Connect with us

DAKSHINA KANNADA

50ನೇ ವರ್ಷದ ಐಕಳ ಬಾವ “ಕಾಂತಾಬಾರೆ – ಬೂದಾಬಾರೆ” ಜೋಡುಕರೆ ಕಂಬಳ; ಹೀಗಿದೆ ಫಲಿತಾಂಶ

Published

on

ಕಿನ್ನಿಗೋಳಿ: ಇತಿಹಾಸ ಪ್ರಸಿದ್ಧ ಐಕಳ ಬಾವ “ಕಾಂತಾಬಾರೆ – ಬೂದಾಬಾರೆ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಪ್ರಕಟವಾಗಿದೆ.

ಈ ಬಾರಿ ನಡೆದ ಕಂಬಳ ಕೂಟದಲ್ಲಿ ಕನೆಹಲಗೆ 12 ಜೊತೆ, ಅಡ್ಡಹಲಗೆ: 11 ಜೊತೆ, ಹಗ್ಗ ಹಿರಿಯ: 14 ಜೊತೆ, ನೇಗಿಲು ಹಿರಿಯ: 32 ಜೊತೆ, ಹಗ್ಗ ಕಿರಿಯ: 28 ಜೊತೆ, ನೇಗಿಲು ಕಿರಿಯ: 74 ಜೊತೆ ಸೇರಿದಂತೆ ಒಟ್ಟು 171 ಜೊತೆ ಕೋಣಗಳು ರೋಮಾಂಚನಕಾರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇನ್ನು ವಿಜೇತರ ವಿವರ ಹೀಗಿದೆ.

ಕನೆ ಹಲಗೆ:

ಪ್ರಥಮ:
(7.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

* ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ

ದ್ವಿತೀಯ:
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಕುಂಡೋಳಿ ಶ್ರೀ ದುರ್ಗಾ ನಿಲಯ ಸುಧೀರ್ ಪದ್ಮನಾಭ ಶೆಟ್ಟಿ
ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್

ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ
ಹಲಗೆ ಮುಟ್ಟಿದವರು: ಬೈಂದೂರು ರಾಘವೇಂದ್ರ

ಅಡ್ಡ ಹಲಗೆ:

ಪ್ರಥಮ: ನಾರಾವಿ ರಕ್ಷಿತ್ ಜೈನ್ (11.75)
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಇರುವೈಲು ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ (11.91)
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ತೃತೀಯ: ಮೋರ್ಲ ಗಿರೀಶ್ ಆಳ್ವ
ಹಲಗೆ ಮುಟ್ಟಿದವರು: ಬೈಂದೂರು ರಾಂಪಹಿತ್ಲು ರಾಘವೇಂದ್ರ

ಚತುರ್ಥ: ನಾರ್ಯ ಗುತ್ತು ಕುವೆತ್ತಬೈಲು ಮನಮೋಹನ್ ಕೊಂಡೆ ಬೊಳ್ಯಾರು “ಬಿ”
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ

ಹಗ್ಗ ಹಿರಿಯ:

ಪ್ರಥಮ: ಮಿಜಾರ್ ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ “ಬಿ” (11.49)
ಓಡಿಸಿದವರು: ಮಿಜಾರ್ ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ “ಎ” (11.76)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ತೃತೀಯ: ಲೊರೆಟ್ಟೊ ಮಹಲ್ ತೋಟ ಆನ್ಯ ಅನಿಲ್ ಮಿನೇಜಸ್
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ಚತುರ್ಥ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

ಹಗ್ಗ ಕಿರಿಯ:

ಪ್ರಥಮ: ಬಳ್ಕುಂಜೆಗುತ್ತು ಶ್ರೀಮತಿ ಮಲ್ಲಿಕಾ ಯಶವಂತ ಶೆಟ್ಟಿ “ಎ” (11.95)
ಓಡಿಸಿದವರು: ಅಜಿಲಮೊಗರು ಗಣೇಶ್

ದ್ವಿತೀಯ: ಎಲ್ಲೂರು ತೆಂಕರೆಗುತ್ತು ನಿಧಿ ಆದೇಶ್ ಸಂತೋಷ್ ಶೆಟ್ಟಿ “ಬಿ” (12.04)
ಓಡಿಸಿದವರು: ಕಾವೂರುದೋಟ ಸುದರ್ಶನ್

ತೃತೀಯ: ಶಿಬರೂರು ಮುಟ್ಟಿಕಲ್ಲು ಕೀರ್ತನ್ ರಾಜೇಶ್ ಪಾಣಾರ
ಓಡಿಸಿದವರು: ರೆಂಜಾಳ ಪಂಜಾಳ ಸಂದೇಶ್ ಶೆಟ್ಟಿ

ಚತುರ್ಥ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ “ಬಿ”
ಓಡಿಸಿದವರು: ಭಟ್ಕಳ ಶಂಕರ್

ನೇಗಿಲು ಹಿರಿಯ:

ಪ್ರಥಮ: ಮಾಣಿ ಹರೀಶ್ ಶೆಟ್ಟಿ “ಎ” (11.53)
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ದ್ವಿತೀಯ: ಎರ್ಮಾಳ್ ರೋಹಿತ್ ಹೆಗ್ಡೆ “ಬಿ” (11.77)
ಓಡಿಸಿದವರು: ಮಿಜಾರ್ ಅಶ್ವಥಪುರ ಶ್ರೀನಿವಾಸ ಗೌಡ

ತೃತೀಯ: ಮಾಳ ಆನಂದ ನಿಲಯ ದಿನೇಶ್ ಎ ಶೆಟ್ಟಿ
ಓಡಿಸಿದವರು: ಕಾವೂರುದೋಟ ಸುದರ್ಶನ್

ಚತುರ್ಥ: ನಾರ್ಯ ನಡಿಗುತ್ತು ರಚನ ನಾಯ್ಕ್
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ನೇಗಿಲು ಕಿರಿಯ:

ಪ್ರಥಮ: 80 ಬಡಗಬೆಟ್ಟು ಕಬ್ಯಾಡಿ ಹಿರಿಯಣ್ಣ ಶೆಟ್ಟಿ (11.25)
ಓಡಿಸಿದವರು: ಪಡು ಸಾಂತೂರು ಪೃಥ್ವಿರಾಜ್ ಪೂಜಾರಿ

ದ್ವಿತೀಯ: ಉಳೆಪಾಡಿ ಪುಲ್ಲೋಡಿಬೀಡು ಉದಯ್ ಶೆಟ್ಟಿ “ಎ” (11.41)
ಓಡಿಸಿದವರು: ಪುತ್ತಿಲ ಹೊಸಮನೆ ಚರಣ್ ಪೂಜಾರಿ

ತೃತೀಯ: ಮಿಯಾರು ಬೋರ್ಕಟ್ಟೆ ಕಟ್ಟಣಿಗೆ ಶ್ರೀಯಾನ್ ವಸಂತಿ ಶೆಟ್ಟಿ “ಎ”
ಓಡಿಸಿದವರು: ಒಂಟಿಕಟ್ಟೆ ರಿತೇಶ್ ಪೂಜಾರಿ

ಚತುರ್ಥ: ಮಿಯಾರು ಬೋರ್ಕಟ್ಟೆ ಕಟ್ಟಣಿಗೆ ಶ್ರೀಯಾನ್ ವಸಂತಿ ಶೆಟ್ಟಿ “ಬಿ”
ಓಡಿಸಿದವರು: ಬೈಂದೂರು ಮಂಜುನಾಥ ಗೌಡ

DAKSHINA KANNADA

ಬಜೆಟ್ ನಲ್ಲಿ ದ.ಕ ಜಿಲ್ಲೆ ಸಹಿತ ಕರಾವಳಿ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ, ಇದು ಅಮಲುಪ್ರೇರಿತ ಸರ್ಕಾರ-ಸತೀಶ್ ಕುಂಪಲ

Published

on

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಪ್ರದೇಶವನ್ನು ಕಡೆಗಣಿಸಿದ್ದಾರೆ. ಗ್ಯಾರೆಂಟಿ ಯೋಜನೆಗಳ ಬಗ್ಗೆ ಮಾತ್ರ ಗಮನ ಹರಿಸಿದ್ದಾರೆಯೇ ಹೊರತು ಅಭಿವೃದ್ಧಿ ಕೆಲಸಗಳಿಗೆ ಅನುದಾನ ಒದಗಿಸಿಲ್ಲ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ.

ಶನಿವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಕರಾವಳಿಯ ಜನರು ಈ ಬಜೆಟ್ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದರು. ಈ ಭಾಗದ ಶಾಸಕರು ವಿಧಾನ ಮಂಡಲದ ಅಧಿವೇಶನಗಳಲ್ಲಿ ಹಲವು ಪ್ರಸ್ತಾಪಗಳನ್ನು ಮುಂದಿಟ್ಟಿದ್ದರು. ಆದರೆ ಯಾವುದಕ್ಕೂ ಅನುದಾನ ಒದಗಿಸಿಲ್ಲ ಎಂದರು. ಅಲ್ಪ ಸಂಖ್ಯಾತ ಸಮುದಾಯಗಳನ್ನು ಅದರಲ್ಲೂ ಮುಖ್ಯವಾಗಿ ಮುಸ್ಲಿಮರನ್ನು ಓಲೈಸುವ ವೋಟ್ ಬ್ಯಾಂಕ್ ಬಜೆಟ್ ಇದಾಗಿದೆ.

ಸಾಲ ಮಾಡುವ ಕೆಲಸವನ್ನು ಮಾತ್ರ ಮಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಸಾಲದ ಮೊತ್ತ 5 ಲಕ್ಷ ಕೋಟಿ ರೂಪಾಯಿಗೆ ಏರಿದೆ.  2013 ರಲ್ಲಿ ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಾಲದ ಮೊತ್ತ 1.23 ಲಕ್ಷ ಕೋಟಿ ರೂಪಾಯಿ ಇತ್ತು. ಅಂದಿನಿಂದ ಸಾಲವನ್ನೇ ಮಾಡುತ್ತಾ ಬಂದಿದ್ದಾರೆ ಎಂದು ಟೀಕಿಸಿದರು.  ಹಾಲು ಉತ್ಪಾದಕರ ಪ್ರೋತ್ಸಾಹ ಧನ 9 ತಿಂಗಳುಗಳಿಂದ ಪಾವತಿಯಾಗಿಲ್ಲ.

ಸುಮಾರು 900 ಕೋಟಿ ರೂ. ಬಾಕಿ ಇದೆ. ವಿವಿಧ ನಿಗಮಗಳಿಗೆ ಅನುದಾನ ಕಡಿಮೆ ಮಾಡಿದೆ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ವರ್ಗದವರ ನಿಗಮಗಳಿಗೆ ಅನುದಾನ ಕಡಿಮೆ ಮಾಡುವ ಮೂಲಕ ಅನ್ಯಾಯ ಎಸಗಿದೆ. ಇದೊಂದು ಅಮಲು ಪ್ರೇರಿತ ಸರಕಾರ. ಕಂಬಳ ಕ್ರೀಡೆಗೆ ಅನುದಾನ ಒದಗಿಸಿಲ್ಲ. ದ.ಕ. ಉಡುಪಿ ಜಿಲ್ಲೆಯಲ್ಲಿ ಐಟಿ ಉದ್ಯಮಕ್ಕೆ ಅನುದಾನ ನೀಡಿಲ್ಲ. ಮೀನುಗಾರಿಕೆಗೆ ಯಾವುದೇ ಹೊಸ ಯೋಜನೆ ಇಲ್ಲ. ಕಡಲ ಕೊರೆತ ಸಮಸ್ಯೆಗೆ ಪರಿಹಾರ ಇಲ್ಲ. ಅಭಿವೃದ್ಧಿಗೆ ಮಾರಕವಾದ ಬಜೆಟ್ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕೊಟ್ಟಾರಿ , ಬಿಜೆಪಿ ಮುಖಂಡ ನಿತಿನ್ ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.

 

Continue Reading

DAKSHINA KANNADA

ಬಿಜೆಪಿ ಮಾಡಿದ ಕೆಲಸಗಳಿಗೆ ಕಾಂಗ್ರೆಸ್‌ ಕ್ರೆಡಿಟ್ ಪಡೆದುಕೊಳ್ತಿರೋದು ನಾಚಿಕೇಡು-ಶಾಸಕ ಕಾಮತ್ ಗರಂ

Published

on

ಮಂಗಳೂರು:  ದಕ್ಷಿಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪ ಸಮಸ್ಯೆ ಇರುವ ಕಡೆಗಳಲ್ಲಿ ಅನುದಾನ ಮಂಜೂರು ಆಗಿದೆ ಎಂದು 28 ಜಾಗಗಳಿಗೆ ತೆರಳಿ ಕಾಮಗಾರಿಗೆ ಅನುದಾನ ನೀಡಲಾಗಿದೆ ಎಂದು ಹೇಳುತ್ತಿರುವ ಕಾಂಗ್ರೆಸ್ ನಾಯಕರು ದಿನನಿತ್ಯ ಪತ್ರಿಕೆಗಳಲ್ಲಿ ಪುಕ್ಕಟೆ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಅವರು ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ನಿರಂತರವಾಗಿ ಒತ್ತಡ ಹೇರಿದ ಫಲವಾಗಿ ಪ್ರಕೃತಿ ವಿಕೋಪದಡಿ ಹಲವು ಕಡೆಗಳಲ್ಲಿ ಕಾಮಗಾರಿ ಮಾಡಲು ಅನುದಾನ ಮಂಜೂರು ಮಾಡಲಾಗಿದೆ. ಆದರೆ ಒಂದು ರೂಪಾಯಿ ಕೆಲಸ ಮಾಡದೆ ಅದರ ಕ್ರೆಡಿಟ್‌ ಅನ್ನು ಕಾಂಗ್ರೆಸ್ಸಿಗರು ಪಡೆಯುತ್ತಿದ್ದಾರೆ ಎಂದು ದೂರಿದರು.

ಸರಕಾರಕ್ಕೆ ಅದರದ್ದೇ ಆದ ನಿಯಮಗಳಿವೆ. ಅದನ್ನು ಮೀರಿ ಯಾರೂ ಹೋಗಬಾರದು. ಆದರೆ ವೇದವ್ಯಾಸ್ ಕಾಮತ್‌ ಪ್ರಯತ್ನ ಪಟ್ಟು ಈ ಬಗ್ಗೆ ಅಧಿವೇಶನದಲ್ಲಿ ಮಾತನಾಡಿ ಕಷ್ಟಪಟ್ಟು  ತಂದಿರುವ ಅನುದಾನದ ವಿಚಾರಗಳನ್ನು ತಮ್ಮದೆಂದು ಬಿಂಬಿಸುವುದನ್ನು ಖಂಡಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದಿಂದ ಯಾವುದೇ ಅನುದಾನವನ್ನು ತರಲಾಗದೆ ಹತಾಶರಾಗಿ ಕಾಂಗ್ರೆಸ್ ನಾಯಕರು  ಇದು ನಾನೇ ತಂದ್ದು ಎಂದು ಫೋಟೋ ಕ್ಲಿಕ್ಕಿಸಿ ಪತ್ರಿಕೆಗೆ ನೀಡೋದು ಸಣ್ಣತನ. ಕಾಂಗ್ರೆಸ್ಸಿಗರ  ಪ್ರಚಾರದ ಭರಾಟೆಯಲ್ಲಿ ನಿಜವಾಗಿಯೂ ಅನ್ಯಾಯವಾಗುತ್ತಿರುವ ಆಶಾ ಕಾರ್ಯಕರ್ತರಿಗೆ ಇವರೇನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ವೇದವ್ಯಾಸ್‌ ಆಶಾ ಕಾರ್ಯಕರ್ತರನ್ನು ಬೀದಿಪಾಲು ಮಾಡುವ ಕೆಲಸ ನಿಲ್ಲಿಸಿ. ಇದನ್ನು ಬಿಜೆಪಿ ಪಕ್ಷ ಒಪ್ಪಲ್ಲ.  ಮುಂದೆ ನಮ್ಮ ಸರ್ಕಾರ ಕೂಡಾ ಬರುತ್ತದೆ. ರಾಜ್ಯಸರ್ಕಾರದ ಆರೋಗ್ಯ ಇಲಾಖೆಯಿಂದ ಅನುದಾನ ತರುವ ಕೆಲಸ ನಾವು ಮಾಡುತ್ತೇವೆ. ಕೇಂದ್ರ ಸರಕಾರದ ಜೊತೆ ಮಾತನಾಡಿ ಅವರ ನೋವಿಗೆ ಬಿಜೆಪಿ ಸ್ಪಂದಿಸುವುದಾಗಿ ನುಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಪ್ರಮುಖರು ಉಪಸ್ಥಿತರಿದ್ದರು.

Continue Reading

DAKSHINA KANNADA

15ನೇ ವರ್ಷದ ಮೂಡೂರು – ಪಡೂರು ‘ಬಂಟ್ವಾಳ ಕಂಬಳ’ಕ್ಕೆ ಚಾಲನೆ

Published

on

ಬಂಟ್ವಾಳ : ಬಂಟ್ವಾಳದ ಮೂಡೂರು-ಪಡೂರು ಜೋಡುಕರೆ ಕಂಬಳ ಸಮಿತಿ ವತಿಯಿಂದ ನಾವೂರ ಕೂಡಿಬೈಲು ಎಂಬಲ್ಲಿನ ಮೂಡೂರು – ಪಡೂರು ಜೋಡುಕರೆಯಲ್ಲಿ 15ನೇ ವರ್ಷದ ‘ಬಂಟ್ವಾಳ ಕಂಬಳ’ ಇಂದು(ಮಾ.07) ಮುಂಜಾನೆ ಸಂಪ್ರದಾಯಬದ್ಧವಾಗಿ ಆರಂಭಗೊಂಡಿತು.

ಮುಂಜಾನೆ ನಾಗದೇವರ ಕಟ್ಟೆ ಬಳಿ ಪೂಜೆ, ಪ್ರಾರ್ಥನೆ ನಡೆದ ಬಳಿಕ ಕಂಬಳ ಕರೆ ಪೂಜೆ ನಡೆಯಿತು. ಮಾಜಿ ಸಚಿವ, ಕಂಬಳ ಸಮಿತಿ ಗೌರವಾಧ್ಯಕ್ಷ ಬೆಳ್ಳಿಪ್ಪಾಡಿ ರಮಾನಾಥ ರೈ ನೇತೃತ್ವದಲ್ಲಿ ನಡೆಯುತ್ತಿರುವ ಕಂಬಳಕ್ಕೆ ಗಣ್ಯರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ತೆಂಗಿನ ಕಾಯಿ ಒಡೆದು ತುಳುನಾಡಿನ ಸಂಪ್ರದಾಯ ಪ್ರಕಾರ ಮಂಜೊಟ್ಟಿ ಬಳಿ ಕರೆ ಉದ್ಘಾಟನೆಗೊಂಡಿತು.

ಸಭಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸೋಲೂರು ಮಹಾ ಸಂಸ್ಥಾನದ ಶ್ರೀವಿಖ್ಯಾತಾನಂದ ಸ್ವಾಮೀಜಿ, ಬಾರ್ಕೂರು ಮಹಾ ಸಂಸ್ಥಾನದ ಶ್ರೀ ವಿದ್ಯಾವಾಚಸ್ಪತಿ ಡಾ. ಸಂತೋಷ್ ಗುರೂಜಿ, ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ, ಅಲ್ಲಿಪಾದೆ ಚರ್ಚ್‌ ಧರ್ಮಗುರು ವಂ. ರಾಬರ್ಟ್ ಡಿಸೋಜ ಭಾಗವಹಿಸಿದ್ದರು.

ಇದನ್ನೂ ಓದಿ : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ: ಬಿ.ಸಿ. ರೋಡ್‌ನ ನವೀಕೃತ ಹವಾನಿಯಂತ್ರಿತ ಶಾಖೆಯ ಉದ್ಘಾಟನೆ

ಅಧ್ಯಕ್ಷತೆಯನ್ನು ರಮಾನಾಥ ರೈ ವಹಿಸಿದ್ದರು.  ಕಂಬಳ ಸಮಿತಿ ಅಧ್ಯಕ್ಷ ಪಿಯುಸ್ ಎಲ್. ರೋಡ್ರಿಗಸ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್‌ ಶೆಟ್ಟಿ, ಸಂಚಾಲಕ ಬಿ. ಪದ್ಮಶೇಖರ ಜೈನ್, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

 

Continue Reading
Advertisement

Trending

Copyright © 2025 Namma Kudla News

You cannot copy content of this page