Connect with us

LATEST NEWS

ದಸರಾ ವೈಭವ 5ನೇ ದಿನದ ಸಂಭ್ರಮ: ಕುದ್ರೋಳಿ ನವರಾತ್ರಿ ಉತ್ಸವವೆಂದರೆ ಅದು ‘ನಮ್ಮ ಕುಡ್ಲ’ ಉತ್ಸವ.. 

Published

on

ದಸರಾ ವೈಭವ 5ನೇ ದಿನದ ಸಂಭ್ರಮ: ಕುದ್ರೋಳಿ ನವರಾತ್ರಿ ಉತ್ಸವವೆಂದರೆ ಅದು ನಮ್ಮ ಕುಡ್ಲ ಉತ್ಸವ.. 

ಮಂಗಳೂರು : ಕುದ್ರೋಳಿ ನವರಾತ್ರಿ ಉತ್ಸವವೆಂದರೆ ಅದು ನಮ್ಮ ಕುಡ್ಲ ಉತ್ಸವ. ನಮ್ಮ ಕುಡ್ಲ ಅಂದಾಕ್ಷಣ ಅದು ನಮ್ಮ ಕುಡ್ಲ ವಾಹಿನಿಯ ಉತ್ಸವ. ತುಳುನಾಡಿನ ಜನತೆಗೆ ಒಂದು ಚೂರು ಕಡಿಮೆಯಾಗದಂತೆ ಕರಾವಳಿಯ ದಸರಾ ವೈಭವವನ್ನು ಕಣ್ಣಿಗೆ ಕಟ್ಟುವಂತೆ ನಮ್ಮ ಕುಡ್ಲ ವಾಹಿನಿ ಪ್ರದರ್ಶಿಸುತ್ತಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್‌ ಅಭಿಪ್ರಾಯಪಟ್ಟರು.

ಅವರು ನಮ್ಮ ಕುಡ್ಲ ವಾಹಿನಿಯ ದಶದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಐದನೇ ದಿನದ ದಸರಾ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ತುಳು ಭಾಷೆಯ ಮಕ್ಕಳು ಸೇರಿ ಆಚರಿಸುವುದೇ ಈ ನಾಡಹಬ್ಬ. ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ದಸರಾ ಆಚರಿಸಲ್ಪಡುತ್ತಿದ್ದರೆ, ನಮ್ಮ ತುಳುನಾಡಿನಲ್ಲಿ ಮಾರ್ನೆಮಿ ಅಂದಾಕ್ಷಣ ಅದು ನವರಾತ್ರಿ. ದಸರಾ ಸಂಭ್ರಮ.

ಭಾಷೆಗೆ ಮಡಿವಂತಿಕೆ ಬೇಕೆನ್ನುವ ನನ್ನ ವಾದ ಇಲ್ಲ. ಭಾಷೆಗೆ ನಾವು ಎಷ್ಟು ಆದ್ಯತೆ ನೀಡಿದ್ದೇವೆ ಅನ್ನೋದು ಮುಖ್ಯ. ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ಭಾಷೆ ತುಳು.

ಆದರೆ ಕಡಿಮೆ ಸಂಖ್ಯೆಯಲ್ಲಿ ಮಾತನಾಡುವವರು ಇದ್ದರೂ, ಅದರಲ್ಲಿ ಪಾಂಡಿತ್ಯ ಹೊಂದಿರುವವರೂ ಅಷ್ಟೇ ಸಂಖ್ಯೆಯಲ್ಲಿದ್ದಾರೆ. ಇಂದು ನಮ್ಮ ಕುಡ್ಲ ವಾಹಿನ ಸಾವಿರಾರು ಕಲಾವಿದರ ಪ್ರದರ್ಶನಕ್ಕೆ ಅವಕಾಶ ನೀಡಿದೆ. ಈ ಮೂಲಕ ತುಳು ಭಾಷಾ ಕಲಾವಿದರ ಪುನರುತ್ಥಾನದ ಕಾಲವಿದಾಗಿದೆ ಎಂದು ಅಭಿಪ್ರಾಯಪಟ್ಟರು.

ಆರನೇ ದಿನದ ದಸರಾ ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳ ಮುನ್ನೋಟವನ್ನು ಹೊಟೇಲ್‌ ಉದ್ಯಮಿ ಅಡ್ಯಾರ್ ಪುರುಷೋತ್ತಮ ಭಂಡಾರಿ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಹೆಣ್ಣುಮಕ್ಕಳಲ್ಲಿ ಅತ್ಯುತ್ತಮ ಸಂಸ್ಕಾರವಿದ್ದಲ್ಲಿ ನಮ್ಮ ಸಮಾಜ, ಮಕ್ಕಳು ಸಂಸ್ಕೃತಿಯನ್ನು ಬೆಳೆಸಿಕೊಳ್ಳುತ್ತಾರೆ. ದೇವರು ಎಂದಿಗೂ ನಮ್ಮ ಕೈ ಬಿಡುವುದಿಲ್ಲ. ಕಷ್ಟ ಎದುರಾದಾಗ ನಾವು ಅದನ್ನು ಎದುರಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.

ಪಿಎನ್‌ಐಯ ಸಪೋರ್ಟ್‌ ಡೈರೆಕ್ಟರ್‌ ಮಹೇಶ್‌ ಕಾಮತ್ ಮಾತನಾಡಿ ಕರಾವಳಿಯ ಪ್ರತೀ ಕಾರ್ಯಕ್ರಮವನ್ನೂ ದೇಶ, ವಿದೇಶಗಳಲ್ಲೂ ತಮ್ಮ ಯೂಟ್ಯೂಬ್‌, ವಾಹಿನಿ ಮೂಲಕ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿರುವ ಚಾನೆಲ್‌ ನಮ್ಮ ಕುಡ್ಲ.  ನಮ್ಮ ತುಳು ಭಾಷೆಯ ಸೊಗಡನ್ನು ದೇಶವಿದೇಶಕ್ಕೂ ಪ್ರಸರಿಸಿದ್ದ ಚಾನೆಲ್‌ಗೆ ನಾವೆಲ್ಲರೂ ಆಭಾರಿಗಳಾಗಿರೋಣ ಎಂದರು.

ಯುವ ಉದ್ಯಮಿ ಸಂಶುದ್ಧೀನ್ ಮೊಹಮ್ಮದ್‌ ಮಾತನಾಡಿ ನಮ್ಮ ಕರಾವಳಿ ಸಂಸ್ಕೃತಿಯೇ ಅದ್ಭುತವಾದುದು. ಹುಲಿ ವೇಷ ಕುಣಿತ ಕಂಡಾಕ್ಷಣ ದಸರಾ ಬಂತು ಎಂದು ಅರಿವಾಗುತ್ತದೆ. ಪ್ರತಿಯೊಂದು ಆಚಾರ, ವಿಚಾರಗಳೂ ತನ್ನದೇ ಆದ ವೈಶಿಷ್ಟವನ್ನು ಹೊಂದಿದ್ದು, ಕೊರೊನಾದ ಈ ಸಂಕಷ್ಟದ ಸಂದರ್ಭದಲ್ಲೂ ನಾವೆಲ್ಲರೂ ಇಂತಹ ಸೌಹಾರ್ದಯತ ಬಾಳ್ವೆ ಮಾಡೋಣ ಎಂದರು.

ನಮ್ಮ ಕುಡ್ಲ ಸಂಸ್ಥೆ ನಿರ್ದೇಶಕಿ ಸೌಮ್ಯಾ ಎಲ್‌ ಕರ್ಕೇರ, ಲೀಲಾಕ್ಷ ಬಿ ಕರ್ಕೇರ ವೇದಿಕೆಯಲ್ಲಿದ್ದರು. ಕುಮಾರಿ ಮಯೂರಿ ಪ್ರಾರ್ಥಿಸಿದರು. ಕದ್ರಿ ನವನೀತ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LATEST NEWS

ಏರ್‌ ಇಂಡಿಯಾ ವಿಮಾನ ದುರಂತ: ಸಹೋದರನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ವಿಶ್ವಾಸ್ ರಮೇಶ್‌

Published

on

ಮಂಗಳೂರು/ಅಹಮದಾಬಾದ್: ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬ್ರಿಟನ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಅದೇ ದುರಂತದಲ್ಲಿ ಮೃತಪಟ್ಟ ಸಹೋದರ ಅಜಯ್ ರಮೇಶ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.


ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ಬ್ರಿಟನ್‌ನಿಂದ ದಿಯುಗೆ ಬಂದಿದ್ದ ಸಹೋದರರು ಜೂನ್ 12ರಂದು ಮರಳಿ ಲಂಡನ್‌ಗೆ ಹೊರಟಿದ್ದರು. ಈ ವೇಳೆ ವಿಮಾನ ಅಪಘಾತ ಸಂಭವಿಸಿತ್ತು.

ವಿಮಾನದಲ್ಲಿ ರಮೇಶ್ ತುರ್ತು ನಿರ್ಗಮನ ದ್ವಾರದ ಪಕ್ಕದಲ್ಲಿ 11A ನಲ್ಲಿ ಕುಳಿತಿದ್ದರು. ಅಪಘಾತದ ಸಂದರ್ಭದಲ್ಲಿ ಅವರ ಸೀಟು ಬೇರ್ಪಟ್ಟು ದೂರ ಹಾರಿತ್ತು. ಹೀಗಾಗಿ ಬೆಂಕಿಯಿಂದ ಪಾರಾಗಿದ್ದರು. ಸೀಟಿನ ಸಮೇತ ಕೆಳಗೆ ಹಾರಿದ್ದರು. ವಿಮಾನ ತುಂಡಾಗಿ ಸೀಟು ಕೂಡ ಕಳಚಿಬಂದಿತ್ತು ಎಂದು ವೈದ್ಯರಿಗೆ ರಮೇಶ್​ ತಿಳಿಸಿದ್ದರು.

ತಾನು ಇಳಿದ ಸ್ಥಳ ತಗ್ಗಾಗಿತ್ತು, ಸೀಟ್ ಬೆಲ್ಟ್​ ತೆಗೆದೆ ಒಂದು ಕ್ಷಣ ಮೈಯೆಲ್ಲಾ ಕಂಪಿಸಿತ್ತು, ಆದರೆ ನಾನು ಭೂಮಿಗೆ ತುಂಬಾ ಹತ್ತಿರವಾಗಿದ್ದೆ, ಹಾಗಾಗಿ ಹೊರಬರಲು ಪ್ರಯತ್ನಿಸಿದೆ ಎಂದು ತಿಳಿಸಿದ್ದಾರೆ. ವಿಮಾನ ಅಪಘಾತದ ಸ್ವಲ್ಪ ಸಮಯದ ನಂತರ ಅವರು ಬಿಜೆ ವೈದ್ಯಕೀಯ ಕ್ಯಾಂಪಸ್‌ನಿಂದ ಹೊರಬರುತ್ತಿರುವ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು.

ವಿಮಾನದಲ್ಲಿ ರಮೇಶ್ ತುರ್ತು ನಿರ್ಗಮನ ದ್ವಾರದ ಪಕ್ಕದಲ್ಲಿ 11A ನಲ್ಲಿ ಕುಳಿತಿದ್ದರು. ಅಪಘಾತದ ಸಂದರ್ಭದಲ್ಲಿ ಅವರ ಸೀಟು ಬೇರ್ಪಟ್ಟು ದೂರ ಹಾರಿತ್ತು. ಹೀಗಾಗಿ ಬೆಂಕಿಯಿಂದ ಪಾರಾಗಿದ್ದರು. ಸೀಟಿನ ಸಮೇತ ಕೆಳಗೆ ಹಾರಿದ್ದರು. ವಿಮಾನ ತುಂಡಾಗಿ ಸೀಟು ಕೂಡ ಕಳಚಿಬಂದಿತ್ತು ಎಂದು ವೈದ್ಯರಿಗೆ ರಮೇಶ್​ ತಿಳಿಸಿದ್ದರು.

ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ; ಕೊನೆಗೂ ಎರಡನೇ ಬ್ಲ್ಯಾಕ್​ಬಾಕ್ಸ್​ ಪತ್ತೆ

ತಾನು ಇಳಿದ ಸ್ಥಳ ತಗ್ಗಾಗಿತ್ತು, ಸೀಟ್ ಬೆಲ್ಟ್​ ತೆಗೆದೆ ಒಂದು ಕ್ಷಣ ಮೈಯೆಲ್ಲಾ ಕಂಪಿಸಿತ್ತು, ಆದರೆ ನಾನು ಭೂಮಿಗೆ ತುಂಬಾ ಹತ್ತಿರವಾಗಿದ್ದೆ, ಹಾಗಾಗಿ ಹೊರಬರಲು ಪ್ರಯತ್ನಿಸಿದೆ ಎಂದು ತಿಳಿಸಿದ್ದಾರೆ. ವಿಮಾನ ಅಪಘಾತದ ಸ್ವಲ್ಪ ಸಮಯದ ನಂತರ ಅವರು ಬಿಜೆ ವೈದ್ಯಕೀಯ ಕ್ಯಾಂಪಸ್‌ನಿಂದ ಹೊರಬರುತ್ತಿರುವ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು.

ವಿಪರ್ಯಾಸವೆಂದರೆ ವಿಶ್ವಾಸ್ ಅವರ ಸಹೋದರ ಅಜಯ್ ರಮೇಶ್ ಸಾವನ್ನಪ್ಪಿದ್ದರು. ಹೀಗಾಗಿ ಅವರ ಡಿಎನ್‌ಎ ಗುರುತಿಸಲಾಗಿದ್ದು, ಇಂದು ದಿಯುವಿನಲ್ಲಿ ಬೆಳಿಗ್ಗೆ ಅಜಯ್ ಅವರ ಅಂತ್ಯಕ್ರಿಯೆ ನಡೆದಿದ್ದು, ವಿಶ್ವಾಸ್ ಕೂಡ ಅಲ್ಲಿ ಹಾಜರಿದ್ದರು ಎಂದು ವರದಿಯಾಗಿದೆ.

Continue Reading

LATEST NEWS

ಇನ್ನು ಮುಂದೆ 3 ಸಾವಿರಕ್ಕೆ ವಾರ್ಷಿಕ ಟೋಲ್‌ ಪಾಸ್‌!

Published

on

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬುಧವಾರ ಹೆದ್ದಾರಿಯಲ್ಲಿ ತೊಂದರೆಯಿಲ್ಲದೆ ಪಯಾಣಕ್ಕೆ ಅನುಕೂಲವಾಗುವಂತೆ ಫಾಸ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿರುವುದಾಗಿ ಘೋಷಿಸಿದೆ.

3 ಸಾವಿರ ರೂಪಾಯಿಗೆ ವಾರ್ಷಿಕ ಟೋಲ್‌ ಪಾಸ್‌ ನೀಡಲು ಸರ್ಕಾರ ಮುಂದಾಗಿದ್ದು, ಆಗಸ್ಟ್ 15 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹೆದ್ದಾರಿ ಖಾತೆಯ ಸಚಿವ ನಿತಿನ್‌ ಗಡ್ಕರಿ ಘೋಷಿಸಿದ್ದಾರೆ.

ಈ ಪಾಸ್ ಅನ್ನು ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ನವೀಕರಣಕ್ಕಾಗಿ ಮೀಸಲಾದ ಲಿಂಕ್ ಅನ್ನು ಶೀಘ್ರದಲ್ಲೇ ರಾಜ್‌ಮಾರ್ಗ್ ಯಾತ್ರಾ ಅಪ್ಲಿಕೇಶನ್‌ನಲ್ಲಿ ಹಾಗೂ NHAI ಮತ್ತು MoRTH ನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

READ IN ENGLISH : https://www.nammakudlaenglish.com/annual-toll-pass-for-%e2%82%b93000-from-now-on/

ಇದನ್ನೂ ಓದಿ: 6 ವರ್ಷದ ಮಗುವಿನ ಸಾವಿಗೆ ಕಾರಣವಾಯಿತೇ ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್!?

ಈ ಪಾಸ್‌ನಿಂದ 60 ಕಿ.ಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಗಳು ಪರಿಹಾರವಾಗಲಿದೆ. ಟೋಲ್‌ಗಳಲ್ಲಿ ಕಾಯುವ ಸಮಯ ಮತ್ತು ದಟ್ಟಣೆ ಕಡಿಮೆ ಯಾಗಲಿದೆ.

Continue Reading

LATEST NEWS

ಉಡುಪಿ: ಶಾಲಾ ಬಸ್ ಗೆ ಲಾರಿ ಡಿ*ಕ್ಕಿ; ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯ

Published

on

ಉಡುಪಿ: ಖಾಸಗಿ ಶಾಲಾ ಬಸ್ಸಿಗೆ ಹಿಂಬದಿಯಿಂದ ಲಾರಿ ಡಿ*ಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಧವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ತಾಲೂಕಿನ ಧರ್ಮವರ ಆಡಿಟೋರಿಯಂ ಬಳಿ ನಡೆದಿದೆ.


ಬ್ರಹ್ಮಾವರ ಜಿ.ಎಂ ವಿದ್ಯಾನಿಕೇತನ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಕುಂದಾಪುರದಿಂದ ಬಂದು ಧರ್ಮಾವರ ಆಡಿಟೋರಿಯಂ ಸರ್ಕಲ್ ಬಳಿ ಯೂ ಟರ್ನ್ ಮಾಡುವಾಗ ಹಿಂದಿನಿಂದ ಬಂದ ಲಾರಿ ಡಿ*ಕ್ಕಿಯಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.

READ IN ENGLISH : https://www.nammakudlaenglish.com/udupi-lorry-rams-into-school-bus-students-sustain-minor-injuries/

ಇದನ್ನೂ ಓದಿ: ಮಂಗಳೂರು: ಭೀಕರ ಕಾರು ಅಪಘಾತದಲ್ಲಿ NSUI ಮುಖಂಡ ಸಹಿತ ಇಬ್ಬರು ಸಾವು

ಅಪಘಾತದ ಸಂದರ್ಭದಲ್ಲಿ ವ್ಯಾನ್‌ನಲ್ಲಿ ವಿದ್ಯಾರ್ಥಿಗಳಿದ್ದು ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page