Connect with us

LATEST NEWS

ಬಿಜೆಪಿಗೆ ಅನುದಾನದ ಲೆಕ್ಕದ ಸವಾಲೆಸೆದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ…!

Published

on

ಮಂಗಳೂರು  :   ವಿಧಾನ ಸಭಾ ಕ್ಷೇತ್ರಕ್ಕೆ 1400 ಕೋಟಿ ಅನುದಾನ ತಂದಿರುವ ಬಗ್ಗೆ ನಾನು ಲೆಕ್ಕ ಕೊಡ್ತೆನೆ ಬನ್ನಿ… ಆದ್ರೆ ಬರುವಾಗ ಜಿಲ್ಲೆಗೆ 1 ಲಕ್ಷ ಅನುದಾನ ತಂದ ಲೆಕ್ಕ ಹಿಡಿದುಕೊಂಡು ಬನ್ನಿ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸವಾಲೆಸೆದಿದ್ದಾರೆ. ಪುತ್ತೂರಿನ ಶಾಸಕನಾಗಿ 1400 ಕೋಟಿ ಅನುದಾನ ತಂದಿರುವುದಾಗಿ ಹೇಳಿದ್ದ ಶಾಸಕ ಅಶೋಕ್‌ ಕುಮಾರ್ ರೈ ಅವರಿಗೆ ಅನುದಾನದ ಲೆಕ್ಕ ನೀಡುವಂತೆ ಮಾಜಿ ಶಾಸಕ ಬಿಜೆಪಿಯ ಸಂಜೀವ ಮಠಂದೂರು ಸವಾಲು ಹಾಕಿದ್ದರು. ಅದಕ್ಕೆ ಪ್ರತಿಯಾಗಿ ಸವಾಲು ಹಾಕಿರುವ ಶಾಸಕ ಅಶೋಕ್ ಕುಮಾರ್ ರೈ ಪುತ್ತೂರಿನ ಅಭಿವೃದ್ದಿ ಸಹಿಸಲಾಗದೆ ಬಿಜೆಪಿಗರು ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಶಾಸಕ ಅಶೋಕ್ ಕುಮಾರ್ ರೈ

 

ವಿಟ್ಲದ ಪೆರುವಾಯಿ ಗ್ರಾಮದಲ್ಲಿ 65.20 ಲಕ್ಷ ರೂಪಾಯಿ ಕಾಮಾಗಾರಿಗೆ ಶಿಲನ್ಯಾಸ ಮಾಡಿದ ಶಾಸಕರು ಬಿಜೆಪಿಗೆ ಈ ಸವಾಲೆಸೆದಿದ್ದಾರೆ. ಇತ್ತೀಚೆಗೆ ಅನುದಾನದ ಬಗ್ಗೆ ಮಾತನಾಡಿದ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಶಾಸಕರು 1400 ಕೋಟಿ ಎಲ್ಲಿ ಹಾಕಿದ್ದಾರೆ ಎಂಬ ಲೆಕ್ಕ ಕೊಡಲಿ ಎಂದು ಹೇಳಿದ್ದರು. ಅಭಿವೃದ್ದಿ ಮಾಡಿದ್ದೇವೆ ಅಂತ ಶಾಸಕರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಕೇವಲ ಪ್ರಚಾರ ಮಾಡದೆ 1400 ಕೋಟಿಯ ಅಭಿವೃದ್ದಿ ಎಲ್ಲಿ ಆಗುತ್ತಿದೆ ಎಂದು ಹೇಳಲಿ ಎಂದು ಹೇಳಿದ್ದರು. ಈ ವಿಚಾರ ಪ್ರಸ್ತಾಪಿಸಿದ ಶಾಸಕ ಅಶೋಕ್‌ ಕುಮಾರ್ ರೈ ಅಭಿವೃದ್ದಿ ವಿಚಾರದಲ್ಲಿ ಸರ್ಕಾರ ಹಿಂದೆ ಬಿದ್ದಿಲ್ಲ. ಬಡವರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಈಗಾಗಲೇ ಪಂಚ ಕಲ್ಯಾಣ ಯೋಜನೆಯಿಂದ ಬಡವರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಯಶಸ್ಸು ಸಾಧಿಸಿದೆ. ಅದೇ ರೀತಿ ಇತರೇ ಅಭಿವೃದ್ದಿ ಕಾರ್ಯಕ್ರಮಗಳಿಗೂ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ. ಪುತ್ತೂರು ಕ್ಷೇತ್ರಕ್ಕೆ 1400 ಕೋಟಿ ಅನುದಾನ ತಂದಿದ್ದು, ಇದೀಗ ಸರ್ಕಾರದಿಂದ ಬಡವರಿಗಾಗಿ 400 ಮನೆಗಳನ್ನು ಕೊಡುವ ಯೋಜನೆ ಕೂಡಾ ನನ್ನ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ಆದ್ರೆ ಪುತ್ತೂರಿನ ಮಾಜಿ ಶಾಸಕರು ಅಭಿವೃದ್ದಿ ಆಗಿಲ್ಲ ಅಂತಿದ್ದಾರೆ. ಹೀಗಾಗಿ ಮಾಜಿ ಶಾಸಕರು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು  1 ಲಕ್ಷ ಕೋಟಿ ನೀಡಿದ್ದೇನೆ ಎಂದು ಹೇಳಿರುವ ಅನುದಾನ ಎಲ್ಲಿ ವಿನಿಯೋಗ ಆಗಿದೆ ಅನ್ನೋ ಲೆಕ್ಕ ಕೊಡಲಿ ನಾನೂ 1400 ಕೋಟಿಯ ಲೆಕ್ಕ ಕೊಡಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.

LATEST NEWS

ಹೊಸ ಇತಿಹಾಸ ಸೃಷ್ಟಿಸಿದ ‘ದುಬೈ ಬ್ಯಾರಿ ಮೇಳ-2025’: 12 ಸಾವಿರಕ್ಕೂ ಹೆಚ್ಚು ಜನ ಸೇರುವ ಮೂಲಕ ದಾಖಲೆ

Published

on

ದುಬೈ: ದುಬೈಯ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಬಿಸಿಸಿಐ) ಆಶ್ರಯದಲ್ಲಿ ನಡೆದ ಬ್ಯಾರಿ ಮೇಳ-2025 ಬಹಳ ಯಶಸ್ವಿಯಾಗಿ ನಡೆಯಿತು.

ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(ಬಿಸಿಸಿಐ) ಯುಎಇ ಘಟಕದ ಅಧ್ಯಕ್ಷ ಹಿದಾಯತ್ ಅಡ್ಡೂರು ನೇತೃತ್ವದಲ್ಲಿ ಮಧ್ಯಾಹ್ನದಿಂದ ಆರಂಭಗೊಂಡ ಬ್ಯಾರಿ ಮೇಳವು ರಾತ್ರಿ ವರೆಗೂ ಅದ್ದೂರಿಯಾಗಿ ನಡೆದಿದ್ದು, 12 ಸಾವಿರಕ್ಕೂ ಹೆಚ್ಚು ಜನರು ಸೇರುವ ಮೂಲಕ ದುಬೈಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಈ ಮೇಳದಲ್ಲಿ ಕೇವಲ ಬ್ಯಾರಿ ಸಮುದಾಯದವರಲ್ಲದೆ ಇನ್ನಿತರ ಹಿಂದೂ, ಕ್ರಿಶ್ಚಿಯನ್ ಸಮುದಾಯದವರೂ ಕೂಡ ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಮೆರೆದರು.

ಈ ಕಾರ್ಯಕ್ರಮದಲ್ಲಿ ಜನರು ಕುಟುಂಬ ಸಮೇತರಾಗಿ ಪಾಲ್ಗೊಂಡು ಸಂಭ್ರಮಿಸಿದರು. ಕರ್ನಾಟಕದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ತುಂಬೆ ಗ್ರೂಪ್ ನ ಸಂಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್, ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಸೌದಿ ಅರೇಬಿಯಾದ ಎಕ್ಸ್ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪನಿ ಲಿಮಿಟೆಡ್ನ ಸಿಇಒ ಮುಹಮ್ಮದ್ ಆಸಿಫ್ ಕರ್ನಿರೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬ್ಯಾರಿ ಮೇಳದಲ್ಲಿ ವಿವಿಧ ಬಗೆಯ ತಿಂಡಿ-ತಿನಸುಗಳ ಮಳಿಗೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಮನಸೂರೆಗೊಂಡವು.

ಬ್ಯಾರಿ ಯುವ ಉದಯೋನ್ಮುಖ ಉದ್ಯಮಿಗಳಿಗೆ ಆಯೋಜಿಸಿದ್ದ “ಬ್ಯಾರಿ ಶಾರ್ಕ್ ಥಿಂಕ್” ಕಾರ್ಯಕ್ರಮದಲ್ಲಿ ಹೊಸ ಬ್ಯೂಸಿನೆಸ್ ಯೋಜನೆಯನ್ನಿಟ್ಟುಕೊಂಡ 7 ಮಂದಿ ಪಾಲ್ಗೊಂಡಿದ್ದು, ಅವರು ತಮ್ಮ ಹೊಸ ಬಗೆಯ ಬ್ಯೂಸಿನೆಸ್ ಯೋಜನೆಯನ್ನು 3 ಮಂದಿ ತೀರ್ಪುಗಾರರ ತಂಡದ ಮುಂದೆ ಇಟ್ಟರು.

ಈ ಕಾರ್ಯಕ್ರಮದಲ್ಲಿ ಹೂಡಿಕೆದಾರರು ಕೂಡ ಭಾಗವಹಿಸಿದ್ದು, ಹೊಸ ಹೊಸ ಬ್ಯೂಸಿನೆಸ್ ಯೋಜನೆಗಳನ್ನು ಆಲಿಸಿದರು. ಮುಖ್ಯ ಅತಿಥಿಯಾಗಿ ಕರ್ನಾಟಕದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ದುಬೈ ಭಾರತೀಯ ರಾಯಭಾರಿ ಸತೀಶ್ ಕುಮಾರ್ ಸಿವನ್, ರಾಜ್ಯ ಹಜ್ ಸಚಿವ ರಹೀಮ್ ಖಾನ್, ಶಾಸಕ ಎನ್ ಎ ಹಾರಿಸ್, ಕಾಂಗ್ರೆಸ್ ಮುಖಂಡ ಮುನಿಯಲು ಉದಯ ಕುಮಾರ್ ಶೆಟ್ಟಿ, ಉಳ್ಳಾಲ ದರ್ಗಾ ಕಮಿಟಿ ಅಧ್ಯಕ್ಷ ಹನೀಫ್ ಹಾಜಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Continue Reading

LATEST NEWS

ಲಲಿತ್ ಮೋದಿ ಹೊಸ ಪ್ರೇಮ ಪುರಾಣ… ಪ್ರೇಮಿಗಳ ದಿನದಂದು ಅನಾವರಣ!

Published

on

ಮಂಗಳೂರು/ಲಂಡನ್ :  ಐಪಿಎಲ್ ಸಂಸ್ಥಾಪಕ, ಮಾಜಿ ಮುಖ್ಯಸ್ಥ ಲಲಿತ್ ಮೋದಿ ದೇಶ ತೊರೆದು ಲಂಡನ್‌ನಲ್ಲಿ ನೆಲೆಸಿದ್ದಾರೆ. ಪತ್ನಿ ಮಿನಾಲ್ ಮೋದಿ ನಿಧನದ ಬಳಿಕ ಏಕಾಂಗಿಯಾಗಿದ್ದ 61 ವರ್ಷದ ಲಲಿತ್ ಮೋದಿ ಜೊತೆ ಹಲವು ಸಿನಿಮಾ ನಟಿಯರ ಹೆಸರು ಕೇಳಿ ಬಂದಿತ್ತು. ಅವರಲ್ಲಿ ಸುಶ್ಮಿತಾ ಸೇನ್ ಹೆಸರು ಗಟ್ಟಿಯಾಗಿತ್ತು. ಇವರಿಬ್ಬರ ಫೋಟೋಗಳು ವೈರಲ್‌ ಆಗಿತ್ತು. ಆದರೆ, ಈ ಸಂಬಂಧ ಮುರಿದಿದೆ ಎಂಬುದಕ್ಕೆ ಸಾಕ್ಷಿಯಾಗಿ ಶುಕ್ರವಾರ(ಫೆ.14) ರಂದು ಲಲಿತ್ ಮೋದಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಈ ವೀಡಿಯೋದಲ್ಲಿ ಅವರ ಹೊಸ ಪ್ರೇಮದ ಅನಾವರಣ ಮಾಡಿದ್ದಾರೆ. ಹೊಸ ಗೆಳತಿಯ ಹೆಸರು ಬಹಿರಂಗಪಡಿಸದೆ, ಆಕೆಯ ಜೊತೆಗಿನ ಹಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

‘ಒಂದು ಬಾರಿ ಅದೃಷ್ಟವಂತನಾಗಿದ್ದೆ. ಆದರೆ ಎರಡನೇ ಬಾರಿ ಅದೃಷ್ಟ ಖುಲಾಯಿಸಿದೆ. 25 ವರ್ಷಗಳ ಸ್ನೇಹ ಈಗ ಪ್ರೀತಿಯಾಗಿ ಬದಲಾಗಿದೆ. ಇಂಥದ್ದೊಂದು ಸಂಗತಿ ನನ್ನೊಂದಿಗೆ ನಡೆದಿದೆ. ನಿಮಗೂ ಇಂಥ ಅನುಭವವಾಗಿರಬಹುದು. ನಿಮಗೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು’ ಎಂದು ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ. ಇದಕ್ಕೆ ಅವರ ಹೊಸ ಗೆಳತಿ, ಲವ್ ಯೂ ಮೋರ್ ಎಂದು ಕಮೆಂಟ್ ಮಾಡಿದ್ದು, ಅದಕ್ಕೆ ಲಲಿತ್ ಮೋದಿ, ಮೈ ಫಾರೆವರ್ ಲವ್ ಎಂದು ಪ್ರತಿಕ್ರಿಯಿಸಿದ್ದಾರೆ.

ಯಾರು ಈ ಹೊಸ ಗೆಳತಿ?

ಲಲಿತ್ ಮೋದಿ ಹೊಸ ಗೆಳತಿಯ ಹೆಸರು ರಿಮಾ ಬೌರಿ.  ವರದಿಗಳ ಪ್ರಕಾರ,  ಪ್ರಕಾರ, ರಿಮಾ ಬೌರಿ ಲೆಬನಾನ್ ಮೂಲದ ಸ್ವತಂತ್ರ ಸಲಹೆಗಾರರಾಗಿದ್ದು, ಮಾರ್ಕೆಟಿಂಗ್‌ನ ಹಿನ್ನೆಲೆ ಹೊಂದಿದ್ದಾರೆ. ಅವರು ಸ್ವಿಝರ್‌ಲ್ಯಾಂಡ್‌ನ ಲೌಸನ್ನೆಯಲ್ಲಿರುವ ಬ್ರಿಲ್ಯಾಂಟ್‌ಮಾಂಟ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ತಮ್ಮ ಎ-ಲೆವೆಲ್‌ಗಳನ್ನು ಪೂರ್ಣಗೊಳಿಸಿದರು. ಲಂಡನ್‌ನ ಅಮೇರಿಕನ್ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ರಿಚ್ಮಂಡ್‌ನಿಂದ ಮಾರ್ಕೆಟಿಂಗ್‌ನಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 


2022ರಲ್ಲಿ ಸುಶ್ಮಿತಾ ಸೇನ್ ಜೊತೆಗಿನ ಭಾವಚಿತ್ರದೊಂದಿಗೆ ಪೋಸ್ಟ್ ಹಂಚಿಕೊಂಡಿದ್ದ ಲಲಿತ್ ಮೋದಿ,  ಜಾಗತಿಕ ಪ್ರವಾಸ ಮುಗಿಸಿ, ನನ್ನ ಅರ್ಧಾಂಗಿ ಸುಶ್ಮಿತಾ ಸೇನ್ ಅವರೊಂದಿಗೆ ಮಾಲ್ದೀವ್ಸ್‌ಗೆ ಕೌಟುಂಬಿಕ ಪ್ರವಾಸಕ್ಕಾಗಿ ಬಂದಿದ್ದೇನೆ. ಇದು ಹೊಸ ಆರಂಭ, ಹೊಸ ಬದುಕು. ಸಂತಸವಾಗುತ್ತಿದೆ ಎಂದು ಬರೆದುಕೊಂಡಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

Continue Reading

LATEST NEWS

ಮಾಜಿ ಶಾಸಕನನ್ನು ಹ*ತ್ಯೆಗೈದ ಆಟೋ ಚಾಲಕ

Published

on

ಮಂಗಳೂರು/ಬೆಳಗಾವಿ : ಬೆಳಗಾವಿಯ ಖಡೇಬಜಾರ್‌ನಲ್ಲಿ ಇರೋ ಶ್ರೀನಿವಾಸ ಲಾಡ್ಜ್ ಮುಂದೆ ನಿಂತಿದ್ದ ಮಾಜಿ ಶಾಸಕನ ಮೇಲೆ ಆಟೋ ಚಾಲಕನೋರ್ವ ಏಕಾಏಕಿ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಮಾಜಿ ಶಾಸಕ ಸ್ಥಳದಲ್ಲೇ ಕುಸಿದುಬಿದ್ದು ಮೃ*ತಪಟ್ಟಿದ್ದಾರೆ.

 

ಗೋವಾ ಪೋಂಡಾ ಕ್ಷೇತ್ರದ ಮಾಜಿ ಶಾಸಕ ಲಾವೂ ಸೂರ್ಯಾಜಿ ಮಾಮಲೇದಾರ (69) ನಗರದ ಶ್ರೀನಿವಾಸ ಲಾಡ್ಜ್ ಬಳಿ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಆಟೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕೊಲೆಗೆ ಕಾರಣವೇನು?

ಗೋವಾ ರಾಜ್ಯದ ಮಾಜಿ ಶಾಸಕ ಲಾವೂ ಮಾಮಲೇದಾರ್ ಇಂದು ಬೆಳಗಾವಿಗೆ ಆಗಮಿಸಿದ್ದರು. ಈ ವೇಳೆ ಬೆಳಗಾವಿಯ ಖಡೇಬಜಾರ್ ಬಳಿಕ ಆಟೋಗೆ ಮಾಜಿ ಶಾಸಕರ ಕಾರು ಟಚ್ ಆಗಿದೆ. ರಸ್ತೆಯಲ್ಲಿ ಎಷ್ಟೇ ಕೂಗಿದರೂ ಕೇರ್ ಮಾಡದೇ ಹೊರಟ ಮಾಜಿ ಶಾಸಕ ಲಾವೂ ಮಾಮಲೇದಾರ್ ಕಾರನ್ನು ಆಟೋ ಚಾಲಕ ಹಿಂಬಾಲಿಸಿಕೊಂಡು ಹೋಗಿದ್ದಾನೆ. ಬಳಿಕ ಲಾವೂ ಮಾಮಲೇದಾರ್ ಅವರು ಶ್ರೀನಿವಾಸ ಲಾಡ್ಜ್ ಬಳಿ ಬಂದು ನಿಂತಿದ್ದಾಗ ಆಟೋ ಚಾಲಕ ಜಗಳ ಆರಂಭಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಆಟೋ ಚಾಲಕ ಲಾವೂ ಮಾಮಲೇದಾರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಆಗ ಸ್ಥಳೀಯರು ಹಾಗೂ ಲಾಡ್ಜ್‌ನ ಸಿಬ್ಬಂದಿ ಬಂದು ಇಬ್ಬರ ಜಗಳವನ್ನು ಬಿಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೀದರ್ ATM ದರೋಡೆ ಪ್ರಕರಣ; ದರೋಡೆಕೋರರ ಸುಳಿವು ಕೊಟ್ಟವರಿಗೆ ಬಂಪರ್ ಬಹುಮಾನ

ಬಳಿಕ ಹಲ್ಲೆಗೊಳಗಾದ ಮಾಜಿ ಶಾಸಕ ಲಾವೂ ಮೆಟ್ಟಿಲು ಹತ್ತಿ ಲಾಡ್ಜ್‌ಗೆ ಹೋಗುವಾಗ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಜಿ ಶಾಸಕ ಲಾವೂ ಮಾಮಲೇದಾರ್ ಮೃ*ತದೇಹವನ್ನು ಬೆಳಗಾವಿ ಬಿಮ್ಸ್‌ಗೆ ರವಾನೆ ಮಾಡಲಾಗಿದೆ. ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿ ಆರೋಪಿ ಮುಜಾಹಿದ್ ವಿರುದ್ದ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page