Connect with us

LATEST NEWS

ಉಡುಪಿ 8 ಸಾವಿರದ ಗಡಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ

Published

on

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 237 ಕೊರೊನಾ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 7975 ಕ್ಕೆ ಏರಿಕೆಯಾಗಿದೆ. ಉಡುಪಿಯಲ್ಲಿ ಇಂದು ಕೊರೊನಾದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ.


ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 5361 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2537 ಸಕ್ರಿಯ ಪ್ರಕರಣಗಳಿದ್ದು ಅದರಲ್ಲಿ 1398 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ 1139 ಮಂದಿ ಹೋಂ ಐಸೋಲೇಶನ್ ನಲ್ಲಿದ್ದಾರೆ. ಇಂದು ಉಡುಪಿಯಲ್ಲಿ ಕೊರೊನಾದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 77 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು ದಾಖಲಾದ ಪ್ರಕರಣಗಳಲ್ಲಿ ಉಡುಪಿ – 122, ಕುಂದಾಪುರ -100 , ಕಾರ್ಕಳ -14, ಜಿಲ್ಲೆಯ ಹೊರಗಿನ – 1 ಪ್ರಕರಣಗಳಿವೆ.

LATEST NEWS

ಇರಾನ್-ಇಸ್ರೇಲ್ ಸಂಘರ್ಷ: ಮಾ.12ರಂದು ಮಂಗಳೂರು- ಮಧ್ಯ ಪ್ರಾಚ್ಯ ಮಾರ್ಗದ 14 ವಿಮಾನಗಳು ರದ್ದು

Published

on

ಮಂಗಳೂರು: ಪಶ್ಚಿಮ ಏಷ್ಯಾ- ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಸನ್ನಿವೇಶ ಇರುವ ಹಿನ್ನೆಲೆಯಲ್ಲಿ ಮಧ್ಯ ಪ್ರಾಚ್ಯ ದೇಶಗಳ ವಾಯು ಪ್ರದೇಶವನ್ನು ಮುಚ್ಚಿರುವುದರಿಂದ ಗುರುವಾರ (ಮಾ. 12) ಮಂಗಳೂರು ಮತ್ತು ಮಧ್ಯ ಪ್ರಾಚ್ಯ ದೇಶಗಳ ನಡುವಣ 14 ವಿಮಾನ ಯಾನವನ್ನು ರದ್ದುಪಡಿಸಲಾಗಿದೆ.

ಮಂಗಳೂರು- ದುಬಾಯಿ ಮತ್ತು ದುಬಾಯಿ ಮಂಗಳೂರು ಮಾರ್ಗದ ಎರಡೂ ವಿಮಾನಗಳ ಓಡಾಟ ರದ್ದಾಗಿದೆ. ಹಾಗೆಯೇ ಮಂಗಳೂರು – ದೋಹಾ ಮತ್ತು ದೋಹಾ ಮಂಗಳೂರು, ಮಂಗಳೂರು- ಬಹ್ರೈನ್ ಮತ್ತು ಬಹ್ರೈನ್- ಮಂಗಳೂರು, ಮಂಗಳೂರು- ಕುವೈತ್ ಮತ್ತು ಕುವೈತ್- ಮಂಗಳೂರು, ಮಂಗಳೂರು- ದಮಾಮ್ ಮತ್ತು ದಮಾಮ್- ಮಂಗಳೂರು, ಮಂಗಳೂರು- ಅಬುಧಾಬಿ ಮತ್ತು ಅಬಿಧಾಬಿ- ಮಂಗಳೂರು ನಡುವಣ ವಿಮಾನ ಸಂಚಾರವನ್ನು ರದ್ದು ಪಡಿಸಲಾಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಹಳೆ ಕಾಲಕ್ಕೆ ಮರಳಿದ ಹೋಟೆಲ್‌ಗಳು: ಗ್ಯಾಸ್ ಬಂದ್ ಬೆನ್ನಲ್ಲೇ ಒಲೆ ಹಚ್ಚಿದ ಮಾಲೀಕರು

ಮಧ್ಯ ಪ್ರಾಚ್ಯ ದೇಶಗಳಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗಳ ಮತ್ತು ಕೇರಳ ರಾಜ್ಯದಿಂದ ಅಧಿಕ ಸಂಖ್ಯೆಯ ಜನರು ದುಡಿಯುತ್ತಿದ್ದಾರೆ. ಹಲವಾರು ಮಂದಿ ಸ್ವಂತ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮಂಗಳೂರು ಮತ್ತು ಮಧ್ಯ ಪ್ರಾಚ್ಯ ದೇಶಗಳ ಮಧ್ಯೆ ವೈಮಾನಿಕ ಸಂಚಾರ ವ್ಯತ್ಯಯಗೊಂಡ ಕಾರಣ ಕರಾವಳಿಯ ಜನರಿಗೆ ಬಹಳಷ್ಟು ಸಮಸ್ಯೆಗಳಾಗಿವೆ. ಏನಾಗುತ್ತದೋ ಎಂಬ ಆತಂಕ ಕೂಡಾ ಎದುರಾಗಿದೆ.

Continue Reading

LATEST NEWS

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಡಕೆ ತೋಟಕ್ಕೆ ಬೆಂಕಿ; ಲಕ್ಷಾಂತರ ರೂಪಾಯಿ ಹಾನಿ

Published

on

ಆನಂದಪುರ: ತೋಟವೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಬೆಂಕಿ ಕಾಣಿಸಿಕೊಂಡ ಪರಿಣಾಮ ಮರಗಳು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ನಡೆದಿದೆ.


ಆನಂದಪುರ ಸಮೀಪದ ಲಕ್ಕವಳ್ಳಿ ಗ್ರಾಮದ ಮುರುಗೇಂದ್ರ ಗೌಡ್ರು ಎಂಬುವವರ 1 ಎಕರೆ ಅಡಕೆ ತೋಟದಲ್ಲಿ ಈ ಘಟನೆ ನಡೆದಿದ್ದು, ಮಧ್ಯಾಹ್ನದ ಸಮಯದಲ್ಲಿ ಬಿಸಿಲು ಹೆಚ್ಚಿದ್ದರಿಂದ ಮತ್ತು ಒಣಗಿದ ಎಲೆಗಳು ತೋಟದಲ್ಲಿ ಇದ್ದುದರಿಂದ, ಶಾರ್ಟ್ ಸರ್ಕ್ಯೂಟ್ ಆದ ತಕ್ಷಣ ಬೆಂಕಿ ವೇಗವಾಗಿ ಹಬ್ಬಿದೆ.

ಬೆಂಕಿಯ ತೀವ್ರತೆಗೆ ಅಡಕೆ ಮರಗಳು ಭಾಗಶಃ ಸುಟ್ಟು ಹೋಗಿದ್ದು, ತೋಟದಲ್ಲಿದ್ದ ಬೆಲೆಬಾಳುವ ಹನಿ ನೀರಾವರಿ ಪೈಪ್‌ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಮತ್ತೆ ಹಳೆ ಕಾಲಕ್ಕೆ ಮರಳಿದ ಹೋಟೆಲ್‌ಗಳು: ಗ್ಯಾಸ್ ಬಂದ್ ಬೆನ್ನಲ್ಲೇ ಒಲೆ ಹಚ್ಚಿದ ಮಾಲೀಕರು

ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸಕಾಲದಲ್ಲಿ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ವಿಷಯ ತಿಳಿದ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿದ್ದಾರೆ.

Continue Reading

LATEST NEWS

ಮತ್ತೆ ಹಳೆ ಕಾಲಕ್ಕೆ ಮರಳಿದ ಹೋಟೆಲ್‌ಗಳು: ಗ್ಯಾಸ್ ಬಂದ್ ಬೆನ್ನಲ್ಲೇ ಒಲೆ ಹಚ್ಚಿದ ಮಾಲೀಕರು

Published

on

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ, ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆ ಎದುರಾಗಿದೆ.


ಈ ಬಿಕ್ಕಟ್ಟಿನಿಂದಾಗಿ ಹೋಟೆಲ್ ಉದ್ಯಮವು ಗಂಭೀರ ಸಂಕಷ್ಟಕ್ಕೆ ಸಿಲುಕಿದ್ದು, ಅನೇಕ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಸೌದೆ ಒಲೆಗಳ ಮೊರೆ ಹೋಗಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಗಾಂಧಿನಗರದಲ್ಲಿರುವ 3-ಸ್ಟಾರ್ ಹೋಟೆಲ್ ಸೇರಿದಂತೆ ಹಲವು ಪ್ರತಿಷ್ಠಿತ ಹೋಟೆಲ್‌ಗಳು ಈಗಾಗಲೇ ಸೌದೆ ಮತ್ತು ಇದ್ದಿಲನ್ನು ಬಳಸಿ ಅಡುಗೆ ಮಾಡಲು ಆರಂಭಿಸಿವೆ.

ಹೋಟೆಲ್ ಸಿಬ್ಬಂದಿಗಳು ಅಡುಗೆಮನೆಗೆ ಪ್ಲೈವುಡ್ ಶೀಟ್ ಹಾಗೂ ಸೌದೆಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಗ್ಯಾಸ್ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡರೆ ಮುಂದಿನ ಒಂದೆರಡು ದಿನಗಳಲ್ಲಿ ಹೋಟೆಲ್‌ಗಳನ್ನು ಬಂದ್ ಮಾಡಬೇಕಾಗಬಹುದು ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಎಚ್ಚರಿಸಿದೆ.

ಇದನ್ನೂ ಓದಿ: ಬೆಂಗಳೂರು ಭೀಕರತೆ: ಕೊಲೆ ಆರೋಪಿಯ ಮೇಲೆ 68 ಬಾರಿ ಮಚ್ಚಿನಿಂದ ದಾಳಿ, ಬದುಕಿದ್ದೇ ಪವಾಡ!

ಗ್ಯಾಸ್ ಉಳಿತಾಯ ಮಾಡಲು ಮತ್ತು ಪರ್ಯಾಯ ವ್ಯವಸ್ಥೆ ಅಷ್ಟೊಂದು ಸುಲಭವಲ್ಲದ ಕಾರಣ, ಹೋಟೆಲ್‌ಗಳು ತಮ್ಮ ಮೆನುವಿನಿಂದ ದೋಸೆ, ಬಿರಿಯಾನಿ ಮತ್ತು ಪರೋಟದಂತಹ ಹೆಚ್ಚು ಗ್ಯಾಸ್ ಬಳಸುವ ಖಾದ್ಯಗಳನ್ನು ಕೈಬಿಟ್ಟು, ಕೇವಲ ಟೀ, ಕಾಫಿ ಅಥವಾ ಉಪಹಾರಕ್ಕೆ ಮಾತ್ರ ಸೀಮಿತಗೊಳ್ಳುತ್ತಿವೆ ಎನ್ನಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page