Connect with us

ತೇಲುವ ನೌಕೆಯಲ್ಲಿ ಪತ್ರಕರ್ತರ ಚಿಂತನ ಮಂಥನ..!

Published

on

ತೇಲುವ ನೌಕೆಯಲ್ಲಿ ಪತ್ರಕರ್ತರ ಚಿಂತನ ಮಂಥನ..!

ಮಂಗಳೂರು : ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ದ ಎರಡನೇ ದಿನ ವಿಶೇಷ ಚಿಂತನ ಮಂಥನಕ್ಕೆ ನಾಂದಿ ಹಾಡಿತು.
ಇದೇ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಸಮ್ಮೇಳನ ಕಡಲು ಹಾಗೂ ನದಿಗಳ ಸಂಗಮ ಪ್ರದೇಶವಾದ ಹಳೆ ಬಂದರು ಧಕ್ಕೆಯಲ್ಲಿ ರಾಣಿ ಅಬ್ಬಕ್ಕ ನೌಕೆಯಲ್ಲಿ (ಕ್ರೂಸ್) ಆರಂಭಗೊಂಡಿತು.

೧೦೦ಕ್ಕೂ ಅಧಿಕ ಪತ್ರಕರ್ತರು, ಹಾಗೂ ಗಣ್ಯರನ್ನು ಹೊತ್ತ ಅಬ್ಬಕ್ಕ ಕ್ರೂಸ್ ಧಕ್ಕೆಯಿಂದ ಫಲ್ಗುಣಿ ನದಿ ನೀರಿನಲ್ಲಿ ತೇಲುತ್ತಾ ಸಾಗುತ್ತಿದ್ದಂತೆ ಚಿಂತನ ಮಂಥನ ಆರಂಭಗೊಂಡಿತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರತ್ನಾಕರ್‌ ಹೆಗಡೆ ಉದ್ಘಾಟನಾ ನುಡಿಗಳನ್ನಾಡಿ, ಕರಾವಳಿಗೆ ಸಾಗರ ಮತ್ತು ನದಿಗಳು ಬಹು ದೊಡ್ಡ ಸಂಪತ್ತು. ಆದರೆ ನೆರೆಯ ರಾಜ್ಯಗಳಲ್ಲಿ ಆಗಿರುವ ಕರಾವಳಿ ಪ್ರವಾಸೋದ್ಯಮ ನಿರೀಕ್ಷಿತ ಮಟ್ಟದಲ್ಲಿ ನಮ್ಮಲ್ಲಿ ಆಗಿಲ್ಲ. ಆ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ಕ್ರಮ ವಹಿಸಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ನೆರೆಯ ಗೋವಾ, ಕೇರಳದ ಸಮುದ್ರ ಪ್ರವಾಸೋದ್ಯಮ ಅಭಿವೃದ್ಧಿ ಗೆ ಹೋಲಿಸಿದರೆ ನಮ್ಮ ಕರಾವಳಿಯೂ ಅದ್ಭುತ ವಾದ ವೈವಿಧ್ಯತೆ ಯನ್ನು ಹೊಂದಿದೆ.ವಿದೇಶೀ ಯರು ಸೇರಿದಂತೆ ಪ್ರವಾಸಿಗರನ್ನು ಕೇಂದ್ರೀಕರಿಸಿಕೊಂಡು ಕರಾವಳಿಯ ವೈವಿಧ್ಯತೆಗೆ ಒತ್ತು ನೀಡಿ ಪ್ರವಾಸೋದ್ಯಮ ವನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದರು.
ಅತಿಥಿಗಳಾಗಿದ್ದ ಕ್ರೆಡೆಯ್ ಅಧ್ಯಕ್ಷ ಡಿ.ಬಿ. ಮೆಹ್ತಾ, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಅವರೂ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನೀಯ ಮುಖ್ಯ ಸ್ಥರಾದ ಕುಮಾರ್ ನಾಥ್, ವಿಜಯವಾಣಿಯ ಸುರೇಂದ್ರ ವಾಗ್ಲೆ, ಕನ್ನಡ ಪ್ರಭದ ರಾಘವೇಂದ್ರ ಭಟ್, ವಿಶ್ವವಾಣಿಯ ಜಿತೇಂದ್ರ ಕುಂದೇಶ್ವರ, ಡೆಕ್ಕನ್ ಹೆರಾಲ್ಡ್ನ ಹರ್ಷ ಮೊದಲಾದ ವರು ಕರಾವಳಿ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿದರು.
ಸಂಯುಕ್ತ ಕರ್ನಾಟಕದ ರಾಮಕೃಷ್ಣ, ವಾರ್ತಾಭಾರತಿಯ ಪುಷ್ಪರಾಜ್, ಹೊಸದಿಗಂತದ ಆನಂದ ಶೆಟ್ಟಿ, ಜಯ ಕಿರಣದ ಪ್ರಕಾಶ್ ಪಾಂಡೇಶ್ವರ, ವಿ೪ನ ಲಕ್ಷ್ಮಣ್ ಕುಂದರ್ ಉಪಸ್ಥಿತರಿದ್ದರು.
ಪತ್ರಕರ್ತ ವಿಜಯ್ ಕೋಟ್ಯಾನ್ ಸ್ವಾಗತಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.
ರಾಣಿ ಅಬ್ಬಕ್ಕ ನೌಕೆಯಲ್ಲಿ ಚಿಂತನ ಮಂಥನ ನಡೆಯುತ್ತಿದ್ದಂತೆಯೇ ಪಲ್ಗುಣಿಯ ನದಿ ನೀರಿನಲ್ಲಿ ತೇಲುತ್ತಾ ಸಾಗಿದ ನೌಕೆ ನೇತ್ರಾವತಿ ನದಿ ಸೇತುವೆಯ ಬಳಿ ಸಾಗಿ ನೇತ್ರಾವತಿ ನದಿ ನೀರಲ್ಲಿ ತೇಲಿ ಬಳಿಕ ಅಲ್ಲಿಂದ ಮಂಗಳೂರು ಧಕ್ಕೆಗೆ ಹಿಂತಿರುಗಿತು.
ನೌಕೆಯಲ್ಲಿದ್ದವರು ಕಡಲ ಸೊಬಗನ್ನು ಕಣ್ತುಂಬಿಸಿಕೊಂಡರು. ಪ್ರಥಮ ಬಾರಿಗೆ ಮಂಗಳೂರಿಗೆ ಅಗಮಿಸಿದವರು, ನೌಕೆಯಲ್ಲಿ ಸಂಚರಿಸಿದವರು ಕಣ್ಣಳತೆಯ ದೂರದಲ್ಲಿ ಕಾಣುತ್ತಿದ್ದ ಕಡಲ ಶಾಂತ ಅಲೆಗಳನ್ನು ನೋಡುತ್ತಾ ಸೆಲ್ಪಿಯನ್ನೂ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ತೇಲುವ ನೌಕೆಯಲ್ಲೇ ಉಪಹಾರ ದ ವ್ಯವಸ್ಥೆ ಯನ್ನು ಮಾಡಲಾಗಿತ್ತು.

ಭರವಸೆಗಳು ತೇಲಿ ಹೋಗದಿರಲಿ: ಡಾ. ಬಿ.ಎ. ವಿವೇಕ್ ರೈ: ಕರಾವಳಿ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಕುರಿತಂತೆ ನೀಡಲಾಗುವ ಭರವಸೆಗಳು ಸಮುದ್ರದ ಅಲೆಗಳಂತೆ ತೇಲಿ ಹೋಗದಿರಲಿ ಎಂದು ಚಿಂತನ ಮಂಥನ ದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಅಭಿಪ್ರಾಯಿಸಿದರು.
ಸ್ಥಳೀಯ ಸಂಸ್ಕೃತಿ, ಆಚರಣೆ ಗಳಿಗೆ ಆದ್ಯತೆ ನೀಡಿ ಸ್ಥಳಿಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಸ್ಥಳೀಯ ಆಚರಣೆ, ವೈವಿಧ್ಯತೆ ಗಳ ನೇರ ಕಾರ್ಯಕ್ರಮಗಳು ವೆಬ್ಸೈಟ್ ನಲ್ಲಿ ಮಾಹಿತಿ ಸಿಗಬೇಕು. ಇದು ಪ್ರವಾಸಿಗರನ್ನು ಹೆಚ್ಚು ಸಂಖ್ಯೆ ಯಲ್ಲಿ ಆಕರ್ಷಿಸಬಹುದಾಗಿದೆ ಎಂದು ಅವರು ಹೇಳಿದರು.

Advertisement
Click to comment

Leave a Reply

Your email address will not be published. Required fields are marked *

FILM

ರಶ್ಮಿಕಾ ಮಂದಣ್ಣ ಮದ್ವೆ ಬೆನ್ನಲ್ಲೇ ಈ ಫೋಟೋ ಪೋಸ್ಟ್ ಮಾಡಿದ ನಟ ರಕ್ಷಿತ್ ಶೆಟ್ಟಿ..!

Published

on

ಕರಾವಳಿ ಮೂಲದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಇದರಿಂದ ಅವರ ಅಭಿಮಾನಿಗಳು ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ. ರಿಚರ್ಡ್ ಆ್ಯಂಟನಿ’ ಸಿನಿಮಾ ಘೋಷಣೆ ಮಾಡಿ ಹಲವು ಸಮಯ ಕಳೆದರೂ ಆ ಚಿತ್ರದ ಬಗ್ಗೆ ಯಾವುದೇ ಅಪ್​​ಡೇಟ್ ಇಲ್ಲ. ಈ ಎಲ್ಲ ವಿಷಯದಲ್ಲಿ ಫ್ಯಾನ್ಸ್​ಗೆ ಬೇಸರ ಇದೆ. ಹೀಗಿರುವಾಗಲೇ ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ ಸಿನಿಮಾದ ಬೇಸರದ ಮುಖ ಭಾವವಿರುವ ಫೋಟೋನ ಪೋಸ್ಟ್ ಮಾಡಿದ್ದಾರೆ. ಈ ಫೋಟೋನ ರಕ್ಷಿತ್ ಹಂಚಿಕೊಂಡಿದ್ದೇಕೆ ಎಂಬ ಪ್ರಶ್ನೆ ಮತ್ತು ಕುತೂಹಲ ಅಭಿಮಾನಿಗಳದ್ದು.

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಇದೀಗ ನಟಿ ರಶ್ಮಿಕಾ ಮಂದಣ್ಣ ನಟ ವಿಜಯ ದೇವರಕೊಂಡ ಅವರ ಕೈ ಹಿಡಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೆಲ್ಲ ಅವರ ವಿವಾಹದ ಫೋಟೋಗಳು ಸಖತ್ ಸದ್ದು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಬೇಸರದಲ್ಲಿರೋ ಫೋಟೋನೇ ಪೋಸ್ಟ್ ಮಾಡಿದ್ದು ಅಚ್ಚರಿ ಮೂಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಇವರ ಪೋಸ್ಟ್ ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ಸ್ ಗಳನ್ನು ಹಾಕಿದ್ದಾರೆ. ‘ಹಳೆಯದನ್ನು ಮರೆತು ಮುಂದೆ ಸಾಗಿ’ ಎಂದು ಫ್ಯಾನ್ಸ್ ಹೇಳಿದ್ದಾರೆ. ಇನ್ನೂ ಕೆಲವರು, ‘ನಿಮ್ಮ ಕಂಬ್ಯಾಕ್ ಬೇರೆಯವರಿಗೆ ಸ್ಲಿಪ್ಪರ್ ಶಾಟ್ ಆಗಬೇಕು’ ಎಂದು ಬರೆದುಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಇದ್ದಿದ್ದು ಕಡಿಮೆ. ಆದರೆ ಏಕಾಏಕಿ ಚಾರ್ಲಿ ಸಿನಿಮಾದ ಈ ಫೋಟೋ ಪೋಸ್ಟ್ ಮಾಡಿದ್ದು ಯಾಕೆ ಎಂಬ ಕ್ಯೂರಾಸಿಟಿ ಮಾತ್ರ ಜಾಸ್ತಿಯಾಗಿದೆ.

Continue Reading

LATEST NEWS

ರಾಜ್ಯ ಸರ್ಕಾರ ಮಂಡಿಸಿದ್ದು ನಿರಾಶಾದಾಯಕ ಬಜೆಟ್: ಉದಯ್ ಕುಮಾರ್ ಶೆಟ್ಟಿ

Published

on

ಉಡುಪಿ: ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ನಿರಾಶಾದಾಯಕ ಬಜೆಟ್ ಆಗಿದೆ. ಯಾವುದೇ ದೂರದೃಷ್ಟಿ ಇಲ್ಲದ ಕಾಟಾಚಾರದ ಬಜೆಟ್ ಇದಾಗಿದೆ. ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ರು. ಆದರೆ ಬಹುಪಾಲು ಯೋಜನೆಗಳು ಹಳ್ಳ ಹಿಡಿದಿದೆ ಎಂದು ಬಿಜೆಪಿ ಮುಖಂಡ ಉದಯ್ ಕುಮಾರ್ ಶೆಟ್ಟಿ ವ್ಯಂಗ್ಯವಾಡಿದರು.

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಕರಾವಳಿ ಜಿಲ್ಲೆಗಳಿಗೆ ವಿಶೇಷ ಸವಲತ್ತುಗಳು ನೀಡಬೇಕು ಅನ್ನೊ‌ ನಿರೀಕ್ಷೆ ಇತ್ತು ಅದ್ರೆ ಯಾವುದೇ ಸೌಲಭ್ಯ ನೀಡಿಲ್ಲ. ಯುವ ನಿಧಿ ಯೋಜನೆಯನ್ನು ಆರಂಭಿಸಿದ್ರು ಯುವಜನತೆಗೆ ಪ್ರಯೋಜನ ಅಗಿಲ್ಲ.

ಇದನ್ನೂ ಓದಿ: ಸಿದ್ಧರಾಮಯ್ಯ ದಾಖಲೆ ಬಜೆಟ್ ಬಿಟ್ಟರೆ ನ್ಯಾಯ ಸಿಕ್ಕಿಲ್ಲ: ಸಂಸದ ಕೋಟ

ಆಶಾದಾಯಕ ಬಜೆಟ್ ಅನ್ನೋ ನಿರೀಕ್ಷೆ ಸುಳ್ಳಾಗಿದೆ. ಗೋವು ಸಾಗಾಟ ಬಗ್ಗೆ ಕಟ್ಟುನಿಟ್ಟಾದ ಕ್ರಮಕ್ಕೆ ಸರ್ಕಾರ ಮುಂದಾಗಿಲ್ಲ. ಇನ್ನು ಗೋ ರಕ್ಷಣೆ ಶಿಬಿರ ನಡೆಸಲು ಕಾಂಗ್ರೆಸ್ ಮುಂದಾಗಿರೋದು ಅಭಾಸ ಸಂಗತಿ ಎಂದು ಹೇಳಿದರು.

Continue Reading

DAKSHINA KANNADA

ಪಚ್ಚನಾಡಿ ಎಸ್.ಟಿ.ಪಿ. ಗೆ ಅನುದಾನ ಒದಗಿಸಿದ್ದು ಕೇಂದ್ರ ಸರಕಾರ: ಸಚಿವ ದಿನೇಶ್ ಗುಂಡೂ ರಾವ್ ವಿರುದ್ಧ ಶಾಸಕ ಕಾಮತ್ ಗರಂ

Published

on

ಮಂಗಳೂರು: ನಗರದ ಪಚ್ಚನಾಡಿ ಎಸ್.ಟಿ.ಪಿ. ಗೆ ಅನುದಾನ ಒದಗಿಸಿದ್ದು ಕೇಂದ್ರ ಸರಕಾರ. ರಾಜ್ಯ ಸರಕಾರ ಈ ಯೋಜನೆಗೆ ಚಿಕ್ಕಾಸು ನೀಡದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ದಿನೇಶ್ ಗುಂಡೂ ರಾವ್ ಅವರು ಶಿಲಾನ್ಯಾಸ ನೆರವೇರಿಸಿದ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಗರಂ ಆಗಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಪಚ್ಚನಾಡಿ ಎಸ್.ಟಿ.ಪಿ ಆವರಣದಲ್ಲಿ ಮಂಗಳೂರು ನಗರದ ಒಳಚರಂಡಿ ವ್ಯವಸ್ಥೆಯ ನಿರ್ಮಾಣ ಮತ್ತು ಉನ್ನತೀಕರಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಗುದ್ದಲಿ ಪೂಜೆ ನಡೆಸಿ, ಮಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ವಾಸ್ತವದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರವು ಕ್ಷೇತ್ರದ ಅಭಿವೃದ್ಧಿಗೆ ಕಳೆದ ಎರಡೂ ವರ್ಷಗಳಿಂದ ನಯಾ ಪೈಸೆ ನೀಡಿಲ್ಲ. ಮೊದಲು ಆ ಅನುದಾನ ಬಿಡುಗಡೆಗೊಳಿಸಿ ತನ್ನ ಬದ್ಧತೆಯನ್ನು ಪ್ರದರ್ಶಿಸಲಿ. ಸ್ವಚ್ಛ ಭಾರತ ಮಿಷನ್ 2.0 ಮತ್ತು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಪರಿಸರ ಪರಿಹಾರ ನಿಧಿಯಡಿ, ಸುಮಾರು 40 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಎಸ್.ಟಿ.ಪಿ. ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು ಇದು ಸಂಪೂರ್ಣ ಕೇಂದ್ರ ಸರಕಾರದ ಅನುದಾನವಾಗಿದೆ.

ಇದನ್ನೂ ಓದಿ: ಸಿದ್ಧರಾಮಯ್ಯ ದಾಖಲೆ ಬಜೆಟ್ ಬಿಟ್ಟರೆ ನ್ಯಾಯ ಸಿಕ್ಕಿಲ್ಲ: ಸಂಸದ ಕೋಟ

ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಾದ ಮಂಗಳೂರು ಉತ್ತರ ಹಾಗೂ ದಕ್ಷಿಣದ ಶಾಸಕರ ಸಹಿತ ಇಲ್ಲಿನ ಸಂಸದರಿಗೆ ಸರಿಯಾಗಿ ಮಾಹಿತಿ ನೀಡದಿರುವುದು ಮಂಗಳೂರಿಗೆ ಹಾಗೂ ಇಲ್ಲಿನ ಜನತೆಗೆ ಮಾಡುವ ಅವಮಾನವಾಗಿದೆ ಎಂದರು.

Continue Reading
Advertisement

Trending

Copyright © 2025 Namma Kudla News

You cannot copy content of this page