ಹಿಂದೂ ರುದ್ರ ಭೂಮಿಯಲ್ಲಿ ದಲಿತ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ತಡೆ|ಪಂಚಾಯತ್ ಆವರಣದಲ್ಲೇ ಶವ ಸುಡಲು ಸಜ್ಜು.!! ಉಡುಪಿ : ಹಿಂದೂ ರುದ್ರಭೂಮಿಯಲ್ಲಿ ದಲಿತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡದೆ, ಮಾಜಿ ಗ್ರಾ.ಪಂ ಸದಸ್ಯನ ಮೃತದೇಹವನ್ನು ಉಚ್ಚಿಲ ಬಡಾ ಗ್ರಾಪಂ ನ ಮುಂದೆ ಜನ ಇಟ್ಟು ಸುಡಲು ಮುಂದಾದ ಘಟನೆ ನಡೆದಿದೆ. ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯ ಮುಳ್ಳಗುಡ್ಡೆಯ ದಲಿತ ಜಾತಿಗೆ ಸೇರಿದ 80 ವರ್ಷದ ಶಂಕರ್ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಇವರು ಮಾಜಿ ಪಂಚಾಯತ್ ಸದಸ್ಯರಾಗಿದ್ದರು ಎನ್ನಲಾಗಿದೆ. ಆದರೆ ಅವರ ಶವ ಸಂಸ್ಕಾರಕ್ಕೆ ಹಿಂದೂ ರುದ್ರ ಭೂಮಿಯಲ್ಲಿ ಅವಕಾಶವನ್ನು ನೀಡಿಲ್ಲ ಎನ್ನಲಾಗಿದೆ. ಸಾರ್ವಜನಿಕ ಹಿಂದೂ ರುದ್ರಭೂಮಿಯ ವಿವಾದಕ್ಕೆ ಸಂಬಂಧಿಸಿ ದಲಿತರ ಶವ ಸಂಸ್ಕಾರಕ್ಕೆ ಅವಕಾಶ ಇಲ್ಲದಿರುವುದನ್ನು ವಿರೋಧಿಸಿ ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ಗ್ರಾಮ ಪಂಚಾಯತ್ ನಲ್ಲಿ ಶವ ಇಟ್ಟು ಸುಡಲು ಮುಂದಾಗಿದ್ದರು. ಎರ್ಮಾಳ್ ಬಡ ಎಂಬಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ದಲಿತರಿಗೆ ಶವ ಸಂಸ್ಕಾರ ನಡೆಸಲು ಶತಮಾನಗಳಿಂದ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ದಸಂಸ ಹಲವು ವರ್ಷಗಳಿಂದ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಸರಕಾರ ಸ್ಮಶಾನದಲ್ಲಿ ಕೇವಲ ಒಂದು ಜಾತಿಯವರಿಗೆ ಮಾತ್ರ ಶವ ಸಂಸ್ಕಾರಕ್ಕೆ ಅವಕಾಶ ನೀಡಿ, ದಲಿತರಿಗೆ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಕಾಪು ತಹಶೀಲ್ದಾರ್ ಮುಹಮ್ಮದ್ ಇಸಾಕ್, ದಸಂಸ ಮುಖಂಡರೊಂದಿಗೆ ಮಾತುಕತೆ ನಡೆಸಿ ಬೆಳಪು ಗ್ರಾಪಂನ ಸ್ಮಶಾನದಲ್ಲಿ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು. ಆದರೆ ಇದನ್ನು ನಿರಾಕರಿಸಿದ ಮುಖಂಡರು, ಬಡಾ ಗ್ರಾಪಂ ವ್ಯಾಪ್ತಿಯಲ್ಲಿಯೇ ಮೃತದೇಹ ಅಂತ್ಯಕ್ರಿಯೆ ನಡೆಸಲು ಅವಕಾಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
LATEST NEWS
ಉಡುಪಿ: ಬಾವಿಗೆ ಹಾರಿ ಜೀವಾಂತ್ಯಗೊಳಿಸಿದ ಬಸ್ ಏಜೆಂಟ್
LATEST NEWS
ಹೆಲ್ಮೆಟ್ ಧರಿಸದ ಸವಾರನನ್ನು ನಿಲ್ಲಿಸಿ ದಂಡ ಹಾಕದೇ ಕಳುಹಿಸಿದ ಪೊಲೀಸ್ ಸಿಬ್ಬಂದಿ!
LATEST NEWS
ಇಸ್ತ್ರಿ ಅಂಗಡಿಯವನ ಸಂಪಾದನೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು!
-
FILM6 days agoಲಿಫ್ಟ್ನಲ್ಲಿ ಗ್ಯಾಸ್ ಬಲೂನ್ ಸ್ಫೋಟ; ಇಬ್ಬರಿಗೆ ಸುಟ್ಟ ಗಾಯ; ವೀಡಿಯೋ ವೈರಲ್!
-
DAKSHINA KANNADA5 days agoಪುತ್ತೂರಿನಲ್ಲಿ ಮತ್ತೊಂದು ಲವ್ ಸೆಕ್ಸ್ ದೋಖಾ ಪ್ರಕರಣ; ಆರೋಪಿ ಅರೆಸ್ಟ್
-
bangalore5 days agoಭೀಕರ ಅಗ್ನಿ ಅವಘಡ; 40 ಪ್ರಯಾಣಿಕರಿದ್ದ ಖಾಸಗಿ ಬಸ್ ಸುಟ್ಟು ಭಸ್ಮ!
-
LATEST NEWS6 days agoಹೆಜಮಾಡಿಯಲ್ಲಿ ಹುಚ್ಚಾಟ ಮೆರೆದಿದ್ದ ಕೇರಳ ವಿದ್ಯಾರ್ಥಿಗಳ ಬಸ್ ಪಲ್ಟಿ
-
dehali5 days agoಮಹಿಳೆಯರ ರಕ್ಷಣೆಗೆ ಹೋದ ಉದ್ಯಮಿ ಮೇಲೆ ಭಿಕರ ಹಲ್ಲೆ: ದೆಹಲಿಯಲ್ಲಿ ಬೆಚ್ಚಿಬೀಳಿಸುವ ಘಟನೆ!
-
LATEST NEWS4 days agoಕೇರಳದಲ್ಲಿ ಉದ್ಯಮಿ ಆತ್ಮಹತ್ಯೆ: ಉರಿಯುವ ಕಾರಿನಿಂದ ಪಾರಾದ ಪತ್ನಿ ಮತ್ತು ಮಕ್ಕಳು
-
LATEST NEWS6 days agoಮಂಗಳೂರು: ಬಸ್ ಡಿಕ್ಕಿ; ಸ್ಕೂಟರ್ ಸಹಸವಾರೆ ಸಾವು
-
BIG BOSS6 days agoರಕ್ಷಿತಾ ಶೆಟ್ಟಿಗೆ ವಿಶೇಷವಾಗಿ ಥ್ಯಾಂಕ್ಸ್ ಹೇಳಿದ ಕರಿಬಸಪ್ಪ; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸದ್ದು!






