Connect with us

ವಿಶ್ವದಾದ್ಯಂತ ಕೊರೊನಾ ವೈರಸ್ ಗೆ 1,70,000 ಜನ ಸಾವು,!

Published

on

ವಿಶ್ವದಾದ್ಯಂತ ಕೊರೊನಾ ವೈರಸ್ ಗೆ 1,70,000 ಜನ ಸಾವು,!

ನವದೆಹಲಿ: ಮಾರಕ ಕೊರೊನಾ ವೈರಸ್ ದಾಳಿಗೆ ಜಗತ್ತೇ ತಲ್ಲಣಗೊಂಡಿದೆ. ಮಹಾಮಾರಿ ವೈರಸ್ ಈವರೆಗೂ ವಿಶ್ವದಾದ್ಯಂತ 1,70,000 ಜನರನ್ನು ಬಲಿ ಪಡೆದಿದೆ.

ಇದರಲ್ಲಿ ಯುರೋಪ್ ನಲ್ಲಿಯೇ 1,06,737 ಜನರು ಅಸುನೀಗಿದ್ದಾರೆ. ಅಮೆರಿಕದಲ್ಲಿ 42,364 ಜನರು ಬಲಿಯಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ 1476 ಜನ ಅಮೇರಿಕಾದಲ್ಲಿ ಹೊಸದಾಗಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಇಟಲಿಯಲ್ಲಿ 24,114 ಹಾಗೂ ಸ್ಪೇನ್ ನಲ್ಲಿ 21,282, ಫ್ರಾನ್ಸ್ ನಲ್ಲಿ 20,265 ಹಾಗೂ ಬ್ರಿಟನ್ ನಲ್ಲಿ 16,509 ಜನ ಈವರೆಗೂ ಮಾರಕ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಇನ್ನು ಜಾಗತಿಕವಾಗಿ ಸರಿಸುಮಾರು 25 ಲಕ್ಷ ಜನರು ಈ ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಇಸ್ತ್ರಿ ಅಂಗಡಿಯವನ ಸಂಪಾದನೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು!

Published

on

ಹೌದು, ನೀವು ಕೇಳಿದ್ದು ನಿಜ! ಕೇವಲ 10 ರೂಪಾಯಿಗೆ ಒಂದು ಬಟ್ಟೆ ಇಸ್ತ್ರಿ ಮಾಡುವ ಸಣ್ಣ ಉದ್ಯಮದಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.


ನಳಿನಿ ಉನಾಗರ್ ಎಂಬುವವರು ಎಕ್ಸ್ (X) ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅವರ ಮನೆಯ ಬಳಿಯಿರುವ ಡ್ರೈ ಕ್ಲೀನರ್ ಅಂಗಡಿಯ ಮಾಲೀಕರು ಮತ್ತು ಅವರ ಪತ್ನಿ ಇಬ್ಬರೂ ಸೇರಿ ಸಹಾಯಕರ ನೆರವಿನೊಂದಿಗೆ ಈ ಸಾಧನೆ ಮಾಡುತ್ತಿದ್ದಾರೆ.

ಪ್ರತಿದಿನ ಸುಮಾರು 350 ಬಟ್ಟೆಗಳನ್ನು ತಲಾ 10 ರೂಪಾಯಿಯಂತೆ ಇಸ್ತ್ರಿ ಮಾಡುತ್ತಾರೆ. ಇದರಿಂದ ದಿನಕ್ಕೆ ₹3,500 ಆದಾಯ ಬರುತ್ತದೆ. ಪ್ರತಿದಿನ ಸರಿಸುಮಾರು 20 ಭಾರೀ ಬಟ್ಟೆಗಳನ್ನು ತಲಾ 350 ರೂ. ರಂತೆ ಡ್ರೈ ಕ್ಲೀನ್ ಮಾಡುತ್ತಾರೆ. ಇದರಿಂದ ದಿನಕ್ಕೆ ₹7,000 ಆದಾಯ ಬರುತ್ತದೆ. ಎಲ್ಲಾ ಸೇರಿ ದಿನಕ್ಕೆ ಸುಮಾರು 10,500 ರೂಪಾಯಿ ಗಳಿಸುತ್ತಾರೆ. ತಿಂಗಳಿಗೆ 27 ದಿನ ಕೆಲ್ಸ ಮಾಡಿದ್ರೂ ಒಟ್ಟು ಆದಾಯ ಸುಮಾರು 2.8 ಲಕ್ಷ ಎಂದು ನಳಿನಿ ಹೇಳಿದ್ದಾರೆ.

ಇದನ್ನೂ ಓದಿ: ಅಪ್ಪನೊಂದಿಗೆ ಹಾಲು ತರಲು ಹೋದಾಗ ನಡೆದ ದುರಂತ; ಸ್ಕೂಲ್ ಬಸ್ ಹರಿದು ಇಬ್ಬರು ಕಂದಮ್ಮಗಳು ಸಾವು

ಅಂಗಡಿ ಅವರದ್ದೇ ಆದ ಕಾರಣ ಬಾಡಿಗೆ ಇರುವುದಿಲ್ಲ. ವಿದ್ಯುತ್ ಬಿಲ್ ಸುಮಾರು ₹6,000 ಮತ್ತು ಇಬ್ಬರು ಸಹಾಯಕರ ಸಂಬಳ ₹40,000 ಕಳೆದರೆ, ಅವರಿಗೆ ತಿಂಗಳಿಗೆ ಅಂದಾಜು 2.3 ಲಕ್ಷ ರೂಪಾಯಿ ಉಳಿಯುತ್ತದೆ.

Continue Reading

LATEST NEWS

ಅಪ್ಪನೊಂದಿಗೆ ಹಾಲು ತರಲು ಹೋದಾಗ ನಡೆದ ದುರಂತ; ಸ್ಕೂಲ್ ಬಸ್ ಹರಿದು ಇಬ್ಬರು ಕಂದಮ್ಮಗಳು ಸಾವು

Published

on

ಬೆಂಗಳೂರು: ಶಾಲಾ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಎರಡು ಪುಟ್ಟ ಕಂದಮ್ಮಗಳು ಕೊನೆಯುಸಿರೆಳೆದ ಘಟನೆ ಇಂದು ಬೆಳಿಗ್ಗೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಕಾನ್ಸ್‌ಟೇಬಲ್ ನಾಗನಗೌಡ ಅವರ 2 ವರ್ಷದ ಮಗಳು ವರ್ಷ ಹಾಗೂ ಅವರ ಅಣ್ಣನ ಮಗಳು 4 ವರ್ಷದ ಭಾನು ಎಂದು ಗುರುತಿಸಲಾಗಿದೆ.

ನಗರದ ಸಿಎಆರ್ ವಿಭಾಗದಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾಗನಗೌಡ ಎಂಬುವವರು ಇಂದು ಬೆಳಿಗ್ಗೆ ತಮ್ಮ ಬೈಕ್‌ನಲ್ಲಿ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಹಾಲು ತರಲು ಹೊರಟಿದ್ದರು.

ಥಣಿಸಂದ್ರದ ಮುಖ್ಯರಸ್ತೆಯ ಬಳಿ ಚಲಿಸುತ್ತಿದ್ದಾಗ, ಎದುರುಗಡೆಯಿಂದ ಬಂದ ಶಾಲಾ ಬಸ್ ಅಚಾನಕ್ಕಾಗಿ ಟರ್ನ್ ಪಡೆದುಕೊಂಡಿದೆ. ಈ ವೇಳೆ ಬೈಕ್‌ಗೆ ಬಸ್ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ನಾಗನಗೌಡ ಮತ್ತು ಇಬ್ಬರು ಮಕ್ಕಳು ರಸ್ತೆಗೆ ಬಿದ್ದಿದ್ದಾರೆ.

ದುರದೃಷ್ಟವಶಾತ್, ಮಕ್ಕಳಿಬ್ಬರು ನೇರವಾಗಿ ಬಸ್ಸಿನ ಚಕ್ರದ ಕೆಳಗೆ ಬಿದ್ದಿದ್ದು, ಚಾಲಕ ಬ್ರೇಕ್ ಹಾಕುವಷ್ಟರಲ್ಲಿ ಬಸ್ ಮಕ್ಕಳ ಮೇಲೆ ಹರಿದಿದೆ. ತಲೆಗೆ ಗಂಭೀರ ಗಾಯಗಳಾದ ಪರಿಣಾಮ ಎರಡು ಮತ್ತು ನಾಲ್ಕು ವರ್ಷದ ಇಬ್ಬರು ಪುಟಾಣಿಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ನಾಗನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಐಟಿಐ ವಿದ್ಯಾರ್ಥಿಗಳ ಮಧ್ಯೆ ಚೂರಿ ಇರಿತ-ಇಬ್ಬರಿಗೆ ಗಾಯ

ಶಾಲಾ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದ್ದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

Continue Reading

LATEST NEWS

ಉಡುಪಿ: ಫ್ಲ್ಯಾಟ್, ಚಿನ್ನ ನೀಡುವುದಾಗಿ ನಂಬಿಸಿ ಉದ್ಯಮಿಗೆ ಕೋಟಿ ಕೋಟಿ ವಂಚನೆ

Published

on

ಉಡುಪಿ: ಹರಾಜಿನಲ್ಲಿ ಫ್ಲ್ಯಾಟ್ ಮತ್ತು ಚಿನ್ನ ಖರೀದಿಸಿ ಕೊಡುವುದಾಗಿ ನಂಬಿಸಿ ಮುಂಬೈ ಮೂಲದ ಉದ್ಯಮಿ ಮಮತಾ ಶೆಟ್ಟಿ ಎಂಬವರಿಗೆ ಉಡುಪಿ ಮೂಲದ ದಂಪತಿ ಸುಹಾಸಿನಿ ಶೆಟ್ಟಿ ಹಾಗೂ ಪತಿ ಪುನೀತ್ ಶೆಟ್ಟಿ ಎಂಬವರು ಸುಮಾರು 4.78 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ ಎಂದು ದಂಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಮತಾ ಶೆಟ್ಟಿಗೆ ದೂರದ ಸಂಬಂಧಿಯಾಗಿರುವ ಸುಹಾಸಿನಿ, 2024ರ ಜನವರಿಯಿಂದ ಜೂನ್‌ವರೆಗೆ ಹಂತ ಹಂತವಾಗಿ 4.78 ಕೋಟಿ ರೂಪಾಯಿ ಹಣ ವರ್ಗಾಯಿಸಿಕೊಂಡಿದ್ದಾರೆ. ಹರಾಜಿನಲ್ಲಿ ಚಿನ್ನ, ಫ್ಲ್ಯಾಟ್ ಹಾಗೂ ಸ್ಕ್ರಾಪ್ ವ್ಯವಹಾರದಲ್ಲಿ ಲಾಭಕರ ಹೂಡಿಕೆ ಮಾಡಿಕೊಡುವುದಾಗಿ ನೀಡಿದ ಭರವಸೆಯನ್ನು ನಂಬಿದ ಹಿನ್ನೆಲೆಯಲ್ಲಿ ತಾನು ಮೋಸ ಹೋಗಿದ್ದಾಗಿ ದೂರು ನೀಡಲಾಗಿದೆ. ಆಕೆ ಜೊತೆ ಪತಿ ಕೂಡಾ ಕೈಜೋಡಿಸಿದ್ದಾರೆ.

2024ರಲ್ಲಿ ಉಡುಪಿ ಸೈಬರ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಬಳಿಕ ಸುಹಾಸಿನಿ ಶೆಟ್ಟಿ ನ್ಯಾಯಾಲಯದಿಂದ ಪ್ರಕರಣಕ್ಕೆ ಸ್ಟೇ ಆದೇಶ ಪಡೆದಿದ್ದರು. ಈ ನಡುವೆ ಕಿಶೋರ್ ಶೆಟ್ಟಿ ಮತ್ತು ನವೀನ್ ಮೂಲ್ಕಿ ಎನ್ನುವವರ ಮೂಲಕ ಸಂಧಾನ ಮಾತುಕತೆ ನಡೆದಿದ್ದರೂ ಅದು ವಿಫಲವಾಗಿದೆ. ಇದೀಗ ಸುಹಾಸಿನಿ ಮತ್ತು ಪತಿ ಮಣಿಪಾಲದಿಂದ ಮಂಗಳೂರಿಗೆ ಸ್ಥಳಾಂತರಗೊಂಡು ಮಂಗಳೂರಿನಲ್ಲೂ ಇದೇ ರೀತಿ ಮೋಸ ಮಾಡಿದ್ದಾರೆ.

ಇದನ್ನೂ ಓದಿ: ಮದುವೆ ಮನೆ ಬಫೆ ಆ್ಯಪ್‌ ಅಭಿವೃದ್ಧಿಪಡಿಸಿದ ಬೆಂಗಳೂರು ಯುವಕನಿಗೆ ಕೊಲೆ ಬೆದರಿಕೆ!

ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ತನಗೆ ನ್ಯಾಯ ದೊರಕಿಸಿಕೊಡುವಂತೆ ಮಮತಾ ಶೆಟ್ಟಿ ಮಂಗಳೂರು ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿ ಮರು ತನಿಖೆಗೆ ಮನವಿ ಮಾಡಿರುವುದಾಗಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page