾಣಿಕ್‌ ನುಡಿದರು.

ಅವರು ನಮ್ಮ ಕುಡ್ಲ ವಾಹಿನಿಯ ದಶದಿನಗಳ ದಸರಾ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮಗಳ ಆರನೇ ದಿನದ ಕಾರ್ಯಕ್ರಮಗಳ ಸಭಾಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಮಾನವನ ವ್ಯಕ್ತಿತ್ವ ವಿಕಸನಕ್ಕೆ ಆತನ ಪ್ರಾಮಾಣಿಕತೆಯಿಂದ ಸಾಧ್ಯವಾಗುತ್ತದೆ. ಇಂದಿನ ಮಕ್ಕಳಿಗೆ ಆಧುನಿಕ ಶಿಕ್ಷಣದ ಜೊತೆಗೆ ಭಾರತೀಯ ಶಿಕ್ಷಣವನ್ನು ನಾವು ನೀಡಬೇಕು. ಇಂದು ಮಠ, ದೇವಸ್ಥಾನ ಸಮಾಜವನ್ನು ಬೆಸೆಯಲು ಇರುವ ಸಾಧನ. ನಮ್ಮ ಧಾರ್ಮಿಕತನ, ಆಧ್ಯಾತ್ಮಿಕ ಶಕ್ತಿ ಉತ್ಸವಗಳ ಮೂಲಕ ನಮ್ಮನ್ನು ಒಟ್ಟು ಸೇರಿಸಲಿ ಎಂದು ಆಶೀಸಿದರು.

ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಗಣೇಶ ರಾವ್ ದೀಪಪ್ರಜ್ವಲನಗೊಳಿಸಿ ಮಾತನಾಡಿ, ಧನಾತ್ಮಕವಾದ ದೈವೀಶಕ್ತಿ ಅನ್ನೋದು ನಮ್ಮನ್ನು ಎಂದೆಂದಿಗೂ ಕಾಪಾಡಿಕೊಂಡು ಬರುತ್ತದೆ. ನಾನು, ನನ್ನದು ಎಂದು ಹೇಳುವುದು ಬಿಟ್ಟು ನಾವು, ನಮ್ಮದು ಎಂದು ಹೇಳಿದಾಕ್ಷಣ ಅದರಲ್ಲಿ ಇರುವ ಖುಷಿ ಬೇರೆಲ್ಲೂ ಇರುವುದಿಲ್ಲ. ಇದೇ ನಮ್ಮನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಹೀಗಾಗಿ ನಮ್ಮ ಕುಡ್ಲ ಚಾನೆಲ್ ಮೂಲಕ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳೂ ನಮ್ಮದು ಎನ್ನುವ ಭಾವನೆಯನ್ನು ಮೂಡಿಸುತ್ತಿದೆ ಎಂದರು.

ಎಕ್ಸ್‌ಪರ್ಟ್‌ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಉಷಾಪ್ರಭಾ ಎನ್‌ ನಾಯಕ್‌ ಮಾತನಾಡಿ ದೇವರ ಕೃಪೆ ಇದ್ದಾಗ ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಆದರೆ ಪ್ರಯತ್ನ ಇಲ್ಲದೇ ಏನೂ ಮಾಡಲಾಗದು. ದುರ್ಗೆ, ಶಾರದಾ ಮಾತೆ, ಗಣಪತಿ ಸೇರಿದಂತೆ ಯಾವುದೇ ದೇವರು ನಮಗೆ ಕೃಪೆ ತೋರಲಾರರು. ಹೀಗಾಗಿ ದೇವಿ ಸ್ವರೂಪಿಣಿಯಾದ ಮಾತೆಗೆ ನೀಡುವ ಅಷ್ಟೇ ಗೌರವವನ್ನು ನಾವೂ ಕೊಟ್ಟಾಗ ಎಲ್ಲರೂ ನಮಗೆ ಗೌರವವನ್ನು ಕೊಡುತ್ತಾರೆ ಎಂದರು.

ಎಂಆರ್‌ಪಿಎಲ್‌ ಜನರಲ್‌ ಮ್ಯಾನೇಜರ್‌ ಕಾರ್ಪೋರೇಟ್‌ ಕಮ್ಯೂನಿಕೇಶನ್‌ ರುಡಾಲ್ಫ್‌ ನೊರೊನ್ಹಾ ಮಾತನಾಡಿ ಉತ್ತಮ ಸಮಾಜ  ನಿರ್ಮಾಣ ಅತೀ ಅಗ್ಯವಾಗಿದೆ. ಎಂ ಆರ್‌ ಪಿ ಎಲ್ ಯಾವೋತ್ತು ಧನಾತ್ಮಕ ಚಿಂತನೆಗಳೊಂದಿಗೆ ಜನರ ಸಮಸ್ಯೆ ಕಷ್ಟಗಳಿಗೆ ಸದಾ ಸ್ಪಂದಿಸುವ ಕಾರ್ಯ ಮಾಡುತ್ತಿದೆ.  ಅಪರೂಪದ ಸಂಸ್ಕೃತಿಯನ್ನು ಮುಂದಿನ ದಿನಗಳಲ್ಲೂ ಕೊಂಡು ಹೋಗುವುದಕ್ಕೆ ಎಂಆರ್‌ಪಿಎಲ್‌ ಸಹಕಾರ ನೀಡಲು ಬದ್ದ ಎಂದರು.

ಇದೇ ಸಂದರ್ಭದಲ್ಲಿ ಬಿಲ್ಲವ ಮಹಾಮಂಡಳಗಳ ಅಧ್ಯಕ್ಷ ಹಾಗೂ ಭಾರತ್ ಕೋ. ಅಪರೇಟಿವ್ ಬ್ಯಾಂಕಿನ ಮಾಜಿ ಅಧ್ಯಕ್ಷರಾದ  ದಿವಂಗತ ಜಯ ಸಿ. ಸುವರ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವೇದಿಕೆಯಲ್ಲಿ ನಮ್ಮ ಕುಡ್ಲ ವಾಹಿನಿ ನಿರ್ದೇಶಕಿ ಸುರೇಖಾ ಹರೀಶ್ ಕರ್ಕೇರಾ, ನಿರ್ದೇಶಕ ಲೀಲಾಕ್ಷ ಕರ್ಕೇರ ಉಪಸ್ಥಿತರಿದ್ದರು. ಜೀವನ, ಪಾವನ ಸಹೋದರಿಯರು ಪ್ರಾರ್ಥಿಸಿದರು.

 

DAKSHINA KANNADA

ಪುತ್ತೂರಿನ ಬಿಜೆಪಿ ಮುಖಂಡನ ಪುತ್ರನ ವಂಚನೆ ಪ್ರಕರಣದಲ್ಲಿ ಭೂಗತ ಪಾತಕಿ ಎಂಟ್ರಿ !?

Published

on

ಪುತ್ತೂರು: ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರ ಕೃಷ್ಣ ಜೆ ರಾವ್ ಓರ್ವ ಯುವತಿಯನ್ನು ಪ್ರೀತಿಸಿ ಗರ್ಭಿಣಿ ಮಾಡಿದ್ದ ಪ್ರಕರಣದಲ್ಲಿ ಈಗ ಭೂಗತ ಪಾತಕಿ ಕಲಿ ಯೋಗೀಶ್ ಎಂಟ್ರಿಯಾಗಿದೆ.

ವರದಿಗಾರರೊಬ್ಬರಿಗೆ ಭೂಗತ ಪಾತಕಿ ಕಲಿ ಯೋಗೀಶ್ ಹೆಸರಿನಲ್ಲಿ​​ ಕರೆ ಮಾಡಿದ ವ್ಯಕ್ತಿ, ಕೃಷ್ಣ ಜೆ.ರಾವ್‌ ಜೈಲಿನಿಂದ ಹೊರ ಬಂದ ಮೇಲೆ ಯುವತಿಯನ್ನು ಮದುವೆ ಆಗಿಲ್ಲ ಎಂದಾದರೆ ಗುಂಡು ಹೊಡೆದು ಸಾಯಿಸುವುದಾಗಿ ಎಚ್ಚರಿಕೆ ನೀಡಿದ್ದು, ಅಷ್ಟೇ ಅಲ್ಲದೆ, ಹಿಂದೂ ಸಂಘಟನೆ ಮತ್ತು ಬಿಜೆಪಿ ನಾಯಕರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದ ಆಡಿಯೋ ವೈರಲ್ ಆಗಿದೆ.

ವರದಿಗಾರರೊಬ್ಬರಿಗೆ ಭೂಗತ ಪಾತಕಿ ಕಲಿ ಯೋಗೇಶ್ ಅಂತೇಳಿ ಕರೆ ಮಾಡಿದ ವ್ಯಕ್ತಿ, ಬಿಜೆಪಿ ಮುಖಂಡನ ಪುತ್ರನ ಪ್ರಕರಣದ ಬಗ್ಗೆ ನಮಗೂ ದೂರು ಬಂದಿದೆ. ಓರ್ವ ಯುವತಿಯನ್ನು ಗಭಿ೯ಣಿ ಮಾಡಿ ಮೋಸ ಮಾಡಿದ್ದು, ಈಗ ಜೈಲಿನಲ್ಲಿ ಇರಬೇಕು. ಅನ್ಯಾಯವಾಗಿದೆ ಎಂದು ದೂರು ಬಂದಿದೆ. ಸಂತ್ರಸ್ತೆ ಮನೆಯವರ ಪರ ರಾಜಕೀಯದವರು ಯಾರೂ ನಿಲ್ಲುತ್ತಿಲ್ಲ. ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ಹಿಂದೂ ಅಲ್ಲವೇ? ಅವರ ಬಳಿ ಹಣವಿಲ್ಲ ಅಂತ ಬಿಟ್ಟುಬಿಡುವುದಾ ಹಿಂದೂ ಸಂಘಟನೆ ಮತ್ತು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪುತ್ತೂರು: ಪ್ರೀತಿಸಿ ವಂಚನೆ, ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣ ರಾವ್ ಮೈಸೂರಿನಲ್ಲಿ ಅರೆಸ್ಟ್

ನಾನು ಹೇಳುವುದು ಇಷ್ಟೇ ಎರಡು ಸಮುದಾಯದರು ಕೂತು ಮಾತನಾಡಿ ಇತ್ಯರ್ಥ ಮಾಡಿ ಯುವತಿಯೊಂದಿಗೆ ಆ ಯುವಕನ ಮದುವೆ ಮಾಡಬೇಕು. ಜೈಲಿನಿಂದ ಹೊರ ಬಂದ ಮೇಲೆ ಹಿಂದೂ ಸಂಘಟನೆಗಳು ಮುಂದೆ ನಿಂತು ಮದುವೆ ಮಾಡಿಸಲಿ. ಒಂದು ವೇಳೆ ಮದುವೆ ಆಗಿಲ್ಲ ಅಂದರೆ ಆರೋಪಿ ಕೃಷ್ಣ ಜೆ.ರಾವ್​ಗೆ ಗುಂಡು ಹೊಡೆಯುತ್ತೇವೆ ಬದುಕುವುದೇ ಬೇಡ ಎಂದು ಹೇಳಿದ್ದಾನೆ.

ಮತ್ತೆ ಮಾತು ಮುಂದುವರೆಸಿದ ವ್ಯಕ್ತಿ, ನಟ ಗಣೇಶ್-ಶಿಲ್ಪಾ ವಿಚಾರದಲ್ಲೂ ಹೀಗೇ ಆಗಿತ್ತು. ಆವಾಗ ನನ್ನ ಬಾಸ್ ರವಿ ಪೂಜಾರಿ ಜನ ಕಳಿಸಿದ್ದರು. ಗಣೇಶ್-ಶಿಲ್ಪಾ ಮದುವೆಯನ್ನು ನಾವೇ ಮಾಡಿಸಿದ್ದು ಎಂದಿದ್ದಾರೆ.

 

Continue Reading

DAKSHINA KANNADA

“ದ್ವೇಷ ಭಾಷಣ ಮಾಡುವಂತಿಲ್ಲ, ಅಪರಾಧವನ್ನು ಪುನರಾವರ್ತಿಸುವಂತಿಲ್ಲ” ಶಾಸಕ ಹರೀಶ್ ಪೂಂಜಾಗೆ ಹೈಕೋರ್ಟ್ ಆದೇಶ

Published

on

ಮಂಗಳೂರು/ಬೆಂಗಳೂರು: ಇನ್ಮುಂದೆ ದ್ವೇಷ ಭಾಷಣ ಮಾಡುವಂತಿಲ್ಲ, ಈಗಾಗಲೇ ದಾಖಲಾಗಿರುವ ಸೆಕ್ಷನ್ ಗಳ ಅಪರಾಧವನ್ನು ಪುನರಾವರ್ತಿಸುವಂತಿಲ್ಲ ಎಂದು ಹೈಕೋರ್ಟ್ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಇಂದು ಆದೇಶ ನೀಡಿದೆ.

ಕೋಮುಗಲಭೆಗಳಿಗೆ ಪ್ರಚೋದನೆ ನೀಡುವ ಭಾಷಣ ಮಾಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ದೂರುದಾರು ಇಬ್ರಾಹಿಂ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ನಲ್ಲಿ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಂತು.

ಸರ್ಕಾರದ ಪರ ವಕೀಲರು ಮತ್ತು ಹರೀಶ್ ಪೂಂಜ ಪರ ವಕೀಲರು ಸಮಯಾವಕಾಶ ಕೇಳಿದರು. ಆದರೆ ಇಬ್ರಾಹಿಂ ಪರ ವಕೀಲ ಎಸ್ ಬಾಲನ್ ಅವರು ಸಮಯಾವಕಾಶ ನೀಡುವುದನ್ನು ವಿರೋಧಿಸಿ ವಾದ ಪ್ರಾರಂಭಿಸಿದರು. ಹರೀಶ್ ಪೂಂಜ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸದೇ ಇದ್ದರೆ ಅವರು ಅಪರಾಧವನ್ನು ಪುನರಾವರ್ತಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಿ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಪಡೆಯುತ್ತಾರೆ. ಇದು ಸರಿಯಾದ ಕ್ರಮವಲ್ಲ ಎಂದು ಎಸ್ ಬಾಲನ್ ವಾದಿಸಿದರು.

ಇದನ್ನೂ ಓದಿ: ಲಂಚಕ್ಕೆ ಬೇಡಿಕೆ ಇಟ್ಟ ಹೆಡ್‌ ಕಾನ್‌ಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣ; ತಸ್ಲಿಂ ಸೇರಿ 5 ಮಂದಿ ಪೊಲೀಸ್ ಸಿಬ್ಬಂದಿ ಅಮಾನತು

ವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಕುಮಾರ್ ಆಗಸ್ಟ್ 0 7ರವರೆಗೆ ತಡೆಯಾಜ್ಞೆ ಮುಂದುವರೆಸಿ “ಅರ್ಜಿದಾರ ಹರೀಶ್ ಪೂಂಜ ಯಾವುದೇ ದ್ವೇಷ ಭಾಷಣ, ಈಗಾಗಲೇ ಅವರ ವಿರುದ್ಧ ದಾಖಲಾಗಿರುವ ಅಪರಾಧಿಕ ಸೆಕ್ಷನ್ ಗಳ ಅಪರಾಧವನ್ನು ಪುನರಾವರ್ತಿಸುವಂತಿಲ್ಲ” ಎಂದು ಆದೇಶ ನೀಡಿದ್ದಾರೆ.

Continue Reading

DAKSHINA KANNADA

ಲಂಚಕ್ಕೆ ಬೇಡಿಕೆ ಇಟ್ಟ ಹೆಡ್‌ ಕಾನ್‌ಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣ; ತಸ್ಲಿಂ ಸೇರಿ 5 ಮಂದಿ ಪೊಲೀಸ್ ಸಿಬ್ಬಂದಿ ಅಮಾನತು

Published

on

ಮಂಗಳೂರು: ಲಂಚಕ್ಕೆ ಬೇಡಿಕೆಯಿಟ್ಟ ಕದ್ರಿ ಟ್ರಾಫಿಕ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ 5 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ.

ಕಾರು ಮತ್ತು ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡಿದ್ದ ಕಾರಿನ ದಾಖಲೆಯನ್ನು ದೂರುದಾರರಿಗೆ ವಾಪಸು ನೀಡಲು 50 ಸಾವಿರ ಲಂಚ ಬೇಡಿಕೆ ಇಟ್ಟು ಬಳಿಕ 5 ಸಾವಿರ ಲಂಚ ಪಡೆಯುವಾಗ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ತಸ್ಲಿಂ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ. ಲಂಚದ ಬೇಡಿಕೆಯಿರಿಸಿದ ಪ್ರಕರಣದಲ್ಲಿ ತಸ್ಲಿಂ ಹಾಗೂ ಸಹಕರಿಸಿದ ವಿನೋದ್ ನೇರ ಆರೋಪಿಗಳಾಗಿದ್ದು, ಅವರನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಚಿನ್ನದಂಗಡಿಗೆ ನುಗ್ಗಿ 3 ಕೆಜಿ ಚಿನ್ನಾಭರಣವನ್ನು ಲೂಟಿ ಮಾಡಿ ಪರಾರಿಯಾದ ಕಳ್ಳರು

ತಸ್ಲಿಂ ಮತ್ತು ವಿನೋದ್ ಅವರ ಲಂಚ ಬೇಡಿಕೆ ಬಗ್ಗೆ ಮಾಹಿತಿ ಗೊತ್ತಿದ್ದರೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಮೌನವಹಿಸಿದ್ದ ಇತರ ಮೂವರನ್ನೂ ಕೂಡಾ ಅಮಾನತುಗೊಳಿಸಲಾಗಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page