Connect with us

DAKSHINA KANNADA

15 ನಿಮಿಷದಲ್ಲಿ 4 ಕೊಲೆ-ಇದು ವಿಶ್ವ ದಾಖಲೆ ಎಂಬ ಸ್ಟೋರಿ ವೈರಲ್

Published

on

ಉಡುಪಿ : ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಇಡೀ ದೇಶದ ಜನರೇ ಈ ನೀಚ ಕೃತ್ಯಕ್ಕೆ ಕಣ್ಣೀರಿಡುತ್ತಿದ್ದರೆ ನೀಚ ಮನಸ್ಥಿತಿಯ ವ್ಯಕ್ತಿಯೊಬ್ಬ ಇದನ್ನು ಸಂಭ್ರಮಿಸಿದ್ದಾನೆ. ಈ ದುಷ್ಕೃತ್ಯವನ್ನು ವಿರೋಧಿಸುವುದನ್ನು ಬಿಟ್ಟು ಹಂತಕನ ಫೋಟೋಗೆ ಕಿರೀಟ ಇಟ್ಟು ಇನ್ಸಾಗ್ರಾಮ್‌ನಲ್ಲಿ ಸ್ಟೋರಿ ಹಾಕಿದ್ದಾನೆ. ಇದೀಗ ಉಡುಪಿ ಪೊಲೀಸರು ಈ ವ್ಯಕ್ತಿಗೆ ಬಿಸಿ ಮುಟ್ಟಿಸಿದ್ದಾರೆ. ಪ್ರಕರಣ ದಾಖಲಾದ ಬೆನ್ನಲ್ಲೇ ಇನ್‌ಸ್ಟಾ ಗ್ರಾಂನಿಂದ ಈ ಪೇಜ್ ಡಿಲೀಟ್ ಆಗಿದೆ.

ಹಿಂದೂ ಮಂತ್ರ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂತಕ ಪ್ರವೀಣ್ ಅರುಣ್ ಚೌಗುಲೆಯ ಫೋಟೋ ಹಾಕಿ, ಆತನಿಗೆ ಕಿರೀಟ ಇಟ್ಟು, 15 ನಿಮಿಷದಲ್ಲಿ 4 ಕೊಲೆ, ಇದು ವರ್ಲ್ಡ್ ರೆಕಾರ್ಡ್ ಎಂದು ಬರೆದು ವ್ಯಕ್ತಿಯೊಬ್ಬ ವಿಕೃತಿ ಮೆರೆದಿದ್ದ. ಈ ವಿಚಾರ ಉಡುಪಿ ಪೊಲೀಸರ ಗಮನಕ್ಕೆ ಬಂದಿದ್ದು, ತಕ್ಷಣ ಅವರು ಕ್ರಮಕ್ಕೆ ಮುಂದಾಗಿದ್ದಾರೆ. ಪೋಸ್ಟ್ ಹಾಕಿದಾತನ ವಿರುದ್ಧ ಸೆನ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಹಿಂದೂ ಮಂತ್ರ ಖಾತೆಯಲ್ಲಿ ಹಾಕಲಾಗಿದ್ದ ಸ್ಟೋರಿ ಡಿಲೀಟ್ ಆಗಿದೆ.

DAKSHINA KANNADA

ರಸ್ತೆ ಅಪಘಾತದಿಂದ ಗಾಯಗೊಂಡಿದ್ದ ಯುವ ವಕೀಲ ಸಾವು

Published

on

ಮಂಗಳುರು : ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ಕಳೆದ ವಾರ ಅಪಘಾತವೊಂದು ಸಂಭವಿಸಿದ ಪರಿಣಾಮ ಕೈಕುಂಜೆ ನಿವಾಸಿ  ಯುವ ವಕೀಲ ಪ್ರಥಮ್ ಬಂಗೇರ (27) ನಿನ್ನೆ (ಮಾ.17) ಚಿಕಿತ್ಸೆಗೆ ಸ್ಪಂದಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದು ಬಿ.ಸಿ.ರೋಡಿನ ವಕೀಲ ಕೆ. ವೆಂಕಟ್ರಮಣ ಶೆಣೈಯವರ ಬಳಿ ವಕೀಲ ವೃತ್ತಿಯನ್ನು ಅಭ್ಯಾಸ ಮಾಡುತ್ತಿದ್ದ ಪ್ರಥಮ್ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚುರುಕಾಗಿದ್ದು, ಒಳ್ಳೆಯ ನೃತ್ಯಪಟುವಾಗಿದ್ದರು.

ಕಳೆದ ನವೆಂಬರ್ ತಿಂಗಳಿನಲ್ಲಿ ಇವರ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಮೃತರ ಎರಡು ಕಣ್ಣು, ಎರಡು ಕಿಡ್ನಿ, ಲಿವರ್ ಮತ್ತು ಕರುಳಿನ ಭಾಗವನ್ನು ದಾನವಾಗಿ ನೀಡಿ ಮನೆಯವರು ಮಾನವೀಯತೆ ತೋರಿದ್ದಾರೆ. ಮೃತರು ತಂದೆ ಮತ್ತು ಸಹೋದರನನ್ನು ಅಗಲಿದ್ದಾರೆ.

Continue Reading

DAKSHINA KANNADA

ಫೇಸ್‌ಬುಕ್ ಖಾತೆಯಿಂದ ಬಂದ ಆ ಮೆಸೇಜ್ ನಂಬಿ ಮೋಸ ಹೋದ ಮಹಿಳೆ

Published

on

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬರುವ ಮೆಸೇಜ್‌ಗಳನ್ನು ನಂಬಿ ಮೋಸ ಹೋಗುವವರು ಸಾಕಷ್ಟು ಜನ ಇದ್ದಾರೆ. ಎಷ್ಟೇ ಎಚ್ಚರಿಕೆ ನೀಡಿದರೂ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದೀಗ ಅಂತಹದ್ದೇ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದ್ದು, ಮಹಿಳೆಯೊಬ್ಬಳು ಫೇಸ್‌ಬುಕ್ ಖಾತೆಯೊಂದರಿಂದ ಬಂದ ಸಂದೇಶವನ್ನು ನಂಬಿ 7.10 ಲಕ್ಷ ರೂ.ಕಳೆದುಕೊಂಡು ವಂಚನೆಗೊಳಗಾದ ಘಟನೆ ನಗರದಲ್ಲಿ ನಡೆದಿದೆ.

“ಡಾ. ತುಷಾರ್ ಪಾಟೀಲ್ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ಹಾಯ್ ಎನ್ನುವ ಮೆಸೇಜ್ ತನಗೆ ಬಂತು. ಅಲ್ಲದೆ ತಾನು ಯು ಹೆಲ್ತ್ ಮಿಯಾಮಿ ಫ್ಲೋರಿಡಾದಲ್ಲಿ ನ್ಯೂರೋರಜಿಸ್ಟ್ ಆಗಿದ್ದು, ಮದುವೆ ಅಗಿ ವಿಚ್ಛೇದನವಾಗಿದೆ. ಒಂದು ಮಗು ಕೂಡ ಇದೆ ಎಂದು ಹೇಳಿದ್ದಾನೆ. ಬಳಿಕ ತನ್ನ ವಾಟ್ಸ್‌ಆ್ಯಪ್ ಸಂಖ್ಯೆ ಪಡೆದು ಅದಕ್ಕೆ ಮೆಸೇಜ್ ಮಾಡಿ, ನಿಮ್ಮ ಸ್ನೇಹಕ್ಕಾಗಿ ಗಿಫ್ಟ್ ಆಗಿ ಪ್ಲಾಟಿನಂ ವಾಚ್, ಡೈಮಂಡ್, ಲ್ಯಾಪ್‌ಟಾಪ್, ಐಫೋನ್, 90 ಸಾವಿರ ಯುಎಸ್ ಡಾಲರ್ ಹಾಗೂ ಬಂಗಾರ ಕಳುಹಿಸಿಕೊಡುತ್ತೇನೆ. ವಿಮಾನ ನಿಲ್ದಾಣದಿಂದ ಕರೆ ಬರಲಿದೆ” ಎಂದು ಹೇಳಿದ್ದಾನೆ.

“ಮರುದಿನ ನನಗೆ ಬಂದ ಫೋನ್ ಕರೆಯೊಂದು ಬಂದಿದ್ದು, ‘ಡಾ. ತುಷಾರ್ ಪಾಟೀಲ್‌ರಿಂದ ಗಿಫ್ಟ್ ಬಂದಿದೆ. ಸೆಕ್ಯೂರಿಟಿ ಡಿಪಾಸಿಟ್ ಹಾಗೂ ಲಾಂಡರಿಂಗ್ ಕ್ಲಿಯರೆನ್ಸ್‌ಗಾಗಿ ಹಣ ಕಳುಹಿಸಿ’ ಎಂದು ತಿಳಿಸಿದ್ದಾನೆ. ಅದನ್ನು ನಂಬಿ ನಾನು ವಿವಿಧ ಖಾತೆಗಳಿಗೆ 7.10 ಲಕ್ಷ ರೂ. ವರ್ಗಾವಣೆ ಮಾಡಿದ್ದೇನೆ. ಬಳಿಕ ಗಿಫ್ಟ್ ನೀಡದೆ ವಂಚನೆ ಮಾಡಿದ್ದಾರೆ” ಎಂಬುವುದಾಗಿ ಮಹಿಳೆ ದುರು ನೀಡಿದ್ದಾಳೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಮಂಗಳೂರು : ದೈತ್ಯಾಕಾರದ ಮರದ ಕೊಂಬೆ ಮುರಿದು ಬಿದ್ದು ಮೂವರಿಗೆ ಗಾಯ

Published

on

ಮಂಗಳೂರು : ದೈತ್ಯಾಕಾರದ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿನಿಯರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರಿನ ನಗರದ ಹಂಪನಕಟ್ಟೆ ಜಂಕ್ಷನ್ ಬಳಿಯ ಶೆಟ್ಟಿ ಆಟೋ ಪಾರ್ಕ್ ಬಳಿ ನಿನ್ನೆ (ಮಾ.17) ಸಂಜೆ ನಡೆದಿದೆ.

ಮಲ್ಲೂರು ಉದ್ದಬೆಟ್ಟು ನಿವಾಸಿಗಳಾದ ಮರಿಯಂ ಮುಫೀದಾ (18), ಫಾಹಿಮಾ ಮರಿಯಂ (17) ಹಾಗೂ ಅಬ್ಬೆಟ್ಟು ನಿವಾಸಿ ಅಫ್ರತ್ (18) ಗಾಯಾಳುಗಳು ಎಮದು ಗುರುತಿಸಲಾಗಿದೆ. ಈ ಪೈಕಿ ಅಫ್ರತ್‌ಗೆ ಹೆಚ್ಚು ಗಾಯವಾಗಿದೆ.

ನಿನ್ನೆ ಸಂಜೆ ಸುಮಾರು 4:30ಕ್ಕೆ ಕಾಲೇಜು ಮುಗಿಸಿ ಮನೆಗೆ ತೆರಳಲು ಹಂಪನಕಟ್ಟೆಯ ಬಳಿ ಬಸ್ಸಿಗೆ ಕಾಯುತ್ತಿದ್ದಾಗ ಮರದ ಕೊಂಬೆ ಬಿದ್ದಿದೆ. ಘಟನೆ ಸಂಭವಿಸಿದ ಪ್ರದೆಶವು ಅತೀ ಹೆಚ್ಚು ಜನರು ಓಡಾಡುವ ಪ್ರದೇಶವಾಗಿದ್ದು ಬಹುತೇಕ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ವಿಷಯ ತಿಳಿದ ಕೂಡಲೇ ಪಾಲಿಕೆಯ ಮಾಜಿ ಸದಸ್ಯೆ ಪೂರ್ಣಿಮಾರನ್ನು ಸ್ಥಳಕ್ಕೆ ಭೇಟಿ ನೀಡುವಂತೆ ಮತ್ತು ಜಿಲ್ಲಾಧಿಕಾರಿ ಹಾಗೂ ನಗರ ಪಾಲಿಕೆ ಆಯುಕ್ತರಿಗೆ ಕರೆ ಮಾಡಿ ಗಾಯಾಳುಗಳ ಚಿಕಿತ್ಸಾ ವೆಚ್ಚ ಸಹಿತ ಕೊಂಬೆಯ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಪ್ರಸ್ತುತ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಇನ್ನೂ ಕೆಲವರಿಗೆ ಗಾಯವಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರದ ಕೊಂಬೆ ಮುರಿದು ಬಿದ್ದ ಬಗ್ಗೆ ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗವು ತಕ್ಷಣವೇ ಸ್ಥಳಕ್ಕಾಗಮಿಸಿ ಮರದ ಕೊಂಬೆಗಳನ್ನು ತೆರವುಗೊಳಿಸಿತು.

Continue Reading
Advertisement

Trending

Copyright © 2025 Namma Kudla News

You cannot copy content of this page