Connect with us

LATEST NEWS

ಸುಳ್ಳು ಸುದ್ದಿ ನಂಬಿ ಚಲಿಸುತ್ತಿರುವ ರೈಲಿನಿಂದ ನೆ*ಗೆದ 12 ಜನರ ದೇ*ಹ ಛಿ*ದ್ರ ಛಿ*ದ್ರ

Published

on

ಮಂಗಳೂರು/ಮುಂಬೈ: ರೈಲಿನಡಿ ಸಿಲುಕಿ 11 ಜನರ ದು*ರಂತವಾಗಿ ಸಾ*ವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್​​ನ ಪರಾಂಡ ನಿಲ್ದಾಣದಲ್ಲಿ ನಡೆದಿದೆ.

ರೈಲಿನಲ್ಲಿ ಬೆಂ*ಕಿ ಕಾಣಿಸಿಕೊಂಡ ವದಂತಿ ಹರಡಿತ್ತು. ಇದರಿಂದ ಹೆದರಿದ ಪ್ರಯಾಣಿಕರು ಚಲಿಸುತ್ತಿದ್ದ ರೈಲಿನಿಂದ ಜಿ*ಗಿದಿದ್ದರು. ಪಕ್ಕದ ಹಳಿ ಮೇಲೆ ನಿಂತಾಗ ಮತ್ತೊಂದು ರೈಲು ಡಿ*ಕ್ಕಿಯಾಗಿ ದು*ರಂತ ಸಂಭವಿಸಿ 11 ಜನ ಸಾ*ವನ್ನಪ್ಪಿದ್ದಾರೆ.

ಜಲಗಾಂವ್‌ನ ಪಚೋರಾ ರೈಲು ನಿಲ್ದಾಣದಲ್ಲಿ ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಬೆಂ*ಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿ ಗೊಂದಲ ಸೃಷ್ಟಿಯಾಯಿತು. ಹಾಗಾಗಿ ಪ್ರಯಾಣಿಕರು ರೈಲಿನ ಚೈನ್​ ಎಳೆದು ರೈಲು ನಿಲ್ಲಿಸಿ ಪಕ್ಕದ ಹಳಿಗೆ 30-40 ಜನ ಜಿಗಿದಿದ್ದಾರೆ. ಕೆಲವರು ದೂರ ಓಡಿಹೋದರೆ ಇನ್ನು ಕೆಲವರು ಪಕ್ಕದ ಹಳಿ ಮೇಲೆ ನಿಂತಿದ್ದರು. ಈ ವೇಳೆ ಮತ್ತೊಂದು ಹಳಿಯಲ್ಲಿ ಬರುತ್ತಿದ್ದ ಕರ್ನಾಟಕ ಎಕ್ಸ್​ಪ್ರೆಸ್ ರೈಲು ಡಿ*ಕ್ಕಿಯಾಗಿದೆ.

ಬ್ರೇಕ್‌ಗಳನ್ನು ಹಾಕುತ್ತಿದ್ದಂತೆ, ರೈಲಿನ ಚಕ್ರಗಳಿಂದ ಕಿ*ಡಿಗಳು ಹೊರಹೊಮ್ಮಿದವು. ಇದರಿಂದ ರೈಲಿನಲ್ಲಿ ಬೆಂ*ಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿತು. ಚಲಿಸುವ ರೈಲಿನಿಂದ ಜಿ*ಗಿದಿದ್ದರಿಂದ ಹಲವರಿಗೆ ಗಾ*ಯಗಳಾಗಿವೆ. ಗಾ*ಯಾಳು ಪ್ರಯಾಣಿಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಗ್ರಾಮೀಣ ಆಸ್ಪತ್ರೆಗೆ ಸಾಗಿಸಲಾಯಿತು. ಕೂಡಲೇ ಮುಂಬೈ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

LATEST NEWS

ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ಅ*ಟ್ಟಹಾಸ; 7 ವರ್ಷದ ಬಾಲಕ ಬ*ಲಿ

Published

on

ಮಂಗಳೂರು/ತುಮಕೂರು : ಕರ್ನಾಟಕದಲ್ಲಿ  ಜ್ವರದ ಹಾವಳಿ ಜೋರಾಗಿದೆ. ಮತ್ತೊಂದೆಡೆ ಮಹಾಮಾರಿ ಡೆಂಗ್ಯೂ ಒಕ್ಕರಿಸಿದೆ. ತುಮಕೂರಿನಲ್ಲಿ ಬಾಲಕನೋರ್ವ ಡೆಂಗ್ಯೂಗೆ ಬಲಿಯಾಗಿದ್ದಾನೆ. ಪಾವಗಡ ಪಟ್ಟಣದಲ್ಲಿ ನಡೆದಿದೆ.

ಕರುಣಾಕರ್(7) ಮೃತ ಬಾಲಕ. ಪಾವಗಡದ ಕ್ಲಿನಿಕೊಂದರಲ್ಲಿ ಬಾಲಕ ಕಳೆದ 8 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಕೊನೆಯ ಕ್ಷಣದ ವರೆಗೂ ಡೆಂಗ್ಯೂ ಜ್ವರ ಎಂದು ವೈದ್ಯರು ಬಾಲಕನ ಮನೆಯವರಿಗೆ ತಿಳಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ : ಭೂತದ ಮನೆಯಲ್ಲಿ ನೀರವ ಮೌನ…! ಮನೆಬಿಟ್ಟು ಹೋದ ಕುಟುಂಬ

ಪಾವಗಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಕ್ಲಿನಿಕ್ ಮುಂದೆ ಪ್ರತಿಭಟನೆ ನಡೆಸಿದರು.

Continue Reading

BELTHANGADY

ಭೂತದ ಮನೆಯಲ್ಲಿ ನೀರವ ಮೌನ…! ಮನೆಬಿಟ್ಟು ಹೋದ ಕುಟುಂಬ

Published

on

ಬೆಳ್ತಂಗಡಿ: ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದ ಬೆಳ್ತಂಗಡಿಯ ಮಾಲಾಡಿ ಗ್ರಾಮದ ಭೂತದ ಮನೆಯಲ್ಲಿ ಸದ್ಯ ನೀರವ ಮೌನ ಆವರಿಸಿದೆ. ಕಳೆದ ಮೂರು ತಿಂಗಳಿನಿಂದ ಭೂತದ ಉಪಟಳದಿಂದ ಬಳಲಿ ಬೆಂಡಾಗಿರುವ ಕುಟುಂಬ ಮನೆಯನ್ನೇ ಖಾಲಿ ಮಾಡಿ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಸಲಿಗೆ ಕಳೆದೆರಡು ದಿನಗಳಿಂದ ಈ ಮನೆಯಲ್ಲಿನ ಭೂತದ ಉಪಟಳ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಈ ಮನೆಗೆ ಪ್ರತಿ ನಿತ್ಯ ರಾತ್ರಿಯಾಗುತ್ತಿದ್ದಂತೆ ನೂರಾರು ಜನ ಬಂದು ಭೂತದ ಹುಡುಕಾಟ ನಡೆಸಿದ್ದರು. ಭೂತದ ಇರುವಿಕೆಯ ವಿಚಾರವಾಗಿ ಪರ ವಿರೋಧದ ಚರ್ಚೆಗಳು ಆರಂಭವಾಗಿ ಹಲವರು ಮನೆಯವರ ಕಥೆಯೇ ಸುಳ್ಳು ಎಂದು ಅನುಮಾನ ವ್ಯಕ್ತಪಡಿಸಿದ್ದರು.

ನಮ್ಮ ಕುಡ್ಲ ವಾಹಿನಿ ಈ ಬಗ್ಗೆ ತಜ್ಞರ ಅಭಿಪ್ರಾಯ ಸಂಗ್ರಹಿಸಿದಾಗಲೂ ಇದು ಭೂತದ ಕಾಟ ಇರಲಾರದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಖ್ಯಾತ ಮನೋರೋಗ ತಜ್ಞರು ಹಾಗೂ ಪವಾಡ ರಹಸ್ಯ ಬಯಲು ತಜ್ಞ ಡಾ. ಹುಲಿಕಲ್ ನಟರಾಜ್ ಅವರೂ ಕೂಡಾ ಮನೆಯವರ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇದೆ ಎಂದು ಹೇಳಿದ್ದರು.

ಇದೀಗ ಉಮೇಶ್ ಶೆಟ್ಟಿ ಅವರ ಇಡೀ ಕುಟುಂಬ ಭೂತದ ಭಯದಿಂದ ಮನೆಯನ್ನು ಬಿಟ್ಟು ಹೋಗಿದ್ದು, ಸಂಬಂಧಿಕರ ಮನೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ.

Continue Reading

LATEST NEWS

ಆರಿಹೋಯ್ತು 46 ವರ್ಷಗಳಿಂದ ಉರಿಯುತ್ತಿದ್ದ ದೀಪನಾಥೇಶ್ವರ ದೇವಾಲಯದ 3 ದೀಪಗಳು

Published

on

ಮಂಗಳೂರು/ಮುಂಡಗೋಡ : ಎಣ್ಣೆ, ಬತ್ತಿ ಇಲ್ಲದೇ ಸತತ 46 ವರ್ಷಗಳಿಂದ ಉರಿಯುತ್ತಿದ್ದ ಉತ್ತರಕನ್ನಡ  ಜಿಲ್ಲೆಯ ಮುಂಡಗೋಡು ತಾಲೂಕಿನ ಚಿಗಳ್ಳಿಯ ದೀಪನಾಥೇಶ್ವರ ದೇವಾಲಯದ ಮೂರು ದೀಪಗಳು ನಂದಿ ಹೋಗಿವೆ.

1979ರಲ್ಲಿ ಹಚ್ಚಿದ್ದ ದೀಪ :

ಚಿಗಳ್ಳಿ ಗ್ರಾಮದ ದೈವಜ್ಞೆ ಶಾರದಮ್ಮ ಎಂಬವರು 1979ರಲ್ಲಿ ಸೀಮೆಎಣ್ಣೆ ಹಾಕಿ ಒಂದು ಲಾಟೀನು ದೀಪವನ್ನು ಹಚ್ಚಿದ್ದರು. ಅದು ಒಂದು ದಿನ ಕಳೆದರೂ ಆರಿರಲಿಲ್ಲ. ನಿರಂತರವಾಗಿ ಉರಿಯತೊಡಗಿತು. ಒಂದು ವರ್ಷದ  ಬಳಿಕ 1980ರಲ್ಲಿ ಮತ್ತೊಂದು ದೀಪವನ್ನು ಹಚ್ಚಿದರು. 2ನೇ ದೀಪ ಕೂಡ ಆರದೇ ನಿರಂತರವಾಗಿ ಉರಿಯ ತೊಡಗಿತು.

2ನೇ ದೀಪ ಹಚ್ಚಿದ 10-15 ದಿನಗಳ ನಂತರ  3ನೇ ದೀಪ ಬೆಳಗಿಸಿದರು. ಆಶ್ವರ್ಯ ಎಂಬಂತೆ ಮೂರು ದೀಪಗಳು ನಿರಂತರವಾಗಿ ಉರಿಯ ತೊಡಗಿದವು ಎನ್ನಲಾಗಿದೆ. 1979 ರಿಂದ 2025ರ ಫೆಬ್ರವರಿ ವರೆಗೆ ನಿರಂತರವಾಗಿ ಉರಿದುಕೊಂಡು ಬಂದಿದ್ದ ದೀಪಗಳು ಈಗ ಏಕಾಏಕಿ ಆರಿ ಹೋಗಿದ್ದು ಆತಂಕ ಹುಟ್ಟಿಸಿದೆ

ಗ್ರಾಮಸ್ಥರಲ್ಲಿ ಭಯದ ಛಾಯೆ : 

ದೀಪ ಹಚ್ಚಿದ್ದ ಶಾರದಮ್ಮ ಕೆಲವು ವರ್ಷಗಳ ಬಳಿಕ ಇಹಲೋಕ ತ್ಯಜಿಸಿದರು. ಆದರೂ ದೀಪಗಳು ಇಲ್ಲಿವರೆಗೆ ಉರಿದುಕೊಂಡು ಬಂದಿದೆ. 14 ದಿನದ ಹಿಂದೆ ಈ ದೀಪದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅರ್ಚಕ ವೆಂಕಟೇಶ್ ನಿಧನರಾದರು. ಈ ಹಿನ್ನೆಲೆಯಲ್ಲಿ ಸೂತಕವಿದ್ದ ಕಾರಣ ದೇವಸ್ಥಾನದ ಗರ್ಭಗುಡಿ ಮುಚ್ಚಲಾಗಿತ್ತು. ಫೆ.5 ರಂದು ಪೂಜೆಗಾಗಿ ಗರ್ಭಗುಡಿ ತೆರೆದಾಗ ದೀಪ ಆರಿರುವುದು ಗಮನಕ್ಕೆ ಬಂದಿದೆ.

ಇದನ್ನೂ ಓದಿ : ಮಡಿಕೇರಿಯಲ್ಲಿ ಇನ್ನು ಮುಂದಕ್ಕೆ ನೀರಿನ ಬಾಟಲ್ ಸಿಗುವುದಿಲ್ಲ

ದೀಪ ಆರಿರುವುದು ಸಹಜವಾಗಿಯೇ ಭಕ್ತರಿಗೆ ನೋವುಣಿಸಿದೆ. ಇಷ್ಟು ದಿನ ಆರದ್ದು ಈಗ ಆರಿರುವುದು ಅಪಶಕುಶ ಎಂದು ಹೇಳಲಾಗುತ್ತಿದೆ. ರಾಜ್ಯ ಆಳುವವರಿಗೂ ಕೆಡುಕಾಗಲಿದೆ. ಗ್ರಾಮಕ್ಕೂ ಕೆಡುಕು ಎಂಬ ಆತಂಕ ಮನೆಮಾಡಿದೆ. ಹಾಗಾಗಿ ಸದ್ಯ ದೇವಸ್ಥಾನವನ್ನು ಮುಚ್ಚಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page