Connect with us

LATEST NEWS

ಶ್ರೀಲಂಕಾದ ದೋಣಿಯಿಂದ 100ಕೆಜಿ ಹೆರಾಯ್ನ್ ವಶಕ್ಕೆ :ಭಾರತೀಯ ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ..!

Published

on

ಶ್ರೀಲಂಕಾದ ದೋಣಿಯಿಂದ 100ಕೆಜಿ ಹೆರಾಯ್ನ್ ವಶಕ್ಕೆ :ಭಾರತೀಯ ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ..!

ನವದೆಹಲಿ: ತಮಿಳುನಾಡಿನ ತೂತ್ತುಕುಡಿಯಲ್ಲಿ ಶ್ರೀಲಂಕಾಕ್ಕೆ ಸೇರಿದ ದೋಣಿಯಿಂದ 100 ಕೆಜಿ ಹೆರಾಯ್ನ್ ನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ವಶಪಡಿಸಿಕೊಂಡಿದೆ.ಆದರೆ ಆದರ ಮೂಲ ಪಾಕಿಸ್ತಾನ ಎಂದು ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವೀಪರಾಷ್ಟ್ರದ ನಾಗರಿಕರು ಎಂದು ಹೇಳಲಾಗಿರುವ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.ನ.17ರಿಂದ ಒಂಭತ್ತು ದಿನಗಳ ಕಾಲ ನಡೆದ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದೆ .ಪಾಕಿಸ್ತಾನದ ಕರಾಚಿಯಿಂದ ಮಾದಕ ವಸ್ತುಗಳನ್ನು ತಂದು ಸಮುದ್ರ ಮಧ್ಯದಲ್ಲಿಯೇ ಅದನ್ನು ಲಂಕೆಯ ದೋಣಿಗೆ ವರ್ಗಾಯಿಸಲಾಗಿತ್ತು.ಆಸ್ಟ್ರೇಲಿಯಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಅದನ್ನು ಕಳುಹಿಸಿಕೊಡುವ ನಿಟ್ಟಿನಲ್ಲಿ ಅದನ್ನು ದೋಣಿಯಲ್ಲಿ ತರಲಾಗುತ್ತಿತ್ತು ಎಂದು ಆರಂಭಿಕ ವಿಚಾರಣೆ ವೇಳೆ ತಿಳಿದು ಬಂದಿದೆ.

99 ಪ್ಯಾಕೆಟ್‌ ಹೆರಾಯ್ನ್, 20 ಸಣ್ಣ ಪೊಟ್ಟಣಗಳಲ್ಲಿ ಸಿಂಥೆಟಿಕ್‌ ಡ್ರಗ್ಸ್‌, ಐದು ಎಂಎಂ ಪಿಸ್ತೂಲ್‌ ಮತ್ತು ತುರಾಯ ಸ್ಯಾಟಲೈಟ್‌ ಫೋನ್‌ ಅನ್ನು ಕರಾವಳಿ ತೀರ ರಕ್ಷಣಾ ಪಡೆಗಳು ವಶಪಡಿಸಿಕೊಂಡಿವೆ.

ದೋಣಿ ಲಂಕೆಯ ನೆಗೊಂಬೋ ನಗರದ ವ್ಯಕ್ತಿಗೆ ಸೇರಿದ್ದಾಗಿದೆ. ಸಂಶಯ ಬಾರದೆ ಇರಲಿ ಎಂದು ಮಾದಕ ವಸ್ತುಗಳನ್ನು ಇಂಧನ ಟ್ಯಾಂಕ್‌ನಲ್ಲಿ ಇರಿಸಲಾಗಿತ್ತು. ವಿಚಾರಣೆ ವೇಳೆ ಮಾದಕ ವಸ್ತುಗಳನ್ನು ಆಸೀಸ್‌, ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಕಳುಹಿಸಲು ಕೊಂಡೊಯ್ಯಲಾಗುತ್ತಿತ್ತು ಎಂದು ಹೇಳಿದ್ದರೂ, ತಮಿಳುನಾಡಿನಲ್ಲಿ ಅದನ್ನು ಸ್ವೀಕರಿಸಲು ಸಿದ್ಧತೆ ನಡೆಸುತ್ತಿದ್ದರೇ ಎಂಬ ಬಗ್ಗೆ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಮಂಡಳಿ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.

ಹಿಂದಿನ ಸಂದರ್ಭಗಳಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಮಾದಕ ವಸ್ತುಗಳ ಸಾಗಣೆ ಪತ್ತೆಹಚ್ಚಿದಾಗ ಉಗ್ರ ಸಂಘಟನೆಗಳಾದ ಲಷ್ಕರ್‌, ಹಿಜ್ಬುಲ್‌ ಕೈವಾಡ ಇದ್ದದ್ದು ದೃಢವಾಗಿತ್ತು.

DAKSHINA KANNADA

ಉಳ್ಳಾಲ ಸೋಮೇಶ್ವರ ಕ್ಷೇತ್ರದಲ್ಲಿ ಸ್ಥಳವಕಾಶದ ಕೊರತೆ; ಸರಕಾರಿ ಜಾಗ ನೀಡುವಂತೆ ಸಂಸದರಿಗೆ ಮನವಿ

Published

on

ಉಳ್ಳಾಲ : ಉಳ್ಳಾಲ ತಾಲೂಕಿನ ಇತಿಹಾಸ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ಪ್ರವಾಸೋದ್ಯಮ,ಗೋಶಾಲೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನ ನಡೆಸಲು ಸ್ಥಳವಕಾಶದ ಕೊರತೆ ಎದುರಾಗಿದ್ದು, ಆ ನಿಟ್ಟಿನಲ್ಲಿ ದೇವಸ್ಥಾನದ ಅಂಗಣದ ರೈಲ್ವೇ ಇಲಾಖೆಯ ಅಧೀನದಲ್ಲಿರುವ ಒಟ್ಟು 3 ಎಕರೆ 66 ಸೆಂಟ್ಸ್ ಸರಕಾರಿ ಜಾಗವನ್ನ ಸೋಮನಾಥ ಕ್ಷೇತ್ರಕ್ಕೆ ಪಹಣಿ ಮಾಡಿಸುವಂತೆ ಕೋಟೆಕಾರಿನ‌ ಸನಾತನ ಧರ್ಮ ಜಾಗೃತಿ ಸಮಿತಿ ವತಿಯಿಂದ ಸಂಸದ ಬೃಜೇಶ್ ಚೌಟ ಮತ್ತು ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಅವರಿಗೆ ಶನಿವಾರ(ಮಾ.15) ಮನವಿ ಸಲ್ಲಿಸಲಾಯಿತು.

ಸೋಮನಾಥೇಶ್ವರ ಕ್ಷೇತ್ರದ ಹೆಸರಲ್ಲಿ ಮುಂದಕ್ಕೆ ಪ್ರಸಾದ್ ಯೋಜನೆಯಡಿಯಲ್ಲಿ ಪ್ರವಾಸೋದ್ಯಮ, ಗೋಶಾಲೆ ನಿರ್ಮಾಣ ಹಾಗೂ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕೆಂಬ ಉದ್ದೇಶವಿದ್ದು,ಇದಕ್ಕೆ ಸ್ಥಳಾವಕಾಶದ ಕೊರತೆ ಎದುರಾಗಿದೆ. ಸೋಮನಾಥ ಕ್ಷೇತ್ರದ ಮುಂದುಗಡೆಯ ಸೋಮೇಶ್ವರ ಗ್ರಾಮಕ್ಕೊಳಪಟ್ಟ ಸರ್ವೆ ನಂಬ್ರ 74/12ಎ ಯಲ್ಲಿ 1 ಎಕರೆ 35 ಸೆಂಟ್ಸ್ ಹಾಗೂ ಸರ್ವೆ ನಂಬ್ರ 206/5ಸಿ ಯಲ್ಲಿ 2 ಎಕರೆ 31 ಸೆಂಟ್ಸ್ (ಒಟ್ಟು 3 ಎಕರೆ 66 ಸೆಂಟ್ಸ್) ಸರಕಾರಿ ಜಾಗವು ರೈಲ್ವೆ ಇಲಾಖೆಯ ಅಧೀನದಲ್ಲಿದೆ. ಈ ಎರಡು ಸರಕಾರಿ ಜಾಗದಲ್ಲಿ ಸಾಧಾರಣ 75 ವರ್ಷಕ್ಕಿಂತಲೂ ಹಿಂದೆ ರೈಲ್ವೆ ಇಲಾಖೆಗೆ ಜಲ್ಲಿ ಕಲ್ಲು ತೆಗೆಯಲಿಕ್ಕಾಗಿ ಭೂಮಾಪನ ಇಲಾಖೆಯಿಂದ ಪರವಾನಗಿ ನೀಡಲಾಗಿತ್ತು. ಸದ್ರಿ ಆ ಪರವಾನಗಿಯು ರದ್ದಾಗಿ ಸಾಧಾರಣ 35 ವರ್ಷ ಮೇಲ್ಪಟ್ಟಿದೆ. ಸೋಮೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಸ್ಥಳದ ಕೊರತೆ ಇರುವ ಕಾರಣ, ನಾವು ತಿಳಿಸಿರುವ ಸರಕಾರಿ ಜಾಗವನ್ನು ರೈಲ್ವೆ ಇಲಾಖೆಯ ಹೆಸರಿನಿಂದ ಪಹಣಿ ಪತ್ರ ರದ್ದುಪಡಿಸಿ, ದೇವಸ್ಥಾನದ ಹೆಸರಿಗೆ ಮಾಡಿಸಿಕೊಡಬೇಕಾಗಿ ಕೋರಲಾಗಿದೆ.

ಸೋಮೇಶ್ವರ ಕ್ಷೇತ್ರದಲ್ಲಿ ಪ್ರಕೃತಿ ರಮಣೀಯ ಬೀಚ್, ವಿಶಾಲವಾದ ರುದ್ರಪಾದೆ, ಪಾದೆಕಲ್ಲಿನ ಮೇಲೆ ಕಾರಣೀಕ ಸೋಮನಾಥ ದೇವಸ್ಥಾನವಿದ್ದು, ಪವಿತ್ರವಾದ”ಗಧಾ ತೀರ್ಥ” ಕೆರೆಯೂ ಇಲ್ಲಿದೆ. ಈ ಕ್ಷೇತ್ರವನ್ನ ಕೇಂದ್ರ ಸರಕಾರದ ಪ್ರಸಾದ್ ಯೋಜನೆ ಹಾಗೂ ಸ್ವದೇಶ್ ದರ್ಶನ್ ಯೋಜನೆಯ ಪಟ್ಟಿಗೆ ಸೇರಿಸುವಂತೆ ಸನಾತನ ಧರ್ಮ‌ ಜಾಗೃತಿ ಸಮಿತಿಯು ಸಂಸದರು ಮತ್ತು ಅಪರ ಜಿಲ್ಲಾಧಿಕಾರಿಯವರಿಗೆ ಲಿಖಿತ ಮನವಿ ನೀಡಿ ವಿನಂತಿಸಿದೆ.

ಇದನ್ನೂ ಓದಿ : ಕಿನ್ನಿಗೋಳಿ ಸಮೀಪದ ಉಳೆಪಾಡಿಯಲ್ಲಿ ಚಿರತೆಯ ಶ*ವ ಪತ್ತೆ!

ಈ ಸಂದರ್ಭ ಕೋಟೆಕಾರು ಸನಾತನ ಧರ್ಮ ಜಾಗೃತಿ ಸಮಿತಿ ಅಧ್ಯಕ್ಷ ರಮೇಶ್ ಕೊಲ್ಯ, ಉಪಾಧ್ಯಕ್ಷ ಸುರೇಂದ್ರನ್ ಪಿ.ಬೀರಿ, ಕೋಶಾಧಿಕಾರಿ ಗಣೇಶ್ ಕೊಲ್ಯ, ಪ್ರ.ಕಾರ್ಯದರ್ಶಿ ಕೃಷ್ಣರಾಜ್ ಕೆ.ಆರ್, ಜೊತೆ ಕಾರ್ಯದರ್ಶಿ ಜಯಂತ್ ಸಂಕೋಳಿಗೆ, ಸದಸ್ಯರಾದ ಕೃಷ್ಣ ಶೆಟ್ಟಿ ತಾಮಾರ್,ರಾಘವೇಂದ್ರ ಮಾಸ್ಟರ್, ಪವಿತ್ರ ಗಟ್ಟಿ,ರಾಘವನ್ ಬೀರಿ, ಪದ್ಮನಾಭ ಗಟ್ಟಿ, ಕೃಷ್ಣ ಬಿ.ಎಮ್, ರೇವತಿ ಟೀಚರ್, ಪ್ರದೀಪ್ ಚಂದ್ರ ಶೆಟ್ಟಿ ಅಡ್ಕಗುತ್ತು, ವಸಂತ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

Continue Reading

FILM

ರೆಬೆಲ್‌ ಸ್ಟಾರ್‌ ಅಂಬರೀಶ್ ಮೊಮ್ಮಗನ ಹೆಸರೇನು ಗೊತ್ತಾ?

Published

on

ಬೆಂಗಳೂರು: ಅಭಿಷೇಕ್-ಅವಿವಾಗೆ 2024ರ ನವೆಂಬರ್ 12ರಂದು ಗಂಡು ಮಗು ಜನಿಸಿತ್ತು. ಈ ಮಗುವಿಗೆ ಇಂದು ನಾಮಕರಣ ಶಾಸ್ತ್ರ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ ಒಂದರಲ್ಲಿ ಬಹಳ ಅದ್ದೂರಿಯಾಗಿ ನಾಮಕರಣ ಶಾಸ್ತ್ರ ನೆರವೇರಿದೆ.

ಇನ್ನು ರಬೆಲ್ ಅಂಬರೀಶ್ ಮೊಮ್ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ. ಅಭೀಷೇಕ್ ಅವರು ತಮ್ಮ ಮಗುವಿಗೆ ಅಪ್ಪನ ಮೂಲ ಹೆಸರನ್ನೇ ಹಿಟ್ಟಿದ್ದಾರೆ. ಅಂಬರೀಶ್ ಅವರ ಮೂಲ ಹೆಸರು ಅಮರ್‌ನಾಥ್ ಎಂದು ಆಗಿತ್ತು. ಹೀಗಾಗಿ ಈ ಹೆಸರನ್ನೇ ಆಯ್ಕೆ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅಂಬರೀಶ್‌ನ ಆಪ್ತವಲಯದವರು ಹಾಗೂ ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

Continue Reading

DAKSHINA KANNADA

ಕಿನ್ನಿಗೋಳಿ ಸಮೀಪದ ಉಳೆಪಾಡಿಯಲ್ಲಿ ಚಿರತೆಯ ಶ*ವ ಪತ್ತೆ!

Published

on

ಮಂಗಳೂರು : ಚಿರತೆಯೊಂದು ಅಸಹಜ ರೀತಿಯಲ್ಲಿ ಸಾ*ವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಉಳೆಪಾಡಿಯಲ್ಲಿ ನಡೆದಿದೆ. ಉಳೆಪಾಡಿ ಸಾನದ ಬಳಿ ಇಂದು ಬೆಳಗ್ಗೆ(ಮಾ.16) ಚಿರತೆಯ ಶ*ವ ಕಂಡು ಬಂದಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿನ್ನಿಗೋಳಿ ಸುತ್ತಮುತ್ತ  ಹಲವು ಬಾರಿ ಚಿರತೆ ಕಂಡು ಬಂದಿದ್ದು, ಅನೇಕ ಕಡೆಗಳಲ್ಲಿ ಸಾಕು ನಾಯಿಗಳು ಚಿರತೆಗೆ ಆಹಾರವಾಗಿವೆ.

ಇದನ್ನೂ ಓದಿ  : ರಾಜ್ಯದಲ್ಲೇ ಅತೀ ದೊಡ್ಡ ಕಾರ್ಯಾಚರಣೆ; ಮಂಗಳೂರು ಸಿಸಿಬಿ ಪೊಲೀಸರಿಂದ ವಿದೇಶಿ ಡ್ರಗ್ ಪೆಡ್ಲರ್‌ಗಳ ಬಂಧನ

ಹಲವು ಕಡೆಗಳಲ್ಲಿ ಚಿರತೆ ಓಡಾಡುವ ದೃಶ್ಯಗಳು ಸಿ.ಸಿ. ಟಿವಿಯಲ್ಲಿ ದಾಖಲಾಗಿದ್ದು, ಕೆಲ ತಿಂಗಳ ಹಿಂದೆ ಮೂಲ್ಕಿಯಲ್ಲಿ ಮನೆಯೊಳಗೆ ಚಿರತೆ ನುಗ್ಗಿ ಸಮಸ್ಯೆಯುಂಟಾಗಿತ್ತು.

Continue Reading
Advertisement

Trending

Copyright © 2025 Namma Kudla News

You cannot copy content of this page