Connect with us

ಬ್ರಹ್ಮಕಲಶೊತ್ಸವ ಸಂಭ್ರಮಕ್ಕೆ ತಾಯಿ ದುರ್ಗಾಪರಮೇಶ್ವರಿಯ ಕ್ಷೇತ್ರ ಸನ್ನದ್ಧ

Published

on

ಮಂಗಳೂರು : ಇತಿಹಾಸ ಪ್ರಸಿದ್ದ ಶ್ರೀಕ್ಷೇತ್ರ ಕಟೀಲಿನ ಬ್ರಹ್ಮಕಲಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೆ ಸಕಲ ಸಿದ್ಧತೆಗಳು ನಡೆದಿದ್ದು, ಜನವರಿ 22 ರಿಂದ ಫೆಬ್ರವರಿ 3 ರವರೆಗೆ ಕ್ಷೇತ್ರದಲ್ಲಿ ಸಂಭ್ರಮ ಮನೆ ಮಾಡಲಿದೆ.

ಅದಕ್ಕಾಗಿಯೇ ಕ್ಷೇತ್ರವೂ ಸರ್ವ ರೀತಿಲೂ ಸನ್ನದ್ಧವಾಗಿದ್ದು, ಲಕ್ಷಾಂತರ ಭಕ್ತರ ಆಗಮನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿ ಕಾತರದಿಂದ ಕಾಯುತ್ತಿದೆ.ಈ ಬಾರಿಯ ಬೃಹ್ಮ ಕಲಶ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಧಾರ್ಮಿಕ ಆರಾಧನೆಯಲ್ಲಿ ಇನ್ನೊಂದು ಮೈಲಿಗಲ್ಲನ್ನ ತಲುಪಲಿದೆ.

ಫೆಬ್ರವರಿ 3 ರವರೆಗೆ ಬ್ರಹ್ಮಕಲಶೋತ್ಸವ ನಿಮಿತ್ತ ವಿವಿಧ ಧಾರ್ಮಿಕ ವಿಧಿವಿಧಾನಗಳಿಗೂ ಕ್ಷೇತ್ರ ಸಾಕ್ಷಿಯಾಗಲಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅಲ್ಲದೇ ಈಗಾಗಲೇ ಲಕ್ಷಕ್ಕೂ ಮಿಕ್ಕ ಊರ-ಪರವೂರ ಸ್ವಯಂಸೇವಕರು ವಿವಿಧ ಅಭಿವೃದ್ಧಿ ಚಟುವಟಿಕೆಯಲ್ಲಿ ಕೈ ಜೋಡಿಸುವ ಮೂಲಕ ಕಟೀಲು ಅಮ್ಮನ ಸೇವೆ ಮಾಡಿದ್ದಾರೆ. ಈಗಾಗಲೆ ದಶದಿಕ್ಕುಗಳಿಂದ ಕ್ಷೇತ್ರಕ್ಕೆ ಹೊರೆಕಾಣಿಕೆ ಬರಲು ಆರಂಭಿಸಿದ್ದು, ಹೊರೆಕಾಣಿಕೆ ಸಂಗ್ರಹಕ್ಕಾಗಿ ಚಪ್ಪರವನ್ನು ನಿರ್ಮಿಸಲಾಗಿದೆ.

ಜೊತೆಗೆ ಸುಸಜ್ಜಿತ ಪಾಕಶಾಲೆ, ಪಾರ್ಕಿಂಗ್ ವ್ಯವಸ್ಥೆಯನ್ನ ಮಾಡಲಾಗಿದೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪೂರಕವಾದ ವೇದಿಕೆಗಳೂ ಸಿದ್ಧವಾಗಿದೆ..ಇದಲ್ಲದೇ ಶಾಸಕ ಉಮಾನಾಥ ಕೋಟ್ಯಾನ್ ಅವರ ಮುತುವರ್ಜಿಯಿಂದಾಗಿ ಕ್ಷೇತ್ರ ಸಂಪರ್ಕಿಸುವ ರಸ್ತೆಗಳನ್ನ 25 ಕೋಟಿ ರೂಪಾಯಿ ವೆಚ್ಚದಲ್ಲಿ ಅಗಲೀಕರಣಗೊಳಿಸಲಾಗಿದೆ.. ಆರೋಗ್ಯ, ಭದ್ರತೆ, ಸುರಕ್ಷತೆ, ಶುಚಿತ್ವಕ್ಕೂ ಆದ್ಯತೆಯನ್ನ ನೀಡಲಾಗಿದೆ.. ಸುಮಾರು 25 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆ ಇದೆ.

7 ಸಾವಿರಕ್ಕೂ ಮಿಕ್ಕ ಸ್ವಯಂ ಸೇವಕರು ಅವರೆಲ್ಲರಿಗೂ ಬೇಕಾದ ಅಚ್ಚುಕಟ್ಟಾದ ವ್ಯವಸ್ಥೆಯನ್ನ ನಿರ್ವಹಿಸಲಿದ್ದಾರೆ. ಮುಂದಿನ 12 ದಿನಗಳ ಕಾಲ ನಡೆಲಿರುವ ಉತ್ಸವದಲ್ಲಿ ನಾಗಮಂಡಲ, ಕೋಟಿಜಪಯಜ್ಞ, ಸಹಸ್ರಚಂಡಿಕಾ ಯಾಗದಂತಹ ಧಾರ್ಮಿಕ ವಿಧಿವಿಧಾನಗಳು ಭಕ್ತರನ್ನ ಕ್ಷೇತ್ರಕ್ಕೆ ಬರಸೆಳೆಯಲಿದೆ.. ಒಟ್ಟಾರೆ ಕಟೀಲು ತಾಯಿಯ ಬ್ರಹ್ಮಕಲಶೋತ್ಸವಕ್ಕೆ ಕ್ಷೇತ್ರವು ಸನ್ನದ್ಧವಾಗಿದ್ದು, ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ಕ್ಷಣಗಣನೆಯಷ್ಟೇ ಬಾಕಿಯಿದೆ.

ವಿಡಿಯೋಗಾಗಿ..

Advertisement
Click to comment

Leave a Reply

Your email address will not be published. Required fields are marked *

LATEST NEWS

ಸುಳ್ಯ: ಲೋ ಬಿಪಿ, ಕುಸಿದು ಬಿದ್ದು ಕಾಲೇಜು ಉಪನ್ಯಾಸಕ ನಿಧನ

Published

on

ಸುಳ್ಯ: ಎಂದಿನಂತೆ ಕಾಲೇಜಿಗೆ ಹಾಜರಾಗಿ ಮಧ್ಯಾಹ್ನದವರೆಗೆ ತರಗತಿಗಳನ್ನುನಡೆಸಿದ ಉಪನ್ಯಾಸಕರೋರ್ವರು ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಇಂದು ಸುಳ್ಯದಲ್ಲಿ ನಡೆದಿದೆ. ಡಿಗ್ರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಮಂಜು ಪಿ. (42) ಮೃತ ಉಪನ್ಯಾಸಕ. ಲೋ ಬಿಪಿ ಅಥವಾ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಮೃತರು ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಬೇರ್ಯ ನಿವಾಸಿಯಾಗಿದ್ದರು. ಗುರುವಾರ ಎಂದಿನಂತೆ ಕಾಲೇಜಿಗೆ ಹಾಜರಾಗಿ ಮಧ್ಯಾಹ್ನದವರೆಗೆ ತರಗತಿಗಳನ್ನು ನಡೆಸಿದ್ದರು. ನಂತರ ಅಸೌಖ್ಯ ಕಾಣಿಸಿಕೊಂಡಿತ್ತು. ವಿದ್ಯಾರ್ಥಿಯೊಬ್ಬರ ಸಹಾಯದಿಂದ ತಮ್ಮ ಕೊಠಡಿಗೆ ತೆರಳಿ ವಿಶ್ರಾಂತಿ ಪಡೆಯುವುದಾಗಿ ತಿಳಿಸಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಔಷಧ ಪಡೆಯಲು ಮೆಡಿಕಲ್ ಶಾಪ್‌ಗೆ ಬಂದಾಗ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮಂಜು ಅವರು ಇವರು ಕಳೆದ 10 ವರ್ಷಗಳ ಕಾಲ ಕೆ.ಆರ್. ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 2024ರಲ್ಲಿ ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉಪನ್ಯಾಸಕರಾಗಿ ನೇಮಕಗೊಂಡು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

 

Continue Reading

LATEST NEWS

ಕಡಬ: ತೋಟಕ್ಕೆ ಬಂದ ಜಾನುವಾರುಗಳನ್ನು ಓಡಿಸಲು ಹೋಗಿ ಬಿದ್ದು ಮಹಿಳೆ ಸಾವು

Published

on

ಕಡಬ: ತೋಟಕ್ಕೆ ಮೇಯಲು ಬಂದ ಜಾನುವಾರುಗಳನ್ನು ಓಡಿಸಲು ಹೋದಾಗ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದ ಪಾತೃವಾಡಿಯಲ್ಲಿ ನಡೆದಿದೆ. ಕೊಣಾಲು ಗ್ರಾಮದ ನಿವಾಸಿ ಲೀಲಾವತಿ ಶೆಟ್ಟಿ (64) ಮೃತಪಟ್ಟ ದುರ್ದೈವಿ.

ಮಗನೊಂದಿಗೆ ವಾಸವಿದ್ದ ಮೃತ ಲೀಲಾವತಿ ಅವರು ಜಾನುವಾರುಗಳನ್ನು ಓಡಿಸಲು ಹೋದಾಗ ಈ ದುರ್ಘಟನೆ ನಡೆದಿದೆ. ಇವರ ಮಗ ಹರೀಶ್ ಲಾರಿ ಚಾಲಕರಾಗಿದ್ದು, ರಾತ್ರಿ ಮನೆಗೆ ಬಂದಾಗ ಬಾಗಿಲು ತೆರೆದಿತ್ತು. ಆದರೆ ತಾಯಿ ಮನೆಯಲ್ಲಿ ಇರಲಿಲ್ಲ. ಗಾಬರಿಗೊಂಡ ಹರೀಶ್ ಅವರು ನೆರೆಮನೆಯವರ ಸಹಾಯದೊಂದಿಗೆ ಹುಡುಕಾಟ ನಡೆಸಿದಾಗ, ತೋಟದಲ್ಲಿ ಲೀಲಾವತಿ ಅವರು ಬಿದ್ದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಮೃತದೇಹ ಪತ್ತೆಯಾದಾಗ ಅವರ ಒಂದು ಕೈಯಲ್ಲಿ ಕಲ್ಲು ಹಾಗೂ ಇನ್ನೊಂದು ಕೈಯಲ್ಲಿ ದೊಣ್ಣೆ ಇತ್ತು ಎಂದು ತಿಳಿದುಬಂದಿದೆ. ತೋಟಕ್ಕೆ ನುಗ್ಗಿದ ಜಾನುವಾರುಗಳನ್ನು ಓಡಿಸಲು ಹೋದ ಸಂದರ್ಭದಲ್ಲಿ ಅವರು ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾರೆ. ಈ ವೇಳೆ ಕೈಯಲ್ಲಿದ್ದ ಕಲ್ಲೇ ಅವರ ಹಣೆಗೆ ಬಲವಾಗಿ ತಗುಲಿ ಗಂಭೀರ ಗಾಯಗೊಂಡಿದ್ದರಿಂದ ಅವರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಕೊಣಾಲು ಗ್ರಾಮದ ತಿರ್ಲೆ ಪರಿಸರದಲ್ಲಿ ಜಾನುವಾರುಗಳ ಹಾವಳಿ ಮಿತಿಮೀರಿದೆ ಎಂಬ ಆರೋಪ ಕೇಳಿಬಂದಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜಾನುವಾರುಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

 

Continue Reading

LATEST NEWS

ಕೃಷ್ಣ ಮಠಕ್ಕಿಲ್ಲ ಗ್ಯಾಸ್ ಸಿಲಿಂಡರ್ ಟೆನ್ಶನ್; ದಿವಾನರು ಹೇಳಿದ್ದೇನು?

Published

on

ಉಡುಪಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣದಿಂದ ರಾಜ್ಯದಲ್ಲಿ ಎಲ್ ಪಿಜಿ ಸಿಲಿಂಡರ್ ಕೊರತೆ ಕಾಡುತ್ತಿದೆ ಎನ್ನಲಾಗ್ತಿದೆ. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಪ್ರತಿದಿನ ಸಾವಿರಾರು ಜನ ಅನ್ನಪ್ರಸಾದ ಸ್ವೀಕರಿಸುತ್ತಾರೆ. ಅಡುಗೆ ಅನಿಲ ಬಳಸಿಕೊಂಡು ಇಲ್ಲಿ ಊಟಕ್ಕೆ ತಯಾರಿ ಮಾಡಲಾಗುತ್ತೆ. ಆದರೆ ಕಟ್ಟಿಗೆ ಬಳಸಿ ಅಡುಗೆ ಮಾಡುವುದು ಇಲ್ಲಿನ ಸಂಪ್ರದಾಯ.

ಸದ್ಯಕ್ಕೆ ಯಾವುದೇ ಅಡ್ಡಿ ಆಗಿಲ್ಲ ಆದರೂ, ಎಷ್ಟೇ ಸಾವಿರ ಜನ ಬಂದರೂ ಕಟ್ಟಿಗೆ ಬಳಕೆ ಮಾಡಿ ಅಡುಗೆ ತಯಾರಿಸಲಾಗುವುದು. ಉಡುಪಿ ಮಠದಲ್ಲಿ ಅಡುಗೆಗೆ ಕಟ್ಟಿಗೆ ಬಳಕೆಗೆಂದೇ ಕಾಡು ಬೆಳೆಸಲಾಗುತ್ತಿದೆ. 36 ವರ್ಷಕ್ಕೊಮ್ಮೆ ಕಾಡಿನಿಂದ ಕಟ್ಟಿಗೆ ಲಭ್ಯವಾಗುತ್ತದೆ. ಭಕ್ತರು ನಿರಾತಂಕವಾಗಿ ಕೃಷ್ಣ ದರ್ಶನ ಮಾಡಿ ಊಟಕ್ಕೆ ಬರಬಹುದು ಎಂದು ದಿವಾನರಾದ ಡಾ.ಉದಯ್ ಕುಮಾರ್ ಸರಳತ್ತಾಯ ತಿಳಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page