Connect with us

STATE

ಮಲೆಮಹದೇಶ್ವರ ಮಾದಪ್ಪನ ಹುಂಡಿಯಲ್ಲಿ 2.33 ಕೋಟಿ ರೂ. ಸಂಗ್ರಹ

Published

on

ಚಾಮರಾಜನಗರ: ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಹುಂಡಿ‌ ಹಣ ಎಣಿಕೆ ಕಾರ್ಯ ನಡೆದಿದ್ದು, ಬರೋಬ್ಬರಿ 2.33 ಕೋಟಿ ರೂ. ಸಂಗ್ರಹವಾಗಿದೆ.


47 ದಿನದಲ್ಲಿ 2.33 ಕೋಟಿ ರೂ. ಸಂಗ್ರಹಕೇವಲ 47 ದಿನಗಳಲ್ಲಿ 2,33,57,28 ಕೋಟಿ ರೂ. ಸಂಗ್ರಹವಾಗಿದೆ ಎಂದು ಹೇಳಬಹುದು. ಭಕ್ತಾದಿಗಳು ಮಾದಪ್ಪನಿಗೆ ಹಣದ ರೂಪದಲ್ಲಿ ಭಕ್ತಿಯ ಹೊಳೆಯನ್ನೇ ಹರಿಸಿದ್ದು, ಹುಂಡಿಯಲ್ಲಿ 155 ಗ್ರಾಂ ಚಿನ್ನ, 2.2 ಕೆಜಿ ಬೆಳ್ಳಿಯನ್ನು ದೇವರಿಗೆ ಅರ್ಪಿಸಿದ್ದಾರೆ. 122 ದಿನಗಳ ಬಳಿಕ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ. ಇದರಲ್ಲಿ ಕೊರೊನಾ ಲಾಕ್​ಡೌನ್​​ ಪರಿಣಾಮ 75 ದಿನಗಳ ಕಾಲ ದೇವಾಲಯ ಬಂದ್ ಮಾಡಲಾಗಿತ್ತು ಎಂಬುದು ವಿಶೇಷ. ಮಲೆಮಹದೇಶ್ವರ ಬೆಟ್ಟದಲ್ಲಿ ಸ್ಥಗಿತಗೊಂಡಿದ್ದ ದಾಸೋಹ ವ್ಯವಸ್ಥೆ ಇಂದಿನಿಂದ ಪ್ರಾರಂಭವಾಗಲಿದೆ. ಆದರೆ, ಲಾಡು ವಿತರಣೆ, ವಿಶೇಷ ಸೇವೆಗಳು, ಮುಡಿ ಸೇವೆಗಳಿಗೆ ನಿರ್ಬಂಧ ಹೇರಲಾಗಿದೆ.

LATEST NEWS

ಶಿವಮೊಗ್ಗ ಸೆಂಟ್ರಲ್ ಜೈಲಿನ ಖೈದಿ ಸಾ*ವು

Published

on

ಮಂಗಳೂರು/ಶಿವಮೊಗ್ಗ : ಜೀ*ವಾವಧಿ ಶಿಕ್ಷೆಗೊಳಗಾಗಿದ್ದ ಶಿವಮೊಗ್ಗ ಸೆಂಟ್ರಲ್ ಜೈಲಿನ ಖೈದಿಯೊಬ್ಬ ಮೃ*ತಪಟ್ಟಿದ್ದಾನೆ. ಚಿಕ್ಕಮಗಳೂರು ಮೂಲದ ಬಾಬು ಕೆ.ಪಿ ಅಲಿಯಾಸ್ ಸಜಿ ಬಾಬು ಮೃ*ತ ಖೈದಿ.

ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಬುನನ್ನು ನವೆಂಬರ್ 10 ರಂದು ಬೆಳಗ್ಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃ*ತಪಟ್ಟಿದ್ದಾನೆಂದು ತಿಳಿದುಬಂದಿದೆ.

ಇದನ್ನೂ ಓದಿ : ಇಬ್ಬರು ಯುವತಿಯರ ಜೊತೆಗೆ ವಾಸವಿದ್ದ ಯುವಕ ಬಾತ್‌ರೂಮ್‌ನಲ್ಲಿ ಆತ್ಮಹತ್ಯೆ

ಪ್ರಕರಣವೊಂದರ ಸಂಬಂಧ ಚಿಕ್ಕಮಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬಾಬುಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕಳೆದ ಆಗಸ್ಟ್ 22 ರಂದು ಬಾಬುನನ್ನು ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು. ಚಿಕ್ಕಮಗಳೂರು ಕಾರಾಗೃಹದಲ್ಲಿ ಇದ್ದಾಗಲೇ ಬಾಬು ಎಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಎನ್ನಲಾಗಿದೆ.

 

Continue Reading

LATEST NEWS

ಇಬ್ಬರು ಯುವತಿಯರ ಜೊತೆಗೆ ವಾಸವಿದ್ದ ಯುವಕ ಬಾತ್‌ರೂಮ್‌ನಲ್ಲಿ ಆತ್ಮಹತ್ಯೆ

Published

on

ಬೆಂಗಳೂರು: ಇಬ್ಬರು ಯುವತಿಯರ ಜೊತೆಗೆ ವಾಸವಿದ್ದ ಯುವಕನೊಬ್ಬ ದುಡುಕಿನ ನಿರ್ಧಾರ ತೆಗೆದುಕೊಂಡು ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ವಿಷ್ಣು ಸಿಪಿ (39) ಸಾವಿಗೆ ಶರಣಾದ ಯುವಕ. ಈತ ಸೂರ್ಯಕುಮಾರಿ ಹಾಗೂ ಜ್ಯೋತಿ ಎಂಬ ಇಬ್ಬರು ಯುವತಿಯರ ಜೊತೆ ವಾಸವಿದ್ದ. ಈ ಮೊದಲು ಜ್ಯೋತಿ ಜೊತೆ ರಿಲೇಷನ್​ಶಿಪ್​ನಲ್ಲಿ ಇದ್ದ ವಿಷ್ಣು ಅದಕ್ಕೂ ಮುಂಚೆ ಸೂರ್ಯಕುಮಾರಿ ಎಂಬಾಕೆಯ ಜೊತೆಯೂ ರಿಲೇಷನ್​ಶಿಪ್​ನಲ್ಲಿದ್ದ.

ಇದೇ ವಿಚಾರಕ್ಕೆ ಮೂವರ ಮಧ್ಯೆ ಗಲಾಟೆ ಶುರುವಾಗಿದೆ. ಇದರಿಂದ ಬೇಸತ್ತು ಫ್ಲಾಟ್​ನ ಬಾತ್​ರೂಮ್​ನಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಮೃತ ವಿಷ್ಣು ಹೊಸೂರು ರಸ್ತೆಯ ಎಕೆಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಇದನ್ನೂ ಓದಿ: ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ

ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷ್ಣು ಸೋದರ ಜಿಷ್ಣು ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Continue Reading

LATEST NEWS

ರಾಯಲ್ ಎನ್ ಫೀಲ್ಡ್ ಬೈಕ್ ಕದಿಯುತ್ತಿದ್ದ ಕಳ್ಳನ ಬಂಧನ

Published

on

ಮಂಗಳೂರು/ಬೆಂಗಳೂರು : ಆತನ ಟಾರ್ಗೆಟ್ ರಾಯಲ್ ಎನ್ ಫೀಲ್ಡ್ ಬೈಕ್. ಒಂದು ದಿನಗಳಲ್ಲಿ ಆತ ಕದ್ದಿದ್ದು ಬರೋಬ್ಬರಿ 42 ಬೈಕ್ಸ್…ಸದ್ಯ ಈ ಖತರ್ನಾಕ್ ಕಳ್ಳ ಪೊಲೀಸರ ಅತಿಥಿಯಾಗಿದ್ದಾನೆ.

ಜಯನಗರ ಎರಡನೇ ಬ್ಲಾಕ್ ನಿವಾಸಿಯೊಬ್ಬರು ವಿಲ್ಸನ್‌ ಗಾರ್ಡನ್‌ ನಲ್ಲಿರುವ ಸ್ನೇಹಿತನ ಮನೆಯ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಬಗ್ಗೆ  ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ದ್ವಿಚಕ್ರ ವಾಹನ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 1 ಕೋಟಿ ಮೌಲ್ಯದ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ 38 ವರ್ಷದ ರಾಜು ಬಂಧಿತ. ಆತನಿಂದ ಅಕ್ಟೋಬರ್ 17 ರಿಂದ ನವೆಂಬರ್ 7 ರ ಅವಧಿಯಲ್ಲಿ ಕಳವು ಮಾಡಿದ್ದ 42 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ :ಈ ಬಾರಿ ಡಿಕೆಡಿಯಲ್ಲಿ ಸೆಲೆಬ್ರೆಟಿಗಳದ್ದೇ ಹವಾ… ಭವ್ಯಾ ಗೌಡ ಅದ್ದೂರಿ ಎಂಟ್ರಿ!

ನಗರದ ವಿವಿಧ ಕಡೆ ರಾಯಲ್ ಎನ್‌ ಫೀಲ್ಡ್‌ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ, ತಮಿಳುನಾಡಿನಲ್ಲಿರುವ ಸ್ನೇಹಿತರು ಮತ್ತು ಸಂಬಂಧಿಕರಿಗೆ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ಖದೀಮ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page