Connect with us

LATEST NEWS

ಪತ್ನಿ, ಮಕ್ಕಳಿಗೆ ವಿಷವುಣಿಸಿ ಗಂಡ ಆತ್ಮಹತ್ಯೆ: ಡೆತ್‌ನೋಟ್‌ ಪತ್ತೆ- ಮತಾಂತರದ ವಾಸನೆ

Published

on

ಮಂಗಳೂರು: ನಗರದ ಮೋರ್ಗನ್ಸ್‌ಗೇಟ್‌ ಬಳಿ ಪತ್ನಿ, ಮಕ್ಕಳಿಗೆ ವಿಷವುಣಿಸಿ ಗಂಡ ಆತ್ಮಹತ್ಯೆಗೈದ ಘಟನೆಗೆ ತಿರುವು ಸಿಕ್ಕಿದೆ. ಸ್ಥಳದಲ್ಲಿ ಡೆತ್‌ ನೋಟ್‌ ಪತ್ತೆಯಾಗಿದೆ.

ಮತಾಂತರ ವಾಸನೆ ಕಂಡುಬಂದಿದೆ. ಘಟನೆ ನಗರದ ಜೆಪ್ಪು ಮಾರ್ಕೆಟ್‌ ಬಳಿಯ ಭಗಿನಿ ಸಮಾಜ ಬಳಿ ನಡೆದಿದೆ.

ಈ ಹಿಂದೆ ಪತ್ನಿ ನಾಪತ್ತೆಯಾಗಿದ್ದಳು
ಈ ದಂಪತಿ ಕಳೆದ 8 ವರ್ಷದಿಂದ ವೆಲೆನ್ಸಿಯಾದ ಫ್ಲಾಟ್‌ನಲ್ಲಿ ವಾಚ್‌ ವೆನ್‌ ಕೆಲಸ ಮಾಡಿಕೊಂಡಿದ್ದರು. ಅಲ್ಲಿ ಆಗಾಗ ದಂಪತಿ ಮಧ್ಯೆ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಪತ್ನಿ ಪಾಂಡೇಶ್ವರ ಠಾಣೆಗೆ ದೂರು ಸಹ ನೀಡಿದ್ದಳು.

ಅದಾದ ಮೇಲೆ ನಾಪತ್ತೆಯಾಗಿದ್ದಳು, ಈ ಹಿನ್ನೆಲೆಯಲ್ಲಿ ಗಂಡ ನಾಗೇಶ್‌ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಅದಾದ ನಂತರ ಆಕೆ ಪತ್ತೆಯಾಗಿ ಮನೆಗೆ ಬಂದಿದ್ದಳು. ಈ ಮಧ್ಯೆ ದಂಪತಿ ಫ್ಲಾಟ್‌ ತೊರೆದಿದ್ದರು. ಇದೀಗ ಮೃತದೇಹ ಪತ್ತೆಯಾದ ಮನೆಗೆ ಬಂದು 15 ದಿನಗಳಾಗಿವೆ.
ಡೆತ್‌ ನೋಟ್‌ ಸಿಕ್ಕಿದೆ
ಮೃತದೇಹ ಪತ್ತೆಯಾದ ಸ್ಥಳದಲ್ಲಿ ಡೆತ್‌ ನೋಟ್‌ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಡೆತ್‌ನೋಟ್‌ನಲ್ಲಿ ನೂರ್‌ ಜಹಾನ್‌ ಎಂಬ ಮಹಿಳೆಯ ಹೆಸರು ಉಲ್ಲೇಖಿಸಲಾಗಿದೆ. ನೂರ್‌ ಜಹಾನ್‌ ಬಿಜೈನ ನಿವಾಸಿಯಾಗಿದ್ದು,

ಆಕೆಯ ಮನೆಗೆ ವಿಜಯಲಕ್ಷ್ಮಿ ಕೆಲಸಕ್ಕೆ ಹೋಗುತ್ತಿದ್ದಳು. ಅಲ್ಲಿ ಆಕೆಯನ್ನು ಮತಾಂತರ ಮಾಡಿದ್ದರು. ಇದರಿಂದ ಆಕೆ ಆಗಾಗ ಮನೆಯಿಂದ ನಾಪತ್ತೆಯಾಗುತ್ತಿದ್ದಳು ಎಂದು ಡೆತ್‌ ನೋಟ್‌ನಲ್ಲಿ ಪತಿ ನಾಗರಾಜ್‌ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರೈಡ್‌ ರೈಸ್‌ನಲ್ಲಿ ವಿಷವುಣಿಸಿ ಕೊಲೆ
ನಿನ್ನೆ ರಾತ್ರಿ ವೇಳೆ ಪ್ರೈಡ್‌ ರೈಸ್‌ ಜೊತೆಗೆ ಮನೆಗೆ ಬಂದಿದ್ದ ನಾಗೇಶ್‌ ಶೇರಿಗುಪ್ಪಿ ಪತ್ನಿ ಹಾಗೂ ಮಕ್ಕಳಿಗೆ ಅದರಲ್ಲಿ ವಿಷ ಬೆರೆಸಿ ಕೊಟ್ಟಿದ್ದಾನೆ.

ಇದಾದ ನಂತರ ಆತನೂ ಪತ್ನಿಯ ಶಾಲಿನಿಂದ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಿಳೆ ನೂರ್‌ ಜಹಾನ್‌ ಪೊಲೀಸ್‌ ವಶಕ್ಕೆ
ಇದೀಗ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ ಮಹಿಳೆಯನ್ನು ಸದ್ಯ ಮಂಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

LATEST NEWS

ಪರ್ಯಾಯ ಮೆರವಣಿಗೆಗೆ ಭಗವಾಧ್ವಜ ಮೂಲಕ ಚಾಲನೆ ಕೊಟ್ಟಿದ್ದು, ಪಾಕಿಸ್ತಾನ ಧ್ವಜ ಹಿಡಿದಲ್ಲ-ಶಾಸಕ ಯಶ್ಪಾಲ್

Published

on

ಉಡುಪಿ: ಉಡುಪಿ ಪರ್ಯಾಯ ಮಹೋತ್ಸವಕ್ಕೆ ಜಿಲ್ಲಾಧಿಕಾರಿಗಳು ಕೇಸರಿ ಧ್ವಜ ತೋರಿಸಿ ಚಾಲನೆ ನೀಡಿರುವ ವಿಚಾರ ವಿವಾದವಾಗಿ ಮಾರ್ಪಟ್ಟಿದೆ. ಇದಕ್ಕೆ ಈಗಾಗಲೇ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ನಗರಸಭೆಯ ಆಡಳಿತ ಅಧಿಕಾರಿಯಾಗಿದ್ದ ಹಿನ್ನೆಲೆಯಲ್ಲಿ ತಾನು ಭಾಗಿಯಾಗಿದ್ದೇನೆ ವಿನಃ ಯಾವುದೇ ರಾಜಕೀಯ ಕಾರಣಗಳಿಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ಜಿಲ್ಲಾಧಿಕಾರಿ ಕೈಗೆ ಕೇಸರಿ ಧ್ವಜ ಕೊಟ್ಟಿರುವ ಉಡುಪಿ ಶಾಸಕ ಯಶಪಾಲ್  ಸುವರ್ಣ ಅವರು ಜಿಲ್ಲಾಧಿಕಾರಿ ಸ್ವರೂಪ ಪರ ಮಾತನಾಡಿದ್ದಾರೆ.

ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಆಕ್ಷೇಪಕ್ಕೆ ಅರ್ಥ ಇಲ್ಲ, ಪರ್ಯಾಯ ಮೆರವಣಿಗೆ ಭಗವಾಧ್ವಜ ಮೂಲಕ ಚಾಲನೆ ಕೊಟ್ಟಿದ್ದಾರೆ. ಹಿಂದೆಯೂ ಕೂಡ ಇದೇ ರೀತಿ ಚಾಲನೆ ನೀಡಲಾಗುತ್ತಿತ್ತು. ಒಂದು ವೇಳೆ ಅವರು ಪಾಕಿಸ್ತಾನ ಧ್ವಜ ಕೊಟ್ಟಿದ್ದರೆ ಟೀಕೆ ಮಾಡಬೇಕಿತ್ತು. ಡಿಸಿ ಅವರ ಸ್ಥಾನದಲ್ಲಿ ಅಂದು ನಮಗೆ ಉಸ್ತುವಾರಿ ಸಚಿವರು ಲಭಣ್ಯವಿರುತ್ತಿದ್ದರೆ ಅವರಿಮದಲೇ ಭಗವಾಧ್ವ ಹಜ ಮೂಲಕ ಚಾಲನೆ ನೀಡುತ್ತಿದ್ದೆವು. ಆವಾ್ಗಲೂ ಇವರು ಇದೇ ರೀತಿ ಅವರನ್ನು ರಾಜೀನಾಮೆಗೆ ಒಒತ್ತಾಯಿಸುತ್ತಿದ್ರಾ ಎಂಬುವುದು ಪ್ರಶ್ನೆಯಾಗಿದೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದವರ ಮೇಲೆ ಕ್ರಮ ಕೈಗೊಂಡಿಲ್ಲ. ಬೇರೆ ಬೇರೆ ಸಂದರ್ಭದಲ್ಲಿ ಪಾಕಿಸ್ತಾನ ಧ್ವಜ ಹರಿದಾಗ ಕಣ್ಣು ಮುಚ್ಚಿ ಕೂರುತ್ತಾರೆ.   ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆಯನ್ನು ಕೊಡಲಿ. ಇಲ್ಲವಾದರೆ ಅದೆಷ್ಟೇ ದೊಡ್ಡ ರಾಜಕೀಯ ನಾಯಕ ಬಂದ್ರೂ ಕೂಡಾ ಇನ್ಮುಂದೆ ನಾವು ಭಗವಾಧ್ವಜ ಮೂಲಕವೇ ಸ್ವಾಗತ ಕೊಡುತ್ತೇವೆ ಇದು ಅವರಿಗೆ ನನ್ನ ಓಪನ್ ಚಾಲೆಂಜ್.  ಪರ್ಯಾಯದ  ಯಶಸ್ಸನ್ನು ಇವರಿಗೆ ಸಹಿಸಲು ಆಗಲ್ಲ ಎಂದು ಟೀಕಿಸಿದ್ದಾರೆ. ಇನ್ನು ಉಡುಪಿ ಪರ್ಯಾಯಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂಧೂ ಅವರು ಪ್ರಶ್ನಿಸಿ ವಾಗ್ದಾಳಿ ಮಾಡಿದ್ದಾರೆ.

 

Continue Reading

LATEST NEWS

ಉಡುಪಿ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ, ಕಾರಣ ನಿಗೂಢ

Published

on

ಉಡುಪಿ: ಪ್ರೌಢ ಶಾಲೆಯ ವಿದ್ಯಾರ್ಥಿನಿಯೊಬ್ಬಳು ವಾಸವಾಗಿದ್ದ ಬಿಡಾರದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಉಡುಪಿಯ ಬೀಡಿನಗುಡ್ಡೆಯಲ್ಲಿ ನಡೆದಿದೆ.

ಬೋರ್ಡ್ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಬರ್ಮವ್ವ ಮೃತ ಬಾಲಕಿ. ಖಾಸಗಿ ನಿವೇಶನದಲ್ಲಿದ್ದ ಜೋಪಡಿಯನ್ನು ಬಾಡಿಗೆ ಪಡೆದುಕೊಂಡು ಮೃತ ಬಾಲಕಿಯ ಹೆತ್ತವರು‌ ವಾಸವಾಗಿದ್ದರು. ಮನೆ ಮಂದಿ ಬೆಳಿಗ್ಗೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಬಾಲಕಿಯಿಂದ ಈ ಕೃತ್ಯ ನಡೆದಿದೆ.

ನಗರ ಪೋಲಿಸ್  ಠಾಣೆಯ ಎಸ್ ಐ ಗಂಗಪ್ಪ, ಮುಖ್ಯ ಆರಕ್ಷಕಿಯರಾದ ಆಶಾ ಲತಾ, ಜಾಸ್ವ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದ್ದಾರೆ. ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ಮೃತ ದೇಹವನ್ನು ನೇಣು ಕುಣಿಕೆಯಿಂದ ತೆರವುಗೊಳಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಇಲಾಖೆಗೆ ನೆರವಾದರು.

Continue Reading

DAKSHINA KANNADA

ನಾಳೆ(ಜ.21) ಕದ್ರಿ ಮ್ಯೂಸಿಕಲ್ ನೈಟ್ಸ್ 2026 : ರಿಷಬ್ ಶೆಟ್ಟಿ ಭಾಗಿ

Published

on

ಮಂಗಳೂರು : ಕದ್ರಿ ಶ್ರೀಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ  ಪ್ರಯುಕ್ತ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದಲ್ಲಿ ಕದ್ರಿ ಈವೆಂಟ್ಸ್ ಅರ್ಪಿಸುವ  ‘ಕದ್ರಿ ಮ್ಯೂಸಿಕಲ್ ನೈಟ್ಸ್ 2026’ ನಾಳೆ(ಜ.21) ಸಂಜೆ 7 ಗಂಟೆಯಿಂದ ಕದ್ರಿ ಮೈದಾನದಲ್ಲಿ ಅದ್ದೂರಿಯಾಗಿ ಜರುಗಲಿದೆ.

ಎಂದಿನಂತೆ ಈ ಬಾರಿಯೂ ತಾರಾ ಮೆರುಗು ಇರಲಿದ್ದು, ಕಾರ್ಯಕ್ರಮಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ಆಗಮಿಸಲಿದ್ದಾರೆ.

ಆಯೋಜಕ ಜಗದೀಶ್ ಕದ್ರಿ ಈ ಬಗ್ಗೆ ಮಾತನಾಡಿ, ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ಕದ್ರಿ ಮ್ಯೂಸಿಕಲ್ ನೈಟ್ ಆಯೋಜನೆ ಮಾಡಿದ್ದೇವೆ. ಸಿನಿಮಾ ಸೆಲೆಬ್ರಿಟಿಗಳು, ಗಣ್ಯರು ಸೇರಿದಂತೆ ಹೆಸರಾಂತ ಗಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

ಇದನ್ನೂ ಓದಿ : BBK12: ಟಾಪ್‌ 6ನಲ್ಲಿ ಕಾವ್ಯಾ ಇರಬಾರದಿತ್ತು: ಹೀಗ್ಯಾಕಂದ್ರು ರಕ್ಷಿತಾ..?

ಕನ್ನಡ, ತುಳು ಚಿತ್ರರಂಗದ ಕಲಾವಿದರಾದ ರೂಪೇಶ್ ಶೆಟ್ಟಿ, ದೇವದಾಸ್ ಕಾಪಿಕಾಡ್, ಭೋಜರಾಜ ವಾಮಂಜೂರು, ಅರ್ಜುನ್ ಕಾಪಿಕಾಡ್, ಶನಿಲ್ ಗುರು, ಪ್ರಕಾಶ್ ತೂಮಿನಾಡು, ಸ್ವರಾಜ್ ಶೆಟ್ಟಿ, ದೀಪಕ್ ರೈ ಪಾಣಾಜೆ, ವಿಜೆ ವಿನೀತ್, ಸಮತಾ ಅಮೀನ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page