Connect with us

LATEST NEWS

ಬೈಂದೂರಿನಲ್ಲಿ ಕಾಲುಸಂಕ ಜಾರಿ ಬಿದ್ದಿದ್ದ ಬಾಲಕಿ ಮೃತದೇಹ ಪತ್ತೆ

Published

on

ಬೈಂದೂರು: ಎರಡು ದಿನಗಳ ಹಿಂದೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಕಾಲು ಸಂಕದಿಂದ ಜಾರಿ ಬಿದ್ದಿದ್ದ ಬಾಲಕಿಯ ಮೃತದೇಹ ಇಂದು ಪತ್ತೆಯಾಗಿದೆ.

ಸನ್ನಿಧಿ (6) ಮೃತಪಟ್ಟ ಬಾಲಕಿ.


ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಬರುವಾಗ ಕಾಲು ಸಂಕದಿಂದ ಜಾರಿ ಬಾಲಕಿ ಕೆಳಗೆ ಬಿದ್ದಿದ್ದಳು. ಆದರೆ ಅದೆಷ್ಟೇ ಶೋಧ ಕಾರ್ಯ ನಡೆಸಿದರೂ ಆಕೆ ಪತ್ತೆಯಾಗಿರಲಿಲ್ಲ.

ಆದರೆ ಇಂದು ಸನ್ನಿಧಿಯ ಮೃತದೇಹ ಸಿಕ್ಕಿದ್ದು ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

LATEST NEWS

ಪೋಷಕರ ಲೈಂ*ಗಿಕತೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ರಣವೀರ್ ಅಲ್ಹಾಬಾದಿಯಾಗೆ ಸಂಕಷ್ಟ!

Published

on

ನವದೆಹಲಿ :  ‘ಇಂಡಿಯಾ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಜನಪ್ರಿಯ ಯೂಟ್ಯೂಬರ್ ಮತ್ತು ಪಾಡ್‌ಕ್ಯಾಸ್ಟರ್ ರಣವೀರ್ ಅಲ್ಹಾಬಾದಿಯಾ, ಹಾಸ್ಯನಟ ಸಮಯ್ ರೈನಾ ಮತ್ತು ಇತರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪೋಷಕರು ಮತ್ತು ಲೈಂ*ಗಿಕತೆ ಕುರಿತು ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಯಲ್ ಬೈಸೆಪ್ಸ್ ಹೆ ಎಂದೇ ಖ್ಯಾತರಾಗಿರುವ ರಣವೀರ್ ವೀಡಿಯೋ ಬಿಡುಗಡೆ ಮಾಡಿ ಕ್ಷಮೆಯಾಚಿಸಿದ್ದರು. ಹೇಳಿಕೆ ತೀವ್ರತೆ ಪಡೆಯುತ್ತಿದ್ದಂತೆ ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್, ಅಪೂರ್ವ ಮಖಿಜಾ, ರಣವೀರ್ ಅಲ್ಹಾಬಾದಿಯಾ, ಸಮಯ್ ರೈನಾ ಮತ್ತು ಇತರರ ವಿರುದ್ಧ ಪೊಲೀಸರು ಸೋಮವಾರ(ಫೆ.10) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂದು(ಫೆ.11) ರಣವೀರ್ ಅಲಹಾಬಾದಿಯಾ ಮತ್ತು ಇತರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಏನಿದು ಪ್ರಕರಣ?

‘ಇಂಡಿಯಾ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಯೂಟ್ಯೂಬರ್‌ಗಳಾದ ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್, ಅಪೂರ್ವ ಮಖಿಜಾ, ರಣವೀರ್ ಅಲ್ಹಾಬಾದಿಯಾ, ಸಮಯ್ ರೈನಾ ಭಾಗವಹಿಸಿದ್ದರು.  ಈ ವೇಳೆ ರಣವೀರ್ ಅಲ್ಹಾಬಾದಿಯಾ ಪೋಷಕರ ಲೈಂ*ಗಿಕತೆ ಬಗ್ಗೆ ಯುವಕನೊಬ್ಬನಲ್ಲಿ ಪ್ರಶ್ನೆ ಕೇಳಿದ್ದರು. ಈ ವೀಡಿಯೋ ವೈರಲ್ ಆಗಿತ್ತು. ರಣವೀರ್ ಪ್ರಶ್ನೆ ಬಗ್ಗೆ ಭಾರೀ ಆಕ್ರೋಶ ಕೇಳಿ ಬಂದಿತ್ತು. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಅನೇಕ ಗಣ್ಯರೂ  ಆಕ್ಷೇ*ಪ ವ್ಯಕ್ತಪಡಿಸಿದ್ದರು.

ಸಂಚಿಕೆ ಪ್ರಸಾರಕ್ಕೆ ನಿರ್ಬಂಧ :

ಯೂಟ್ಯೂಬರ್ ಮತ್ತು ಪಾಡ್‌ಕ್ಯಾಸ್ಟರ್ ರಣವೀರ್ ಅಲ್ಹಾಬಾದಿಯಾ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆ ಅವರು ಭಾಗಿಯಾಗಿದ್ದ ಇಂಡಿಯಾ ಗಾಟ್  ಲ್ಯಾಟೆಂಟ್‌ನ ಸಂಚಿಕೆಯ ಪ್ರಸಾರಕ್ಕೆ ಬ್ರೇಕ್ ಹಾಕಲಾಗಿದೆ.

ಇದನ್ನೂ ಓದಿ : ಈ ರಾಶಿಯವರು ಮದುವೆಯಾದರೆ ಭೂಲೋಕದಿ ಸಾಕ್ಷಾತ್ ಶಿವ-ಪಾರ್ವತಿ ವಿವಾಹವಾದಂತೆ

ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.  ಇಂಡಿಯಾ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ರಣವೀರ್ ಅಲ್ಹಾಬಾದಿಯಾ ಅವರ ಆಕ್ಷೇಪಾರ್ಹ ಹೇಳಿಕೆ ಇರುವ ಸಂಚಿಕೆ ಪ್ರಸಾರವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Continue Reading

LATEST NEWS

ಆರ್‌ಸಿಬಿಗೆ ಮತ್ತೆ ಕೊಹ್ಲಿಯೇ ನಾಯಕ ?

Published

on

ಮಂಗಳೂರು/ಬೆಂಗಳೂರು : ಈ ಬಾರಿಯ ಐಪಿಎಲ್‌ನಲ್ಲಿ ಮತ್ತೆ ವಿರಾಟ್ ಕ್ಯಾಪ್ಟನ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. 2021ರಲ್ಲಿ ಆರ್‌ಸಿಬಿ ನಾಯಕತ್ವ ತೊರೆದಿರುವ ವಿರಾಟ್ ಕೊಹ್ಲಿ ಇದೀಗ ಮತ್ತೆ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)ಸೀಸನ್-18ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ಯಾರು ಅನ್ನೋ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ ಈ ಬಾರಿ ಆರ್‌ಸಿಬಿ ತಂಡವನ್ನು ವಿರಾಟ್ ಕೊಹ್ಲಿಯೇ ಮುನ್ನಡೆಸಲಿದ್ದಾರೆ ಎಂಬ ಸುಳಿವು ಸಿಕ್ಕಿದೆ.

ಇಂಗ್ಲೆಂಡ್ ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ಸುರೇಶ್ ರೈನಾ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ರೈನಾ ಸಂಭಾಷಣೆ ನಡೆಸಿದ್ದಾರೆ. ಇಂಗ್ಲೆಂಡ್ ಆಟಗಾರ ಆರ್‌ಸಿಬಿ ನಾಯಕನ ಕುಶಲೋಪರಿ ವಿಚಾರಿಸಿದ್ದಾರೆ ಎಂದು ಕಾಮೆಂಟರಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಗಂಡ ಮಾಡಿದ ಸಾಂಬಾರನ್ನು ಎರಡು ವರ್ಷಗಳ ಬಳಿಕ ತಿಂದ ಹೆಂಡತಿ..!

ಇತ್ತ ಸುರೇಶ್ ರೈನಾ ಹಾಗೂ ವಿರಾಟ್ ಕೊಹ್ಲಿ ನಡುವೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಅವರಿಗೆ ಆರ್‌ಸಿಬಿ ತಂಡದ ಮುಂದಿನ ನಾಯಕ ಯಾರೆಂಬುದು ಗೊತ್ತಿದೆ. ಇದೇ ಕಾರಣದಿಂದಾಗಿ ವಿರಾಟ್ ಕೊಹ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ನಾಯಕ ಎಂದು ಸುರೇಶ್ ರೈನಾ ಬಹಿರಂಗವಾಗಿ ಹೇಳಿದ್ದಾರೆ.

9 ವರ್ಷಗಳ ಕಾಲ ಆರ್‌ಸಿಬಿ ಕ್ಯಾಪ್ಟನ್ ಆಗಿ ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿರುವ ವಿರಾಟ್ ಕೊಹ್ಲಿ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಅಲ್ಲದೇ ಕಿಂಗ್ ಕೊಹ್ಲಿ ನಾಯಕತ್ವದಲ್ಲೇ ಆರ್‌ಸಿಬಿ 2016ರಲ್ಲಿ ಫೈನಲ್‌ಗೆ ಪ್ರವೇಶಿಸಿದರೆ, 3ಬಾರಿ ಪ್ಲೇಆಫ್ಸ್ ಆಡಿತ್ತು.

 

 

Continue Reading

LATEST NEWS

ಚಲಿಸುತ್ತಿದ್ದ ಬಸ್‌ನಲ್ಲಿ ಲೈಂ*ಗಿಕ ಕಿರುಕು*ಳಕ್ಕೆ  ಯತ್ನ; ವಾಹನದಿಂದ ಜಿ*ಗಿದ ವಿದ್ಯಾರ್ಥಿನಿಯರು

Published

on

ಮಂಗಳೂರು/ದಮೋಹ್ : ಚಲಿಸುತ್ತಿದ್ದ ಬಸ್ಸಿನಲ್ಲಿ ಇಬ್ಬರು ಬಾಲಕಿ ಕಂಡೆಕ್ಟರ್ ಸೇರಿ ನಾಲ್ವರು ಅಶ್ಲೀ*ಲವಾಗಿ ನಿಂದಿಸಿ, ಲೈಂ*ಗಿಕ ಕಿ*ರುಕುಳ ನೀಡಲು ಯತ್ನಿಸಿದ್ದು, ಈ ವೇಳೆ ಬಾಲಕಿಯರು ಬಸ್ಸಿನಿಂದ  ಜಿಗಿದಿದ್ದಾರೆ. ಈ  ಘಟನೆ ನಡೆದಿರೋದು ಮಧ್ಯಪ್ರದೇಶದ ದಮೋಹ್ ಜಿಲ್ಲೆಯಲ್ಲಿ. ಸದ್ಯ ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಇಬ್ಬರು ಬಾಲಕಿಯರು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಘಟನೆಯ ದಿನ ಅವರು ಅದ್ರೋಟಾದಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.  ಈ ಬಸ್‌ನ ಚಾಲಕ, ಕಂಡೆಕ್ಟರ್  ಸೇರಿ ನಾಲ್ವರು ಬಾಲಕಿಯರನ್ನು ನಿಂದಿಸಿದ್ದಾರೆ. ಬಳಿಕ ಬಸ್‌ನ ಹಿಂದಿನ ಬಾಗಿಲನ್ನು ಮುಚ್ಚಿದ್ದಾರೆ. ಇದರಿಂದ ಬಾಲಕಿಯರಿಗೆ ಆತಂಕವಾಗಿದೆ.  ಬಾಗಿಲು ತೆರೆಯುವಂತೆ ಕೇಳಿಕೊಂಡಿದ್ದಾರೆ. ಆದರೆ, ಬಸ್ ನಿಲ್ಲಿಸದೇ ಇದ್ದಾಗ ಬಸ್‌ನಿಂದ ಜಿಗಿದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಹೆಚ್ಚುವರಿ ಮಟನ್ ಪೀಸ್ ಕೊಡಲು ನಿರಾಕರಿಸಿದ ಅಂಗಡಿ ಮಾಲಕ; ಬಳಿಕ ನಡೆದಿದ್ದು ಭ*ಯಾನಕ!

ಈ ಬಗ್ಗೆ ಫೋ*ಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು,  ಬಸ್‌ ಚಾಲಕ ಮೊಹಮ್ಮದ್ ಆಶಿಕ್, ಕಂಡಕ್ಟರ್ ಬನ್ಶಿಲಾಲ್, ಹುಕುಮ್ ಸಿಂಗ್, ಮಾಧವ್ ಅಸತಿ ಬಂಧಿತ ಆರೋಪಿಗಳು.  ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page