Connect with us

MANGALORE

‘ಶ್ರೀ ದೇವಿ ನವರಾತ್ರಿ ಚರಿತಾಮೃತ’ ಪರಿಷ್ಕೃತ ಆವೃತ್ತಿ ಬಿಡುಗಡೆ

Published

on

ಮಂಗಳೂರು: ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಅವರು ಸಂಪಾದಿಸಿದ ‘ಶ್ರೀ ದೇವಿ ನವರಾತ್ರಿ ಚರಿತಾಮೃತ’ ಎಂಬ ವಿಷಯ ಕೋಶದ ಪರಿಷ್ಕೃತ ಆವೃತ್ತಿ ಇತ್ತೀಚೆಗೆ ಬಿಡುಗಡೆಗೊಂಡಿತು.

ನಗರದ ‘ನಮ್ಮ ಕುಡ್ಲ’ ವಾಹಿನಿಯ ಬಿ.ಪಿ.ಕರ್ಕೇರ ಸಭಾಂಗಣದಲ್ಲಿ ನಡೆದ ‘ದಸರಾ ವೈಭವ’ ದ ಸಮಾರಂಭದಲ್ಲಿ ಎಕ್ಸ್‌ಪರ್ಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್‌. ನಾಯಕ್ ಅವರು ಕೃತಿ ಬಿಡುಗಡೆ ಮಾಡಿದರು.


‘ನಮ್ಮ ಕುಡ್ಲ ವಾಹಿನಿಯು ಈ ಕೃತಿಯನ್ನು ಪ್ರಕಾಶಿಸಿದೆ. 2019 ರಲ್ಲಿ ಪ್ರಥಮ ಮುದ್ರಣವು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ಬಿಡುಗಡೆಗೊಳಿಸಿದ್ದರು. ಇದೀಗ “ಮಾರಿ ಆರಾಧನೆ” ಯ ಕಿರು ಮಾಹಿತಿಯೊಂದಿಗೆ ಪರಿಷ್ಕೃತ ಎರಡನೇ ಆವೃತ್ತಿಯನ್ನು ಸಿದ್ದಗೊಳಿಸಲಾಗಿದೆ.

ನವದುರ್ಗೆಯರು, ಶ್ರೀ ದೇವಿ ಸ್ವರೂಪಗಳು, ಶಕ್ತಿ ಪೀಠಗಳು, ನವರಾತ್ರಿ, ದಸರಾ ಬಗ್ಗೆ ಸಂಕ್ಷಿಪ್ತ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಆಯ್ದು ಈ ಪುಸ್ತಕದಲ್ಲಿ ನೀಡಲಾಗಿದೆ ಎಂದು ಲೇಖಕ ಕದ್ರಿ ನವನೀತ ಶೆಟ್ಟಿ ಅವರು ಮಾಹಿತಿ ನೀಡಿದರು.

ಈ ವೇಳೆ ಎ.ಜೆ.ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ, ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್‌ ಮಿಜಾರು, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮರಾಜ್,

ನಮ್ಮ ಕುಡ್ಲ ವಾಹಿನಿಯ ನಿರ್ದೇಶಕರಾದ ಸುರೇಶ್ ಬಿ ಕರ್ಕೇರ ಹಾಗೂ ಲೀಲಾಕ್ಷ ಬಿ ಕರ್ಕೇರಾ ಉಪಸ್ಥಿತರಿದ್ದರು. ದುಬೈನಿಂದ ಅನಿವಾಸಿ ಭಾರತೀಯ ಸತೀಶ್ ಪೂಜಾರಿ, ಜಪಾನ್‌ನಿಂದ ಶ್ರೀಕಲಾ ಬೊಳ್ಳಾಜೆ ಹಾಜರಿದ್ದರು.

FILM

ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟ ಭವ್ಯ ಗೌಡ! ಯಾವ ಸಿನಿಮಾ ಗೊತ್ತಾ!?

Published

on

ಮಂಗಳೂರು/ಬೆಂಗಳೂರು : ಭವ್ಯ ಗೌಡ ಕಿರುತೆರೆಯಲ್ಲಿ ಮಿನುಗುತ್ತಿರುವ ತಾರೆ. ಕರ್ಣ ಧಾರಾವಾಹಿಯ ನಿಧಿಯಾಗಿ ಎಲ್ಲರ ಮನಗೆದ್ದಿರುವ ಚೆಲುವೆ. ಇದೀಗ ಅವರು ಹಿರಿತೆರೆಗೆ ಕಾಲಿಟ್ಟಿದ್ದಾರೆ. ಈ ವಿಚಾರವನ್ನು ಅವರು ಸ್ವತಃ ಹೇಳಿಕೊಂಡಿದ್ದು, ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.


ಯಾವ ಸಿನಿಮಾ?
ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಭವ್ಯಾ ಗೌಡ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5ರ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ ನಾನು ದುನಿಯಾ ವಿಜಯ್ ಅವರು ನಿರ್ದೇಶನ ಮಾಡಿರುವ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಲ್ಯಾಂಡ್‌ಲಾರ್ಡ್‌ ಎಂದು ಸಿನಿಮಾದ ಹೆಸರು. ಇದು ನನ್ನ ಮೊದಲ ಸಿನಿಮಾ ಆಗಿದೆ. ರಚಿತಾ ರಾಮ್ ಮತ್ತು ದುನಿಯಾ ವಿಜಯ್ ಎದುರು ನಿಂತಿದ್ದರು. ನಾನು ನರ್ವಸ್ ಆಗಿದ್ದೆ. ಶಾಟ್ ಮುಗಿದ ಬಳಿಕ ರಚಿತಾ ರಾಮ್ ಪಕ್ಕಕ್ಕೆ ಕರೆದು, ಎಲ್ಲರೂ ಆರ್ಟಿಸ್ಟ್ ಸರಿ ಸಮಾನರು ಎಂದರು. ಅವರು ಲೇಡಿ ಸೂಪರ್ಸ್ಟಾರ್ ಎಂದು ರಚಿತಾ ರಾಮ್ ಅವರನ್ನು ಹೊಗಳಿದ್ದಾರೆ.

ಭವ್ಯ ಗೌಡ ಅವರು ಕಲರ್ಸ್ ಕನ್ನಡದಲ್ಲಿ ಗೀತಾ ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ ಬಿಗ್ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದರು. ಪ್ರಸ್ತುತ ಝೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಕುಖ್ಯಾತ ಹೊರ ರಾಜ್ಯ, ಅಂತರ್ ಜಿಲ್ಲಾ ಕಳವು ಪ್ರಕರಣಗಳ ಆರೋಪಿ ಇತ್ತೆ ಬರ್ಪೆ ಅಬುಬಕ್ಕರ್ ಬಂಧನ

ಲ್ಯಾಂಡ್‌ಲಾರ್ಡ್‌ ಸಿನಿಮಾಗೆ ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡಿದ್ದು, ಚಿತ್ರವು ಜನವರಿ 23ರಂದು ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಮಗಳು ರಿತನ್ಯಾ ಕೂಡ ನಟಿಸಿದ್ದಾರೆ.

Continue Reading

MANGALORE

ಕಾಸರಗೋಡು: ಸಿನಿಮಾ ನಿರ್ದೇಶಕನ ಪುತ್ರ ಆತ್ಮಹತ್ಯೆ!

Published

on

ಮಂಗಳೂರು/ಕಾಸರಗೋಡು: ಸಿನಿಮಾ ನಿರ್ದೇಶಕ, ಪತ್ರಕರ್ತ ಪ್ರಶಾಂತ್ ಕಾನತ್ತೂರು ಅವರ ಪುತ್ರ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

22 ವರ್ಷದ ಅನಿರುದ್ಧ್ ಯಾನೆ ಕಣ್ಣನ್‌ ಮೃತಪಟ್ಟ ಯುವಕ.

ಕಣ್ಣನ್ ಕಂಪ್ಯೂಟರ್ ಗೇಮ್ ಡಿಸೈನಿಂಗ್‌ನಲ್ಲಿ ವಿಶೇಷ ಪರಿಣತಿ ಹೊಂದಿದ್ದರು. ಇತ್ತೀಚಿಗಷ್ಟೇ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕಂಪ್ಯೂಟರ್ ಗೇಮ್ ಡಿಸೈನರ್ ವೃತ್ತಿಗೆ ಸೇರಿಕೊಂಡಿದ್ದರು. ಕಳೆದ ಎರಡು ದಿನಗಳಿಂದ ಉದ್ಯೋಗಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಸಹದ್ಯೋಗಿಗಳು ಕಣ್ಣನ್ ವಾಸವಿದ್ದ ಬಾಡಿಗೆ ಮನೆಗೆ ಬಂದು ಪರಿಶೀಲಿಸಿದ್ದಾರೆ. ಈ ವೇಳೆ ನೇಣು ಬಿಗಿದ ಸ್ಥಿತಿಯಲ್ಲಿ ಕಣ್ಣನ್ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ:WATCH VIDEO : ಭಾಷಣ ಮುಗಿಸಿದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿ*ದ್ದು ಐಟಿ ಉದ್ಯೋಗಿ ಸಾ*ವು

ಮಾಹಿತಿ ತಿಳಿದ ತಕ್ಷಣ ಕುಟುಂಬಸ್ಥರು ಬೆಂಗಳೂರಿಗೆ ತೆರಳಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Continue Reading

MANGALORE

ರಸ್ತೆ ಮಧ್ಯೆ ಬೆಂಕಿಗಾಹುತಿಯಾದ ಕಾರು

Published

on

ಮಂಗಳೂರು/ಮಾಗಡಿ : ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿಯಿಂದ ಕಾರು ಸುಟ್ಟು ಭಸ್ಮವಾದ ಘಟನೆ ಅಣ್ಣಯ್ಯ ಪಾಳ್ಯದ ಬಳಿ ಸೋಮವಾರ(ನ.17) ಸಂಜೆ ನಡೆದಿದೆ.


ಅದೃಷ್ಟವಶಾತ್, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಮಾಗಡಿ-ಗುಡೇಮಾರನಹಳ್ಳಿ ಮುಖ್ಯರಸ್ತೆಯ ಟೋಲ್ ಸಮೀಪ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರಿನಲ್ಲಿದ್ದವರು ಕೆಳಗೆ ಇಳಿದಿದ್ದಾರೆ.

ಕ್ಷಣಾರ್ಧದಲ್ಲಿ ಕಾರು ರಸ್ತೆ ಮಧ್ಯೆ ಸುಟ್ಟು ಹೋಗಿದೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ : ಸೌದಿ ಬಸ್ ದುರಂತ ಪ್ರಕರಣ; ಒಂದೇ ಕುಟುಂಬದ 18 ಮಂದಿಯ ದುರಂತ ಅಂತ್ಯ!

ತಕ್ಷಣ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರೂ ಕಾರು ಬಹುಪಾಲು ಸುಟ್ಟು ಹೋಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page