Connect with us

LATEST NEWS

ಎರಡನೇ ವೀಕೆಂಡ್‌ ಕರ್ಫ್ಯೂ: ಮಂಗಳೂರಿನಲ್ಲಿ ಜನ ಸಂಚಾರ ವಿರಳ

Published

on

ಮಂಗಳೂರು: ಕೋವಿಡ್‌ ಹೆಚ್ಚಳ ಹಿನ್ನೆಲೆ ರಾಜ್ಯ ಸರ್ಕಾರ ವಿಧಿಸಿದ್ದ ಎರಡನೇ ವೀಕೆಂಡ್‌ ಕರ್ಫ್ಯೂ ನಿನ್ನೆ ರಾತ್ರಿಯಿಂದ ಆರಂಭವಾಗಿದ್ದು, ಇಂದು ಮಂಗಳೂರು ನಗರದಲ್ಲಿ ವಾಹನ ಸಂಚಾರ ವಿರಳವಾಗಿದ್ದು, ಜನ ಸಂಚಾರ ಕಡಿಮೆ ಇದೆ.


ಇಂದು ಬೇಳಗ್ಗೆಯಿಂದಲೇ ನಗರದಲ್ಲಿ ದಿನಸಿ ಅಂಗಡಿ ಬಿಟ್ಟು ಉಳಿದೆಲ್ಲವೂ ಬಂದ್‌ ಆಗಿದೆ. ಬಸ್‌ ಸಂಚಾರ ವಿರಳವಾಗಿದೆ. ಹೊಟೇಲ್‌ಗಳಲ್ಲಿ ತಿಂಡಿ-ತಿನಿಸುಗಳನ್ನು ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ.

ನಗರದ ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸರು ಬಿಗು ಬಂದೋಬಸ್ತ್‌ ವಹಿಸಿದ್ದಾರೆ. ಇದರ ಜೊತೆಗೆ ಸಂಚಾರಿ ಪೊಲೀಸರು ಬಸ್‌ಗಳಿಗೆ ಹತ್ತಿ ಮಾಸ್ಕ್‌ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು. ಈ ವೀಕೆಂಡ್‌ ಕರ್ಫ್ಯೂ ಸೋಮವಾರ ಬೆಳಗಿನ ಜಾವ ಐದು ಗಂಟೆಯವರೆಗೆ ಇರಲಿದೆ.

LATEST NEWS

ಕಲಿಕೆಯಲ್ಲಿ ಹಿಂದುಳಿದಿದ್ದ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿದ ತಂದೆ

Published

on

ಆಂಧ್ರಪ್ರದೇಶ: ಶಾಲೆಯಲ್ಲಿ ಮಕ್ಕಳು ಓದಿನಲ್ಲಿ ಹಿಂದಿ ಇದ್ದರಿಂದ ಬೇಸರಗೊಂಡು ತಂದೆಯು ತನ್ನ ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಗೋದಾವರಿ ಜಿಲ್ಲೆಯ ತಡೆಪಲ್ಲಿಗುಡೇನಿಯಲ್ಲಿ ನಡೆದಿದೆ.

ತಂದೆ ಚಂದ್ರಕಿಶೋರ್ ಹಾಗೂ ಮಕ್ಕಳಾದ ಜೋಶಿಲ್ ಹಾಗೂ ನಿಖಿಲ್ ಸಾವಿಗೀಡಾದವರು. ಚಂದ್ರಕಿಶೋರ್ ಸ್ಥಳೀಯ ಒಎನ್‌ಜಿಸಿ ಕಚೇರಿಯಲ್ಲಿ ಸಹಾಯಕ ಲೆಕ್ಕಪತ್ರಗಾರರಾಗಿ ಕೆಲಸ ಮಾಡುತ್ತಿದ್ದರು. ತನ್ನ ಒಬ್ಬರು ಮಕ್ಕಳು ಶಾಲೆಯಲ್ಲಿ ಓದಿನಲ್ಲಿ ಹಿಂದೆ ಇರುವುದೇ ಈತನಿಗೆ ದೊಡ್ಡ ಚಿಂತೆಯಾಗಿತ್ತು. ಹಾಗಾಗಿ ಒಂದು ದಿನ ಪತ್ನಿ ಮತ್ತು ಮಕ್ಕಳನ್ನು ತನ್ನ ಕಚೇರಿಗೆ ಕರೆದು ಬಳಿಕ ಪತ್ನಿಯನ್ನು ಕಛೇರಿಯಲ್ಲೇ ಇರುವಂತೆ ಹೇಳಿ ಇಬ್ಬರು ಮಕ್ಕಳನ್ನು ಶಾಲೆಯ ಸಮವಸ್ತ್ರದ ಅಳತೆಯನ್ನು ತೆಗೆಯಲು ಟೈಲರ್ ಬಳಿ ಕರೆದೊಯ್ಯುತ್ತಿರುವುದಾಗಿ ಹೇಳಿ ಹೋಗಿದ್ದಾನೆ.

ಆದರೆ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿ ನೀರು ತುಂಬಿದ ಬಕೆಟ್‌ನಲ್ಲಿ ಇಬ್ಬರು ಮಕ್ಕಳ ಮುಖವನ್ನು ಮುಳುಗಿಸಿ ಕೊಂದಿದ್ದಾನೆ. ನಂತರ ತಾನೂ ನೇಣಿಗೆ ಶರಣಾಗಿದ್ದಾನೆ. ಪತಿ ಬಹಳ ಸಮಯವಾದರೂ ಹಿಂತಿರುಗದಿದ್ದಾಗ, ತನುಜಾ ತನ್ನ ಸಹೋದ್ಯೋಗಿಗಳೊಂದಿಗೆ ಮನೆಗೆ ಹೋಗಿದ್ದಾಳ ಕಿಟಕಿಯಿಂದ ಮನೆಯೊಳಗೆ ನೋಡಿದಾಗ, ಪತಿ ಮತ್ತು ಮಕ್ಕಳು ಸತ್ತಿರುವುದು ಕಂಡು ಬಂದಿದೆ.

ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದು, ಚಂದ್ರಕಿಶೋರ್ ಬರೆದಿರುವ ಡೆತ್ ನೋಟ್ ಸ್ಥಳದಲ್ಲಿ ಪತ್ತೆಯಾಗಿದೆ.

Continue Reading

FILM

ರೀಲ್ಸ್ ರಾಣಿ ರೇಷ್ಮಾ ಆಂಟಿ ಕಿಡ್ನಾಪ್

Published

on

ಮಂಗಳೂರು/ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ‘ಹಾಯ್ ಫ್ರೆಂಡ್ಸ್ ಏನ್ ಗೊತ್ತಾ’ ಅಂತ ಹೇಳುತ್ತಲೇ ವಿಡಿಯೋ ಮಾಡಿ ಫೇಮಸ್ ಆಗಿದ್ದ ರೇಷ್ಮಾ ಯಾಸಿನ್ ಸಖತ್ ಸುದ್ದಿಯಲ್ಲಿದ್ದಾರೆ. ಆದರೆ ಇದೀಗ ಕಿಡ್ನಾಪ್ ಆಗಿರೋ ರೀತಿಯಲ್ಲಿ ರೀಲ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


ಗಿಚ್ಚಿ ಗಿಲಿಗಿಲಿ ಸೀಸನ್ 3ರ ಸ್ಪರ್ಧಿಯಾಗಿ ಇಡೀ ಕರ್ನಾಟಕಕ್ಕೆ ಫೇಮಸ್ ಆಗಿರುವ ರೇಷ್ಮಾ ಯಾಸಿನ್ ಅವರು ತಮ್ಮ ವೈರಲ್ ವಿಡಿಯೋಗಳಿಂದಲೇ ಇಂದು ಸೆಲಿಬ್ರಿಟಿಯಾಗಿದ್ದಾರೆ. ಜನರು ಸಹ ರೇಷ್ಮಾ ಅವರ ವಿಡಿಯೋಗಳಿಗೆ ಪ್ರೀತಿಯನ್ನು ನೀಡುತ್ತಿದ್ದು, ಅಧಿಕ ವ್ಯೂವ್ಸ್ ಪಡೆದುಕೊಳ್ಳುತ್ತಿರುತ್ತವೆ. ಇದೀಗ ಕಿಡ್ನಾಪ್ ಆಗಿರೋ ರೀತಿಯಲ್ಲಿ ರೀಲ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕೆಆರ್‌ಎಸ್ ಡ್ಯಾಂಗೆ ಎತ್ತಿ ಹಾಕುವೆ ಎಂದ ರವಿ ಮಂಡ್ಯ
ಸದ್ಯ ವೈರಲ್ ವಿಡಿಯೋದಲ್ಲಿ ಹಾಯ್ ಫ್ರೆಂಡ್ಸ್. ನೀವು ನನ್ನನ್ನು ಎಷ್ಟು ಬೆಳೆಸಿದ್ದೀರಿ ಅಂದ್ರೆ ರವಿ ಮಂಡ್ಯ ಅವರನ್ನು ನಾನು ಪರ್ಸನಲ್ ಮೇಕಪ್ ಮ್ಯಾನ್ ಆಗಿ ಇಟ್ಕೊಂಡಿದ್ದೇನೆ ಎಂದು ರೇಷ್ಮಾ ಆಂಟಿ ಹೇಳುತ್ತಾರೆ. ಇದಕ್ಕೆ ಕೋಪಗೊಳ್ಳುವ ರವಿ ಮಂಡ್ಯ, ಒಮಿನಿ ವ್ಯಾನ್ ಡಿಕ್ಕಿ ಓಪನ್ ಮಾಡುತ್ತಾರೆ. ನಂತರ ರೇಷ್ಮಾ ಕೈ-ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಡಿಕ್ಕಿಯೊಳಗೆ ಹಾಕುತ್ತಾರೆ. ಬಿದ್ಕೋ ಕಪಿ ಮುಂಡೆದೆ, ಇನ್ನೊಂದ್ ಸಾರಿ ಆ ಕಟ್ಟಪ್ಪನ ಜೊತೆ ನೀನು ವಿಡಿಯೋನೇ ಮಾಡಬಾರದು. ನಿನ್ನನ್ನು ಕೆಆರ್‌ಎಸ್ ಡ್ಯಾಂಗೆ ಎತ್ತಿ ಹಾಕುವೆ ಎಂದು ವ್ಯಾನ್ ಚಾಲನೆ ಮಾಡಿಕೊಂಡು ಹೋಗುತ್ತಾರೆ.

ಇದನ್ನೂ ಓದಿ: ಶ್ರೀಲೀಲಾ ಅಭಿನಯದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟರ್!

ಈ ರೀಲ್ಸ್‌ ನೋಡಿದ ನೆಟ್ಟಿಗರು, ಅಣ್ಣ ತುಂಬಾ ಉಪಕಾರ ಮಾಡಿದ್ರಿ, ಫಸ್ಟ್ ತಗೊಂಡ್ ಹೋಗಿ ಕೆಆರ್‌ಎಸ್ ಡ್ಯಾಮ್‌ಗೆ ಆಕ್ಬಿಡು ದೇವರು ಒಳ್ಳೇದ್ ಮಾಡ್ತಾನೆ ನಿನಗೆ ಎಂದು ತಮ್ಮ ಗೋಳು ತೋಡಿಕೊಂಡಿದ್ದಾರೆ. ಇವ್ಳ ಕರ್ಕೊಂಡು ಹೋಗಿ ಕಾಡಲ್ಲಿ ಬಿಟ್ ಬಂದ್ಬಿಡು ಇಲ್ಲಿ ಇವರ ಕಾಟ ತಡೆಯೋಕೆ ಆಗ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Continue Reading

FILM

ಉಡುಪಿ ಶ್ರೀಕೃಷ್ಣ ಮಠಕ್ಕೆ ಲವ್ಲಿ ಸ್ಟಾರ್ ಪ್ರೇಮ್, ನಟಿ ಶರಣ್ಯ ಭೇಟಿ

Published

on

ಉಡುಪಿ :  ಶ್ರೀ ಕೃಷ್ಣ ಮಠಕ್ಕೆ  ಲವ್ಲಿ ಸ್ಟಾರ್ ಪ್ರೇಮ್ ಭೇಟಿ ನೀಡಿದರು. ಪ್ರಾತಃ ಕಾಲದಲ್ಲಿ ನಡೆಯುವ ವಿಶೇಷ ಪೂಜೆಯನ್ನು ಕಣ್ತುಂಬಿ ಕೊಂಡರು.  ಈ ವೇಳೆ ನಟಿ ಶರಣ್ಯ ಶೆಟ್ಟಿ ಕೂಡ ಜೊತೆಗಿದ್ದರು.

ಪ್ರಾತ:ಕಾಲದಲ್ಲಿ ಉಡುಪಿ ಶ್ರೀ ಕೃಷ್ಣನ ವಿಶ್ವರೂಪದರ್ಶನ ಪಡೆದು ಸಂತೋಷ ವ್ಯಕ್ತಪಡಿಸಿದರು. ಪರ್ಯಾಯ ಪುತ್ತಿಗೆ ಶ್ರೀ  ಶ್ರೀ ಸುಗುಣೇಂದ್ರತೀರ್ಥರಿಂದ  ಕೋಟಿಗೀತಾಲೇಖನ ಯಜ್ಞ ದೀಕ್ಷೆಯನ್ನು ಸ್ವೀಕರಿಸಿದರು.

ಈ ವೇಳೆ ಮಠದ ವತಿಯಿಂದ ಪ್ರೇಮ್ ಅವರನ್ನು ಗೌರವಿಸಲಾಯಿತು.

Continue Reading
Advertisement

Trending

Copyright © 2025 Namma Kudla News

You cannot copy content of this page