Connect with us

ಇತ್ತ 10ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟ: ಅತ್ತ ಪರೀಕ್ಷೆ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ

Published

on

ಇತ್ತ 10ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟ: ಅತ್ತ ಪರೀಕ್ಷೆ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ

ಮಡಿಕೇರಿ: ಇತ್ತ 10ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟಣೆ ಮಾಡುತ್ತಿದ್ದಂತೆ ಅತ್ತ ಪರೀಕ್ಷೆ ಭಯದಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಾಜೂರು ಗ್ರಾಮದಲ್ಲಿ ನಡೆದಿದೆ.

ಸೋಮವಾರಪೇಟೆ ತಾಲೂಕು ಕಾಜೂರಿನ ಭಾರತಿ ವಿದ್ಯಾಸಂಸ್ಥೆಯ 15 ವರ್ಷದ ವಿದ್ಯಾರ್ಥಿ ರಿಷಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೊರೊನಾ ಕಾರಣದಿಂದಾಗಿ ಏಪ್ರಿಲ್ ನಲ್ಲಿ ನಡೆಯಬೇಕಿದ್ದ ಎಸ್.ಎಸ್.ಎಲ್‍.ಸಿ ಪರೀಕ್ಷೆಯನ್ನು ಮುಂದೂಡಲಾಗಿತ್ತು.

ಅಲ್ಲದೆ ದೇಶದಾದ್ಯಂತ ಎರಡು ತಿಂಗಳ ಸುದೀರ್ಘ ಲಾಕ್‍ ಡೌನ್ ಘೋಷಿಸಿದ್ದ ಪರಿಣಾಮ ಕಳೆದ ಎರಡು ತಿಂಗಳಿಂದ ಪರೀಕ್ಷೆ ನಡೆಸುವುದು ಸಾಧ್ಯವಾಗಿರಲಿಲ್ಲ.

ಆದರೆ ಇದೀಗ ಹಂತಹಂತಾಗಿ ಲಾಕ್ ಡೌನ್ ತೆರವುಗೊಳಿಸಿರುವ ಪರಿಣಾಮ ಪ್ರೌಢ ಶಿಕ್ಷಣ ಇಲಾಖೆ ಇಂದು ಎಸ್‍.ಎಸ್.ಎಲ್. ಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿನ್ನೆ ಸಂಜೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.

ಈ ವಿಚಾರ ತಿಳಿದ ತಕ್ಷಣ ರಿಷಿ ಪರೀಕ್ಷೆ ಭಯದಿಂದ ಮನೆಯಲ್ಲಿ ಯಾರೂ ಇಲ್ಲದ ಸಮಯ ನೇಣಿಗೆ ಶರಣಾಗಿದ್ದಾನೆ.

ಶನಿವಾರಸಂತೆ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಆರೋಪ; ಆರೋಪಿಯ ಬಂಧನ

Published

on

ಮಂಗಳೂರು : ವಿದ್ಯಾರ್ಥಿಗಳಿಗೆ ಮಾ*ದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಯುವಕನೋರ್ವನನ್ನು ಮಂಗಳೂರಿನ ಕದ್ರಿ ಠಾಣೆಯ ಪೊಲೀಸರು ಶನಿವಾರ(ಜ.17) ಬಂಧಿಸಿದ್ದಾರೆ.

ಕೇರಳದ ಎರ್ನಾಕುಲಂ ಜಿಲ್ಲೆಯ ಮುತೊಲಪುರಂ ನಿವಾಸಿ 20 ವರ್ಷದ ಜೂಡ್ ಮಾಥ್ಯೂ ಬಂಧಿತ ಆರೋಪಿ. ಆತನಿಂದ 5.20 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು, ಕೃ*ತ್ಯಕ್ಕೆ ಬಳಸಿದ  ಬೈಕ್ ಸಮೇತ ಒಟ್ಟು 70 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ; ಗಮನ ಸೆಳೆದ ಕಿಚ್ಚ ಸುದೀಪ್ ಪೋಸ್ಟ್ !

ಮಂಗಳೂರಿನ ಪದವು ಗ್ರಾಮದ ಕೈಲಾಸ ಕಾಲನಿ ಸಮೀಪ ಯುವಕನೋರ್ವ ಮಾ*ದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ಕದ್ರಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

 

Continue Reading

LATEST NEWS

ವಿದ್ಯುತ್ ಕಂಬಕ್ಕೆ ಕಾರು ಡಿ*ಕ್ಕಿ; ಇಬ್ಬರು ಸಾ*ವು

Published

on

ಮಂಗಳೂರು/ಭಟ್ಕಳ :  ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿ*ಕ್ಕಿಯಾದ  ಪರಿಣಾಮ ಇಬ್ಬರು ಸಾ*ವನ್ನಪ್ಪಿದ ಘಟನೆ ಭಟ್ಕಳದ ವೆಂಕಟಾಪುರದ ಬಳಿ ನಡೆದಿದೆ.

ಭಟ್ಕಳದ ಆಜಾದ್ ನಗರ ನಿವಾಸಿ 15 ವರ್ಷದ ಬಿಲಾಲ್  ಹಾಗೂ 20 ವರ್ಷದ ಆಯಾನ್ ಮೃ*ತ ದುರ್ದೈ*ವಿಗಳು.

ಬಿಲಾಲ್ ಸ್ಥಳದಲ್ಲೇ ಸಾ*ವನ್ನಪ್ಪಿದ್ದು, ಚಾಲನೆ ಮಾಡುತ್ತಿದ್ದ ಆಯಾನ್ ಗಾ*ಯಗೊಂಡಿದ್ದ. ಆತನನ್ನು ಉಡುಪಿಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.‌

ಇದನ್ನೂ ಓದಿ : BBK12: ಗಿಲ್ಲಿ ವಿನ್ನರ್ ಆದ್ರೂ ನಿಲ್ಲದ ಕಿಚ್ಚು: ರಕ್ಷಿತಾ ಪರ ಸೋಷಿಯಲ್ ಮೀಡಿಯಾ ವಾರ್; ಯಾಕೆ ಗೊತ್ತಾ?

ಶಿರಾಲಿಯಿಂದ ಭಟ್ಕಳಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಈ ಅಪ*ಘಾತ ನಡೆದಿದೆ. ಅಪ*ಘಾತ ಸಂಬಂಧ ಭಟ್ಕಳ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BIG BOSS

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ; ಗಮನ ಸೆಳೆದ ಕಿಚ್ಚ ಸುದೀಪ್ ಪೋಸ್ಟ್ !

Published

on

BBk12 :  ಕನ್ನಡ ಬಿಗ್ ಬಾಸ್ ಸೀಸನ್ 12 ಕೊನೆಯ ಹಂತದಲ್ಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ವಿನ್ನರ್ ಯಾರು ಅನ್ನೋದು ಹೊರ ಬೀಳಲಿದೆ. ಬಿಗ್ ಬಾಸ್ ಫಿನಾಲೆ ಹಂತದಲ್ಲಿರುವಾಗ ಕಿಚ್ಚ ಸುದೀಪ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಸತತ 12 ಸೀಸನ್‌ಗಳನ್ನು ಕಿಚ್ಚ ಸುದೀಪ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಸೀಸನ್ 12 ಮುಕ್ತಾಯಗೊಳ್ಳುವ ಹಂತದಲ್ಲಿರುವಾಗ ಕಿಚ್ಚ ಸುದೀಪ್ ಸೋಸಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ಸ್ಪರ್ಧಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.

ಕಿಚ್ಚ ಪೋಸ್ಟ್ ಏನು?

ಕಿಚ್ಚ ತನ್ನಫೋಟೋವೊಂದನ್ನು ಹಂಚಿಕೊಂಡಿದ್ದಾರೆ.  ಇಂದು ಸೂರ್ಯ ಮುಳುಗುವ ವೇಳೆಗೆ ಬಿಗ್‌ಬಾಸ್ ಸೀಸನ್ – 12 ಮುಕ್ತಾಯಗೊಳ್ಳಲಿದೆ. ಈ ಸೀಸನ್‌ನ ಬೆಳವಣಿಗೆ ಮತ್ತು ಅದ್ಭುತ ಪ್ರಯಾಣ ಮುಂದಿನ ಪೀಳಿಗೆಗೆ ಸಾಕ್ಷಿಯಾಗಿದೆ. ಅಚಲ ಬೆಂಬಲಕ್ಕಾಗಿ ಪ್ರತಿಯೊಬ್ಬ ವೀಕ್ಷಕರಿಗೂ ನನ್ನ ಹೃತ್ತೂರ್ವಕ ಕೃತಜ್ಞತೆಗಳು.

ಇದನ್ನೂ ಓದಿ :  ಹನುಮಂತ ಪ್ರಕಾರ ಬಿಗ್ ಬಾಸ್ ಗೆಲ್ಲೋದು ಇವರೇ ಅಂತೆ!

ಎಲ್ಲಾ ಸ್ಪರ್ಧಿಗಳಿಗೆ ಮತ್ತು ಸೀಸನ್‌ನ ವಿಜೇತರಿಗೆ ಹೃತ್ತೂರ್ವಕ ಅಭಿನಂದನೆಗಳು. ಈ ಅದ್ಭುತ ಯಶಸ್ಸಿಗೆ ಇಡೀ ಬಿಗ್‌ಬಾಸ್ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಬಿಗ್‌ಬಾಸ್ ಕಾರ್ಯಕ್ರಮವಿಲ್ಲ. ಹೊಸ ಸೀಸನ್ – 13 ಪ್ರಾರಂಭವಾಗುವವರೆಗೆ ಬಿಗ್‌ ಬಾಸ್ ವಿಶ್ರಾಂತಿ ಪಡೆಯಲು ಗೌರವಯುತವಾಗಿ ಮುಖ್ಯದ್ವಾರವನ್ನು ಮುಚ್ಚುತ್ತೇವೆ ಎಂದು ಬರೆದುಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page