Connect with us

ಉಳ್ಳಾಲದಲ್ಲಿ ಜನರ ನೆಮ್ಮದಿ ಕೆಡಿಸಿದ ಟಾರ್‌ ಮಿಶ್ರಣ : ಪ್ರತಿಭಟನೆಗಿಳಿದ ಶಾಲಾ ಮಕ್ಕಳು

Published

on

ಉಳ್ಳಾಲದಲ್ಲಿ ಜನರ ನೆಮ್ಮದಿ ಕೆಡಿಸಿದ ಟಾರ್‌ ಮಿಶ್ರಣ : ಪ್ರತಿಭಟನೆಗಿಳಿದ ಶಾಲಾ ಮಕ್ಕಳು

ಮಂಗಳೂರು : ಉಳ್ಳಾಲದ ಸೋಮೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಯದ ಶಾರದಾ ಭವನದ ಹಿಂದಿನ ಖಾಸಗಿ ಮೈದಾನದಲ್ಲಿ ಉಳ್ಳಾಲ ನಗರಸಭಾ ವ್ಯಾಪ್ತಿಯ ನಗರೋತ್ಥಾನ ಟೆಂಡರ್ ನ ಕಾಮಗಾರಿಯ ಸಾಮಾಗ್ರಿಗಳು ಕಳೆದ ಒಂದು ವರ್ಷದಿಂದ ದಾಸ್ತಾನು ಇಟ್ಟು ಅಲ್ಲೇ ಕಾಂಕ್ರಿಟ್ ಮಿಶ್ರಣ ಕಾರ್ಯವು ನಡೆಯುತ್ತಿತ್ತು.

ಆದರೆ ನಿನ್ನೆ ಮದ್ಯಾಹ್ನದಿಂದ ಠಾರ್ ಮಿಶ್ರಣದ ಯಂತ್ರ ತಂದು ಡಾಮರ್ ಮಿಶ್ರಣದ ಕಾರ್ಯ ಆರಂಭಿಸಿದ್ದಾರೆ.

ವಿಜಯನಂದ ಶೆಟ್ಟಿ ಎಂಬವರಿಗೆ ಟೆಂಡರು ಕಾರ್ಯ ವಹಿಸಲಾಗಿದ್ದು ಪರಿಸರಕ್ಕೆ ಮಾರಕವಾಗಿರುವ ಈ ಠಾರ್ ಮಿಶ್ರಣ ಕಾಮಗಾರಿಯೂ ಹತ್ತಿರ ಇರುವ ಶಾಲಾ ವಠಾರಕ್ಕೆ ಹಾಗೂ ಜನರಿಗೆ ಇದರ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇಂದು ಬೆಳಿಗ್ಗೆ ಠಾರ್ ಮಿಶ್ರಣ ಕಾರ್ಯ ನಡೆಸಲಾಗಿದ್ದು,ಠಾರ್ ನ ದಟ್ಟವಾದ  ದುರ್ವಾಸನೆಯುಕ್ತ ಹೊಗೆಯು ಸ್ಥಳೀಯ ಜಾಯ್ ಲ್ಯಾಂಡ್ ಶಾಲಾ ಕೊಠಡಿಗಳ ಒಳ ಸೇರಿ ವಿದ್ಯಾರ್ಥಿಗಳು,ಶಿಕ್ಷಕ ವೃಂದದವರು ಸಮಸ್ಯೆ ಎದುರಿಸುವಂತಾಗಿದೆ.

ಬಳಿಕ ಕೂಡಲೇ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಸೇರಿ ಠಾರ್ ಮಿಶ್ರಣ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ ಕಾಮಗಾರಿ ನಿಲ್ಲಿಸುವಂತೆ ಹೇಳಿದ್ದಾರೆ.ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಗುತ್ತಿಗೆದಾರರಲ್ಲಿ ಠಾರ್ ಮಿಶ್ರಣ ಕಾಮಗಾರಿ ಬೇರೆಡೆ ನಡೆಸುವಂತೆ ತಿಳಿಸಿದ್ದಾರೆ.ಗುತ್ತಿಗೆದಾರರು ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಿದ್ದು,ಠಾರ್ ಮಿಶ್ರಣದ ಯಂತ್ರವನ್ನು ಸ್ಥಳಾಂತರಿಸುವ ಬಗ್ಗೆ ಸ್ಥಳೀಯರು ಮತ್ತು ಶಾಲಾಡಳಿತ ಮಂಡಳಿಗೆ ಭರವಸೆ ನೀಡಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ವೃದ್ಧ ದಂಪತಿ ದುರಂತ ಅಂತ್ಯಕ್ಕೆ ಬಿಗ್ ಟ್ವಿಸ್ಟ್, ಮುಹೂರ್ತ ಇಟ್ಟಿದ್ದ ತಮ್ಮನ ವೈದ್ಯ ಮಗ ಅರೆಸ್ಟ್..!

Published

on

ಶಿವಮೊಗ್ಗ: ಇಲ್ಲಿನ ಭದ್ರಾವತಿ ನಗರದ ಭೂತನಗುಡಿ ಬಡಾವಣೆಯಲ್ಲಿ ವಯೋವೃದ್ದ ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಣ ಮತ್ತು ಚಿನ್ನಾಭರಣಕ್ಕಾಗಿ ಕಿರಾತಕ ವೈದ್ಯನೊಬ್ಬ ತನ್ನ ದೊಡ್ಡಪ್ಪ, ದೊಡ್ಡಮ್ಮನನ್ನೇ  ಕೊಲೆಗೈದ ವಿಚಾರ ಬೆಳಕಿಗೆ ಬಂದಿದೆ.

ವಿಐಎಸ್‌ಎಲ್ ನಿವೃತ್ತ ನೌಕರ ಚಂದ್ರಪ್ಪ (78) ಮತ್ತು ಅವರ ಪತ್ನಿ ಜಯಮ್ಮ  (75) ಹತ್ಯೆಗೀಡಾದ ಮೃತ ದುರ್ದೈವಿಗಳು. ಮೃತ ಚಂದ್ರಪ್ಪ ಅವರ ಸಹೋದರ ಫಾಲಾಕ್ಷಪ್ಪ ಅವರ ಪುತ್ರ ಡಾ.ಮಲ್ಲೇಶ್ ಬಂಧಿತ ಆರೋಪಿ.

ವಿಶೇಷವೆಂದರೆ ವೃದ್ಧ ದಂಪತಿಗೆ ಯಾವುದೇ ಆರೋಗ್ಯ ಸಮಸ್ಯೆ ಬಂದಾಗ ಈತನ ಬಳಿಯೇ ಚಿಕಿತ್ಸೆ ಪಡೆಯುತ್ತಿದ್ದರು. ದಂಪತಿಯ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ವೈದ್ಯ, ಅವರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಯಾವುದೇ ಗಾಯ ಮಾಡದೆ ಅತ್ಯಂತ ಚಾಣಾಕ್ಷತನದಿಂದ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ವೃದ್ಧ ದಂಪತಿ ಕೊಲೆಯಾದ ಬಳಿಕ ನಾಪತ್ತೆಯಾಗಿದ್ದ ಚಿನ್ನಾಭರಣಗಳ ಜಾಡು ಹಿಡಿದ ಭದ್ರಾವತಿ ಓಲ್ಡ್ ಟೌನ್ ಪೊಲೀಸರು, ತನಿಖೆಯ ಸಂದರ್ಭದಲ್ಲಿ ಡಾ. ಮಲ್ಲೇಶ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಸದ್ಯ ಆರೋಪಿ ವೈದ್ಯನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ಹಣ ಮತ್ತು ಚಿನ್ನದ ಆಸೆಗಾಗಿ ಸ್ವಂತ ದೊಡ್ಡಪ್ಪ-ದೊಡ್ಡಮ್ಮನನ್ನೇ ಕೊಲ್ಲಲು ಈತ ಮುಂದಾಗಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

Continue Reading

LATEST NEWS

ಪಡುಬಿದ್ರೆಗೆ ಆಗಮಿಸಿದ ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾ, ಕೈಯಲ್ಲಿ ಬಂಗುಡೆ ಹಿಡಿದು ಭರ್ಜರಿ ಡ್ಯಾನ್ಸ್

Published

on

ಪಡುಬಿದ್ರೆ: ತಮ್ಮ ವಿಶಿಷ್ಟ ಮಾತುಗಳಿಂದ ಮನೆ ಮಾತಾಗಿರುವ , ಈ ಬಾರಿಯ ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಇದೇ ಮೊದಲ ಬಾರಿಗೆ ತವರೂರಿಗೆ ಆಗಮಿಸಿದ್ದು, ರಕ್ಷಿತಾ ಶೆಟ್ಟಿಗೆ ಅಭಿಮಾನಿಗಳು ಮುತ್ತಿಗೆ ಹಾಕಿ ತಮ್ಮ ಅಭಿಮಾನವನ್ನು ಪ್ರದರ್ಶಿಸಿದರು. ಚೆಂಡೆ ನಾದದೊಂದಿಗೆ ರಕ್ಷಿತಾಳನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು.

ತುಳುನಾಡಿನ ಬಾಲೆಗೆ ತುಳುನಾಡ ಶಾಲು ಹಾಕಿ ಗೌರವಿಸಲಾಯಿತು. ಉಡುಪಿ ಜಿಲ್ಲೆಯ ಗಡಿಭಾಗವಾದ ಹೆಜಮಾಡಿ ಟೋಲ್ ಪ್ರವೇಶಿಸಿದ ರಕ್ಷಿತಾಳಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತವನ್ನೇ ನೀಡಿದರು. ರಕ್ಷಿತಾ ಅಭಿಮಾನಿಗಳು, ಕುಟುಂಬಿಕರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಇನ್ನು ರಕ್ಷಿತಾಳ ಜೊತೆ ತಮ್ಮ ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದರು. ರಕ್ಷಿತಾ ಕುಡಾ ಅಭಿಮಾನಿಗಳನ್ನು ನಿರಾಶೆ ಮಾಡಲಿಲ್ಲ.

ಅವರ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡರು. ಸಾಲದಕ್ಕೆ ಚೆಂಡೆ ಧ್ವನಿಗೆ ನೃತ್ಯ ಮಾಡಿ ಮನರಂಜಿಸಿದರು. ಹೆಜಮಾಡಿ ಟೋಲ್‌ನಿಂದ ಪಡುಬಿದ್ರಿ ಪೇಟೆ ತನಕ ಮೆರವಣಿಗೆ ಮಾಡಲಾಯಿತು. ಜಾತಿ, ಧರ್ಮವೆನ್ನದೇ ಎಲ್ಲರೂ ಬಂದು ರಕ್ಷಿತಾಳಿಗೆ ಶುಭ ಹಾರೈಸಿದರು. ಬಿಗ್ ಬಾಸ್ ರಕ್ಷಿತಾಳಿಗೆ ಜೈ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

 

Continue Reading

hasana

ಕುಡಿದ ಮತ್ತಿನಲ್ಲಿ ಜಗಳ-ಸ್ನೇಹಿತನ ಕೊಲೆ: ಭೀಕರ ಸ್ಥಿತಿಯಲ್ಲಿ ಮೃತದೇಹ ಪತ್ತೆ

Published

on

ಹಾಸನ: ಕುಡಿದ ಮತ್ತಿನಲ್ಲಿ ಗೆಳೆಯರ ಮಧ್ಯೆ ಕ್ಷುಲ್ಲಕ ವಿಷಯಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿರುವ ಅಘಾತಕಾರಿ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದ ಕಬ್ಬೂರು ಗ್ರಾಮದಲ್ಲಿ ನಡೆದಿದೆ.


ಗಣೇಶ್‌(46) ಮೃತ ದುರ್ದೈವಿ. ಅಶೋಕ್‌ ಮತ್ತು ಸುಧೀರ್‌ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪಿಗಳು.

ಸೋಮವಾರ(ಜ.19)ದಂದು ಜಮೀನು ಕಾಯಲು ಹೋದ ಗಣೇಶ್‌ ತನ್ನ ಸ್ನೇಹಿತರ ಜತೆ ಎಣ್ಣೆ ಪಾರ್ಟಿ ಮಾಡಿದ್ದ. ಬಳಿಕ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿತ್ತು. ಆ ಸಂಧರ್ಭ ಸ್ನೇಹಿತರು ಗಣೇಶ್‌ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಮೃತದೇಹವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಲೇಡಿ ಫಿಟ್ನೆಸ್ ಟ್ರೈನರ್ ಮೇಲೆ ಅತಿಯಾದ ಮೋಹ; ಯುವಕ ಅರೆಸ್ಟ್‌

ಬಳಿಕ ಕರ್ತವ್ಯದಲ್ಲಿದ್ದ ಅರಣ್ಯ ಸಿಬ್ಬಂದಿ ಶವವನ್ನು ಗಮನಿಸಿದಾಗ, ಮೃತದೇಹದ ತಲೆ ಮತ್ತು ಕುತ್ತಿಗೆ ಭಾಗವನ್ನು ಕಾಡು ಪ್ರಾಣಿಗಳು ಕಚ್ಚಿ ತಿಂದಿದ್ದವು. ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಪರಿಶೀಲಿಸಿ, ಹಳ್ಳಿಮೈಸೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ಧಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page