Connect with us

LATEST NEWS

‘ನಮ್ಮ ಕುಡ್ಲ ವಾಹಿನಿ’ಗೆ 22ರ ಸಂಭ್ರಮ: ಶರವು ಮಹಾಗಣಪತಿಗೆ ವಿಶೇಷ ಪೂಜೆ

Published

on

ಮಂಗಳೂರು: ನಮ್ಮ ಕುಡ್ಲ ವಾಹಿನಿಗೆ ಇಂದು 22 ವರುಷದ ಸಂಭ್ರಮ. ಈ ಹಿನ್ನೆಲೆ ನಮ್ಮ ಕುಡ್ಲ ವಾಹಿನಿಯ ಆಡಳಿತ ಮಂಡಳಿಯ ವತಿಯಿಂದ ಶರವು ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

22 ವರ್ಷದ ಹಿಂದೆ ಇದೇ ದಿನ ಈ ಕ್ಷೇತ್ರದಲ್ಲಿ ‘ನಮ್ಮ ಕುಡ್ಲ’ ವಾಹಿನಿ ಇಲ್ಲಿಂದಲೇ ಪ್ರಾರಂಭವಾಯಿತು.


ಈ ಸಂದರ್ಭದಲ್ಲಿ ಆಶೀರ್ವಾದಿಸಿದ ಶ್ರೀ ಕ್ಷೇತ್ರದ ಮೊಕ್ತೇಸರ, ಶರವು ರಾಘವೇಂದ್ರ ಶಾಸ್ತ್ರಿಗಳು “22 ವರ್ಷಗಳ ಹಿಂದೆ ಹುಟ್ಟಿ ಬೆಳೆದ ನಮ್ಮ ಕುಡ್ಲ ವಾಹಿನಿ ಎಂಬ ಕೂಸು ಇಂದು ಬೆಳೆದು ಹೆಮ್ಮರವಾಗಿದೆ.

ನಮ್ಮಕುಡ್ಲ ಸಂಸ್ಥೆಯಿಂದಾಗಿ ನಮ್ಮ ಸಂಸ್ಕೃತಿ, ತುಳುನಾಡಿನದೈವ-ದೇವರುಗಳ ಕಾರ್ಯಕ್ರಮವನ್ನು ಕುಳಿತಲ್ಲಿಂದಲ್ಲೇ ವೀಕ್ಷಿಸುವಲ್ಲಿ ಸಾಧ್ಯವಾಗಿದೆ.

ಅದೇಷ್ಟೋ ಜನರಿಗೆ ಇಂತಹ ಹಬ್ಬ-ಹರಿದಿನಗಳಂದು ದೇವಸ್ಥಾನಗಳಿಗೆ ಬರುವ ಅವಕಾಶವಿಲ್ಲ. ಅಂತಹ ಜನರ ಮನೆಬಾಗಿಲಿಗೆ ಕಾರ್ಯಕ್ರಮಗಳನ್ನು ವೀಕ್ಷಿಸುವಂತೆ ಮಾಡಿದ ಸಂಸ್ಥೆಗೆ ಮುಂದೆಯು ಉತ್ತೋರುತ್ತರ ಅಭಿವೃದ್ದಿಯಾಗಲೀ,

ಕರ್ಕೇರಾ ಕುಟುಂಬಸ್ಥರು ಹಾಗೂ ಸಂಸ್ಥೆಯ ಸಿಬ್ಬಂದಿಗೆ ಮಹಾಗಣಪತಿ ಒಳ್ಳೆಯದು ಮಾಡಲಿ ಅಂತ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ನಮ್ಮ ಕುಡ್ಲ ಸಂಸ್ಥೆಯ ನಿರ್ದೇಶಕರುಗಳಾದ ಹರೀಶ್.ಬಿ ಕರ್ಕೇರ , ಸುರೇಶ್ ಬಿ.ಕರ್ಕೇರ, ಮೋಹನ್ ಬಿ.ಕರ್ಕೇರ, ಲೀಲಾಕ್ಷ ಬಿ.ಕರ್ಕೇರ, ಸಿಒಒ ಕದ್ರಿ ನವನೀತ ಶೆಟ್ಟಿ ಆಡಳಿತ ಮಂಡಳಿ ಹಾಗು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LATEST NEWS

ಶಕ್ತಿ ಯೋಜನೆ ದುರ್ಬಳಕೆಗೆ ಬ್ರೇಕ್: ಜಾರಿಗೆ ಬರಲಿದೆ ‘ಸ್ಮಾರ್ಟ್’ ರೂಲ್ಸ್!

Published

on

ಕರ್ನಾಟಕ ಸರ್ಕಾರವು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಸೌಲಭ್ಯದಲ್ಲಿ ಆಗುತ್ತಿರುವ ದುರ್ಬಳಕೆ ತಡೆಗಟ್ಟಲು ಮತ್ತು ಪಾರದರ್ಶಕತೆ ತರಲು ‘ಸ್ಮಾರ್ಟ್ ಕಾರ್ಡ್’ ವಿತರಿಸುವ ನಿರ್ಧಾರಕ್ಕೆ ಫೆಬ್ರವರಿ 12, 2026 ರಂದು ಸಚಿವ ಸಂಪುಟ ಅನುಮೋದನೆ ನೀಡಿದೆ.


ಇನ್ನು ಮುಂದೆ ಆಧಾರ್ ಕಾರ್ಡ್ ಅಥವಾ ಇತರ ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣಿಸುವ ಬದಲು, ಸರ್ಕಾರ ನೀಡುವ ಅಧಿಕೃತ ‘ಶಕ್ತಿ ಸ್ಮಾರ್ಟ್ ಕಾರ್ಡ್’ ಇರುವುದು ಕಡ್ಡಾಯವಾಗಲಿದೆ. ಹೊರರಾಜ್ಯದವರು ನಕಲಿ ಆಧಾರ್ ಕಾರ್ಡ್ ಬಳಸಿ ಉಚಿತ ಪ್ರಯಾಣ ಮಾಡುತ್ತಿರುವುದನ್ನು ತಡೆಯಲು ಈ ಸ್ಮಾರ್ಟ್ ಕಾರ್ಡ್ ಸಹಕಾರಿಯಾಗಲಿದೆ. ಕಂಡಕ್ಟರ್‌ಗಳ ಬಳಿ ಇರುವ ಇಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್‌ಗಳಲ್ಲಿ ಈ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡುವುದರಿಂದ, ಎಷ್ಟು ಪ್ರಯಾಣಿಕರು ಪ್ರಯಾಣಿಸಿದ್ದಾರೆಂಬ ನಿಖರ ಮಾಹಿತಿ ಸರ್ಕಾರಕ್ಕೆ ಸಿಗಲಿದೆ.

ಈ ಸ್ಮಾರ್ಟ್ ಕಾರ್ಡ್‌ಗಳು ನೋಡಲು ‘ಆಯುಷ್ಮಾನ್‌ ಕಾರ್ಡ್‌’ ಮಾದರಿಯಲ್ಲಿ ಇರಲಿವೆ ಎಂದು ಹೇಳಲಾಗಿದೆ. ಕಾರ್ಡ್‌ನಲ್ಲಿ ಫಲಾನುಭವಿಯ ಹೆಸರು, ಫೋಟೋ, ಗುರುತಿನ ಚೀಟಿ ಸಂಖ್ಯೆ ಮತ್ತು ಒಂದು ವಿಶೇಷವಾದ ‘ದೃಢೀಕರಣ ಸಂಖ್ಯೆ’ ಇರುತ್ತದೆ. ಕಾರ್ಡ್‌ಗಳಲ್ಲಿ ಮೈಕ್ರೋ ಚಿಪ್ ಅಳವಡಿಸುವ ಚಿಂತನೆಯೂ ನಡೆದಿದೆ.

ಇದನ್ನೂ ಓದಿ: ಲಕ್ಷ್ಮಣ ಮರಕಡರಿಗೆ ಯಕ್ಷ ಸವ್ಯಸಾಚಿ ಬಿರುದು ಪ್ರದಾನ

ಈ ಸ್ಮಾರ್ಟ್ ಕಾರ್ಡ್‌ಗಳನ್ನು ಅರ್ಹ ಫಲಾನುಭವಿಗಳಿಗೆ ಸರ್ಕಾರವೇ ಉಚಿತವಾಗಿ ನೀಡಲಿದೆ. ಸರ್ಕಾರವು ಕಾರ್ಡ್‌ಗಳ ಉತ್ಪಾದನೆ ಮತ್ತು ವಿತರಣೆಗೆ ಸಿದ್ಧತೆ ನಡೆಸುತ್ತಿದ್ದು, ಜೂನ್ 2026 ರ ವೇಳೆಗೆ ಈ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ.

Continue Reading

DAKSHINA KANNADA

ಪುತ್ತೂರು : 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

Published

on

ಪುತ್ತೂರು : ಷರತ್ತು ಬದ್ದ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೆ ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಪುತ್ತೂರು ಕಸಬಾ ಗ್ರಾಮದ ಅಬ್ಬಾಸ್ ಆಲಿ ಅಲ್ತಾಫ್‌(55) ಬಂಧಿತ ಆರೋಪಿ.  ಮಂಗಳೂರು ಕುಲಶೇಖರ ಬಿಕರ್ನಕಟ್ಟೆ ಬಳಿ ಪುತ್ತೂರು ನಗರ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : NSUI ನಾಯಕನ ಮೇಲೆ ತಲವಾರು ದಾ*ಳಿ ಪ್ರಕರಣ; ಐವರು ಅರೆಸ್ಟ್

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆಬ್ರವರಿ 27ರ ವರೆಗೆ  ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Continue Reading

DAKSHINA KANNADA

ಲಕ್ಷ್ಮಣ ಮರಕಡರಿಗೆ ಯಕ್ಷ ಸವ್ಯಸಾಚಿ ಬಿರುದು ಪ್ರದಾನ

Published

on

ಮಂಗಳೂರು : ಶ್ರೀಕಟೀಲು ಮೇಳದ ಕಲಾವಿದ, ಯಕ್ಷ ಗುರು ಲಕ್ಷ್ಮಣ ಕುಮಾರ್ ಮರಕಡರಿಗೆ ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ಶ್ರೀಭಗವದ್ಗೀತಾಮೃತ ಪುರಸ್ಕಾರದೊಂದಿಗೆ “ಯಕ್ಷ ಸವ್ಯ ಸಾಚಿ” ಬಿರುದು ನೀಡಿ ಗೌರವಿಸಲಾಯಿತು.

ಶ್ರೀ ಮದ್ ಭಗವದ್ಗೀತೆಯ  ಪ್ರಚಾರಕ, ಆಧ್ಯಾತ್ಮಿಕ ಗುರು ಸುಬ್ರಾಯ  ನಂದ್ಯೋಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಲಕ್ಷ್ಮಣ ಅವರು ಗಣೇಶ ಪುರ, ಸುರತ್ಕಲ್ ಸದಾಶಿವ ಮಹಾಗಣಪತಿ, ತಲಕಳ, ಬಪ್ಪನಾಡು, ಉಳ್ಳಾಲ ಚೀರುಂಭ ಭಗವತೀ , ಸಸಿಹಿತ್ಲು ಭಗವತಿ, ಎಡನೀರು ಮೇಳಗಳಲ್ಲಿ ತಿರುಗಾಟ ಮಾಡಿ ಕಟೀಲು  ಮೇಳದಲ್ಲಿ ಈಗ 7ನೇ ವರ್ಷದ  ತಿರುಗಾಟ ಮಾಡುತ್ತಿರುವ ನಿಷ್ಠಾವಂತ ಕಲಾಸಾಧಕ.

ಕಾಸರಗೋಡು ಮತ್ತು ಮಂಗಳೂರು ಪರಿಸರದಲ್ಲಿ ಯಕ್ಷಗಾನ ಶಿಕ್ಷಕನಾಗಿ ತರಗತಿ ನಡೆಸಿ ಸಮೃದ್ಧ ಶಿಷ್ಯ ಗಡಣ ಹೊಂದಿರುವ ಯಕ್ಷ ಗುರು.ಆಮೇರಿಕಾ, ಮಸ್ಕತ್, ಆಸ್ಟ್ರೇಲಿಯಾ, ದುಬೈ ದೇಶಗಳಲ್ಲಿ ಪುಂಡು, ಸ್ತ್ರೀ,ರಾಜವೇಷ,ಹಾಸ್ಯ, ಎದುರು ವೇಷಗಳೆಲ್ಲವನ್ನೂ ಸಮರ್ಥವಾಗಿ ನಿರ್ವಹಿಸುತ್ತಿರುವ  ಅಪೂರ್ವ ಯಕ್ಷ ಕಲಾ ಸಾಧಕ ಎಂದು ಕದ್ರಿ ನವನೀತ ಶೆಟ್ಟಿ ಅಭಿನಂದಿಸಿದರು.

ಇದನ್ನೂ ಓದಿ : ಫೆ.21 ರಂದು ಕುದ್ರೋಳಿ ಕ್ಷೇತ್ರ ತೀರ್ಥಾಟನೆ

ಕಾರ್ಯಕ್ರಮದಲ್ಲಿ  ಯಕ್ಷಗಾನ ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಳ ಕದ್ರಿ, ಡಾ.ಶಶಾಂಕ್ ಮತ್ತಿತ್ತರರು ಉಪಸ್ಥಿತರಿದ್ದರು. ಮೇಳದ ಎಲ್ಲಾ ಕಲಾವಿದರಿಗೆ ಸೇವಾಕರ್ತರಾದ ಗೀತಾ ಪ್ರಚಾರಕಿ ಸವಿತಾ ಕೊರಗಪ್ಪ ಅವರು ಅರ್ಥ ಸಹಿತ ಭಗವದ್ಗೀತೆಯನ್ನು ವಿತರಿಸಿದರು. ಕಟೀಲು ಮೇಳದವರಿಂದ ಶ್ರೀದೇವಿ ಮಹಾತ್ಮೆ ಸೇವೆ ಬಯಲಾಟ ಜರುಗಿತು.

 

Continue Reading
Advertisement

Trending

Copyright © 2025 Namma Kudla News

You cannot copy content of this page