Connect with us

LATEST NEWS

ಗಂಗೊಳ್ಳಿ ಗೋಹತ್ಯೆ ವಿರುದ್ಧ ಪ್ರತಿಭಟನೆ: ಹಿಂಜಾವೇ ಕಾರ್ಯಕರ್ತರ ಬಂಧನ

Published

on

ಉಡುಪಿ: ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಅ.1ರಂದು ಗಂಗೊಳ್ಳಿಯಲ್ಲಿ ನಡೆದ ಗೋಹತ್ಯೆ ವಿರೋಧಿ ಪ್ರತಿಭಟನೆಯಲ್ಲಿ ಪ್ರವಾದಿ

ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ ಆರೋಪದಡಿ ಮೂವರು ಹಿಂಜಾವೇ ಕಾರ್ಯಕರ್ತರನ್ನು ಗಂಗೊಳ್ಳಿ ಪೊಲೀಸರು ಅ.3ರಂದು ಬಂಧಿಸಿದ್ದಾರೆ.


ಹಿಂಜಾವೇ ಕಾರ್ಯಕರ್ತರಾದ ನವೀನ್, ಅಂಬರೀಶ್ ಹಾಗೂ ಪರ್ವಿಶ್ ಬಂಧಿತ ಆರೋಪಿಗಳು. ಇವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಅದೇ ರೀತಿ ಈ ಪ್ರತಿಭಟನೆಯಲ್ಲಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಜನ ಸೇರಿಸಿದ ಆರೋಪದಡಿ ಹಿಂಜಾವೇ ಮುಖಂಡರಾದ ಅಕ್ಷಯ್, ವಿವೇಕ್, ರಾಘವೇಂದ್ರ, ಅಕ್ಷಯ್ ಹಾಗೂ ಮಹೇಶ್ ಎಂಬವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

BIG BOSS

BBK12: ಟಾಸ್ಕ್‌ನಲ್ಲಿ ಸೋತು ತಂಡವನ್ನು ಸಂಕಷ್ಟದಲ್ಲಿ ಸಿಲುಕಿಸಿದ ಗಿಲ್ಲಿ!?

Published

on

BBK12: ಬಿಗ್‌ ಬಾಸ್‌ ಸೀಸನ್ 12ರಲ್ಲಿ ಗಿಲ್ಲಿ ಬೆಸ್ಟ್ ಎಂಟರ್‌ಟೈನರ್ ಅನ್ನೊದರಲ್ಲಿ ಎರಡು ಮಾತಿಲ್ಲ. ಆದರೆ ಟಾಸ್ಕ್ ವಿಚಾರಕ್ಕೆ ಬಂದಾಗ ಎಲ್ಲೋ ಒಂದು ಕಡೆ ಎಡವಿ ಬೀಳುತ್ತಿರುತ್ತಾರೆ. ಅದು ಈ ವಾರದ ಟಾಸ್ಕ್‌ನಲ್ಲಿಯೂ ರೀಪಿಟ್ ಆಗಿದೆ. ಈ ಬಾರಿ ಗಿಲ್ಲಿ ಟಾಸ್ಕ್‌ನಲ್ಲಿ ಸೋತಿರುವ ಕಾರಣ ಇಡೀ ತಂಡನೇ ಬೆಲೆ ತೆರಬೇಕಿದೆ.

ಹೌದು, ಬಿಗ್ ಬಾಸ್‌ನಲ್ಲಿ ಈ ವಾರ ಮಾಳು ಕ್ಯಾಪ್ಟನ್ ಆಗಿದ್ದು, ಟಾಸ್ಕ್‌ಗಳ ಅಬ್ಬರ ಜೋರಾಗಿದೆ. ಮನೆಯಲ್ಲಿ ನಾಮಿನೇಟ್ ಟೀಮ್ ಹಾಗೂ ಸೇಫ್‌ ಟೀಮ್ ಎಂಬ ಎರಡು ಗುಂಪುಗಳಾಗಿದ್ದು, ಟಾಸ್ಕ್‌ನಲ್ಲಿ ಪೈಪೋಟಿ ನೀಡುತ್ತಿದ್ದಾರೆ.

ಆದರೆ ಸೇಫ್ ಟೀಮ್‌ ಸೋತು ಹೋಗಿದೆ. ಇದಕ್ಕೆ ಕಾರಣ ಗಿಲ್ಲಿ ಮಾಡಿಕೊಂಡಿರುವ ಎಡವಟ್ಟು. ಈ ಬಗ್ಗೆ ಗಿಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: BBK12: ‘ನಾಮಿನೇಟೆಡ್’ ತಂಡಕ್ಕೆ ಹೊಸ ಚಾಲೆಂಜ್ ನೀಡಿದ ಬಿಗ್ ಬಾಸ್; ರಾಶಿಕಾ ವಿರುದ್ದ ತಿರುಗಿಬಿದ್ದ ರಕ್ಷಿತಾ!

ಮೊದಲು ತಂಡದ ಪರವಾಗಿ ನಾನೇ ಆಡೋಕೆ ಹೊಗ್ತೀನಿ ಅಂತ ಮುಂದೆ ಹೋಗಿದ್ದಾರೆ. ಆದರೆ ಆಟದ ಮಧ್ಯದಲ್ಲಿ ಎಡವಟ್ಟು ಮಾಡಿಕೊಂಡು ಸೋತು ಹೋಗಿದ್ದಾರೆ. ಈ ಬಗ್ಗೆ ಗಿಲ್ಲಿ ‘ನಾನು ಹೋದ ಟೀಮ್ ಸೋಲುತ್ತೆ ಅಂತ ಎಲ್ಲರೂ ಹೇಳ್ತಿದ್ರು, ನನಗೂ ಈಗ ನಿಜ ಅನಿಸ್ತಿದೆ. ಎಷ್ಟು ಸ್ಟಾಂಗ್ ಇದ್ರೂ ಸೋಲುತ್ತಿದ್ದೇವೆ ಅಂದ್ರೆ ನನ್ನಲ್ಲೇ ಏನೋ ಸಮಸ್ಯೆ ಇರಬೇಕೆಂದು’ ತಂಡದ ಜೊತೆ ತಮಾಷೆಯಿಂದ ಮಾತನಾಡಿದ್ದಾರೆ. ಇನ್ನೊಂದು ಕಡೆ ಗಿಲ್ಲಿಗೆ ನಾಮಿನೇಟ್ ಆಗುವ ಆತಂಕ ಎದುರಾಗಿದೆ.

Continue Reading

FILM

ಕುಟುಂಬ ಸಮೇತರಾಗಿ ಕಾಪು ಕ್ಷೇತ್ರಕ್ಕೆ ನಟಿ ಶ್ರುತಿ ಭೇಟಿ

Published

on

ಕಾಪು : ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಶ್ರುತಿ ಕುಟುಂಬ ಸಮೇತರಾಗಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ದ ದೇಗುಲಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದರು.

ದೇವಳದ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ ಕುಮಾರಗುರು ತಂತ್ರಿ ಕೊರಂಗ್ರಪಾಡಿ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.

ಬಳಿಕ ಮಾತನಾಡಿದ ನಟಿ, ನಾನು ಇಲ್ಲಿನ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುವುದಿತ್ತು. ಜೊತೆಗೆ ಇಲ್ಲಿನ ಕಾಪು ಮಾರಿಯಮ್ಮ ದೇವಸ್ಥಾನದ ಬಗ್ಗೆ ಕೇಳಿದ್ದೆ. ದೇಗುಲ ಬಹಳ ಸುಂದರವಾಗಿ ಮೂಡಿ ಬಂದಿದೆ. ಕರಾವಳಿ ಭಾಗಕ್ಕೆ ಭೇಟಿ ನೀಡುವ ಯಾತ್ರಿಗಳು, ಪ್ರವಾಸಿಗರು ಇಲ್ಲಿಗೆ ಒಮ್ಮೆಯಾದರೂ ಭೇಟಿ ನೀಡಿ ಎಂದರು.

ಇದನ್ನೂ ಓದಿ : ರಿಲೀಸ್ ಗೆ ಮೊದಲೇ ‘ಕಾಂತಾ’ ವಿರುದ್ಧ ದೂರು! ಸಂಕಷ್ಟದಲ್ಲಿ ನಿರ್ಮಾಪಕ ದಗ್ಗುಬಾಟಿ

ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಆರ್. ಪಾಲನ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ರವೀಂದ್ರ ಮಲ್ಲಾರ್, ಚರಿತ ದೇವಾಡಿಗ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Continue Reading

DAKSHINA KANNADA

ಕುದ್ರೋಳಿ ಕ್ಷೇತ್ರದಲ್ಲಿ ಇಂದು ಭೈರವಾಷ್ಟಮಿ

Published

on

ಮಂಗಳೂರು : ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಇಂದು(ನ.12) ಭೈರವಾಷ್ಟಮಿ ಪ್ರಯುಕ್ತ ಬೆಳಿಗ್ಗೆ ಭೈರವ ದೇವರಿಗೆ ಅಭಿಷೇಕ, ಮಹಾಪೂಜೆ ನೆರವೇರಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಈ ಸಂದರ್ಭ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಹೆಚ್ ಸೋಮಸುಂದರಂ ಮತ್ತು ಕಾರ್ಯದರ್ಶಿ ಮಾಧವ ಸುವರ್ಣ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಕಟೀಲು ಏಳನೇ ಮೇಳದ ಪದಾರ್ಪಣೆ ಸಂಭ್ರಮ; ನ.15ರಂದು ನಡೆಯಲಿದೆ ವೈಭವದ ಮೆರವಣಿಗೆ

ಕ್ಷೇತ್ರದಲ್ಲಿ ಇಂದು(ನ.12) ಸಂಜೆ 7.30 ಕ್ಕೆ ಭೈರವ ತರ್ಪಣ ಮತ್ತು ಮಹಾಪೂಜೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಯಲ್ಲಿ ಆಗಮಿಸಿ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಅಭಿವೃದ್ಧಿ ಸಮಿತಿ ವಿನಂತಿಸಿಕೊಂಡಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page