Connect with us

LATEST NEWS

ಶಾಲಾ ರಸ್ತೆ ಅಭಿವೃದ್ದಿಗೆ 10 ಲಕ್ಷ ಬಿಡುಗಡೆ; ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅಶೋಕ್ ರೈ

Published

on

ಪುತ್ತೂರು: ಇಲ್ಲಿನ ನಗರಸಭಾ ವ್ಯಾಪ್ತಿಯ ಕೋರ್ಟು ರಸ್ತೆ – ಬೀದಿಮಜಲು ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಗೆ ಹೋಗುವ ರಸ್ತೆ ಕಾಂಕ್ರೀಟುಕರಣಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಯಿದೆ ದೇವುಸ್ ಚರ್ಚ್ ನ ಧರ್ಮಗುರು ಲಾರೆನ್ಸ್ ಮಸ್ಕರೇನಸ್ ರವರು ಮಾತನಾಡಿ ರಸ್ತೆ ಅಭಿವೃದ್ದಿಗೆ ಸುಮಾರು 10 ಲಕ್ಷ ಬಿಡುಗಡೆ ಮಾಡಿದ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಾವುದೇ ಸ್ವಾರ್ಥ ಇಲ್ಲದೆ, ಬಡವರಿಗೆ ಸಹಾಯವಾಗಬೇಕು, ಪುತ್ತೂರು ಪ್ರದೇಶ ಅಭಿವೃದ್ಧಿಯಾಗಬೇಕು, ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು ಎಂದು ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ದೇವರು ಕರುಣಿಸಲಿ ಎಂದು ಆಶೀರ್ವದಿಸಿದರು.

ಶಾಸಕ ಅಶೋಕ್‌ ರೈ ಮಾತನಾಡಿ ಪುತ್ತೂರಿನಲ್ಲಿ ದೊಡ್ಡ ದೊಡ್ಡ ಉದ್ಯಮಗಳು ನಿರ್ಮಾಣ ಆಗಬೇಕಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ. ಈಗಾಗಲೇ ಸುಮಾರು ಒಂದು ಸಾವಿರ ಕೋಟಿ ಹೂಡಿಕೆ ಮಾಡಲು ಉದ್ಯಮಿಗಳು ಸಂಪರ್ಕಿಸಿದ್ದಾರೆ. ನಾನು ವರ್ಷಕ್ಕೆ ಐದು ಕೋಟಿ ದುಡಿತ್ತಿದ್ದೆ ಅದನ್ನೆಲ್ಲಾ ಬಿಟ್ಟು ಸಮಾಜದ ಕೆಲಸ ಜನರ ಸೇವೆ ಮಾಡಬೇಕೆಂದು ಬಂದಿದ್ದೇನೆ. ಭ್ರಷ್ಟಾಚಾರ ರಹಿತವಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಲು ನಿಮ್ಮೆಲ್ಲಾ ಆಶೀರ್ವಾದ ಇರಲಿ ಎಂದು ನುಡಿದರು.

ಈ ಸಂದರ್ಭದಲ್ಲಿ ಮಾಯಿದೆ ದೇವುಸ್ ಚರ್ಚ್ ನ ಧರ್ಮಗುರುಗಳಾದ ಅತೀ ವಂದನೀಯ ಲಾರೆನ್ಸ್ ಮಸ್ಕರೇನಸ್, ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತಾ, ಕಾರ್ಯದರ್ಶಿ ಎವ್ಲಿನ್ ಡಿಸೋಜಾ, ವಿಪ್ಪತ್ತು ಆಯೋಗದ ಅಧ್ಯಕ್ಷ  ಜೋನ್ ಡಿಸೋಜಾ, ಸೈಂಟ್ ಬ್ರಿಜಿಟೈನ್ ಕಾನ್ವೆಂಟ್ ನ ಧರ್ಮ ಭಗಿಣಿಯರು, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ರಾಧಾ ಡ್ರೆಸಸ್ಸ್ ನ ಮಾಲಕ ಪ್ರಕಾಶ್ ಕಾಮತ್ ಮತ್ತು ಸಿಬ್ಬಂದಿ, ಮಾಜಿ ತಹಶಿಲ್ದಾರ್  ಜೆ.ಪಿ ರೊಡ್ರಿಗಸ್, ಪಾವ್ಲ್ ಹೆರಾಲ್ಡ್ ,  ಕ್ಲಾಮೆಂಟ್ ಪಿಂಟೋ ಇನ್ನಿತರು ಉಪಸ್ಥಿತರಿದ್ದರು.

LATEST NEWS

ಉಪಸಭಾಪತಿ ರುದ್ರಪ್ಪ ಲಮಾಣಿ ಕಾರು ಅಪಘಾತ: ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್

Published

on

ಮಂಗಳೂರು/ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ವಿಧಾನಸಭೆ ಡೆಪ್ಯೂಟಿ ಸ್ಪೀಕರ್​ ರುದ್ರಪ್ಪ ಲಮಾಣಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.


ಕರ್ನಾಟಕ ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಲಮಾಣಿ ಅಧಿವೇಶನ ಮುಗಿಸಿಕೊಂಡು ಬೆಂಗಳೂರಿನಿಂದ ಹಾವೇರಿಗೆ ತೆರಳುವ ಮಾರ್ಗ ಮಧ್ಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜೆ.ಜೆ.ಹಳ್ಳಿ ಗ್ರಾಮದ ಬಳಿ ರಸ್ತೆ ಅಪಘಾತ ಸಂಭವಿಸಿದೆ.

ಕೂಡಲೇ ಅವರನ್ನು ದಾವಣಗೆರೆ ಎಸ್​ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಇದೀಗ ಇದ್ದಕ್ಕಿದ್ದಂತೆ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಸುಳ್ಯ : ಗ್ಯಾಸ್ ಸಿಲಿಂಡರ್ ಸರಬರಾಜು ಲಾರಿ ಪಲ್ಟಿ; ಸವಾರ ಗಂಭೀರ

ಶುಕ್ರವಾರ (ಮಾ.14) ಬೆಂಗಳೂರಿನಿಂದ ಹಾವೇರಿಗೆ ತೆರಳುತ್ತಿದ್ದ ವೇಳೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜೆಜೆ ಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಳನೀರು ಕುಡಿಯಲು ಕಾರಿನಿಂದ ಕೆಳಗಿಳಿದು ನಿಂತಿದ್ದ ರುದ್ರಪ್ಪ ಲಮಾಣಿ ಅವರಿಗೆ ಬೈಕ್​ ಡಿಕ್ಕಿ ಹೊಡೆದಿತ್ತು.

ಬೈಕ್​ ಡಿಕ್ಕಿ ಹೊಡೆದ ರಭಸಕ್ಕೆ ನೆಲಕ್ಕೆ ಬಿದ್ದ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ತಲೆ, ಮಂಡಿ, ಮತ್ತು ಬಾಯಿ ಹತ್ತಿರ ಗಾಯಗಳಾಗಿದ್ದವು. ತಕ್ಷಣಕ್ಕೆ ಅವರಿಗೆ ಹಿರಿಯೂರಲ್ಲಿ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್​ ಮೂಲಕ ರಾತ್ರಿ ದಾವಣಗೆರೆಯ ಎಸ್​ಎಸ್​ ಹೈಟೆಕ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ರುದ್ರಪ್ಪ ಲಮಾಣಿ ಅವರನ್ನು ದಾವಣಗೆರೆಯ ಎಸ್​ಎಸ್ ಆಸ್ಪತ್ರೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

Continue Reading

bangalore

ದೇವಾಲಯದಲ್ಲಿ ದೇವರ ತಾಳಿ ಕದ್ದ ಆರೋಪಿ ಅಂದರ್..

Published

on

ಬೆಂಗಳೂರು : ದೇವಾಲಯಲ್ಲಿಯೇ ಕಳ್ಳನೋರ್ವ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಶ್ಯಾಮರಾಜಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ನ್ಯೂಟೌನ್‌ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.

ಸಂಜಯ್‌ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಸಂಜಯ್ ದೇವಸ್ಥಾನದಲ್ಲಿ ಮಾ.5 ರಂದು ದೇಗುಲದ ಬೆಳ್ಳಿ ತಟ್ಟೆ, 15 ಬೆಳ್ಳಿ ಬಟ್ಟಲು, ಬೆಳ್ಳಿ ಹಸುವಿನ ವಿಗ್ರಹ, 4 ತಾಳಿ, ಕಾಸಿನ ಸರವನ್ನು ಕದ್ದಿದ್ದ. ನಂತರ ಈತ ಪರಾರಿಯಾಗಿದ್ದ. ಆದರೆ ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿಯ ಬಂಧನ ಮಾಡಲಾಗಿದೆ.

ಕಳ್ಳ ಸಂಜಯ್‌ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು, ವಾರೆಂಟ್‌ ಜಾರಿಯಾಗಿತ್ತು. ಆದರೆ ವಕೀಲರಿಗೆ ಕೊಡಲು ಹಣವಿಲ್ಲದ ಕಾರಣ ಮತ್ತೆ ಕಳ್ಳತನಕ್ಕೆ ಇಳಿದಿದ್ದ. ಸದ್ಯ ಪೊಲಿಸರು ಸಂಜಯ್‌ನನ್ನು ಬಮಧಿಸಿದ್ದು, ವಿಚಾರನರ ನಡೆಸುತ್ತಿದ್ದಾರೆ.

Continue Reading

FILM

ಮೊಮೊಸ್ ಫಾಸ್ಟ್ ಫುಡ್ ಆರಂಭಿಸಿದ ಬಾಲಿವುಡ್ ನಟ

Published

on

ಮಂಗಳೂರು/ಡೆಹ್ರಾಡೂನ್: 12th ಫೇಲ್ ಸೇರಿದಂತೆ ಬಾಲಿವುಡ್‌ನ ಹತ್ತಾರು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ನಟ ಭೂಪೇಂದ್ರ ತನೇಜಾ ಅವರು ತಮ್ಮ ಬಿಡುವನ ವೇಳೆಯಲ್ಲಿ ಡೆಹ್ರಾಡೂನ್ ಧರಂಪುರದಲ್ಲಿ ಆದ ‘ಮೊಮೊ ಫಾಸ್ಟ್ ಫುಡ್’ ಸ್ಟಾಲ್ ನಡೆಸುತ್ತಿದೆ.

ಹೌದು, ಭೂಪೇಂದ್ರ ತನೇಜಾ, ಡೆಹ್ರಾಡೂನ್‌ನ ಧರ್ಮಪುರದ ಮಾತಾ ಮಂದಿರ ರಸ್ತೆಯಲ್ಲಿ ತಮ್ಮ ಫಾಸ್ಟ್ ಫುಡ್ ಸ್ಟಾಲ್. ತನೇಜಾ ಶೂಟಿಂಗ್ ಇಲ್ಲದಿದ್ದಾಗ ಜನರಿಗೆ ರುಚಿಕರವಾದ ಫಾಸ್ಟ್ ಫುಡ್ ತಯಾರಿಸಿ ಉಣ ಬಡಿಸುತ್ತಿದ್ದಾರೆ. ಅವರಿಗೆ ಪತ್ನಿ ಸುಷ್ಮಾ ತನೇಜಾ ಕೂಡ ಈ ಕೆಲಸದಲ್ಲಿ ಅವರಿಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ.

ಇದನ್ನೂ ಓದಿ:  ‘ಕೌನ್ ಬನೇಗಾ ಕರೋಡ್‌ಪತಿ-17’ರ ನಿರೂಪಕರ ಕುರಿತ ವದಂತಿಗೆ ತೆರೆ ಎಳೆದ ಬಿಗ್‌ಬಿ

ಈ ಬಗ್ಗೆ ಮಾತನಾಡಿರುವ ಭೂಪೇಂದ್ರ ತನೇಜಾ ಅವರು, ನನಗೆ ಹಣದ ಕೊರತೆ ಇಲ್ಲ ಎನ್ನುತ್ತಾರೆ. ಆದರೆ ನಿಮಗೆ ಏನನ್ನಾದರೂ ಹೊಸತನ್ನು ಮಾಡಬೇಕೆಂಬ ಬಯಕೆ ಇದೆ. ಹೀಗಾಗಿಯೇ ಮೊಮೊಸ್ ಫಾಸ್ಟ್ ಫುಡ್ ಆರಂಭಿಸಿದ್ದೇನೆ. ಇನ್ನು ತನೇಜಾ ಅವರಿಗೆ ಅಡುಗೆ ಮಾಡುವುದು ಎಂದರೆ ತುಂಬಾ ಇಷ್ಟವಂತೆ.

ಭೂಪೇಂದ್ರ ತನೇಜಾ ಅವರಿಗೆ ಉತ್ತಮ ಮನ್ನಣೆ ತಂದು ಕೊಟ್ಟ ಸಿನಿಮಾ ಎಂದರೆ 12 ಫೇಲ್. ಈ ಚಿತ್ರ ಆಸ್ಕರ್‌ಗೆ ನಾಮನಿರ್ದೇಶನಗೊಂಡಿತ್ತು. ಈ ಸಿನಿಮಾದಲ್ಲಿ ನಟಿಸಿದ್ದು ತನ್ನ ಅದೃಷ್ಟವೆಂದು ತನೇಜಾ ಹೇಳಿದ್ದಾರೆ.

ತನೇಜಾ ಅವರ ತಾಂಡವ್ ಸರಣಿ, ಅಖ್ರಿ ಸಚ್, ಗನ್ಸ್ ಮತ್ತು ಗುಲಾಬ್, ಪಿಎಂ ನರೇಂದ್ರ ಮೋದಿ, ಬಟ್ಟಿ ಗುಲ್ ಮೀಟರ್ ಚಾಲು, ಲಾಲ್ ಸಿಂಗ್ ಚಡ್ಡಾ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ.

 

Continue Reading
Advertisement

Trending

Copyright © 2025 Namma Kudla News

You cannot copy content of this page